ನರಕ ಕರೆದ ಬಾ.....ಬಸಂತಿ
[ನಾಟಕದ ಮುಂದಿನ ಸೀನು....]
"ದ್ವಾಪರದ ಶ್ರೀಕೃಷ್ಣನ ಕಾಲಕ್ಕೆ ನರಕಾಸುರ ಎಂಬೊಬ್ಬನಿದ್ದನಂತೆ. ಆಗಿದ್ದು ಒಂದೋ ಎರಡೋ ರಾಕ್ಷಸ ವಿವಾಹ ....ಅಸುರೀ ಮದುವೆ. ಸೆರೆಯಲ್ಲಿಟ್ಟಿದ್ದು ಮಾತ್ರ ಬರೋಬ್ಬರಿ ಹದಿನಾರು ಸಾವಿರ ಕನ್ಯೆಯರನ್ನು. ನರಕನ ನಿತ್ಯ ನಾರಕೀ ಜೇವನಕ್ಕೆ ಬೇಸತ್ತ ಭುವಿಯಂಗಳದ ಅನೇಕ ಜನರೆಲ್ಲ ಅವನೊಡನೆ ಹೋರಾಡಿ ಸೋತರು.
ನರಕ ಸೋಲಲಿಲ್ಲ; ಕನ್ಯೆಯರ ಶೀಲಕ್ಕೆ ಉಳಿಗಾಲವಿರಲಿಲ್ಲ. ಹದಿನಾರು ಸಾವಿರ ಕನ್ಯೆಯರಿಗೆ ಊಟಕ್ಕೆ ತಿಂಡಿಗೆ ಎಲ್ಲ ಯಾವ ವ್ಯವಸ್ಥೆ ಮಾಡಿರಬಹುದು ಎಂದು ಯೋಚಿಸುತ್ತಿದ್ದೇವೆ ನಾವು. ಯಾಕೆಂದ್ರೆ......ಯಾಕೆಂದ್ರೆ......ಯಾಕೆಂದ್ರೆ ಅವರಲ್ಲಿ ಯಾರೂ ಈರುಳ್ಳಿ ಉಪ್ಪಿಟ್ಟು ಕೇಳೋ ಹಾಗಿಲ್ಲ. ಹೊರಗಡೆಯಿಂದ ಆಹಾರ ತಂದು ಕೋಡೋರಿಲ್ಲ. ನಂದಿನಿ ಡೀಲಕ್ಸ್ ಮೊದಲೇ ಇಲ್ಲ.
ನಾಳೆ ಪರಪ್ಪವನಕ್ಕೆ ಹೋದಮೇಲೆ ನಮಗೆ ಈರುಳ್ಳಿ ದೋಸೆ, ಬೆಳ್ಳುಳ್ಳಿ ಗೊಜ್ಜು, ಈರುಳ್ಳಿ ಉಪ್ಪಿಟ್ಟು, ಅಲೂ ಬೋಂಡ ಇದನ್ನೆಲ್ಲ ಮಾಡಿ ಸಪ್ಲೈ ಮಾಡುವವರಾರು? ದುಡ್ಡು ಕೊಟ್ಟರೆ ಏನನ್ನೇ ಬೇಕಾದ್ರೂ ಕೊಡ್ತಾರಂತೆ ಅಂತ ಸುದ್ದಿ ಕೇಳಿದ್ದೇವೆ ನಾವು; ಆದರೆ ಕೊಡುವುದಕ್ಕೆ ನಮ್ಮಲ್ಲಿ ಇರಬೇಕಲ್ಲ?
ಒಂದು ಕಾಲಕ್ಕೆ ಕಪ್ಪುಹಣವನ್ನು ಕೈಯೆತ್ತಿ ಹಂಚಿದ ಹಸ್ತ, ಈಗ ಕೈ ನೀಡಿ ಯಾಚಿಸುವ ಹಂತದಲ್ಲಿದೆ. ನಮ್ಮಿಂದ ಉಪಕಾರ ಪಡೆದವರೆಲ್ಲ ನಮ್ಮ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. ಅಲ್ನೋಡಿ ಅಲ್ಲೊಬ್ಬ ಇದಾನೆ.
ಬ್ಯಾಂಕುಗಳಲ್ಲಿ ಕೋಟಿಗಟ್ಟಲೆ ಸಾಲ ಮಾಡ್ಕೊಂಡು ಭಿಕಾರಿಯಾಗಿದ್ದ. ಅವನ ಮಠ ಹರಾಜಿಗೆ ಬಂದಿತ್ತು. ದುಂಡಗಾಶಿ ನಮಗೆ ಸುದ್ದಿ ತಂದ. ನಮ್ಮಲ್ಲಿ ಹೇಗೂ ಹಣದ ಹೊಳೆಯೇ ಹರಿಯುತ್ತಿತ್ತಲ್ಲ. ಅವನನ್ನು ಕರೆಸಿದೆವು. ಗೋಪ್ಯವಾಗಿ ಮಾತುಕತೆ ನಡೆಸಿದೆವು. ಬೇರೆ ಯಾವ ಮಠಕ್ಕೂ ಕೊಡಬೇಡ, ನಮಗೇ ಕೊಡು ಎಂದೆವು.
ಆತ ಒಪ್ಪಿಕೊಂಡ. ನಾನು ಸತ್ತಮೇಲೆ ನಿನಗೇ ಈ ಮಠ ಎಂದು ಬರೆದು ಸಹಿಹಾಕುತ್ತೇನೆ ಅಂದ. ಆ ಮಠಕ್ಕೆ ಅವನೊಬ್ಬನೇ ವಿಶ್ವಸ್ಥ. ಅದರಲ್ಲಿ ಬೇರಾರೂ ಹಸ್ತಕ್ಷೇಪ ಮಾಡುವಂತಿಲ್ಲ. ಅದು ಅವನ ಖಾಸಗಿ ಆಸ್ತಿ. ಅದನ್ನೆಲ್ಲ ನೋಡಿಕೊಂಡೇ ನಾವು ಅವನನ್ನು ಕರೆಸಿ ಮಾತಾಡಿದ್ದು. ತಾನು ಸತ್ತ ಮೇಲೆ ತನ್ನ ಮಠಕ್ಕೆ ನಾವೇ ಅಂದರೆ ಹಾವಾಡಿಗ ಮಹಾಸಂಸ್ಥಾನಾಧೀಶ್ವರ ಶೋಭರಾಜಾಚಾರ್ಯನೇ ಉತ್ತರಾಧಿಕಾರಿಯೆಂದು ಬರೆದ.
ಈಗ ನಮ್ಮ ವಿರುದ್ಧದ ಹುಲುಮಾನವರಿದ್ದಾರಲ್ಲ ಅವರೆಲ್ಲ ಒಟ್ಟಾಗಿದ್ದಾರೆ. ಎಲ್ಲಿ ಅವನಿಗೆ ಹೇಳಿಕೊಟ್ಟು ನಮ್ಮ ಉತ್ತರಾಧಿಕಾರಿ ವೀಲುನಾಮೆಯನ್ನು ಬದಲಿಸಬಹುದೋ ಎಂಬ ಸಂದೇಹ ನಮಗೆ. ಯಾಕೆಂದರೆ ಒಬ್ಬವ್ಯಕ್ತಿ ಅವನ ಖಾಸಗಿ ಆಸ್ತಿಗೆ ಅವನು ಸಾಯುವುದಕ್ಕೂ ಮೊದಲು ಎಷ್ಟು ಸಲ ಬೇಕಾದರೂ ವಿಲ್ ಬದಲಾಯಿಸಬಹುದು.
ಉತ್ತರದ ಕಡೆಗೆ ಹೋಗಿದ್ದ ಬಿಕನಾಸಿ ಮತ್ತೆ ಆಗಾಗ ತನ್ನ ಮಠಕ್ಕೆ ಬರುತ್ತಲೇ ಇದ್ದ. ನಮಗೋ ಆ ವ್ಯವಹಾರ ಮುಗಿಸಿ ಮಠವನ್ನು ಸಂಪೂರ್ಣ ನಮ್ಮ ಅಧಿಕಾರಕ್ಕೆ ತೆಗೆದುಕೊಳ್ಳುವ ತವಕ. ಮೊನ್ನೆ ಮೊನ್ನೆ ಅವನು ನಮ್ಮ ವಿರುದ್ಧ ದೂರು ಕೊಟ್ಟ. ಮಠದ ವ್ಯವಹಾರ ಸರಿಯಿಲ್ಲ, ತನಗೇ ಕೊಡಲಿ ಅಥವಾ ಆಳುವವರು ವಹಿಸಿಕೊಳ್ಳಲಿ ಎಂದ.
ಈ ವಿಷಯ ತಿಳಿದಿದ್ದೆ, ಕಾಗೆ ಹಾರಿಸಿ ಅಡ್ಡಗೇಟನ್ನು ಬಳಸಿಕೊಂಡು ನಾವು ನೋಟೀಸು ಕೊಟ್ಟಿದ್ದೇವೆ. ಇಲ್ಲಿಯೇ ಇದ್ದ ಅವನನ್ನು ನಮ್ಮ ತಾಲಿಬಾನಿನ ಸದಸ್ಯರು ಎತ್ತುಕೊಂಡು ಮಹಾಬಲನಿದ್ದೆಡೆಗೆ ಹೋದರು. ಅಲ್ಲಿ ಅವನನ್ನು ಇರಿಸಿಕೊಂಡು ಹವಾ ತೆಗೆದಿದ್ದಾಯ್ತು. ಪಾಪಿ, ನಮ್ಮಿಂದ ಸಹಾಯ ಪಡೆದು ನಮಗೇ ತೊಂದರೆ ಕೊಡ್ತಾನೆ. ಪೂರ್ಣಾಧಿಕಾರಕ್ಕೆ ಸಹಿಹಾಕುವಂತೆ ಅವನಿಗೆ ಧಮ್ಕಿ ಹಾಕಿದ್ದೇವೆ.
"ಈಗಲೇ ಅವನ ಮಠದ ಪೂರ್ಣಾಧಿಕಾರ ನಮಗೆ ಬೇಕು. ಸಹಿಹಾಕಲಿಲ್ಲ ಅಂದರೆ ಅವನ ಚ್ಯಾಪ್ಟರ್ ಕ್ಲೋಸ್ ಮಾಡಿ ಅಥವಾ ಯಾವಳನ್ನೋ ಹಿಡಿದು ಅವನ ಮೇಲೆ ಅತ್ಯಾಚಾರದ ಕೇಸ್ ಹಾಕಿಸಿ ಒಳಗೆ ಕೂರುವಂತೆ ಮಾಡಿ" ಎಂದು ನಮ್ಮ ಹಳದೀ ಗಣಗಳಿಗೆ ನಾವು ಅಪ್ಪಣೆಮಾಡಿದೆವು. ನಮ್ಮವರು ಹಾಕಿದ ಧಮ್ಕಿಗೆ ಆತ ಹೆದರಿದ ಬೆಕ್ಕಾಗಿ ಈಗ ಶುಶ್ರೂಷೆ ತೆಗೆದುಕೊಳ್ಳುತ್ತಿದ್ದಾನೆ. ನಾವು ಏನೇ ಮಾಡಿದರೂ ಅಷ್ಟೇ ವೀರ್ಯ ಸನ್ಯಾಸ; ಏಕ್ ಮಾರ್ ದೋ ಟುಕಡಾ. ಅವನೇನಾದರೂ ಪೂರ್ಣಾಧಿಕಾರಕ್ಕೆ ಸಹಿ ಹಾಕದಿದ್ದರೆ ಬೆಳ್ಳುಳ್ಳಿ ಗೊಜ್ಜು ಗ್ಯಾರಂಟಿ.
ನಮಗೆ ಎಂತೆಂತಹ ಶಿಷ್ಯೆಯರಿದ್ದಾರೆ ಗೊತ್ತೇ? ನೀತಾ ಗುಂಜಾಲಪ್ಪ ನಮ್ಮ ಪರಮ ಭಕ್ತೆ. ನಮಗೆ ಬಹಳ ಬಹಳ ಆಪ್ತಳು. ನಮ್ಮ ಸಲುವಾಗಿ ಅವಳ ಭಕ್ತಿಯ ಹೋರಾಟ ಎಂಬುದು ಚಿಕ್ಕಮಕ್ಕಳ ಹೇಲಾಟಕ್ಕಿಂತ ಜೋರಾಗಿದೆ. ನಮ್ಮ ವಿರುದ್ಧ ನೀವು ಬರೆದರೆ ಅಲ್ಲಿ ಬಂದು ಅವಳು ಹೇಸಿಗೆ ಮಾಡದಿದ್ದರೆ ಹೇಳಿ.
ನಮ್ಮ ಕೋಟಿಗಟ್ಟಲೆ ಖಾಸಗೀ ಹಣವನ್ನು ದೂರದಲ್ಲಿ ನಿಭಾಯಿಸಿ ಸುರಕ್ಷಿತವಾಗಿರಿಸುವ ಕೆಲಸವನ್ನು ಆಕೆಗೆ ಒಪ್ಪಿಸಿದ್ದೇವೆ ನಾವು. ಹಾಗಾಗಿ ಆಕೆಗೆ ನಮ್ಮ ಮೇಲೆ ಎಲ್ಲಿಲ್ಲದ ಪ್ರೀತಿ ವಿಶ್ವಾಸ. ಮುಂದಿನ ಸಲ ಬಂದಾಗ ಮತ್ತೆ ಏಕಾಂತ ದರ್ಶನಕ್ಕೆ ಬರುತ್ತೇನೆ ಸಂಸ್ಥಾನ ಎಂದಳು. "ನೀನು ಏಕಾಂತಕ್ಕೆ ಬರೋದಕ್ಕಿಂತ ಅಲ್ಲೇ ನಮ್ಮ ಗಂಟನ್ನು ಕಾಯ್ದುಕೊಂಡಿರು"ಎಂದಿದ್ದೇವೆ.
ನಮ್ಮ ಯಾವುದೇ ಚಿತ್ರವನ್ನೂ ತೆಗೆದುನೋಡಿ, ಅದರಲ್ಲಿ ನಮ್ಮ ಕಣ್ಣು ಸದಾ ಪರಮಾತ್ಮನ ’ಮೋಹಿನಿ ಅವತಾರ’ದಮೇಲೆ ನಾಟಿರುತ್ತದೆ. ಅದು ಬಸ್ಸಿನಲ್ಲಿರಲಿ, ಬಾರ್ಜ್ ನಲ್ಲಿರಲಿ, ನಾವೆಯಲ್ಲಿರಲಿ, ವಿಮಾನದಲ್ಲಿರಲಿ, ಎಲ್ಲಿದ್ದರೂ ನಮಗೆ ಮೋಹಿನಿ ಅವತಾರದ ದರ್ಶನ ಸಿಕ್ಕೇ ಸಿಗುತ್ತದೆ. ಕಣ್ಣಲ್ಲಿ ’ದರ್ಶನ’ ಪಡೆದುಕೊಳ್ಳುವುದಕ್ಕೆ ಯಾವ ಮೋಹಿನಿಯಾದೇನು? ಅವಳು ಬೇರೆಡೆಗೆ ನೋಡುವಾಗ ಅವಳ ಅಂಗಾಂಗಗಳನ್ನೆಲ್ಲ ನೋಡುವುದು, ಅವಳು ನಮ್ಮನ್ನೇ ನೋಡುವಾಗ ಕಣ್ಣಲ್ಲೇ ಕರೆಯುವುದು.
ಕರೆದರೂ ಕೇಳದೇ.....ಸುಂದರಿಯೆ
ಏಕೆ ಈ ಮೌನ ನಾ ಕರೆದರೂ ಕೇಳದೇ......
ಜಯಪ್ರದ ’ಕರೆದರೂ ಕೇಳದೇ’ ಎಂದು ನಮ್ಮಲ್ಲಿ ಹೇಳಿದ್ದರೆ, ಕೇಳಿದೆ ಬಾ ಎಂದು ಸೀದಾ ಏಕಾಂತ ದರ್ಶನ ಕೊಟ್ಟುಬಿಡುತ್ತಿದ್ದೆವು. ಸುಂದರಿಯರಿಗೆ ಏಕಾಂತ ಬೇಕಾದರೆ ಅರೆನಿಮಿಷದಲ್ಲೇ ಅನುಮತಿ ಸಿಗುತ್ತದೆ.
ಯಾರೋ ಬುಡ್ಡಾಗಳು ಬುದ್ಧಿಮಾಂದ್ಯ ಭಕ್ತರು ಖಾಸಗಿಯಾಗಿ ಮಾತನಾಡಬೇಕು ಎಂದು ಬೆಳಗಿನಜಾವದಿಂದ ಮಧ್ಯರಾತ್ರಿಯ ವರೆಗೆ ಕುಳಿತರೂ ಕೊನೆಗೆ ನಾವು ಕೈ ತಿರುಗಿಸುವುದೇ ಹೆಚ್ಚು. ಯಾಕೆಂದ್ರೆ.....ಯಾಕೆಂದ್ರೆ....ಯಾಕೆಂದ್ರೆ ಹಾರಾಟದ ನಡುವೆ ನಮಗೆ ಪುರ್ಸೊತ್ತು ಸಿಗಬೇಕಲ್ಲ. ಅದೂ ಮಧ್ಯೆ ಮಧ್ಯೆ ಕಾವಿವೇಷದಲ್ಲಿ ಹೊರಗೆ ಕಾಣಿಸಿಕೊಳ್ಳಬೇಕು; ಬಟ್ಟೆ ಉಟ್ಟು ಬಿಚ್ಚಿ ಹಾಕಲಾದರೂ ಸಮಯಬೇಕಲ್ಲವೇ?
ಯಾವ ದೇವಸ್ಥಾನವಿರಲಿ, ಕ್ಷೇತ್ರವಿರಲಿ ಅಲ್ಲಿಂದ ಏನಾದರೂ ನಮಗೆ ಲಾಭವಿದೆ ಎಂದರೆ ಬಿಡುವವರಲ್ಲ ನಾವು. ಭಗಂದೂರು ತೋಷಗಿರಿಯೂ ನಮಗೆ ತಿಂಗಳು ತಿಂಗಳು ಒಂದಷ್ಟು ಕೊಡುವುದೆಂತ ರಾಜಿ ಪಂಚಾಯ್ತಿ ಆಗಿದೆ. ಅದಿಲ್ಲದಿದ್ದರೆ ಅವನಿಗೆ ಅಲ್ಲಿ ಉಳಿಗಾಲವಿಲ್ಲ. ನಾಮಪ್ಪಂಗೆ ಹೇಳಿ ಅವನನ್ನು ಒಕ್ಕಲೆಬ್ಬಿಸಿಬಿಡ್ತೇವೆ ನಾವು. ಹೀಗಾಗಿ ಅಂವ ಮುಚ್ಕೊಂಡು ಕಳಿಸ್ತಾನೆ ಈಗ.
ಈಗೀಗ ಕೆಲವು ಕಡೆ ನಮ್ಮನ್ನು ಓಡಿಸಿದ್ದಾರೆ, ಅದು ಬಿಡಿ, ಬೇರೆ ಪ್ರಶ್ನೆ. ನವಗುಂದ ದೇವಸ್ಥಾನಕ್ಕೆ ನಾವೇ ಪ್ರಮುಖರು ಎಂದು ಅದರ ವ್ಯವಸ್ಥಾಪಕರು ಹೇಳಿದ್ದರು. ಆದರೆ ಆಮೇಲೆ ಪ್ಲೇಟ್ ಚೇಂಜ್ ಮಾಡಿಬಿಟ್ಟರು. ಅದಕ್ಕೆ ಇನ್ನೊಂದು ಮಠ ಕಾರಣ ಎನ್ನುತ್ತೇವೆ ನಾವು.
ಆ ಮಠದವರಿಗೆ ನಮ್ಮ ಏಳ್ಗೆಯನ್ನು ಕಂಡರೆ ಆಗೋದಿಲ್ಲ. ನಾವು ಎಲ್ಲೇ ಹೋದರೂ ಅವರ ಹದ್ದಿನ ಕಣ್ಣು ನಮ್ಮ ಮೇಲೇ ಇರುತ್ತದೆ. ನಮ್ಮ ವಿರುದ್ಧ ನಡೆಯುತ್ತಿರುವ ಎಲ್ಲ ಷಡ್ಯಂತ್ರಗಳಲ್ಲೂ ಅವರ ಕೈವಾಡವಿದೆ ಎಂದು ನಾವು ಕಳೆದ ಚಾತುರ್ಮಾಸದಲ್ಲೇ ಹೇಳಿದ್ದೇವೆ. "ಅವರಿಗೇನಾದರೂ ಬೇಕಾದರೆ ನೇರವಾಗಿ ನಮ್ಮಲ್ಲಿ ಬೇಡ ಬಹುದಿತ್ತು, ನಾವೇ ಕೊಡುತ್ತಿದ್ದೆವು,ಅದನ್ನು ಬಿಟ್ಟು ವಿನಾಕಾರಣ ಈ ರೀತಿ ಷಡ್ಯಂತ್ರ ಮಾಡೋದು ಸರಿಯಲ್ಲ’ ಎಂದಿದ್ದೆವು ನಾವು,
ಈಗ ನಮ್ಮ ಹಳದೀ ತಾಲಿಬಾನ್ಗಳ ಸರದಿ. ಅವರಿಗೆ ಆ ಮಠದ ಆಡಳಿತಾಧಿಕಾರಿಯ ಮೇಲೆ ಅನುಮಾನವಿದೆ. ನಮಗೂ ಅಷ್ಟೆ. ಆ ಮನುಷ್ಯನೂ ನಮ್ಮ ಕುಲಪತಿ ಬಾವಯ್ಯ ಇದ್ದಹಾಗೆ ಅಂದುಕೊಂಡುಬುಟ್ಟಿದ್ದೇವೆ ನಾವು. ಇನ್ಹೇಗಿರ್ತಾನೆ ನಮ್ಮಲ್ಲಿ ಥೇಟ್ ನಮ್ಮ ಬಾವಯ್ಯ ಇದ್ದಂಗೆ ಇರ್ತಾನೆ ಎಂಬುದು ನಮ್ಮ ತೀರ್ಮಾನ.
ನಮ್ಮ ವಿರುದ್ಧ ದಾಖಲಾದ ಎಲ್ಲಾ ದೂರುಗಳ ಹಿಂದೆಯೂ ಅವನ ಕೈವಾಡ ಇದ್ದೇ ಇದೆ ಎಂಬುದರಲ್ಲಿ ನಮಗೆ ಅನುಮಾನವಿಲ್ಲ. ಹಾಗಾಗಿಯೇ ನಮ್ಮ ತಾಲೀಬಾನಿಗಳಿಗೆ ನಾವು ಇದನ್ನೇ ಹೇಳಿದ್ದೇವೆ. "ಏ ಹೋಗ್ರೊ, ಕಂಡಲ್ಲೆಲ್ಲ ಈ ಸುದ್ದಿ ಹಬ್ಬಿಸಿ" ಅಂತ ಹೇಳಿದ್ದೇವೆ. ನಾಳೆ ಕಾಲಬುಡಕ್ಕೆ ಬಂದಾಗ "ನಮ್ಮ ಸಂಸ್ಥಾನಕ್ಕೂ ಅದಕ್ಕೂ ಸಂಬಂಧವಿಲ್ಲ, ನಮ್ಮ ಭಕ್ತರು ಏನು ಹೇಳುತ್ತಾರೋ ಅದಕ್ಕೆಲ್ಲ ಸಂಸ್ಥಾನ ಜವಾಬ್ದಾರಿಯಲ್ಲ" ಎಂದು ನುಣುಚಿಕೊಳ್ಳುತ್ತೇವೆ ನಾವು.
ಇದೆಲ್ಲದರ ಜೊತೆಗೆ, ಯಾವುದೋ ಅಡ್ಡಗೇಟು ಹೇಳಿದ್ದೆನ್ನುತ್ತ ಕತೆ ಕಟ್ಟಿ, "ದೊಡ್ಡವರ ಸಣ್ಣತನ ಇದು. ಅವರ ಷಡ್ಯಂತ್ರ ಅಲ್ಲದಿದ್ದರೆ ಶಿವ ನಮಗೇ ಒಲಿಯುತ್ತುದ್ದ. ನೀವು ಹೋಗುವ ಮುನ್ನ ಇಮೊಂದನ್ನು ಮುಗಿಸಿ ಹೋಗಿ ಎಂದು ಅವರು ಹೇಳಿದರಂತೆ. ಹಾಗಾಗಿ ಅಂವ ಇನ್ನೂ ಕಾರ್ಯ ನಿರ್ವಹಿಸುತ್ತಲೇ ಇದ್ದಾನೆ." ಎಂದು ಕತೆ ಹಬ್ಬಿಸಿದ್ದೇವೆ.
ಆ ಮಠದವರು ಗಾಳಿ ಊದಿದರೆ ನಾವು ಹಾರಿ ಹೋಗುತ್ತೇವೆ, ಅದು ಬೇರೆ ಪ್ರಶ್ನೆ. ಆದರೂ ಶ್ರೀಮಹಾಸಂಸ್ಥಾನದವರಾದ ನಾವು ಹೊರಗೆ ಹಾಗೆ ಹೇಳುವುದುಂಟೇ? ಸಾನಾತನ ಧರ್ಮಕ್ಕೆಷ್ಟು ಸಹನೆ ಇದೆಯೋ ಅಷ್ಟೇ ಸಹನೆ ಆ ಮಠಕ್ಕೆ ಇದೆ ಎಂದು ನಮ್ಮ ಅಂತರಂಗಕ್ಕೆ ಗೊತ್ತು. ನಾವು ಅವರ ವಿರುದ್ಧ ಏನೇ ಹೇಳಿದರೂ ಇಲ್ಲಿಯವರೆಗೆ ಏನೊಂದೂ ಮಾತನಾಡಲಿಲ್ಲ. ಹೀಗಾಗಿ ’ಕೋತಿ ಬೆಣ್ಣೆ ತಿಂದು ಮೇಕೆ ಮೂತಿಗೆ ಕೈ ಒರೆಸಿತ್ತು" ಅನ್ನೋ ಹಾಗೆ ನಾವು ಮಾಡಿದ, ಮಾಡುತ್ತಿರುವ ಮತ್ತು ಮಾಡಬೇಕೆಂದಿರುವ ಸಮಸ್ತ ಉಡಾಫೆ, ಉಪದ್ವ್ಯಾಪ, ಕಾಮಕೇಳಿ, ದ್ರೋಹ, ಆಸ್ತಿ ಕಬಳಿಕೆ ಎಲ್ಲದಕ್ಕೂ ಅವರೇ ಮೂಲ ಕಾರಣ ಎಂದು ಹೇಳಿಬಿಡುತ್ತೇವೆ ನಾವು.
ನಮ್ಮ ಕಾಮಕತೆಯ ಕವಿಗೆ ಯಾರೋ ಮೇಲ್ ಮಾಡಿದ್ದಾರಂತೆ ಈ ಹಾಡನ್ನು-
ನರಕ ಕರೆದ.... ಬಾ ವಸಂತಿ
ಹಾಗೆ ಹೊರಗೆ ಯಾಕೆ ಕುಂತಿ?
ಏಕಾಂತದ ಸವಿಯೂಟವ ಸವಿಯೋಣ ಬಾ
’ಭಾರತ ರತ್ನ’ವನೀಗ ಸೃಜಿಸೋಣ ಬಾ
ವಿಶ್ವರೂಪ ನೋಡಿ ದಿವ್ಯ ಭವ್ಯಳಾಗು ನೀ
ಪೇಶ್ವೆಯಂತ ಯೆನಗೆ ರಾಣಿ ಧನ್ಯಳಾಗು ನೀ
ಭಕ್ತಿಯಿಂದ ಎಲ್ಲ ಬಿಚ್ಚಿ ಭಗವದರ್ಪಣೆ
ಯುಕ್ತಿಯಿಂದ ಧನಕನಕವು ನಿನಗೆ ’ಅಪ್ಪಣೆ’
ಮಂಚವೇರು ಕೆಳಗೆ ಜಾರು ಕೊಸರಬೇಡ ನೀ
ಕೊಂಚ ಅಡ್ಜಸ್ಟ್ ಮೆಂಟು ಅಂಟು ಪರಮನೆಂಟಿದು
ಕಾಮಕತೆಯ ಕವಿಗೆ ಇದು ಅರ್ಥವಾಗಲಿಲ್ಲವಂತೆ. ಅವರು ಪ್ರಿಂಟ್ ಕೊಟ್ಟು ಹೋದರು. ಪರವಾಗಿಲ್ಲ, ಯಾರೋ ಸರಿಯಾಗೇ ಬರೆದಿದ್ದಾನೆ. ನಾಳೆ ಇವನೂ ಕತೆಗೆ ಸಾಹಿತ್ಯ ಒದಗಿಸಬಹುದು. ಅಲ್ಲೆಲ್ಲೋ ಯಾವುದೋ ಹಾಡು ಕೇಳಿಸ್ತಿದೆಯಲ್ಲಾ.......ಎಲ್ಲೋ ಕೇಳಿದ ಹಾಗಿದೆಯಲ್ಲಾ???????
.
.
.
ಕಾಳಿಂದಿಯ ಮಡುವಿನಲ್ಲಿ ಮತ್ತೆ ನಾಗ ಸಂತತಿ.....
ಈ ನೀರಿಗೆ ಹಾತೊರೆದರೆ ವಿಷಪಾನವೆ ನಿನ್ನ ಗತಿ .....
.....
....
...
..
,"
June 13
https://www.facebook.com/groups/1499395003680065/permalink/1627478917538339/
ನಿಂಗಿ..ನಿಂಗಿ...ನಿಂಗಿ,,ನಿಂಗಿ..........ನಿದ್ದಿ ...ಕದ್ದೀಯಲ್ಲೆ ..ನಿಂಗಿ
"ಒಂದು ಬಲಿಷ್ಠ ವ್ಯವಸ್ಥೆಯಲ್ಲಿ ಬೇರು ಬಿಟ್ಟು ಕುಳಿತುಬಿಟ್ಟರೆ ಆಮೇಲೆ ಬೇರು ಕೀಳುವುದು ಸುಲಭವಲ್ಲ. ಕಂಪ್ಯೂಟರಿಗೆ ರ್ಯಾನ್ ಸಮ್ ವೇರ್ [Ransom ware] ಎಂಬ ರೀತಿಯ ವೈರಸ್ ಬಂದ ಹಾಗೆ; ಬಂದಿದ್ದು ಗೋತ್ತಾಗಲ್ಲ, ಹಾಳಾಗೋದನ್ನು ತಪ್ಪಿಸೋದು ಅತಿ ಕಷ್ಟ. ಇರುವ ಫೈಲ್ ಫಾರ್ಮ್ಯಾಟ್ ಗಳನ್ನೆಲ್ಲ ಬದಲಾಯಿಸಿ ಎಸೆದುಬಿಟ್ಟರೆ ವ್ಯವಸ್ಥೆ ಹೀಗೇಯೇ ಎಂಬ ಭಾವನೆ ಹೊಸದಾಗಿ ಬಳಸುವವರಲ್ಲಿ ಬರಬೇಕು.
ಸ್ವಾತಂತ್ರ್ಯಾ ನಂತರವೂ ಸುಭಾಶ್ಚಂದ್ರ ಬೋಸ್ ಬದುಕಿದ್ದರು; ಆದರೆ ಅದು ಅಧಿಕಾರದಲ್ಲಿರುವ ಮತ್ತು ರಾಜಕೀಯದಲ್ಲಿರುವ ಸೀಮಿತ ಜನರಿಗೆ ಮಾತ್ರ ಗೊತ್ತಿತ್ತು. ಗಾಂಧೀಜಿಯನ್ನು ದೇಶದ ಪಿತಾಮಹ ಎಂದು ಕರೆದು ಸ್ವಾತಂತ್ರ್ಯ ಬರೋದಕ್ಕೆ ಅವರ ಸಾತ್ವಿಕ ಚಳುವಳಿಯೇ ಕಾರಣ ಎಂದು ಬಿಂಬಿಸಲಾಗಿತ್ತು.
ಜೀವಂತವಿದ್ದ ಬೋಸ್ ಗಾಂಧೀಜಿಗೆ ಸಲ್ಲುತ್ತಿದ ಗೌರವ, ಮರ್ಯಾದೆಗಳನ್ನು ಕಿತ್ತುಕೊಳ್ಳಲು ಇಷ್ಟಪಡಲಿಲ್ಲ. ತಾನು "ಗುಮ್ನಾಮಿ ಬಾಬಾ" ಎಂಬ ಹೆಸರಿನಲ್ಲಿ ಫೈಜಾಬಾದ್ನಲ್ಲಿ ಸಂತನಂತೆ ವಾಸವಿದ್ದು ತನ್ನ ಉಳಿದ ಜೀವಿತವನ್ನು ಕಳೆದರು.
ಬ್ರಿಟಿಷರು ದೇಶ ಬಿಟ್ಟು ಹೋಗಿದ್ದು ಬೋಸ್ ಅವರ ಸಿಂಹಘರ್ಜನೆಗೆ. ವಿದೇಶೀ ನೆಲದಲ್ಲಿ ಭಾರತೀಯ ಸೈನ್ಯವನ್ನು ಕಟ್ಟಿದ ಬೋಸ್ ಹಿಟ್ಲರ್ ಮತ್ತು ನೆಪೋಲಿಯನ್ ಮೊದಲಾದ ಸರ್ವಾಧಿಕಾರಿಗಳನ್ನು ಭೇಟಿಮಾಡಿದರು. ಭೇಟಿಮಾಡಿದ್ದು ಅವರೆಲ್ಲರ ಅನುಯಾಯಿಯಾಗಲಿಕ್ಕಲ್ಲ; ನಮ್ಮ ದೇಶದಿಂದ ಬ್ರಿಟಿಷರನ್ನು ಓಡಿಸಲಿಕ್ಕೆ ಸಹಾಯ ಮಾಡಿ ಎಂಬ ಕೋರಿಕೆಯನ್ನು ಮಂಡಿಸಲಿಕ್ಕಾಗಿ.
ಬೋಸ್ ಅವರ ಮಿಂಚಿನ ವೇಗದ ಕಾರ್ಯಕ್ಷಮತೆ ಮತ್ತು ಕಾರ್ಯದಕ್ಷತೆಗೆ ಹೆದರಿ ಬ್ರಿಟಿಷರು ಜಾಗ ಖಾಲಿ ಮಾಡಿದರು. ಹೀಗಂತ ಅನೇಕ ಸಂಶೋಧಕರು ನೂರಾರು ಪುಸ್ತಕಗಳನ್ನೇ ಬರೆದಿದ್ದಾರೆ. ಯುವ ಬರಹಗಾರ ಅನುಜ್ ಧರ್ ತಮ್ಮ ಪುಸ್ತಕದಲ್ಲಿ ಇಂತಹ ರಾಜಕೀಯದ ಮೇಲಾಟಗಳೆಲ್ಲವನ್ನೂ ನೇರವಾಗಿ ಹೇಳಿದ್ದಾರೆ.
ಇಂದು ಈ ವ್ಯವಸ್ಥೆಯಲ್ಲಿ ಬೋಸ್ ಮತ್ತು ಸರ್ದಾರ್ ಪಟೇಲರಿಗಿಂತ ಹೆಚ್ಚಾಗಿ ಗಾಂಧಿ ಮತ್ತು ನೆಹರೂ ನಮಗೆ ಮಹಾತ್ಮರೆಂದು ಹೇಳುತ್ತಾರೆ. ಬೋಸ್ ಮತ್ತು ಪಟೇಲರ ಸುದ್ದಿ ಬರುವುದೇ ಅಪರೂಪ. ಅರ್ಧ ಶತಮಾನದಿಂದ ನಾವು ಒಪ್ಪಿದ್ದು, ನಂಬಿಕೊಂಡು ಬಂದಿದ್ದು, ಪಠ್ಯದಲ್ಲಿ ಓದಿದ್ದು, ಕೇಳಿದ್ದು, ನಮ್ಮ ಮಕ್ಕಳಿಗೆ ಬೋಧಿಸಿದ್ದು, ರಾಷ್ಟ್ರೀಯ ಹಬ್ಬಗಳಲ್ಲಿ ಫೋಟೋ ಇಟ್ಟು ಪೂಜಿಸಿದ್ದು, ಹಾರ ಹಾಕಿ ನಮಿಸಿದ್ದು ಗಾಂಧಿ ಮತ್ತು ನೆಹರೂ ಈರ್ವರಿಗೇ ಎಂದರೆ ತಪ್ಪಲ್ಲ.
ಇಂದು ನಮ್ಮ ಸಮಾಜದಲ್ಲಿಯೂ ಸಹ ಹಾಗೇ ಆಗಿಬಿಟ್ಟಿದೆ. ನಾವು ಅಧಿಕಾರಕ್ಕೆ ಬಂದಾಗಿನಿಂದ ಸಮಾಜದಲ್ಲಿ ಬೇರೆ ಬೇರೆ ರೀತಿಯಲ್ಲಿ ಜನರಿಗೆ ದುರ್ಬೋಧನೆಗಳನ್ನೇ ನಡೆಸಿದೆವು. ಜನರಿಗೆ ಕಣ್ಣಿಗೆ ಕಾಣುವಂತೆ ನಾವು ಬಹಳ ಚೆನ್ನಾಗಿ ಪೋಸು ಕೊಟ್ಟೆವು, ಯಾವಾಗಲೂ ಏನಾದರೊಂದು ಸಮಾರಂಭ ನಡೆಸುತ್ತ ಜನರ ಮನಸ್ಸಿನಲ್ಲಿ ಅದ್ವಿತೀಯ ಸನ್ಯಾಸಿಯಾಗಲು ಪ್ರಯತ್ನಿಸಿದೆವು.
ವಾಹನ, ವಿದ್ಯುತ್ತು ತಲುಪದ ಕುಗ್ರಾಮದ ಮೂಲೆಯ ಮನೆಯಲ್ಲೂ ಸಹ, ಪರಂಪರೆಯ ಮೂಲಪುರುಷನ ಭಾವಚಿತ್ರ ಇಡುವ ಬದಲು, ನಮ್ಮ ಭಾವಚಿತ್ರ ಇರುವಂತೆ ನೋಡಿಕೊಂಡೆವು. ಯಾರೋ ಪುಣ್ಯಾತ್ಮ ಇದನ್ನು ನೆನಪಿಸಿದರೂ ಮೊದಮೊದಲು ನಾವದನ್ನು ಒಪ್ಪಲೇ ಇಲ್ಲ. ಯಾಕೆಂದರೆ ಎಲ್ಲೆಲ್ಲೂ ಜನರಿಗೆ ನಮ್ಮ ಮುಖವೇ ಕಾಣಬೇಕು. ಉಂಗುರದಿಂದ ಅಂಬರದೆತ್ತರದ ಕಟೌಟಿನ ವರೆಗೆ ಎಲ್ಲದರಲ್ಲೂ ನಮ್ಮದೇ ಭಾವಚಿತ್ರ.
ಆರಂಭಿಕ ಹಂತದಲ್ಲಿ ನಮ್ಮ ಹೊಸ ಹೊಸ ಡೊಂಬರಾಟಗಳ ಅಂತಃಸತ್ವ ಏನೆಂಬುದು ಭಕ್ತರಿಗೆ ಅರ್ಥವಾಗಲಿಲ್ಲ. ನಾವು ಮಾಡಿದ್ದಕ್ಕೆಲ್ಲ ಜೈ ಎನ್ನ ಹತ್ತಿದರು. ಸಮಾಜದ ಉದ್ಧಾರಕ್ಕಾಗಿ ಇಪ್ಪತ್ತೈದು ಮೂವತ್ತು ಬೃಹತ್ ಯೋಜನೆಗಳನ್ನು ಹಾಕಿದ್ದೇವೆ ನೋಡಿ ಎಂದು ಆಗಲೇ ಭೋಂಗು ಬಿಟ್ಟೆವು. ಸಮಾಜದ ಸದ್ಗುಣಿಗಳು ವೇದಿಕೆಯಲ್ಲಿ, "ನೋಡಿ ನಮ್ಮ ಹಾವಾಡಿಗ ಸಂಸ್ಥಾನದ ಹಿರಿಮೆಯನ್ನು, ಇಂತಹ ಬುದ್ಧಿ, ದಕ್ಷತೆ, ಕಾರ್ಯದಕ್ಷತೆ, ಚಾಣಾಕ್ಷತನ ಇದನ್ನೆಲ್ಲ ಸಂಸ್ಥಾನ ಎಲ್ಲಿ ಕಲಿತರು? ಯಾವ ಎಂಬಿಎ ಆದವನಿಗೂ ಈ ಮಟ್ಟದ ವ್ಯಾವಹಾರಿಕ ಜ್ಞಾನ ಇರುವುದು ಕಷ್ಟ" ಎಂದು ನಮ್ಮನ್ನು ಹೊಗಳಿದ್ದೇ ಹೊಗಳಿದ್ದು.
ಅಲ್ಲಿಂದೀಚೆಗೆ ಬೋಳೆ ಭಕ್ತರು ನಮ್ಮನ್ನು ನೋಡುವ ರೀತಿಯೇ ಬದಲಾಗಿಬಿಟ್ಟಿತು. ಯೋಜನೆಗಳನ್ನು ಕಾರ್ಯಗತಗೊಳಿಸುವುದಕ್ಕಾಗಿ ತರಾವರಿ ಮೀಟಿಂಗುಗಳನ್ನು ಹಗಲೂ ರಾತ್ರಿ ಹಮ್ಮಿಕೊಳ್ಳುತ್ತೇವೆ ಎಂದಾಗ ಜನ ಖುಷಿ ಪಟ್ಟರು; ಪಾರಮಾರ್ಥಿಕ ವಿಷಯ ಎಕ್ಕುಟ್ಟೋಗಿ ಲೌಕಿಕ ವಿಷಯದಲ್ಲೇ ಭಕ್ತರೂ ಮೈಮರೆತರು.
ವಾಸ್ತವ ಏನೆಂದರೆ ಹಿಂದಿನವರು ಸ್ವಲ್ಪ ಬಿಗಿ ಇದ್ದರು, ಅವರಿಗೆ ಜನರ ಬಳಕೆ ಕಮ್ಮಿ ಇತ್ತು. ಅದೇ ವೀಕ್ ಪಾಯಿಂಟನ್ನು ನಾವು ಎನ್ ಕ್ಯಾಶ್ ಮಾಡಿಕೊಂಡೆವು. "ಗುರುಗಳ ಮುಖ ನೋಡೋ", "ಸದಾ ಎಂತಾ ಮಂದಹಾಸ", "ದಿವ್ಯ ತೇಜಸ್ಸು", "ಮಹಾನ್ ತಪಸ್ವಿ", ,"......ಅವತಾರ" ಎಂಬೆಲ್ಲ ಉದ್ಗಾರಗಳು ಜನರಲ್ಲಿ ಬಾಯಿಂದ ಬಾಯಿಗೆ ಹಬ್ಬಿದವು. ಭಕ್ತರ ಸಂಖ್ಯೆ ಹೆಚ್ಚಿತು.
ಮೊದಲು ಬರುತ್ತಿದ್ದ ಮಠದ ಹಳೆಯ ಭಕ್ತರಿಗೆ ನಮ್ಮ ಡೊಂಬರಾಟಗಳಲ್ಲಿ ಅನುಮಾನವಿತ್ತು; ಅವರಲ್ಲಿ ಎಷ್ಟೋ ಜನ ಬರುವುದನ್ನೇ ನಿಲ್ಲಿಸಿದರು; ಮುಪ್ಪಿನಲ್ಲಿದ್ದ ಕೆಲವರು ಟಿಕೆಟ್ ತೆಗೆದುಕೊಂಡಿದ್ದರಿಂದ ಹಿಂದಿನ ಸಂಪೂರ್ಣ ಕೊಂಡಿ ಕಳಚಿತು. ಬಂದ ಭಕ್ತರಲ್ಲಿ ಮಠದಲ್ಲೇನು ನಡೆಯಬೇಕೆಂಬುದು ಗೊತ್ತಿಲ್ಲದವರೇ ಜಾಸ್ತಿ. ಕಾಲ ನಮಗೆ ಬೇಕಾದಂತಿತ್ತು; ನಾಯಿ ಹಸಿದಿತ್ತು-ಅನ್ನ ಹಳಸಿತ್ತು.
ನಮ್ಮ ವಿವಿಧೋದ್ದೇಶ ಯೋಜನೆಗಳೆಲ್ಲದರ ಹಿಂದಿನ ದುರುದ್ದೇಶವೇ ಬೇರೆ ಇತ್ತು. ನಮಗೆ ಹೆಣ್ಣು, ಹಣದ ಚಟ ಆಗಲೇ ಮನದಲ್ಲಿತ್ತು. ಅದರೆ ಅದನ್ನು ಗೋಪ್ಯವಾಗಿ ಹಾಗೇ ಇರಿಸಿಕೊಂಡು ಮುಂದುವರಿದೆವು. ’ಸಮಾಜೋದ್ಧಾರಕ್ಕಾಗಿ ಭೂಮಿಗೆ ಬಂದ ಭಗವಂತ’ ಎಂದೇ ಜನ ಭಾವಿಸಿದರು; ನಾವು ಹೇಳಿದ್ದಕ್ಕೆ "ಇಲ್ಲ", ’ಅಲ್ಲ" ಅಥವಾ "ಆಗುವುದಿಲ್ಲ" ಎಂಬ ನಕಾರಾತ್ಮಕ ಮಾತುಗಳೇ ಇರಲಿಲ್ಲ. ಏನೇ ಹೇಳಿದರೂ ಜೈ ಜೈ ಜೈ ಜೈ.
ಸಮಾಜದಲ್ಲಿ ರಾಜಕಾರಣಿಗಳಿಗೆ ನಮ್ಮ ಜನಬಲ ತೋರಿಸಲು ಒಂದೆರಡು ದೊಡ್ಡ ಸಮಾರಂಭ ಮಾಡಿದೆವು. ಕಂಡಲ್ಲಿಂದಲೆಲ್ಲಾ ಯಾವ್ಯಾವುದೋ ಕಾವಿಗಳು, ಖಾದಿಗಳು ಓಡೋಡಿ ಬಂದು ಹಾರಹಾಕಿ ಶುಭ ಕೋರಿದರು. ನಮ್ಮ ಪ್ರತಿಷ್ಠೆ ನೂರ್ಮಡಿಯಾಯಿತು. ಮಠಕ್ಕೆ ಕೋಟಿಗಟ್ಟಲೆ ಆದಾಯ ಬರತೊಡಗಿತು.
ಯಾವಾಗ ಹಣದ ಒಳಹರಿವು ನಿರೀಕ್ಷೆ ಮೀರಿ ಹೆಚ್ಚಿ ಅಣೆಕಟ್ಟು ತುಂಬಿ ಹರಿಯತೊಡಗಿತೋ, ಆ ಸಮಯದಲ್ಲಿ ನಾವು ಸುಂದರಿಯರಿಗೆಲ್ಲ ’ಬಾಗಿನ’ ಅರ್ಪಿಸಲು ಆರಂಭಿಸಿಬಿಟ್ಟೆವು. ಅಯ್ಯೋ ದೊಡ್ಡ ಪ್ರತಿಷ್ಠಿತ ವ್ಯಕ್ತಿ, ಅದರಲ್ಲೂ ಸಮಾಜದ ಗುರು ಎಂದುಕೊಳ್ಳುತ್ತ ನಮ್ಮ ಅಕ್ಕಪಕ್ಕ ನಿಂತು ಫೋಟೋ ತೆಗೆಸಿಕೊಳ್ಳತೊಡಗಿದರು.
ನಮ್ಮೊಂದಿಗೆ ಖಾಸಗಿಯಾಗಿ ಮಾತನಾಡುತ್ತೇವೆ, ದೂರವಾಣಿಯಲ್ಲಿ ಮಾತನಾಡುತ್ತೇವೆ, ಪಕ್ಕದಲ್ಲೇ ಇರುತ್ತೇವೆ ಎಂದು ಸಮಾಜದ ಇತರರಿಗೆ ತೋರಿಸುವುದು ಕೆಲವು ಸುಂದರಿಯರ ಜಾಯಮಾನವಾಗಿಬಿಟ್ಟಿತು; ಅದು ಅವರಿಗೆ ಆ ಕ್ಷಣದಲ್ಲಿ ಅವರ ಪ್ರತಿಷ್ಠೆಯನ್ನು ಹೆಚ್ಚಿಸುವಂತೆ ಭಾಸವಾಗುತ್ತಿತ್ತು.
ಸುಂದರಿಯರಲ್ಲಿ ಒಬ್ಬರನ್ನು ನೋಡಿ ಇನ್ನೊಬ್ಬರು, ಇನ್ನೊಬ್ಬರನ್ನು ನೋಡಿ ಮತ್ತೊಬ್ಬರು, ಮತ್ತೊಬ್ಬರನ್ನು ನೋಡಿ ಮಗದೊಬ್ಬರು ಬರತೊಡಗಿದರು. ಆಗಲೇ ನಾವು ಕೆಲವರಿಗೆ ಬಿಸ್ಕೆಟ್ ಹಾಕಲು ಆರಂಭಿಸಿದೆವು. ಕಚ್ಚುವ ನಾಯಿಯೂ ಸಹ ಬಿಸ್ಕೆಟ್ ರುಚಿಗೆ ಬಾಯಿ ಮುಚ್ಚಿಕೊಂಡು ಸುಮ್ಮನೆ ಬಿದ್ದಿರುತ್ತದಲ್ಲ? ಅದರಂತೆ ಯಾರ್ಯಾರಿಗೆ ಏನೇನು ಕೊಟ್ಟರೆ ನಮಗೆ ಬೇಕಾದಂತೆ ಇರುತ್ತಾರೆ ಎಂಬುದನ್ನು ನಾವು ಕಲಿತದ್ದೇ ಆವಾಗ.
ಹಿಂದೆ ಭಕ್ತರ ಸಂಕಷ್ಟಗಳನ್ನು ಖಾಸಗಿಯಾಗಿ ಗೋಪ್ಯವಾಗಿ ತೋಡಿಕೊಳ್ಳಲು ಇದ್ದ ಖಾಸಗೀ ಭೇಟಿ ’ಏಕಾಂತ ದರ್ಶನ’ವಾಗಿ ರೂಪಾಂತರಗೊಂಡಿತು. ಕೈ ತೊಳೆದುಕೊಂಡು ಮುಟ್ಟಬೇಕು ಅಂತಾರಲ್ಲ ಅಂತಹ ಬೆಳ್ಳನೆಯ ಸುಂದರಿಯರು ಎದುರಿಗೆ ಅಷ್ಟು ಸನಿಹಕ್ಕೆ ಬಂದಾಗ ನಮಗೆ ಬೇಕಾದ್ದನ್ನೇ ನಾವು ನೋಡಿದೆವು, ಅದನ್ನೇ ಪರೋಕ್ಷವಾಗಿ ಪ್ರಸ್ತಾಪಿಸಿದೆವು.
ಆರಂಭಿಕ ಹಂತದ ’ಏಕಾಂತ ದರ್ಶನ’ಗಳು ಅಷ್ಟು ಬೇಗ ಎಲ್ಲೂ ಸುದ್ದಿ ಮಾಡಲಿಲ್ಲ ಯಾಕೆಂದರೆ ಸುಂದರಿಯರಿಗೂ ಹೆದರಿಕೆ ಇತ್ತು, ಪರಂಪರೆಯ ನಿಯಮಗಳನ್ನು ಅತಿಯಾಗಿ ಉಲ್ಲಂಘಿಸಿದ ನಮ್ಮಲ್ಲೂ ಸ್ವಲ್ಪ "ಯಾರಿಗಾದರೂ ತಿಳಿದುಬಿಡಬಹುದೇ?" ಎಂಬ ಭಯವಿತ್ತು. ಬರುಬರುತ್ತ ಕುಲಪತಿ ಬಾವಯ್ಯ ಕೂಡ ನಮ್ಮ ಭಾಗೀದಾರನಾದಾಗ ನಮ್ಮ ಗೋಪ್ಯದ ವ್ಯವಹಾರ ಅವನಿಗೂ ಗೊತ್ತಾಯಿತು.
ಕುಲಪತಿ ಬಾವಯ್ಯ ಅವನ ಲೆವೆಲ್ಲಿಗೆ ಸಿಗುವುದನ್ನು ಬಳಸಿಕೊಳ್ಳತೊಡಗಿದ, ನಮ್ಮ ಹೈ ಲೆವೆಲ್ಲಿಗೆ ಸಿಗುವುದನ್ನು ನಾವು ಬಳಸಿಕೊಳ್ಳತೊಡಗಿದೆವು. ಕುಲಪತಿ ಬಾವಯ್ಯನ ವಿರುದ್ಧ ಬಹಳ ದೊಡ್ಡ ಮಟ್ಟದಲ್ಲಿ ದೂರುಗಳು ಬಂದಾಗ ಅದನ್ನು ನಾವೇ ನಿವಾರಿಸಿದ್ದನ್ನು ಹಿಂದೆ ನಿಮಗೆ ಹೇಳಿದ್ದೇವಲ್ಲ? ಮಠದಿಂದ ಹೊರಗಟ್ಟಿದರೆ ನಮಗೆ ಉಳಿಗಾಲವಿರಲಿಲ್ಲ. ಯಾಕೆಂದರೆ ಆ ಖದೀಮನಲ್ಲಿ ಅಗಲೇ ಕೆಲವು ವೀಡಿಯೋ ತುಣುಕುಗಳಿದ್ದವು. ಹೀಗಾಗಿ ನಾವು ಗಪ್ ಚುಪ್ ಸುಮ್ಮನಾಗಿಬಿಟ್ಟೆವು.
ಹೊರಮುಖದಲ್ಲಿ ಮಾತ್ರ ಭಜನೆ, ಸತ್ಸಂಗ, ಸಹಸ್ರನಾಮಗಳು, ಜಪ, ಹೋಮ, ಹವನ, ಪಾದಪೂಜೆ, ಭಿಕ್ಷ ಎಲ್ಲವೂ ಅತಿಯಾಗಿ ನಡೆಯುತ್ತಿದ್ದವು. ನಮ್ಮ ಯೋಜನೆಗಳು ಎತ್ತುವಳಿಗಳೆಂದು ಯಾರಿಗೂ ಭಾಸವಾಗದಂತೆ ನುಣ್ಣಗೆ ಹೆರೆದು, ಎಣ್ಣೆ ಸವರಿದೆವು. ತೋರಿಕೆಗೆ ಒಂದಷ್ಟು ಕೆಲಸಗಳನ್ನು ಮಾಡಿ "ಬಹಳ ಬದಲಾವಣೆ ಮಾಡ್ತಿದ್ದಾರೆ" ಎಂಬ ಭಾವನೆ ಮೂಡಿಸಿದೆವು.
ನಮ್ಮ ಕಚೇರಿಗಳಲ್ಲಿ ಹುಡುಗಿಯರನ್ನೇ ಹೆಚ್ಚೆಚ್ಚು ಇರಿಸಿಕೊಂಡೆವು; ಕಾರಣ ಏನಂತ ನಿಮಗೆ ಗೊತ್ತು. ಆಗಾಗ ಕೆಲವು ಹುಡುಗರನ್ನೂ ಸೇರಿಸಿಕೊಂಡೆವು. ನಾವು ಬಳಸಿದ ಹುಡುಗಿಯರನ್ನು ’ಪ್ರಸಾದ ರೂಪ’ದಲ್ಲಿ ಅಂತಹ ಹುಡುಗರಿಗೇ ಕಟ್ಟಿದೆವು. ಬ್ರಹ್ಮಚಾರಿಯಾಗಿದ್ದ ಗಣೇಶನಿಗೂ ಮದುವೆಯ ಯೋಗ ಬಂತು. ಇಂದು ನಮ್ಮ ಪರಿವಾರದಲ್ಲಿ ಇರುವವರೆಲ್ಲರೂ ನಮ್ಮ ’ಪ್ರಸಾದ’ಕ್ಕೆ ಭಾಜನರಾದವರೇ.
ಎಲೈಟ್ ಕ್ಲಾಸಿನ ಮಹಿಳೆಯರನ್ನು ಗುರುತಿಸಿ ಗಾಳಹಾಕುವುದು ನಮಗೆ ಬಹಳ ಸುಲಭದ ಕೆಲಸವಾಯ್ತು. ನೀನು ದಿವ್ಯಳು ಭವ್ಯಳು ಮತ್ತಿನ್ನೇನೇನೋ ಅಂದು, ಆಣೆ ಪ್ರಮಾಣಗಳನ್ನು ಮಾಡಿಸಿ ಒಂದು ಹಂತಕ್ಕೆ ತಂದುಕೊಂಡು, ತಿನ್ನಲಿಕ್ಕೆ ವಿದೇಶೀ ಮಾದಕದ್ರವ್ಯ ಮಿಶ್ರಿತ ’ದಿವ್ಯ ಪ್ರಸಾದ’ವನ್ನು ಕೊಡುತ್ತಿದ್ದೆವು. ಎಲೈಟ್ ಕ್ಲಾಸಿನ ಸುಂದರಿ ಬುದ್ದುಗಳಲ್ಲಿ ಪ್ರತಿಷ್ಠೆ ಮತ್ತು ಭಕ್ತಿ ಎರಡೂ ಇರುತ್ತದೆ. ಇದನ್ನೇ ದಾಳವಾಗಿಸಿ ಅಂತವರನ್ನೆಲ್ಲ ಬಳಸಿಕೊಂಡು ವಿಶ್ವರೂಪ ದರ್ಶನ ನೀಡುತ್ತಿದ್ದೆವು.
ಹೊರಗೆಲ್ಲೂ ಇದು ಯಾರಿಗೂ ತಿಳುಯದಂತೆ ಯಾವ್ಯಾವ ನಾಯಿಗೆ ಯಾವ ಬಿಸ್ಕಿಟ್ ಎಸೆಯಬೇಕೋ ಅದನ್ನು ಕಾಲಕಾಲಕ್ಕೆ ಮಾಡಿಬಿಟ್ಟಿದ್ದೆವು. ಅವರಿಗಾಗಿ ನಾವು-ನಮಗಾಗಿ ಅವರು ಎಂದಾದಾಗ, ಗಂಡು ಭಕ್ತರಿಗೆ ಖಾಸಗೀ ಭೇಟಿ ಹಾರಿಹೋಗಿ ಕೇವಲ ರಾಣಿಯರಿಗೆ ಏಕಾಂತ ದರ್ಶನ ನಡೆಯುತ್ತಲೇ ಇತ್ತು.
ಆರ್ಥಿಕ ವ್ಯವಹಾರದಲ್ಲಂತೂ ಬಿಡಿ, ನಾವು ಸರ್ವತಂತ್ರ ಸ್ವತಂತ್ರರು; ಯಾರೂ ಹೇಳುವುದಕ್ಕೆ ಕೇಳುವುದಕ್ಕೆ ಅಧಿಕಾರವೇ ಇಲ್ಲ. ನಮ್ಮ ವಿರುದ್ಧ ಸೊಲ್ಲೆತ್ತಿದವರನ್ನು "ಮಾತುಕತೆಗೆ ಮಠಕ್ಕೆ ಬನ್ನಿ" ಎಂದು ಕರೆದು ನಮ್ಮ ನಾಯಿಗಳನ್ನು ಬಿಟ್ಟು ಮಗ್ಗುಲು ಮುರಿಸಿದೆವು. ಹೀಗಾಗಿ ನಮ್ಮ ವಿರುದ್ಧ ಸಾರ್ವಜನಿಕ ಸ್ಥಳಗಳಲ್ಲಿ ವಿಷಯ ಗೊತ್ತಿದ್ದರೂ ಯಾರೂ ಬಾಯ್ ಬಿಡುತ್ತಿರಲಿಲ್ಲ.
ನಡೆಯುತ್ತಿರುವ ಅಧರ್ಮ, ಅವ್ಯವಹಾರ, ಅನೈತಿಕ ವ್ಯವಹಾರ, ವ್ಯಭಿಚಾರ, ಬೂಟಾಟಿಕೆ, ಡೊಂಬರಾಟಗಳನ್ನು ಕಂಡ ಸಮಾಜದ ಕೆಲವು ಹಿರಿಯ ತಲೆಗಳು ಹಿಂದೆ ನಮ್ಮನ್ನು ಸೀಟಿಗೆ ತಂದದ್ದಕ್ಕೆ ಪಶ್ಚಾತ್ತಾಪ ಪಡುತ್ತ ತಮ್ಮ ಕೆನ್ನೆಗೆ ತಾವೇ ಹೊಡೆದುಕೊಂಡರು.
ತಲೆಯಿದ್ದವರು ಎನಿಸಿಕೊಂಡ ಕೆಲವು ಪ್ರಮುಖರು ವೇದಿಕೆ-ಮೈಕು ಬೇಕಾಗಿ ನಮ್ಮಲ್ಲಿಗೆ ಬಂದಾಗ, ಯೋಜನೆಗಳನ್ನು ಕಾರ್ಯಗತಗೊಳಿಸಲು ಅವರನ್ನು ಹಚ್ಚಿದೆವು. ಅವರೆಲ್ಲರ ಪರಿಶ್ರಮದ ಫಲವಾಗಿ ಹಣ ಉಕ್ಕಿಹರಿದು ಕಟ್ಟಡಗಳು ಮೇಲೆದ್ದವು, ಮೆರವಣಿಗೆಗಳು ನಡೆದವು, ಇನ್ನೂ ಏನೇನೋ ಎಲ್ಲಾ ನಿಗುರಿ ನಿಂತವು. ನಾವು ಮಾತ್ರ ಸದಾ ತಲೆ ಹಗುರವಿಟ್ಟುಕೊಂಡು ಏಕಾಂತ ದರ್ಶನ ನೀಡುವುದರಲ್ಲಿ ನಿರತರಾಗಿದ್ದೆವು.
ಹೊಸ ಸುಂದರಿಯ ಮುಖ ಕಂಡಾಗ ನಮಗೆ ಆ ಕ್ಷಣವೇ ಮಂಚಕ್ಕೆ ಕರೆಯುವ ಅಪೇಕ್ಷೆಯಾಗುತ್ತಿತ್ತು. ಸ್ಕೆಚ್ ಹಾಕಲು ತೊಡಗುವ ನಾವು ವಾರ, ತಿಂಗಳು, ವರ್ಷ, ವರ್ಷಗಳವರೆಗೂ ಕಾದು ತಂದು ಮಲಗಿಸಿದ್ದೇ ಗ್ಯಾರಂಟಿ. ನಮ್ಮ ನಿದ್ದೆಯನ್ನು ಕದ್ದ ಅಂತಹ ಹಲವು ನೂರು ನಿಂಗಿಗಳು ನಮ್ಮ ಸುತ್ತಲೇ ನಿಂತಿದ್ದರೂ ಒಬ್ಬರಿಗೊಬ್ಬರು ವಿಷಯ ಹೇಳಿಕೊಳ್ಳುತ್ತಿರಲಿಲ್ಲ. ಪ್ರತಿಯೊಬ್ಬರೂ ನಮ್ಮ ಕೆಳಗೆ ಮಲಗಿದ್ದು ತಮ್ಮ ಹೆಚ್ಚುಗಾರಿಕೆ ಮತ್ತು ’ಭಗವದರ್ಪಣೆ’ಎಂದೇ ಭಾವಿಸಿದ್ದರು.
ಮೊಂಡು ಭಕ್ತರ ಜೊಂಡು ತುಂಬಿದ ಭಕ್ತಸರೋವರದಲ್ಲಿ ನಮ್ಮ ಬೇರು ಆಳವಾಗಿ ಇಳಿದಿದ್ದರಿಂದ ಇಂದು ಯಾರೇ ಏನೇ ಮಾಡಿದರೂ ಅದನ್ನೆಲ್ಲ ಕೀಳುವುದು ಇತರರಿಗೆ ಕಷ್ಟ ಎಂಬುದು ನಮಗೆ ಗೊತ್ತಿದೆ. ನಾವೇ ಖುದ್ದಾಗಿ "ಹೌದಪ್ಪಾ ನಾವು ಕಳ್ಳ ಖದೀಮರು, ನಾವು ಲಂಪಟರು, ನಾವು ಕಚ್ಚೆಹರುಕರು" ಎಂದರೆ, "ಹಾಗೆಲ್ಲ ಹೇಳ್ಬಾರ್ದು ಸಂಸ್ಥಾನ, ನಮಗೆ ನೀವೇ ದೇವರು" ಎಂದು ನಮಗೇ ತಿಳಿಹೇಳುವ ಪ್ರಯತ್ನ ಮಾಡುವ ಬುದ್ಧಿಮಾಂದ್ಯರು ಅಲ್ಲಿದ್ದಾರೆ.
ಹೀಗಿರುವುದರಿಂದಲೇ ಸಮಾಜ ನಿರ್ದಾಕ್ಷಿಣ್ಯವಾಗಿ ನಿರ್ಧಾರವನ್ನು ಕೈಗೊಳ್ಳುವುದನ್ನು ಬಿಟ್ಟು ನ್ಯಾಯದ ಮೊರೆಹೊಕ್ಕಿದೆ. ಇಲ್ಲದಿದ್ದರೆ ಜನ ನಮ್ಮನ್ನು ಇಷ್ಟೊತ್ತಿಗಾಗಲೇ ದೇಶಭ್ರಷ್ಟನನ್ನಾಗಿಸುತ್ತಿದ್ದರು ಎಂಬುದರಲ್ಲಿ ನಮಗಂತೂ ಅನುಮಾನವೇ ಇಲ್ಲ. ಪರಂಪರೆ ಮತ್ತು ಸೀಟಿನ ರಕ್ಷಣೆ ಎಂಬ ಅಜ್ಜ ನೆಟ್ಟ ಆಲದಮರದ ಬೀಳಲುಗಳು ಮೇಲಿನಿಂದ ಭದ್ರವಾಗಿದ್ದರೆ, ಕೆಳಗೆ ನಾವು ಆಕ್ಟೋಪಸ್ ರೀತಿಯಲ್ಲಿ ಸಂದಿಗೊಂದಿಯಲ್ಲೆಲ್ಲಾ ಇಳಿಸಿದ್ದ ಬೇರುಗಳನ್ನು ಕಿತ್ತೆಗೆಯಲು ಜ್ಞಾತರು ಪ್ರಯತ್ನಿಸುತ್ತಿದ್ದಾರೆ.
ತುಮರಿ ರಾಮಚಂದ್ರ ಯಾರು ಎಂದು ಜಲಾನಯನ ಪ್ರದೇಶದ ಭಕ್ತರಲ್ಲಿ ನಾವು ಬಹಳ ಡೀಪ್ ಆಗಿ ವಿಚಾರಿಸಿದೆವು; ನಮ್ಮಲ್ಲಿಗೆ ಬರುವ ಯಾವ ಭಕ್ತರಿಗೂ ಅವನ ಪರಿಚಯ ಇರದ್ದರಿಂದ ಅವನನ್ನು "ಬೇನಾಮಿ" ಎಂದುಬಿಡಿ ಎಂದು ನಮ್ಮ ದೊಣ್ಣೆನಾಯಕನಿಗೆ ಅಪ್ಪಣೆ ಮಾಡಿದ್ದೇವೆ. ಆದರೂ ಒಂದಿಲ್ಲೊಂದು ದಿನ ಆ ಹೆಸರಿನ ವ್ಯಕ್ತಿ ನಮಗೆದುರಾಗಿ ಛೀಮಾರಿ ಹಾಕಿದರೆ ಆಗೇನು ಮಾಡುವುದು ಎಂಬ ಸಂದೇಹವೂ ನಮಗಿದೆ."
https://www.facebook.com/groups/1499395003680065/permalink/1628062217480009/
ಮನ್ಮಥ ಚಾತುರ್ಮಾಸ
"ಚಾತುರ್ಮಾಸದ ಬಗ್ಗೆ ಈಗಲೇ ಸಾಕಷ್ಟು ಹೇಳಿದ್ದೇವಲ್ಲ ಬಿಡಿ. ಹೆಸರೇ ಹೇಳುವಂತೆ ಇದು ಮನ್ಮಥ ಸಂವತ್ಸರ. ಮನ್ಮಥ ಸಂವತ್ಸರದಲ್ಲಿಯೂ ನಮ್ಮ ಮನ್ಮಥ ಲೀಲೆಗಳಿಗೆ ಇಲ್ಲಿಯವರೆಗೇನೂ ಕೊರತೆಯಿರಲಿಲ್ಲ. ಹೊಸ ಹೊಸ ’ಸೂರ್ಯ-ಚಂದ್ರ’ರನ್ನು ಹಿಡಿಯಲಾಗದಿದ್ದರೂ..ಓ..ಸಾರಿ..ಸಾರಿ ದರ್ಶನ ಮಾಡಲಾಗದಿದ್ದರೂ, ಇರುವ ಮದ್ದಲೆಗಳನ್ನೇ ಚೆನ್ನಾಗಿ ನುಡಿಸಿದ್ದೇವೆ ನಾವು.
ಮನ್ಮಥ ಎಂಬವನ ಕೆಲಸ ಹೆಣ್ಣು-ಗಂಡುಗಳಲ್ಲಿ ಮೋಹವನ್ನು ಕೆರಳಿಸುವುದಂತೆ. ಅಶೋಕ, ಚೂತ, ಅರವಿಂದ, ನಮಮಲ್ಲಿಕಾ, ನೀಲೋತ್ಫಲ ಎಂಬ ಪಂಚಬಾಣಗಳು [ಸಮ್ಮೋಹನ, ಸಂತಾಪನ, ಸಂದೀಪನ, ಸಂಶೋಷಣ, ದ್ರಾವಣ ಎಂದೂ ಅಥವಾ ಮನೋಮಥನ, ಮದನ, ಮೋಹನ, ಸಂತಾಪನ, ವಶೀಕರಣ ಎಂದೂ ಅವುಗಳ ಕ್ರಿಯಾ ರೂಪದ ಅರ್ಥವನ್ನು ವಿಶ್ಲೇಷಿಸುತ್ತಾರೆ]
ಮನ್ಮಥನ ಬಾಣ ಪ್ರಯೋಗದಿಂದ ಈ ಹಿಂದೆ ಏನೇನೆಲ್ಲ ನಡೆದಿದೆ ಎಂಬುದು ನಿಮಗೆಲ್ಲ ತಿಳಿದಿರಬಹುದು. ಶಿವ-ಪಾರ್ವತಿಯರ ನಡುವೆ ಮೋಹ ಕುದುರಿಸಿದ್ದು, ವಿಶ್ವಾಮಿತ್ರ-ಮೇನಕೆಯರ ನಡುವೆ ಮೋಹ ಕುದುರಿಸಿದ್ದು ಮೊದಲಾದ ಹಲವು ಮೋಹದ ಕಥೆಗಳ ಹಿಂದೆ ಮನ್ಮಥನ ಕೈವಾಡವಿದೆ ಎಂದು ಕೇಳಿದ್ದೇವಷ್ಟೇ? ಅಂತದ್ದೇ ಇನ್ನೊಂದು ಕತೆ ಪರಾಶರರದ್ದು.
ಪರಾಶರ ಮುನಿಗಳು ತೀರ್ಥಯಾತ್ರೆಗೆ ಹೊರಟವರು ಯಮುನಾ ನದಿಯನ್ನು ದಾಟುವವರಿದ್ದರು. ಯಮುನೆಯ ಆ ಭಾಗದಲ್ಲಿ ಬೆಸ್ತರ ನಾಯಕ ದಾಶರಾಜ ದೋಣಿ ನಡೆಸಬೇಕಾಗಿದ್ದವನು ಊಟ ಮಾಡುತ್ತಿದ್ದ. ತಡ ಮಾಡಿದರೆ ಮುನಿಗಳು ಮುನಿದು ಶಾಪ ಕೊಟ್ಟುಬಿಡುದೇನೋ ಎಂಬ ಅಂಜಿಕೆಯಿಂದ ಆಗತಾನೇ ಯೌವ್ವನಕ್ಕೆ ಕಾಲಿಟ್ಟಿದ್ದ ಮಗಳು ಮತ್ಸ್ಯಗಂಧಿಯನ್ನು ದೋಣಿ ನಡೆಸಲು ಕಳಿಸಿಕೊಟ್ಟ.
ಕೃಷ್ಣ ಸುಂದರಿಯಾದ ಮತ್ಸ್ಯಗಂಧಿಯ ಸುಪುಷ್ಟ ಅಂಗಸೌಸ್ಟವಗಳನ್ನು ಪರಾಶರರು ನೋಡುವಂತೆ ಮಾಡಿದ್ದು ಮರೆಯಲ್ಲಿನ ಮನ್ಮಥ. ಮನ್ಮಥನ ಬಾಣ ಅವರಲ್ಲಿ ಬಯಕೆಯನ್ನು ಕೆರಳಿಸಿತು. ಆಕೆ ಯೋಜನಗಂಧಿ ಬೇರೆ, ಆ ಗಂಧ ಯೋಜನಗಳಷ್ಟು ದೂರ ಹೋಗುವ ಗಂಧ ಎಂದರ್ಥ. ಸಾಮಾನ್ಯವಾಗಿ ಮಹಿಳೆಯರ ಗಂಧವನ್ನು ಹೀರುವ ’ವಾಸು’ಗಳಿಗೆ ಮಾತ್ರ ಅಂತಹ ಗಂಧದ ಪರಿಣಾಮ ಗೊತ್ತಿರುತ್ತದೆ. ಪರಾಶರರಿಗೆ ಮಾತ್ರ ಇಲ್ಲಿ ’ವಾಸು’ ಎಂಬುದು ಅಪ್ಲೈ ಆಗುವುದಿಲ್ಲ.
ಪರಾಶರ ಮುನಿಗಳಿಗೆ ಮತ್ಸ್ಯಗಂಧಿಯಲ್ಲಿ ಮೋಹ ಹುಟ್ಟಿತು. ಮತ್ಸ್ಯಗಂಧಿಗೆ ಪರಾಶರರ ಕಣ್ಣೋಟದಲ್ಲಿ ಹೊಸಜಗತ್ತೇ ಕಂಡಿತು. ಮುಂದಿನ ಪರಿಣಾಮದ ಬಗೆಗೆ ಯೋಚಿಸುವ ಬುದ್ಧಿಮಟ್ಟ ಮತ್ಸ್ಯಗಂಧಿಯದಲ್ಲ; ಅವಳಿಗೆ ಆ ಕ್ಷಣಕ್ಕೆ ಜಗತ್ತೇ ಸುಂದರ. ಪರಾಶರರ ದೇಹ ಸಮೀಪಿಸಿದಷ್ಟೂ ಆಕೆಗೆ ಹಿತವೆನ್ನಿಸಿತು. ಎಳೆಯ ಯೋಜನಗಂಧಿಗೆ ನಡುವಯದ ಕಟ್ಟುಮಸ್ತಾದ ಮುನಿ ಪರಾಶರರ ಬಿಸಿಯಪ್ಪುಗೆ ಬಹಳ ಖುಷಿಕೊಟ್ಟಿತು.
ಪರಾಶರರು ಮುಂದಿನ ಪಾಠವನ್ನು ಪ್ರಾಕ್ಟಿಕಲ್ಸ್ ಮೂಲಕ ಹೇಳಿಕೊಟ್ಟರು; ಪರಿಣಾಮವಾಗಿ ಹುಟ್ಟಿದ ಕಪ್ಪು ಮಗುವೇ ಕೃಷ್ಣ ದ್ವೈಪಾಯನ. ೨ ಮಿನಿಟ್ಸ್ ಮ್ಯಾಗಿಯ ಹಾಗೆ ಅದೆಷ್ಟು ಬೇಗ ಮಗುಹುಟ್ಟಿತು ಎಂಬುದು ಇಲ್ಲಿ ಪ್ರಶ್ನಾತೀತ; ಅದೊಂದು ಬೃಹತ್ ಸಂಕಲ್ಪ. ತಡವಾಗಿ ಎಚ್ಚರಗೊಂಡ ಮತ್ಸ್ಯಗಂಧಿ ತನ್ನ ಕನ್ಯತ್ವ ಲುಪ್ತವಾಗದಂತೆ ವರವನ್ನು ಬೇಡಿದಳು. ದೀರ್ಘಕಾಲದ ಯೌವ್ವನವನ್ನೂ, ಕನ್ಯತ್ವವನ್ನೂ, ದೇಹದ ನಾತದ ಬದಲಿಗೆ ಯೋಜನಗಳವರೆಗೆ ದಿವ್ಯ ಪರಿಮಳ ಸೂಸುವ ವರವನ್ನೂ ಕರುಣಿಸಿ, ಉಡುಗೆ ತೊಡುಗೆ, ದಿವ್ಯಾಭರಣಗಳನ್ನೂ ತನ್ನ ತಪೋಮಹಿಮೆಯಿಂದ ಒದಗಿಸಿಕೊಟ್ಟರು ಋಷಿ ಪರಾಶರ.
ಅಂದಿನಿಂದ "ಮತ್ಸ್ಯಗಂಧಿ" "ಯೋಜನಗಂಧಿ" ಎಂದು ಕರೆಯಲ್ಪಟ್ಟಳು. ಹುಟ್ಟಿದ ಮಗು ಅವಳಿಗೆ ಬೇಕಾಗಿರಲಿಲ್ಲ. ಏನು ಮಾಡಬೇಕು? ಹಾದಿಯಲ್ಲೇ ಎಸೆದು ಮುಂದೆ ಸಾಗಬೇಕೇ? ಛೆ, ಪರಾಶರರು ಅಂತವರಾಗಿರಲಿಲ್ಲ. ತನ್ನ ತಪಃಶಕ್ತಿಯನ್ನು ವ್ಯಯಿಸಿ ಮಗುವನ್ನು ದೊಡ್ಡವನನ್ನಾಗಿ ಮಾಡಿ, "ಕೃಷ್ಣದ್ವೈಪಾಯನ" ಎಂಬುದಾಗಿ ಹೆಸರಿಸಿ, ತನ್ನ ಜೊತೆಗೇ ಕರೆದುಕೊಂಡು ಹೊರಟು ಹೋದರು. ಯೋಜನಗಂಧಿಗೆ "ಯಾವುದೇ ಕಷ್ಟ ಬಂದಾಗ ನೆನದ ಮಾತ್ರಕ್ಕೆ ಬಂದೊದಗುವೆ" ಎಂಬ ಭರವಸೆಯೊಂದಿಗೆ ಕೃಷ್ಣದ್ವೈಪಾಯನ ಅಪ್ಪನೊಂದಿಗೆ ಹೊರಟು ಹೋದ. ಮುಂದೆ ಆ ಮಗುವೇ ಪ್ರಕೃತದ ವೇದವ್ಯಾಸನೆನಿಸಿದ.
ಕಷ್ಟ ಬಂದಾಗ ಕರೆಮಾಡಲು ಅಂದು ಮೊಬೈಲ್ ಇರಲಿಲ್ಲ. ವಾಟ್ಸಾಪ್, ಐಪ್ಯಾಡ್, ಐಫೋನ್ ಇರಲಿಲ್ಲ. ಅಂದು ಅವರಲ್ಲೆಲ್ಲ ವಿಶಿಷ್ಟ ಶಕ್ತಿಯಿರುತ್ತಿತ್ತು; ಅದರಿಂದ ಅವರೆಲ್ಲ ದೂರದಲ್ಲಿರುವವರೊಡನೆ ತಮ್ಮ ಸ್ಥಿತಿಗತಿಯನ್ನು ಹೇಳಿಕೊಳ್ಳಬಹುದಾಗಿತ್ತು.
ನಾವೂ ವೀರ್ಯ ಸನ್ಯಾಸಿಯೇ ಆಗಿರುವುದರಿಂದ ಮತ್ಸ್ಯಗಂಧಿಯರನ್ನು ಹುಡುಕಿ ಅವರನ್ನೆಲ್ಲ ಯೋಜನಗಂಧಿಯರನ್ನಾಗಿ ಮಾಡಲು ಇಚ್ಛಿಸಿದೆವು. ಹರೆಯದ ಕೆಲವು ಕನ್ಯೆಯರಿಗೆ ಅಂತಹ ಅವಕಾಶ ಮಾಡಿಕೊಟ್ಟು ಪರಿವಾರದ ಗಿಂಡಿಗಳಿಗೆ ಮದುವೆ ಮಾಡಿಸಿದೆವು. "ದೇವರಾದ ನಮ್ಮ ದಿವ್ಯ ಸಂಕಲ್ಪ ನಿನಗೆ ದೈವತ್ವವನ್ನು ಕೊಡುತ್ತದೆ" ಎಂದು ಭೋಂಗು ಬಿಟ್ಟೆವು. ನಮ್ಮ ಸಮ್ಮಿಲನದ ಸವಿನೆನನಪಿಗಾಗಿ ನಮಗಿಂದು ಹಲವು ಮಕ್ಕಳಿದ್ದಾವೆ.
ಮುಖ್ಯ ವಿಷಯ ಅದಲ್ಲ. ವಿಚಾರಣೆ ನಡೆಸುವವರು ಅವುಗಳ ಡಿ.ಎನ್.ಎ ಟೆಸ್ಟ್ ಮಾಡಿಸಬೇಕು ಎಂದು ಹಠಮಾಡಿಬಿಟ್ಟರೆ ಎಂಬ ಸಂದೇಹ ನಮ್ಮ ಮನದಲ್ಲಿ ಸದಾ ಕಾಡುತ್ತಿದೆ. ಕೂದಲು ಸಿಗುವುದಕ್ಕೆ ಕತೆ ಕಟ್ಟಿದ್ದೇವೆ ಬಿಡಿ, ಆದರೆ ಇದಕ್ಕೆ ಯಾವ ಕತೆ ಹೊಸೆಯುವುದು ಎಂದು ನಮ್ಮ ಸುರಕ್ಷಾ ಸಮಿತಿಯವರು ತಲೆಕೆಳಗಾಗಿ ತಪಸ್ಸಿಗೆ ನಿಂತಿದ್ದಾರೆ.
ಅದಿರಲಿ, ಮುಂದೆ ಹಸ್ತಿನಾವತಿಯ ಅರಸ ಶಂತನು ಸತ್ಯವತಿಯನ್ನು ಬಯಸಿ ಬಂದ. ಸುಂದರಿ ಸೆಕೆಂಡ್ ಹ್ಯಾಂಡ್ ಆದರೇನು ಫಸ್ಟ್ ಹ್ಯಾಂಡ್ ಆದರೇನು? ನಮ್ಮಲೆಕ್ಕದಲ್ಲಿ ಸುಂದರಿಯರು ಎಷ್ಟನೇ ಹ್ಯಾಂಡ್ ಆದರೂ ತೊಂದರೆಯಿಲ್ಲ, ನಮ್ಮ ಕೆಲಸಕ್ಕೆ ಅನುಕೂಲ ಇದ್ದರೆ ಸಾಕು. [ಅದಕ್ಕೇ ನಾವು ನಮ್ಮ ಕನ್ಯೆಯರಲ್ಲಿ "ಸನ್ಯಾಸಿಯಾದ ನಮ್ಮ ಆಸೆಯನ್ನು ಪೂರೈಸಿದ ನೀವೇನೂ ಚಿಂತಿಸುವ ಅಗತ್ಯವಿಲ್ಲ, ನಾಮಕೇ ವಾಸ್ಥೆಗೆ ನಿಮಗೆ ಗಂಡನೊಬ್ಬ ಬರಲಿದ್ದಾನೆ, ಮಿಕ್ಕಿದ್ದನ್ನೆಲ್ಲ ನಾವೇ ನೋಡಿಕೊಳ್ಳುತ್ತೇವೆ."ಎಂದು ಹೇಳುತ್ತೇವೆ]
ಹೋಗಿಸೇರುವ ಮನೆಯಲ್ಲಿ ಮಗಳ ಸ್ಥಾನ-ಮಾನ ಎಂಥದ್ದು ಎಂಬುದರ ಬಗ್ಗೆ ಚಿಂತಿಸಿದ ದಾಶರಾಜ, "ನನ್ನ ಮಗಳಲ್ಲಿ ಹುಟ್ಟುವ ಸಂತಾನಕ್ಕೆ ರಾಜಪಟ್ಟ ನೀಡುವುದಾದರೆ ಮಾತ್ರ ನನ್ನ ಮಗಳನ್ನು ನಿನಗೆ ಕೊಡಬಲ್ಲೆ" ಎಂದು ಶಂತನುವಿಗೆ ಸವಾಲು ಎಸೆದುಬಿಟ್ಟ. ಮಗ ಗಾಂಗೇಯನಿರುವಾಗ ಮುಂದೆ ಹುಟ್ಟುವ ಮಗುವಿಗೆ ಹೇಗೆ ಪಟ್ಟಾಧಿಕಾರವನ್ನು ನೀಡಲಿ ಎಂದು ಶಂತನು ಯೋಚಿಸಿದ.
ಒಂದೆಡೆ ಮಗ, ಇನ್ನೊಂದೆಡೆ ಮನವನ್ನು ಮೋಹಿಸಿದ ಯೋಜನಗಂಧಿ. ಮನದ ತಿಕ್ಕಾಟದಲ್ಲಿ ಬಳಲಿದ ಶಂತನು ಜ್ವರಕ್ಕೆ ಬಿದ್ದ. ಊಟ ಬೇಡ, ತಿಂಡಿ ಬೇಡ. ನಾವೂ ಕೆಲವು ಸಲ ಹೀಗೇ ಅದೇ ಸ್ಥಿತಿಯನ್ನು ಅನುಭವಿಸಿದ್ದುಂಟು. ಕಾರಿನ ಬಾಗಿಲವರೆಗೂ ಬಂದು ನಗುಮೊಗದಲ್ಲಿ ಬೀಳ್ಕೊಟ್ಟ ಸ್ನಿಗ್ಧ ಸುಂದರಿಯರ ನೆನಪಿನಲ್ಲಿ ನಮಗೆ ಸ್ನಾನ ಬೇಡ, ಪೂಜೆ ಬೇಡ, ಭಿಕ್ಷವೂ ಬೇಡ, ಸದಾ ಅವರದ್ದೇ ಧ್ಯಾನ. ಅವರಲ್ಲಿನ ’ಸೂರ್ಯ-ಚಂದ್ರ’ರನ್ನು ಕಾಣುವ ತವಕ.
ಶಂತನು ಪುತ್ರ ದೇವವ್ರತ, ಹಸ್ತಿನಾವತಿಯ ರಾಜಸಿಂಹಾಸನವನ್ನು ತಾನು ಏರಲಾರೆನೆಂದೂ, ಅದು ನಿಮ್ಮ ಮಗಳ ಸಂತಾನಕ್ಕೇ ಮೀಸಲೆಂದೂ, ಮುಂದೆ ತನ್ನ ಮಡದಿಯಾಗುವವಳು ಪರಿಸ್ಥಿತಿ ಬದಲಾಯಿಸಿಯಾಳು ಎಂಬ ನಿಮ್ಮ ಆತಂಕ ನಿವಾರಣೆಗಾಗಿ ತಾನು ಆಜನ್ಮ ಬ್ರಹ್ಮಚಾರಿಯಾಗಿಯೇ ಉಳಿವೆನೆಂದೂ, ಪ್ರಪಂಚದ ಎಲ್ಲ ಸ್ತ್ರೀಯರು ತನಗೆ ತಾಯಿಯ ಸಮಾನವೆಂದೂ ವಾಗ್ದಾನ ಮಾಡಿದ; ಅದೇ ಭೀಷ್ಮಪ್ರತಿಜ್ಞೆ ಎನಿಸಿತು.
ತಂದೆಯ ಚಾಪಲ್ಯಕ್ಕೆ ತನ್ನ ಸಾಂಸಾರಿಕ ಜೀವನವನ್ನೇ ತ್ಯಜಿಸಿದ ಆ ಮಗ ಅದೆಷ್ಟು ಉದಾರಿಯಾಗಿರಬೇಡ? ಅಪ್ಪನ ವಿರಹ ವೇದನೆಯನ್ನು ಅರಿತು ಸಹಕರಿಸುವ ಮಕ್ಕಳೂ ಈ ಲೋಕದಲ್ಲಿ ಇದ್ದರೆಂಬುದಕ್ಕೆ ಭೀಷ್ಮನೇ ಸಾಕ್ಷಿ. ಅಷ್ಟೇ ಅಲ್ಲ ಗುರುವಿನ ವಿರಹ ವೇದನೆಯನ್ನು ತೆರವು ಮಾಡುವುದಕ್ಕೆ ತರತರವಾದ ರೀತಿಯಲ್ಲಿ ನಮಗೆ ಬೇಕಾದಂತೆಯೇ ನಡೆದುಕೊಳ್ಳುವ ನಮ್ಮ ಗಿಂಡಿಗಳಂತವರೂ ಈ ಲೋಕದಲ್ಲಿದ್ದಾರೆ.
ಬರಬಿದ್ದು ಎಲ್ಲೆಲ್ಲೂ ಎಂತೆಂತಹ ಸೂಪರ್ ಕ್ವಾಲಿಫೈಡ್ ಹುಡುಗರಿಗೆ ಹೆಣ್ಣು ಸಿಗದ ಈ ಕಾಲದಲ್ಲಿ ಏಳನೇ ಕ್ಲಾಸನ್ನೂ ಮುಗಿಸದ ಗಿಂಡಿಗಳಿಗೆ ಸುಂದರ ಹುಡುಗಿಯೊಂದಿಗೆ ಮದುವೆಯಾಗುತ್ತದೆ ಎಂದರೆ ಅದು ’ಗುರುಕೃಪೆ’ಯಲ್ಲವೇ? ಅದಕ್ಕೇ ಹೇಳೋದು-’ಹರಮುನಿದರೂ ಗುರು ಕಾಯುತ್ತಾನೆ’ಎಂದು. [ಯಾರೂ ಎತ್ತಿಕೊಂಡು ಹೋಗದಂತೆ ಈಗ ನಮ್ಮನ್ನೇ ಅವರು ಪಾಳಿಯಲ್ಲಿ ಕಾಯುತ್ತಿದ್ದಾರೆ ಎಂಬುದು ನಗಣ್ಯ]
ಮಹಾಸಮರ್ಥನಾಗಿದ್ದ ಭೀಷ್ಮನೇ ಹಸ್ತಿನಾವತಿಯನ್ನು ಆಳಿದ್ದರೆ ಮಹಾಭಾರತದ ಕಥೆಯ ದಿಕ್ಕೇ ಬದಲಾಗಿಬಿಡುತ್ತಿತ್ತು. ಸೃಷ್ಟಿಯ ನಿರ್ಧಾರ ಬೇರೆ ಇರುತ್ತದಲ್ಲ? ಶಂತನು-ಸತ್ಯವತಿ ಉರುಫ್ ಯೋಜನಗಂಧಿ ಸಂಧಿಸಿ ಚಿತ್ರವೀರ್ಯ ಮತ್ತು ವಿಚಿತ್ರವೀರ್ಯ ಎಂಬ ಇಬ್ಬರು ಮಕ್ಕಳು ಜನಿಸಿದರು. ಇಬ್ಬರ ಹೆಸರಲ್ಲೂ ವೀರ್ಯವಿತ್ತಾದರೂ ಅವರ ವೀರ್ಯ ಸಂತಾನಾನುಗ್ರಹ ನೀಡುವಷ್ಟು ಸಬಲವಾಗಿರಲಿಲ್ಲ. ಅಂದು ನಾವು ಅಲ್ಲಿರಲಿಲ್ಲ. ಹೀಗಾಗಿ ವೇದವ್ಯಾಸರನ್ನು ಕರೆದರು. ನಾವು ಅಲ್ಲಿದ್ದರೆ ’ನಿಯೋಗ’ ಮುಗಿದಮೇಲೆ ಇಡೀ ಹಸ್ತಿನಾವತಿಯನ್ನೇ ಡೀನೋಟಿಫೈ ಮಾಡಿಸಿಬಿಡುತ್ತಿದ್ದೆವು.
ಚಾತುರ್ಮಾಸದ ಪರ್ವಕಾಲದಲ್ಲಿ ಇಂತಹ ಪುಣ್ಯ ಕತೆಗಳನ್ನು ನೀವೆಲ್ಲ ಕೇಳುತ್ತಿರಬೇಕು. ಅದೇ ವೀರ್ಯಸನ್ಯಾಸದ ನಿರೀಕ್ಷೆ. ಹಾವಾಡಿಗ ಮಹಾಸಂಸ್ಥಾನದಲ್ಲಿ ಹಾವಾಡಿಗರ ಸಂಖ್ಯೆ ಹೆಚ್ಚಿದಷ್ಟೂ ನಮಗೆ ಖುಷಿ; ಹಂಚಿತಿನ್ನುವ ಸುಖ ಇನ್ನೇತರಲ್ಲಿ ಸಿಗಲು ಸಾಧ್ಯ, ಅಲ್ಲವೇ?
https://www.facebook.com/groups/1499395003680065/permalink/1628503940769170/
ನೀನೂ ಬಾ ನಿನ್ನ ಹೆಮ್ಮಕ್ಕಳನ್ನೂ ಕರೆದುಕೊಂಡು ಬಾ....!!!
" "ನನ್ನವು ಎರಡು, ಅವರವು ಎರಡು ಮತ್ತು ನಮ್ಮವು ಎರಡು" ಎಂಬುದು ಬರಹಗಾರ್ತಿ ಶೋಭಾ ಡೇ ಮಕ್ಕಳೆಷ್ಟೆಂಬ ಪ್ರಶ್ನೆಗೆ ಉತ್ತರವಾಗಿ ಹೇಳಿದ್ದು. ಅದನ್ನು ಓದಿದವರು ಏನಿದು ವಿಚಿತ್ರ ಅಂದುಕೊಂಡರು. ಸಾಮಾನ್ಯವಾಗಿ ಗಂಡ-ಹೆಂಡತಿಗೆ ಒಟ್ಟು ಮಕ್ಕಳು ಇಂತಿಷ್ಟು ಎಂದು ಹೇಳುತ್ತಾರಲ್ಲ; ಇಲ್ಲಿ ಹಾಗಲ್ಲ.
ಅವಳ ಹೇಳಿಕೆಯ ಅರ್ಥ-ಅವಳಿಗೆ ಮೊದಲ ಮದುವೆಯಿಂದ ಎರಡು, ಅವಳ ಈಗಿನ ಪತಿಗೆ ಅವನ ಮೊದಲ ಮದುವೆಯಿಂದ ಎರಡು, ಈ ವಿಚ್ಛೇದಿತರೀರ್ವರೂ ಜೊತೆಗೂಡಿದಮೇಲೆ ಇವರಿಗೆ ಎರಡು. ಇದು ಅಧುನಿಕ ಭಾರತ ಯಾವ ಕಡೆ ವಾಲುತ್ತಿದೆ ಎಂಬುದರ ದ್ಯೋತಕವೇ?
’ಅರವತ್ತರ ವಯಸ್ಸು ಬಲು ಗಮ್ಮತ್ತು’ ಎಂದು ತನ್ನ ಅಂಕಣದಲ್ಲಿ ಆಕೆ ಬರೆದುಕೊಂಡಿದ್ದಳು. ಇದು ಹಲವರ ಅಭಿಪ್ರಾಯವೂ ಆಗಿರಬಹುದು. ವಯಸ್ಸು ಉರುಳಿದಂತೆಲ್ಲ ಜೀವನದಲ್ಲಿ ಒಂದು ರೀತಿಯ ಸ್ಥಿರತೆ, ಸಂತೃಪ್ತಿ ಅರಳಿ, ಉತ್ಸಾಹ ಮತ್ತೆ ಮರಳಿ ಬಂದಿರುತ್ತದಂತೆ. ಲೈಂಗಿಕ ಸಂತೃಪ್ತಿಗೆ ಸಂಬಂಧಿಸಿದಂತೆ ಇದು ನೂರಕ್ಕೆ ನೂರು ಸತ್ಯ ಎಂಬುದು ಒಂದು ಸರ್ವೇಯಿಂದ ತಿಳಿದುಬಂದಿದೆ ಎಂದು ಪತ್ರಿಕೆಯೊಂದು ಹೇಳಿದೆ; ಪ್ರಾಯಶಃ ಅದು ನಮ್ಮಂತದೇ ಕಚ್ಚೆಹರುಕ ಸಂಪಾದಕನಾಗಿರುವ ಪತ್ರಿಕೆ.
ಜೀವನದ ಯಾವುದೇ ಹಂತಕ್ಕಿಂತ ನಲವತ್ತರ ಹರೆಯದಲ್ಲಿ ಹೆಚ್ಚಿನ ಸಂತಸ ಅನುಭವಿಸುತ್ತಿದ್ದೇವೆ ಎಂದು ಸಮೀಕ್ಷೆಯೊಂದರಲ್ಲಿ ಮಹಿಳಾಮಣಿಗಳು ತಮ್ಮ ಹಾಸಿಗೆಯ ಅನುಭವಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರಂತೆ. ಇವರಲ್ಲಿ ಕೆಲವರು, ಗಂಡನ ಮೇಲಿನ ಆಸಕ್ತಿ ಕುಗ್ಗಿ, ಪರಪುರುಷರ ಕಡೆಗಿನ ಆಸಕ್ತಿ ಹಿಗ್ಗುವುದು ಈ ಹಂತದಲ್ಲಿಯೇ ಎಂದು ಮನಬಿಚ್ಚಿ ಹೇಳಿದ್ದಾರೆ ಎಂದಾಯ್ತು.
ಹಾಗಾದರೆ, ಇದಕ್ಕೆ ಕಾರಣವೇನು? ಅದಕ್ಕೊಬ್ಬ ಹೀಗೆ ಬರೆಯುತ್ತಾನೆ-"ನಲವತ್ತು ದಾಟುತ್ತಿದ್ದಂತೆ ಮಕ್ಕಳು ಸ್ವತಂತ್ರ ಹಕ್ಕಿಗಳಾಗಿರುತ್ತಾರೆ, ಗೂಡಿನಿಂದ ಹೊರಹಾರಿರುತ್ತಾರೆ, ಗಂಡನ ವೃತ್ತಿ ಒಂದು ಹಂತ ತಲುಪಿರುತ್ತದೆ, ಸಂಸಾರ ರಥ ಎಳೆಯುವ ಜವಾಬ್ದಾರಿ ಹೆಗಲಿನಿಂದ ಇಳಿದಿರುತ್ತದೆ, ಒಂದು ರೀತಿಯ ನಿರಾಳಭಾವ ತಾನೇ ತಾನಾಗಿರುತ್ತದೆ. ತಮ್ಮ ದೇಹದ ಮೇಲಿನ ರತಿ, ವ್ಯಾಮೋಹ ಕಡಿಮೆಯಾಗುತ್ತ, ಮನ್ಮಥ ಸಮ್ಮೋಹನಾಸ್ತ್ರ ಬೀಸಿರುತ್ತಾನೆ. ಈ ಹಂತದಲ್ಲಿ ಲೈಂಗಿಕ ಕ್ರಿಯೆಯ ಬಗ್ಗೆ ಹೆಚ್ಚಿನ ವಿಶ್ವಾಸ ಮೂಡಲು ಆರಂಭವಾಗಿರುತ್ತದೆ."
"೨೦ರ ಹದಿ,ಕುದಿವಯಸ್ಸಿನಲ್ಲಿದ್ದಕ್ಕಿಂತ 40ರ ಮಧ್ಯವಯಸ್ಸಿನಲ್ಲಿ ಮಿಲನ ಮಹೋತ್ಸವದಲ್ಲಿ ಹೆಚ್ಚಿನ ರೀತಿಯಲ್ಲಿ ಪ್ರಯೋಗಕ್ಕಳಿಯುತ್ತಿದ್ದೇವೆ ಎಂದು ಶೇ.80ರಷ್ಟು ಪ್ರಮೀಳೆಯರು ತಿಳಿಸಿದ್ದಾರಂತೆ. ಇತ್ತೀಚೆಗೆ ಮ್ಯಾಟ್ರಿಮೋನಿಯಲ್ ವೆಬ್ ಸೈಟೊಂದು ತಮ್ಮ ತಾಣದಲ್ಲಿ ನಲವತ್ತೇಕೆ ಐವತ್ತರ ಮಹಿಳೆಯರು ಹೆಚ್ಚೆಚ್ಚಾಗಿ ನೊಂದಾಯಿಸಿಕೊಳ್ಳುತ್ತಿದ್ದಾರೆ, ಸಂಗಾತಿಗಾಗಿ ಹುಡುಕುತ್ತಿದ್ದಾರೆ, ಹೊಸ ಜೀವನಕ್ಕಾಗಿ ಹಾತೊರೆಯುತ್ತಿದ್ದಾರೆ ಎಂದು ಹೇಳಿತ್ತು" ಎಂದೂ ಆ ಲೇಖಕ ಹೇಳುತ್ತಾನೆ. ಇವರಲ್ಲಿ ಬೆಂಗಳೂರಿನ ಆಂಟಿಯರು ಹೆಚ್ಚಾಗಿದ್ದುದು ಕಂಡುಬಂದಿತ್ತು.
ಲೈಂಗಿಕ ತಜ್ಞರು ಹೀಗೆ ಹೇಳುತ್ತಾರಂತೆ-"ಸುರತ ಕ್ರೀಡೆಗೆ ಸಂಬಂಧಿಸಿದಂತೆ 40ರ ಮಹಿಳೆಯರು ಹೆಚ್ಚಿನ ವಿಶ್ವಾಸ ಹೊಂದಿರುತ್ತಾರೆ. ಗಂಡ ಹಳಬನಾಗಿದ್ದರೂ ಹೊಸಬಯಕೆಗಳು ಕೆರಳಿರುತ್ತವೆ. ತಮಗೇನು ಬೇಕೆಂದು ಸ್ಪಷ್ಟವಾಗಿ ಗೊತ್ತಿರುತ್ತದೆ. ಗಂಡನಿಗೆ ಹೇಳಿಕೊಳ್ಳಲು ಕೂಡ ಯಾವುದೇ ಹಿಂಜರಿಕೆಯಿರುವುದಿಲ್ಲ. ಸಾಂಪ್ರದಾಯಿಕ ಮನೆತನದ ಮಹಿಳೆಯರು ಇದನ್ನು ಒಪ್ಪಲಿಕ್ಕಿಲ್ಲ.
ಅದೇ ಲೇಖಕ ಮುಂದೆ ತನ್ನ ಲೇಖನದ ಏಕಮುಖೀ ನಿರ್ಣಾಯಕ ಹಂತಕ್ಕೆ ಬರುತ್ತಾರೆ. ಆತ ಹೇಳುತ್ತಾನೆ-"ಆದರೆ, ಜಗತ್ತು ಬದಲಾಗುತ್ತಿದೆ. ಕಾಲ ಹಿಂದಿನಂತಿಲ್ಲ. 20ರ ಹರೆಯದಲ್ಲಿ ಮದುವೆಯಾದ ಮಹಿಳೆಯರು ಲೈಂಗಿಕ ಕ್ರಿಯೆಗೆ ಸಂಬಂಧಿಸಿದಂತೆ ತೃಪ್ತಿಯಾದಂತೆ ನಾಟಕವಾಡುವುದು ಜಾಸ್ತಿ.ಆದರೆ, ವಯಸ್ಸು ಜೀವನದ ಮುಕ್ಕಾಲು ಭಾಗ ಸವೆಸಿದಾಗ ಈ ನಾಟಕೀಯತೆ ಬೇಕಾಗಿರುವುದಿಲ್ಲ. ಆದ್ದರಿಂದ, ಹಾಸಿಗೆಯಲ್ಲಿ ಸುಖ ತಾನಾಗಿಯೇ ಲಭಿಸುತ್ತದೆ. ಎಂಥ ಭಂಗಿಗಳು ಹೆಚ್ಚಿನ ಸುಖ ನೀಡುತ್ತವೆ ಎಂಬುದು ತಿಳಿದಿರುತ್ತದೆ. ಈ ಕುರಿತಂತೆ ನಾಚಿಕೆಯೂ ಮಾಯವಾಗಿರುತ್ತದೆ. ಶೇ.5ರಷ್ಟು ಮಹಿಳೆಯರು ಗಂಡನ ನಂಬಿಕೆಗೆ ಮೋಸ ಮಾಡಿರುವುದಾಗಿ ಒಪ್ಪಿಕೊಂಡಿದ್ದರೂ ಅತ್ಯುತ್ತಮ ಸುರತಕ್ರಿಯೆ ನಡೆಸಿದ್ದು ಬಾಳಸಂಗಾತಿಯ ಜೊತೆಯೇ ಎಂದು ಮನದಾಳದಿಂದ ಒಪ್ಪಿಕೊಳ್ಳುತ್ತಾರೆ."
ತಜ್ಞರು ಮತ್ತು ಮಹಿಳೆಯರು ಮತ್ತು ಲೇಖಕರು ಏನನ್ನೇ ಹೇಳಿಕೊಳ್ಳಲಿ, ನಮ್ಮ ಸಾಮರ್ಥ್ಯದಲ್ಲಿ ಅಪಾರವಾದ ಆತ್ಮವಿಶ್ವಾಸವಿದೆ. ನಮಗಂತೂ ನಲ್ವತ್ತಾದ ನಂತರ ಮನ್ಮಥ ಕ್ರೀಡೆಯಲ್ಲಿ ಮನೋಲ್ಲಾಸ ಹೆಚ್ಚುತ್ತಿದೆ. ಅದೊಂದು ಯುದ್ಧವೆಂದೇ ಭಾವಿಸಿದ್ದೇವೆ ನಾವು. ಆ ಯುದ್ಧದಲ್ಲಿ ಎಷ್ಟು ಹೆಣ್ಣನ್ನು ಸೋಲಿಸಿ ಮಲಗಿಸಿದೆವು ಎಂಬುದನ್ನು ಲೆಕ್ಕ ಹಾಕಿ ಅದನ್ನು ಹೆಚ್ಚಿಸುತ್ತ ಹೋದರೇ ನಮಗೆ ಸಮಾಧಾನ; ಮತ್ತು ಅದೇ ನಮ್ಮ ಲೆಕ್ಕದ ’ಮಹಿಳಾ ಸಬಲೀಕರಣ’.
ಸುರತಕ್ರೀಡೆಯೆಂಬ ಯುದ್ಧದಲ್ಲಿ ಪಕ್ಷ- ಪ್ರತಿಪಕ್ಷ, ಆಯುಧ, ಪ್ರಹಾರ, ನಖಕ್ಷತ, ದಂತಕ್ಷತ, ಚೀತ್ಕಾರ, ಬಳಲಿಕೆಗಳು ಉಂಟಂತೆ. ಇದನ್ನು ಯುದ್ಧಕ್ಕೆ ಹೋಲಿಸಿದ ಕವಿಯೊಬ್ಬ ಈ ಯುದ್ಧದ ವರ್ಣನೆ ಮಾಡುತ್ತ ರೂಪಕವನ್ನು ಮಂಚಕ್ಕೆ ಕೊಂಚ ಹತ್ತಿರವಾಗುವ ರೀತಿಯಲ್ಲಿ ಮುಂದಕ್ಕೆ ಕೊಂಡೊಯ್ಯುತ್ತಾನೆ.
ಪ್ರಿಯಕೃತಪಟಸ್ತೇಯಕ್ರೀಡಾವಿಲಂಬನವಿಹ್ವಲಾಂ
ಕಿಮಪಿ ಕರುಣಾಲಾಪಂ ತನ್ವೀಮುದೀಕ್ಷ್ಯ ಸಸಂಭ್ರಮಮ್
ಅಪಿ ವಿಗಲಿತೇ ಸ್ಕಂಧಾವಾರೇ ಗತೇ ಸುರತಾವಹೇ
ತ್ರಿಭುವನಮಹಾಧನ್ವೀ ಸ್ಥಾನೇ ನ್ಯವರ್ತತಃ ಮನ್ಮಥಃ
ಏಕಾಂತದಲ್ಲಿ ಮದನ ಕದನ ಮುಗಿದು, ಹೂಡಿದ್ದ ಗುಡಾರದ ಬಿಡಾರಗಳೆಲ್ಲ ನಾಶವಾಗಿವೆ. ಕ್ರೀಡಾಯುದ್ಧ ಮುಗಿಸಿ ಏಳುತ್ತಿದ್ದ ನಲ್ಲೆಯ ಬಟ್ಟೆಯನ್ನು ನಲ್ಲನು ಅಪಹರಿಸಿ, ಕೊಡದೆ ಸತಾಯಿಸತೊಡಗಿದನಂತೆ. ಬಟ್ಟೆಯನ್ನು ಕೊಡೆಂದು ಪರಿಪರಿಯಾಗಿ ನಲ್ಲನಲ್ಲಿ ಬೇಡಿಕೊಳ್ಳುತ್ತ, ತನ್ನ ಅಂಗಾಂಗಗಳನ್ನು ಹುಸಿನಾಚಿಕೆಯಿಂದ ಮುಚ್ಚಿಕೊಳ್ಳುತ್ತ, ಲಲನೆ ಗೋಗರೆಯುತ್ತಾಳಂತೆ.
ನಿನ್ನೆ ನಾವು ಹೇಳಿದ ಹೂಗೋಳ ಅಂದರೆ ಕುಸುಮಶರಧರನಾದ ಮನ್ಮಥ ಯುದ್ಧ ಮುಗಿಯಿತೆಂಬ ಭಾವನೆಯಿಂದ ಕಾಮಭೂಮಿಯಿಂದ ಹೊರಟುಹೋಗಿದ್ದ. ಕೇಳೀಯ ಕೋಲಾಹಲದ ನಡುವೆ ಕೇಳಿಬಂದ ತರುಣಿಯ ಆರ್ತನಾದಕ್ಕೆ ಕಿವಿಗೊಟ್ಟು ತರುಣಿಯನ್ನು ರಕ್ಷಿಸಲು ಮತ್ತೆ ಮರಳಿ ಬಂದ.
ಮತ್ತೆ ಯುದ್ಧವು ಆರಂಭವಾಯಿತೆಂದು ಪುನಃ ವಿವರಿಸಬೇಕೆ? ಇಂತಹ ಅದೆಷ್ಟು ಯುದ್ಧಗಳನ್ನು ನಾವು ಕಂಡಿಲ್ಲ? ಜಯಿಸಿಲ್ಲ? ಇಂತಹ ಯುದ್ಧ ನಮಗೆ ಪರಮಪ್ರೀತಿಯ ಯುದ್ಧ. ಇಲ್ಲಿ ನಾವು ಅಂದರೆ ಹವಾಡಿಗ ಮಹಾಸಂಸ್ಥಾನಧೀಶ್ವರರು ಕೇವಲ ಒಬ್ಬ ಲಲನೆಯಲ್ಲ ಹಲವು ಲಲನೆಯರೊಡನೆ ಏಕಾಂಗಿಯಾಗಿ ಯುದ್ಧಮಾಡಿದ್ದೇವೆ. ಮನ್ಮಥ ನಮ್ಮ ಆಸ್ಥಾನದಲ್ಲಿಯೇ ಠಿಕಾಣಿ ಹೂಡಿಬಿಟ್ಟಿದ್ದಾನೆ.
ಅಮ್ಮನಿಗೆ ನಲ್ವತ್ತಾದರೆ ನಮಗೆ ಇನ್ನೊಂದು ಬೋನಸ್ ಸಿಗುತ್ತದೆ. ಅವಳಿಗೆ ಹೆಣ್ಣುಮಕ್ಕಳಿದ್ದರೆ, "ನಿನ್ನ ಮಗಳು ನನ್ನ ಮಗಳಂತೆಯೇ, ಕರೆದುಕೊಂಡುಬಾ" ಎನ್ನುತ್ತೇವೆ ನಾವು. ಒತ್ತಾಯಕ್ಕೆ ಕಟ್ಟುಬೀಳುವ ಅಮ್ಮಂದಿರು ಕೆಲವರು ತಮ್ಮ ಹೆಮ್ಮಕ್ಕಳನ್ನೂ ಕರೆತರುತ್ತಾರೆ. ಅಮ್ಮ ದೂರ ಇರುವ ಸಮಯದಲ್ಲಿ ನಮ್ಮಲ್ಲಿಗೆ ವಿಶ್ವಾಸದಿಂದ ಬರುವ ಹದಿನೆಂಟು-ಇಪ್ಪತ್ತರ ಕಂದಮ್ಮಗಳನ್ನು ಕಾಲಮೇಲೆ ಕೂರಿಸಿಕೊಂಡು ತಲೆ ನೇವರಿಸಿ, "ನೀನೇನೂ ಹೆದರಬೇಕಾಗಿಲ್ಲ, ನಾವಿದ್ದೇವೆ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ" ಎಂಬ ಅಭಯಪ್ರದಾನ ಮಾಡಿ ’ದಿವ್ಯಪ್ರಸಾದ’ವನ್ನು ಪ್ರಾಶನ ಮಾಡಿಸುತ್ತೇವೆ.
ನಂತರ ಆಕೆ ನಮ್ಮೊಟ್ಟಿಗೆ ಯುದ್ಧಕ್ಕೆ ಸಿದ್ಧವಾಗಿ ನಿಂತುಬಿಡುತ್ತಾಳೆ! ಮತ್ತೆ ಮನ್ಮಥ ನಮಗೆ ಸಹಾಯ ಮಾಡುತ್ತಾನೆ. ನಡೆಯುವ ಘನಘೋರ ಯುದ್ಧದಲ್ಲಿ ಹೆಂಗರುವಿನ ಮೇಲೆ ಹೋರಿ ಹಾರಿ ಹೋರಾಡುತ್ತದೆ. ಹೋರೀಶನ ಹಾರಾಟಕ್ಕೆ ಸೋತು ಬಸವಳಿದ ಕನ್ಯೆ ಬಸವ ಇಳಿಯುವುದನ್ನೇ ದೀನಳಾಗಿ ನೋಡುತ್ತಾಳೆ.
"ನಮ್ಮ ಪರಿವಾರದ .......ಇಂವ ಇದ್ದಾನಲ್ಲ, ಅವನಿಗೆ ನೀನೆಂದರೆ ಇಷ್ಟವಂತೆ. ನಾವು ಹೇಳುತ್ತೇವೆ. ನೀನು ಅವನನ್ನು ಮದುವೆಯಾಗಿಬಿಡು, ಮುಂದಿನದನ್ನು ನಾವು ನೋಡಿಕೊಳ್ಳುತ್ತೇವೆ. ನೀನು ಹಾಯಾಗಿ ರಾಣಿಯಂತೆ ಬದುಕಬಹುದು" ಎನ್ನುತ್ತೇವೆ. ಒತ್ತಡದಿಂದ ಆಣೆ-ಪ್ರಮಾಣಗಳನ್ನು ನಡೆಸಿ ಒಂದು ಹಂತಕ್ಕೆ ತರುತ್ತೇವೆ.
ನಮ್ಮ ಅಡ್ಡಗೇಟನ್ನು ಕರೆದು ಯಾವುದೂ ತೊಡಕಾಗದಂತೆ ವಿವಾಹ ನಮೂದನೆ ಮಾಡಿಸುತ್ತೇವೆ. ಗಿಂಡಿಯೊಬ್ಬನಿಗೆ ಮದುವೆ ನಡೆಯುತ್ತದೆ; ಬಯಸಿದಾಗ ನಮ್ಮ ಮನ್ಮಥಕೇಳಿಗೆ ಎಳೆಯ ಆಕಳೊಂದು ದೊರೆಯುವಂತಾಗುತ್ತದೆ.
ನಮ್ಮ ಸ್ನೇಹಿತ ಅಸರಾಂ ಸುತರಾಂ ನಂತೆ ದೇಶಕ್ಕೆ ನಮ್ಮಿಂದಾದಷ್ಟು ಕೊಡುಗೆಗಳನ್ನು ನಾವು ಕೊಟ್ಟಿದ್ದೇವೆ, ಇನ್ನೂ ಕೊಡುತ್ತಲೇ ಇದ್ದೇವೆ. ಈ ಮನ್ಮಥ ಚಾತುರ್ಮಾಸದಲ್ಲಿ ನಮಗೆ ಒಟ್ಟೂ ಮಕ್ಕಳೆಷ್ಟೆಂದು ಲೆಕ್ಕ ಹಾಕುವವರಿದ್ದೇವೆ. ನಮ್ಮ ಮಕ್ಕಳಿಗೆ ನಾವು ಪ್ರತ್ಯೇಕ ಪ್ರತ್ಯೇಕವಾಗಿ ಬರ್ತ್ ಡೇ ಆಚರಿಸಲಾಗಲಿಲ್ಲ. ಒಂದು ದಿನವೂ ನಾವು ಅವರನ್ನು ಎತ್ತಿ ಆಡಿಸಲಿಕ್ಕೆ ಸಮಯವಾಗಲಿಲ್ಲ. ಇಲ್ಲಿಯವರೆಗೆ ಕೇವಲ ಸಂತಾನಾನುಗ್ರಹವಷ್ಟೇ ನಮ್ಮ ಕೆಲಸವಾಗಿತ್ತು. ಈಗ ’ಸಂತಾನ ಸಂತೋಷಾನುಗ್ರಹ’ ಎಂಬ ಹೊಸ ಯೋಜನೆ ಹಾಕಿಕೊಂಡಿದ್ದೇವೆ.
ಹೊಸಬರಿಗೆ ಸಂತಾನವನ್ನು ಅನುಗ್ರಹಿಸುವುದರ ಜೊತೆಗೆ ಹಳಬರಿಗೆ ನಮ್ಮಿಂದ ಜನಿಸಿದ ಮಕ್ಕಳಿಗೆ ಸಂತೋಷವನ್ನು ಸಗಟು ರೂಪದಲ್ಲಿ ನೀಡುವ ಇಚ್ಛೆ ನಮಗಿದೆ. ಇದರ ಹಿಂದೆ ನಮ್ಮ ಸುರಕ್ಷೆಯ ಹಿಕಮತ್ತೂ ಅಡಗಿದೆ."
June 16
https://www.facebook.com/groups/1499395003680065/permalink/1629393794013518/
ರಾಂಗಾನುಗ್ರಹ
[ಹಳದೀ ತಾಲಿಬಾನ್ ಬರೆದ ತಾಜಾ ತಾಜಾ ಪವಾಡ ಕತೆಗಳು]
ಪವಾಡ-೧
ಮೊನ್ನೆ ತಡರಾತ್ರಿ ಸುಮಾರು 1 ಗಂಟೆಯ ಹೊತ್ತು. ಮಲೆನಾಡಲ್ಲಿ ಮುಂಗಾರು ಮಳೆ ಧೋ ಎಂದು ಸುರಿದಿತ್ತು. ಮಳೆಯಿಂದಾಗಿ ಗುಡ್ಡ ಕುಸಿದಿತ್ತು. ಬಂಡೆ ಹಳಿಗೆ ಉರುಳಿತ್ತು. ಕತ್ತಲು ಸೀಳಿ, ಏದುಸಿರು ಬಿಡುತ್ತಾ ಘಾಟಿ ಏರುತ್ತಿದ್ದ ರೈಲಿನ ಮುಂಭಾಗದ ಎಂಜಿನ್ ಬಂಡೆಗೆ ಡಿಕ್ಕಿ ಹೊಡೆದು ಅದನ್ನು ತಳ್ಳುತ್ತಾ ಮುಂದೆ ಸಾಗಿತ್ತು. ಚಾಲಕನಿಗೆ ಏನು ಮಾಡಬೇಕೋ ಗೊತ್ತಾಗಲಿಲ್ಲ. ನಮ್ಮ ’ಹಾವಾಡಿಗ’ ಗುರುಗಳನ್ನಿ ನೆನೆಸಿದವನೇ ಕರ್ತವ್ಯಪ್ರಜ್ಞೆ ಮೆರೆದು ತಕ್ಷಣ ಎಂಜಿನ್ ಬ್ರೇಕ್ ಹಾಕಿಬಿಟ್ಟ. ರೈಲಿನಲ್ಲಿದ್ದ ಸುಮಾರು 1500 ಪ್ರಯಾಣಿಕರು ಸುದೈವವಶಾತ್ ಸಂಭಾವ್ಯ ಅನಾಹುತದಿಂದ ಪಾರಾದರು...
ಇದು ಕಾದಂಬರಿ ಕಥೆಯಲ್ಲ. ಸಿನಿಮಾ ದೃಶ್ಯ ವೂ ಅಲ್ಲ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಶಿರಾಡಿ ಘಾಟ್ ರೈಲುಮಾರ್ಗದಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ನೈಜ ಘಟನೆ.
ಆದದ್ದಿಷ್ಟು: ಮಂಗಳೂರು ರೈಲು ನಿಲ್ದಾಣ ದಿಂದ ಕಾರವಾರ- ಮಂಗಳೂರು ರೈಲು ಭಾನುವಾರ ರಾತ್ರಿ 9.30ಕ್ಕೆ ಪ್ರಯಾಣ ಬೆಳೆಸಿತ್ತು. ಸಕಲೇಶಪುರ ರೈಲು ನಿಲ್ದಾಣದಿಂದ ಸುಮಾರು 30 ಕಿ.ಮೀ.ದೂರದಲ್ಲಿರುವ ಅರೆಬೆಟ್ಟ ಎಂಬ ಪ್ರದೇಶದಲ್ಲಿ ಮಳೆಯಿಂದಾಗಿ ಭೂ ಕುಸಿತ ಸಂಭವಿಸಿ, ದೊಡ್ಡ ದೊಡ್ಡ ಗಾತ್ರದ ಬಂಡೆಗಳು ರೈಲು ಹಳಿಗಳ ಮೇಲೆಯೇ ಬಿದ್ದಿದ್ದವು. ತಡರಾತ್ರಿ 1ರ ಸುಮಾರಿಗೆ ಈ ಪ್ರದೇಶಕ್ಕೆ ಬಂದ ರೈಲು ಬಂಡೆಗೆ ಡಿಕ್ಕಿ ಹೊಡೆಯಿತು. ಬಂಡೆಯನ್ನು ತಳ್ಳುತ್ತಾ ಚಲಿಸುತ್ತಿದ್ದಂತೆ, ಸಮಯಪ್ರಜ್ಞೆ ಮೆರೆದ ಚಾಲಕ ಬ್ರೇಕ್ ಹಾಕಿ, ರೈಲನ್ನು ನಿಲ್ಲಿಸಿದ. ಇದರಿಂದಾಗಿ ರೈಲಿನಲ್ಲಿದ್ದ ಪ್ರಯಾಣಿಕರು ಸಂಭಾವ್ಯ ಅಪಾಯದಿಂದ ಪಾರಾದರು.
ಇದೀಗ ಹಳಿ ಮೇಲೆ ಬಿದ್ದಿದ್ದ ಬಂಡೆಗಳನ್ನು ತೆರವುಗೊಳಿಸಲಾಗಿದ್ದು, ಸೋಮವಾರ ರಾತ್ರಿ ಯಿಂದ ಈ ಮಾರ್ಗದಲ್ಲಿ ರೈಲು ಸಂಚಾರ ಪುನಾ ರಂಭಗೊಂಡಿದೆ.
ಪವಾಡ-೨
ರೈಲು ಸುಬ್ರಹ್ಮಣ್ಯಕ್ಕೆ: ಇದಕ್ಕೂ ಮುನ್ನ, ರೈಲ್ವೇ ಅಧಿಕಾರಿಗಳು ನಮ್ಮ ಗುರುಗಳನ್ನು ಸ್ಮರಿಸಿ, ದುರಂತದಿಂದ ಪಾರಾದ ರೈಲನ್ನು ತೀರ್ಥಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸಮೀಪದಲ್ಲಿರುವ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ತರಲಾಯಿತು. ಅಲ್ಲಿಂದ ರೈಲಿನಲ್ಲಿದ್ದ ಪ್ರಯಾಣಿಕರನ್ನು ಬಸ್ಗಳ ಮೂಲಕ ಅವರು ತಲುಪಬೇಕಾದ ಸ್ಥಳಗಳಿಗೆ ಕಳುಹಿಸಲಾಯಿತು.
ಪವಾಡ-೩
ಇದೇ ವೇಳೆಗೆ, ಅತ್ತ ಬೆಂಗಳೂರಿನಿಂದ ಕಣ್ಣೂರು, ಕಾರವಾರಕ್ಕೆ ಹೋಗುವ ರೈಲು ಹೊರಟು ಬಂದುಬಿಟ್ಟಿತ್ತು. ನಮ್ಮ ಸಂಸ್ಥಾನದವರ ಬುಸ್ಸಪ್ಪನನ್ನು ಸ್ಮರಿಸಿದ ಅಧಿಕಾರಿಗಳು, ಇನ್ನೇನು ಬಂಡೆ ಉರುಳಿದ್ದ ಅದೇ ಹಳಿಯ ಅದೇ ಜಾಗದಲ್ಲಿ ಪಾಸಾಗುತ್ತಿದ್ದ ಅದನ್ನು ಘಾಟಿಯ ಮೇಲ್ಭಾಗದಲ್ಲಿರುವ ಸಕಲೇಶಪುರ ರೈಲು ನಿಲ್ದಾಣದಲ್ಲಿಯೇ ನಿಲ್ಲಿಸಿಬಿಟ್ಟರು!
ಪವಾಡ-೪
ನಮ್ಮ ಸ್ವಾಮಿಗಳ ದಯದಿಂದ ಬೆಂಗಳೂರು ರೈಲಿನಲ್ಲಿದ್ದವರ ಕೂದಲೂ ಸಹ ಕೊಂಕಲಿಲ್ಲ ಮೇಲಾಗಿ ರೈಲಿನಲ್ಲಿ ಬಂದ ಬಹುತೇಕ ಪ್ರಯಾಣಿಕರಿಗೆ ಸಕಲೇಶಪುರ ರೈಲು ನಿಲ್ದಾಣದಲ್ಲಿಯೇ ನಿಂತುಕೊಂಡಿದ್ದು ಬೆಳಗಾಗುವ ವರೆಗೂ ಗೊತ್ತಾಗಿರಲಿಲ್ಲ. ಘಟನೆಯ ವಿವರ ತಿಳಿದ ನಂತರ ತಮ್ಮೂರಿಗೆ ಹೋಗುವುದು ಹೇಗೆ ಎಂದು ಪರದಾಡಿದರು. ನಮ್ಮ ಸಂಸ್ಥಾನದ ಪ್ರೇರಣೆಯಂತೆ ರೈಲ್ವೆ ಇಲಾಖೆ ಅಧಿಕಾರಿಗಳು ಪ್ರಯಾಣಿಕರಿಗೆ ಸಮಾಧಾನ ಹೇಳಿ ಬಸ್ ವ್ಯವಸ್ಥೆ ಮಾಡಿ ಕಳುಹಿಸಿದರು. ಒಟ್ಟು 40 ಬಸ್ ವ್ಯವಸ್ಥೆ ಮಾಡಿ ಮಂಗಳೂರು ಸೇರಿದಂತೆ ಪ್ರಯಾಣಿಕರು ಹೋಗಬೇಕಾದ ಸ್ಥಳಗಳಿಗೆ ಕಳುಹಿಸಲಾಯಿತು. ಬಸ್ ವ್ಯವಸ್ಥೆ ಮಾಡಿದ ನಂತರ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು.
ಪವಾಡ-೫
ರೈಲು ಸಂಚಾರ: ಶ್ರೀ ಸಂಸ್ಥಾನದ ದಯೆಯಿಂದ, ಗುಡ್ಡ ಕುಸಿದು ಹಳಿ ಮೇಲೆ ಬಿದ್ದಿದ್ದ ಬಂಡೆಗೆ ರೈಲು ಡಿಕ್ಕಿ ಹೊಡೆದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ರೈಲ್ವೆ ಸಿಬ್ಬಂದಿ, ಹಳಿಗಳ ಮೇಲೆ ಬಿದ್ದಿದ್ದ ಬಂಡೆ ಹಾಗೂ ಮಣ್ಣನ್ನು ತೆರವುಗೊಳಿಸಿದರು. ಸೋಮವಾರ ಹಗಲು ಸಂಚರಿಸಬೇಕಿದ್ದ ರೈಲುಗಳನ್ನು ರದ್ದುಗೊಳಿಸಲಾಯಿತು. ರಾತ್ರಿಯಿಂದ ರೈಲು ಸಂಚಾರ ಎಂದಿನಂತೆ ಆರಂಭಗೊಂಡಿತು.
ಪವಾಡ-೬
ಕೇರಳ ಮೂಲಕ ಬೆಂಗಳೂರಿಗೆ ಸಂಚರಿಸಿದ ರೈಲು: ಪ್ರಯಾಣಿಕರು ಇರಲಿ ಇಲ್ಲದಿರಲಿ ರೈಲು ಗಮ್ಯ ಸ್ಥಾನಕ್ಕೆ ತಲುಪಲೇ ಬೇಕಲ್ಲ? ನಮ್ಮ ಶ್ರೀಸಂಸ್ಥಾನದ ಅಪೇಕ್ಷೆಯಂತೆ, ಬಂಡೆಗೆ ಡಿಕ್ಕಿ ಹೊಡೆದು ಹಳಿ ತಪ್ಪಿದ ಎಂಜಿನ್ನ್ನು ಬಿಟ್ಟು ಮರಳಿ ಮಂಗಳೂರಿಗೆ ಬಂದ ರೈಲು ಬೆಳಗ್ಗೆ 9ಗಂಟೆಗೆ ಕೇರಳ- ತಮಿಳುನಾಡು ಮೂಲಕ ಬೆಂಗಳೂರಿಗೆ ತೆರಳಿತು.
ಈ ಎಲ್ಲಾ ಸಂದರ್ಭದಲ್ಲಿ ನಮ್ಮ ಸಂಸ್ಥಾನದ ಮಂತ್ರಾಕ್ಷತೆ ಸಹ ಜೊತೆಗೆ ಇರಲಿಲ್ಲ; ಮಂತ್ರಾಕ್ಷತೆ ಇರದಿದ್ದರೂ ಸಂಸ್ಥಾನದವರ ಬುಸ್ಸಪ್ಪನನ್ನು ನೆನೆಸಿದ್ದಕ್ಕೆ ಇಷ್ಟೆಲ್ಲ ಪವಾಡಗಳು ಸಂಭವಿಸಿವೆ. ಹಾಗಾಗಿ ಪವಾಡಶಕ್ತಿಯುಳ್ಳ ಬುಸ್ಸಪ್ಪನನ್ನು ’ಮಹಿಳಾ ಸಬಲೀಕರಣ’ಕ್ಕೆ ಬಳಸುವುದು ಬಹಳ ಉಚಿತವಾಗಿದೆ ಎಂದು ನಮ್ಮ ಮಠದ ಏಕಮುಖ ಸರ್ವಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
https://www.facebook.com/groups/1499395003680065/permalink/1629886883964209/
ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ, ನನ್ನ ನಿನ್ನ ನಡುವಿನಲಿ...
“ ನಾರೀ ಸ್ತನಭರ ನಾಭೀದೇಶಂ
ದೃಷ್ಟ್ವಾ ಮಾಗಾ ಮೋಹಾವೇಶಮ್ |
ಏತನ್ಮಾಂಸ ವಸಾದಿ ವಿಕಾರಂ
ಮನಸಿ ವಿಚಿಂತಯ ವಾರಂ ವಾರಮ್ ||
ಎಂದು ಆದಿಶಂಕರರು ಹೇಳಿರುವರಂತೆ. ಹೇಳಿದ್ದೇವಲ್ಲ-ಸುಂದರಿಯರಲ್ಲಿರುವ ‘ಸೂರ್ಯ-ಚಂದ್ರ’ರನ್ನು ನೋಡಿದ ತಕ್ಷಣವೇ ನಾವು ರನ್ನೌಟ್ ಆಗಿಬಿಡ್ತೇವೆ. ಸುಪುಷ್ಟವಾದ ಅವುಗಳ ಗುಂಡಗಿನ ಆಕಾರಗಳನ್ನು ಕಂಡಾಗ, ದಖನ್ ಪ್ರಸ್ಥಭೂಮಿಯಂತಿರುವ ಸಪಾಟಾದ ನಾಭೀ ಭಾಗವನ್ನು ಕಂಡಾದ ನಮಗೆ ಪ್ರಸ್ತದ ರಾತ್ರಿ ಹೇಗಿರಬಹುದೆಂಬ ಆಲೋಚನೆ ಬರುತ್ತದೆ. ಅಂತಹ ಅದೆಷ್ಟು ಸುಂದರಿಯರೊಂದಿಗೆ ಅನೌಪಚಾರಿಕವಾಗಿ ನಾವು ಪ್ರಸ್ಥ ಆಚರಿಸಿಕೊಂಡಿಲ್ಲ ಹೇಳಿ? ಅದನ್ನೆಲ್ಲ ನೆನೆದು ಕೆಲವೊಮ್ಮೆ ನಮ್ಮ ಜನ್ಮಸಾರ್ಥಕ ಎಂದುಕೊಳ್ಳುತ್ತೇವೆ ನಾವು.
ಯೋಗಿಗಳ ಅಭಿಮತದಂತೆ ನಮ್ಮ ಶರೀರದೊಳಗೂ ಸಹ ಗಂಗಾ, ಯಮುನಾ, ಸರಸ್ವತಿ ನದಿಗಳಿವೆ. ಇವುಗಳಿಗೆ ಇಡಾ, ಪಿಂಗಳಾ, ಸುಷುಮ್ನಾ ಎನ್ನುತ್ತಾರೆ.
ಸುಷುಮ್ನಾ ನಾಡಿಯು ಬೆನ್ನುಹುರಿಯ ಮಧ್ಯಭಾಗದಲ್ಲಿ ನೆಲೆಸಿರುವ ಅಧ್ಯಾತ್ಮ ನದಿಯಾಗಿದೆ. ಇದು ಪೆರಿನಿಯಂನಲ್ಲಿರುವ ಮೂಲಾಧಾರ ಚಕ್ರದಿಂದ ಆಗಮಿಸಿ ತಲೆಯ ನೆತ್ತಿಯಲ್ಲಿರುವ ಸಹಸ್ರಾರ (ಬ್ರಹ್ಮರಂಧ್ರ)ದಲ್ಲಿ ಕೊನೆಗೊಳ್ಳುತ್ತದೆ.
ಇಡಾನಾಡಿಯು ಮೂಲಾಧಾರದ ಎಡಭಾಗದಿಂದ ಹೊರಟು ಬೆನ್ನುಹುರಿಯನ್ನು ಸುರುಳಿಯಾಗಿ ಸುತ್ತಿಕೊಳ್ಳುತ್ತಾ ಪ್ರತಿಯೊಂದು ಚಕ್ರವನ್ನು ಅಂಕುಡೊಂಕಾಗಿ ಬಳಸಿಕೊಂಡು ಆಜ್ಞಾಚಕ್ರದ (ಭೂಮಧ್ಯ) ಎಡಭಾಗದಲ್ಲಿ ಕೊನೆಗೊಳ್ಳುತ್ತದೆ.
ಪಿಂಗಳಾನಾಡಿ ಮೂಲಾಧಾರದ ಬಲಭಾಗದಿಂದ ಹೊರಟು ಇಡಾನಾಡಿಗೆ ಅಭಿಮುಖವಾಗಿ ಹಾಯ್ದು, ಆಜ್ಞಾ ಚಕ್ರದ ಬಲಭಾಗದಲ್ಲಿ ಕೊನೆಗೊಳ್ಳುತ್ತದೆ.
ಇಡಾ ಪಿಂಗಳಾ ನಾಡಿಗಳು ನಮ್ಮೊಳಗೆ ಹರಿಯುತ್ತಿರುವ ಎರಡು ವಿರುದ್ಧ ಬಲಗಳನ್ನು ಪ್ರತಿನಿಧಿಸುತ್ತವೆ. ಇಡಾ ನಾಡಿಯು ನಿಷ್ಕ್ರಿಯ, ಅಂತರ್ಮುಖಿ ಹಾಗೂ ಸ್ತ್ರೀ ಗುಣಗಳನ್ನು ಹೊಂದಿದೆ. ಇದನ್ನು ಚಂದ್ರನಾಡಿ ಎಂದೂ ಕರೆಯುತ್ತಾರೆ. ಇದಕ್ಕೆ ಪ್ರತಿಯಾಗಿ ಪಿಂಗಳ ಸಕ್ರಿಯ, ಬಹಿರ್ಮುಖಿ ಹಾಗೂ ಪುರುಷ ಗುಣದ್ದಾಗಿದ್ದು, ಇದನ್ನು ಸೂರ್ಯನಾಡಿ ಎಂದೂ ಕರೆಯುತ್ತಾರೆ.
ಒಂದು ಕೂದಲನ್ನು ಸಾವಿರಭಾಗವಾಗಿ ಸೀಳಿದರೆ ಎಷ್ಟು ಸಣ್ಣದಾಗಿರಬಹುದೋ ಅಂತಹ ಸ್ವರೂಪದಲ್ಲಿ ವೃಷಣದ ಮೂಲಸ್ಥಾನದಿಂದ ಶಿರಸ್ಸಿನ ತುದಿಯ ಬ್ರಹ್ಮರಂಧ್ರದವರೆಗೆ ಸುಷುಮ್ನನಾಡಿ ಇರುತ್ತದೆ. ಈ ನಾಡಿ 5 ಪ್ರಭೇದಗಳಿಂದ ಕೂಡಿದೆ.
ಮಧ್ಯದಲ್ಲಿ ಸಷುಮ್ನಾ ಅದರ ಪಶ್ಚಿಮಕ್ಕೆ ಅಂದ್ರೆ ಹಿಂಭಾಗಕ್ಕೆ ವಜ್ರಕಾ, ಪೂರ್ವಕ್ಕೆ ಪ್ರಕಾಶಿನಿ, ದಕ್ಷಿಣಕ್ಕೆ ಅಂದ್ರೆ ಬಲಕ್ಕೆ ವೈದ್ಯುತ, ಎಡಭಾಗಕ್ಕೆ ಆರ್ಯಾ, ಮಧ್ಯಭಾಗ ಬ್ರಹ್ಮನಾಡಿ ಎಂಬ ಪ್ರಭೇದಗಳು ಈ ಒಂದೇ ಸುಷುಮ್ನನಾಡಿಯೇ 5 ಭಾಗದಲ್ಲಿ 5 ಹಸರಿನಿಂದ ಕೂಡಿದೆ.
ನಮ್ಮ ಎಡಮೂಗಿನಲ್ಲಿ ಇಡಾನಾಡಿಯ 50, ಬಲಮೂಗಲ್ಲಿ ಪಿಂಗಳಾನಾಡಿಯ 50 ಶಾಖೆಗಳಿವೆ. ಕಿರುನಾಲಿಗೆಯಿಂದ ಎಡಭಾಗದ ದವಡೆಯವರೆಗೂ ವಜ್ರಿಕಾನಾಡಿ ಇದೆ ಮತ್ತು ಬಲದವಡರೆಗೂ ನಂದಿನಿನಾಡಿ [‘ನಂದಿನಿ ಡೀಲಕ್’ ಅಲ್ಲ ಮತ್ತೆ] ಇದೆ. ಸಷುಮ್ನನಾಡಿ ನಮ್ಮ ತೋಳಿನಲ್ಲಿ 10, ತೊಡೆಯಲ್ಲಿ 10, ಕಣ್ಣಲ್ಲಿ2, ಕಿವಿಯಲ್ಲಿ2, ನಾಲಿಗಯಲ್ಲಿ 1, ಲಿಂಗದಲ್ಲಿ 1, ಗುದದಲ್ಲಿ 1, ಹೃದಯದಲ್ಲಿ 32, ಸಿರಸ್ಸಿನಲ್ಲಿ 39, ಬೆನ್ನಲ್ಲಿ 2, ಮುಖ್ಯನಾಡಿಯನ್ನು ಸೇರಿಸಿ ಒಟ್ಟ 101 ನಾಡಿಗಳು.
101 ನಾಡಿಗಳಿಂದ 100 ಶಾಖೆಗಳು.
101×100=10100 ಆಗುತ್ತವೆ.ಇವು ಮೂಲನಾಡಿಗಳು.
ಇದರಲ್ಲಿ
100 ನಾಡಿಗಳು 10 ಶಾಖೆಯನ್ನು ಹೊಂದಿದ ನಾಡಿಗಳು 100×10 =1000.
100 ನಾಡಿಗಳು 9 ಶಾಖೆಗಳಿಂದ ಕೂಡಿರುತ್ತದೆ 100×9 =900.
300 ನಾಡಿಗಳು 8 ಶಾಖೆಗಳಿಂದ ಕೂಡಿದೆ ಅಂದರೆ 300×8 =2400.
9600 ನಾಡಿಗಳು 6 ಶಾಖೆಗಳನ್ನು ಹೊಂದಿವೆ ಅಂದರೆ 9600×6 =57600.
ಮೂಲನಾಡಿಗಳು 10100
ಶಾಖೆಗಳು. 61900
ಒಟ್ಟು. 72000 ನಾಡಿಗಳು
ಪರಮಮೂಲನಾಡಿಗಳು 101 ಸೇರಿದರೆ
-------------------
ಒಟ್ಟೂ - 72101 ನಾಡಿಗಳು
ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು ಸೇರಿ ಹತ್ತಾಯ್ತು. ಹತ್ತು ಇಂದ್ರಿಯಗಳನ್ನು ರಥದ ಗಾಲಿಗಳಂತೆ ಬಳಸಿಕೊಳ್ಳುವ ಹನ್ನೊಂದನೆಯ ಇಂದ್ರಿಯವಾದ ಮನಸ್ಸು ಎಂಬುದು ಎಪ್ಪತ್ತೆರಡು ನಾಡಿಗಳ ಮಿಡಿತವನ್ನು ಹಿಡಿತದಲ್ಲಿಡುತ್ತದೆ.
ಅಂತಹ ಮನಸ್ಸಿಗೆ ಸಾಮಾನ್ಯ ಮನುಷ್ಯ ಯಾವ ಆಹಾರ ಕೊಡಬೇಕು, ಯೋಗಿ ಯಾವ ಆಹಾರ ಕೊಡಬೇಕು ಎಂಬುದಕ್ಕೆಲ್ಲ ನಿಯಮಗಳಿವೆ. ನಾವು ತಿಂದ ಆಹಾರದ ಆರನೆಯ ಒಂದು ಭಾಗ ಮೆದುಳಾಗಿ ಅಂದರೆ ಮನಸ್ಸಾಗಿ ಪರಿವರ್ತಿತವಾಗುತ್ತದೆ.
ಈರುಳ್ಳಿ ಉಪ್ಪಿಟ್ಟು, ತರಾವರಿ ಮಸಾಲೆ ಖಾದ್ಯಗಳನ್ನು ನಾವು ತಿನ್ನುತ್ತೇವೆ ಯಾಕೆಂದರೆ ನಮಗೆ ಮೇಲೆ ಹೇಳಿದ ನಿಯಮಗಳು ಅನ್ವಯವಾಗುವುದಿಲ್ಲ; ನಾವು ನಿಯಮಾತೀತರು. ನಾವು ಸ್ವೀಕರಿಸುವ ಆಹಾರಗಳು ಮತ್ತು ಅಷ್ಟಾಂಗಯೋಗ ರಹಿತ ದಿನಚರಿ ನಮ್ಮ ಮೆದುಳಿನ ಚಂಚಲತೆಯನ್ನು ನಿಗ್ರಹಿಸುವಲ್ಲಿ ಸೋತಿವೆ.
ಹೀಗಾಗಿ ನಮಗೆ ಹುಲುಮಾನವ ಲೋಕದ ‘ಅಪ್ಸರೆಯರ’ನ್ನು ಕಂಡರೆ ಬಹಳ ಪ್ರೀತಿ. ಆಚಾರ್ಯರು ಹೇಳಿದ್ದಾರೆ ಅಥವಾ ಇನ್ನಾರೋ ಯೋಗಿ ಹೇಳಿದ್ದಾರೆಂದು ಇಂತಹ ಸುಂದರಿಯರನ್ನೆಲ್ಲ ಕಳೆದುಕೊಳ್ಳಲಿಕ್ಕೆ ಬರುತ್ತದೆಯೇ? ಅವರು ಹೇಳೋದನ್ನ ಹೇಳಿದ್ದಾರೆ; ಕೇಳಬೇಕದವರು ಕೇಳಿದರಾಯ್ತಪ್ಪ; ಅದು ನಮ್ಮನ್ನುದ್ದೇಶಿಸಿ ಹೇಳಿದ್ದೆಂದು ಅವರೇನೂ ಹೇಳಿಲ್ಲವಲ್ಲ?”
https://www.facebook.com/groups/1499395003680065/permalink/1630528680566696/
ನಾನಾರೊ ನಾನರಿಯೆನು.....ನಿಮಗಿನ್ನೇನು ಪ್ರವಚನ ಹೇಳಿಯೇನು?
ವೈದ್ಯಕೀಯ ವಿಜ್ಞಾನವು ಅಂಗಾಂಗಗಳನ್ನು ಬದಲಿಸುವಷ್ಟು ಮುಂದುವರೆದು, ಮನುಷ್ಯ ಚಂದ್ರ ಮತ್ತು ಮಂಗಳಲೋಕಕ್ಕೆ ತಿರುಗಾಡುವಷ್ಟು ಬೆಳೆದಿದ್ದರೂ ಸತ್ತ ಇರುವೆಯನ್ನು ಬದುಕಿಸಿದ ಪ್ರಸಂಗ ನಮ್ಮೆದುರು ಇದುವರೆಗೂ ನಡೆದಿಲ್ಲ. ಹೃದಯವನ್ನೋ ಕಿಡ್ನಿಯನ್ನೋ ತೆಗೆದು ಹೊಸದನ್ನು ಹಾಕಬಹುದು,ಆದರೆ ಹೋದ ಪ್ರಾಣವನ್ನು ತರಲು ಸಾಧ್ಯವಿಲ್ಲ. ಪ್ರಾಣವೆಂದರೇನು? ಅದು ಎಲ್ಲಿರುತ್ತದೆ? ಕೊಲೆ ಮಾಡಿದರೆ, ಅತ್ಯಾಚಾರ ಮಾಡಿದರೆ ತಾನು ಜೈಲಿಗೆ ಹೋಗುತ್ತಾನೆ, ಶಿಕ್ಷೆ ಅನುಭವಿಸುತ್ತಾನೆ, ಮಾನ ಮರ್ಯಾದೆ ಹೋಗುತ್ತದೆ ಎಂದು ಗೊತ್ತಿದ್ದರೂ ಮನುಷ್ಯ ಮತ್ತೆ ಅಂತಹ ಕೆಲಸಗಳಲ್ಲೇ ತೊಡಗಿಕೊಳ್ಳುವುದೇಕೆ?
ಮನುಷ್ಯ ದೇಹದ ರಚನೆಯನ್ನು ಗಮನಿಸಿದರೆ, ಅದರ ಕಾರ್ಯ ವಿಧಾನವನ್ನು ಅವಲೋಕಿಸಿದರೆ ಆಶ್ಚರ್ಯವಾಗುತ್ತದೆ,ಇಂಥ ಅದ್ಭುತ ದೇಹ ತನ್ನಿಂದ ತಾನೇ ಉಂಟಾಯಿತೇ? ಇದಕ್ಕೆ ಯಾರು ಕತೃ? ಇಷ್ಟೊಂದು ಸಂಕೀರ್ಣವಾಗಿರುವ ದೇಹದ ಉಗಮ ಕೇವಲ ಕಾಮದಿಂದ ಅಥವಾ ಹೆಣ್ಣು-ಗಂಡಿನ ಸಂಯೋಜನೆಯಿಂದ ಮಾತ್ರ ಆಗುತ್ತದೆಯೇ? ಅಥವಾ ಇದಕ್ಕೆಲ್ಲ ಬೇರಾವುದೋ ಪ್ರಚೋದನಾ ಶಕ್ತಿ ಇದೆಯೇ? ಅಷ್ಟಕ್ಕೂ ಜೀವನವನ್ನು ಬಾಲ್ಯಾವಸ್ಥೆ, ಯೌವನಾವಸ್ಥೆ, ವೃದ್ಧಾವಸ್ಥೆ ಎಂದು ವಿಂಗಡಿಸಿದವರಾರು? 18 ನೇ ವಯಸ್ಸಿಗೆ ಬೇಡವೆಂದರೂ ವಯಸ್ಕರಾಗುತ್ತೇವೆ, 50ನೇ ವಯಸ್ಸಿಗೆ ಬೇಡವೆಂದರೂ ಮುದುಕರಾಗುತ್ತೇವೆ, ಹೇಗೆ? ನಾವು ಕಾಣುತ್ತಿರುವ ಬ್ರಹ್ಮಾಂಡದ ತಳವೆಲ್ಲಿ? ಉಗಮವಾಗಿದ್ದು ಯಾವಾಗ? ಮತ್ತು ಇದರ ಗಮ್ಯವೆಲ್ಲಿ? ಇದರ ನಿಗಮಾಗಮದ ಉದ್ದಿಶ್ಯವೇನು? ನೀಲಾಕಾಶದ ಆಚೆ ಏನಿದೆ?
ಮನುಷ್ಯನಿಗೆ ಭವಿಷ್ಯವನ್ನು ಗ್ರಹಿಸುವ ಶಕ್ತಿ ನಿಜಕ್ಕೂ ಇದೆಯೇ? ದೂರದಲ್ಲೆಲ್ಲೊ ಇರುವ ಗ್ರಹಗಳು ಮನುಷ್ಯನ ಭವಿಷ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ? ಅವು ಕೇವಲ ಭೂಮಿಯಂಥದೇ ಆಕಾಶಕಾಯಗಳೆಂದು ಮತ್ತು ಪರಿಭ್ರಮಿಸುವಂಥವುಗಳೆಂದು ವಿಜ್ಞಾನವು ಹೇಳಿದ್ದರೂ ಅವು ನಮ್ಮ ಜೀವನದ ಮೇಲೆ ಪರಿಣಾಮ ಬೀರುವವೆಂದು ನಿತ್ಯವೂ ಜ್ಯೋತಿಷಿಗಳು ಹೇಳುವುದೇಕೆ? ಜ್ಯೋತಿಷ್ಯಕ್ಕೆ ಅರ್ಥವಿಲ್ಲವೇ? ಸುಳ್ಳಾದರೆ ಅವರೇಕೆ ಸುಳ್ಳನ್ನು ಹೇಳುತ್ತಾರೆ? ಸತ್ಯವಾದರೆ ಅವರೇಕೆ ಸತ್ಯವನ್ನು ನೂರಕ್ಕೆ ನೂರು ನಿಖರವಾಗಿ ನಿರೂಪಿಸಿ ತೋರಿಸುವುದಿಲ್ಲ?
ಹೋಗಲಿ ವಿಜ್ಞಾನವೇ ಸರಿಯೆನ್ನೋಣವೇ? ಆಕಾಶದ ಬುಡ ತುದಿಗಳನ್ನೋ ಆಳ ಅಗಲಗಳ ಅಳತೆಯನ್ನೋ ಹೇಳುವುದು ವಿಜ್ಞಾನಕ್ಕೆ ಇಲ್ಲಿಯವರೆಗೂ ಸಾಧ್ಯವಾಗಿಲ್ಲ. ಗುರುತ್ವ ಪೊಳ್ಳುಗಳ ಅಚೆ ಏನಿದೆಯೆಂದು ವಿಜ್ಞಾನಕ್ಕೆ ತಿಳಿದಿಲ್ಲ. ಅಲ್ಲಿಂದಾಚೆಗೆ ಹೋದ ವಸ್ತು ಅಥವಾ ವ್ಯಕ್ತಿಗಳು ಎಲ್ಲಿಗೆ ಹೋಗುತ್ತಾರೆ? ಯಾವುದರಲ್ಲಿ ಸಿಲುಕಿಕೊಳ್ಳುತ್ತಾರೆ? ಎಂಬುದನ್ನು ವಿಜ್ಞಾನ ಹೇಳೋದಿಲ್ಲ. ಬ್ರಹ್ಮಾಂಡಕ್ಕೆ ನಿಜಾರ್ಥದಲ್ಲಿ ಜೀವನಾಧಾರವಾದ ಸೂರ್ಯನನ್ನು ನಕ್ಷತ್ರವೆಂದ ವಿಜ್ಞನಾಕ್ಕೆ ಸೂರ್ಯನೊಳಗೆ ಏನಿದೆಯೆಂಬ ಪರಿಪೂರ್ಣ ಮಾಹಿತಿ ಸಿಕ್ಕಿಲ್ಲ. ಅವನ ಸುತ್ತ ತಮ್ಮ ತಮ್ಮ ಕಕ್ಷೆಗಳಲ್ಲಿ ನಿಯಮಬದ್ಧವಾಗಿ ಕೆಲಸ ನಿರ್ವಹಿಸುವ ಆಕಾಶ ಕಾಯಗಳ ನಿಯಂತ್ರಣ ಎಲ್ಲಿದೆ ಎಂಬುದು ವಿಜ್ಞಾನದ ಹಲ್ಲಲ್ಲಿ ಹಿಟ್ಟಾಗುವ ಕಡಲೆಯಲ್ಲ. ಹಾಗಾದರೆ ವಿಜ್ಞಾನವನ್ನು ನಂಬಬಾರದೆ? ಈಗ ಬಳಸುತ್ತಿರುವ ಎಲ್ಲಾ ಆವಿಷ್ಕಾರಗಳು ವಿಜ್ಞಾನದ ಕೊಡುಗೆಗಳೇ ಎಂದಮೇಲೆ ವಿಜ್ಞಾನವನ್ನು ನಂಬಬೇಕೋ? ಬಿಡಬೇಕೋ? ನಂಬಬೇಕೆಂದರೆ ಕಾರಣವೇನು? ನಂಬಬಾರದು ಎಂಬುದಕ್ಕೆ ಸಮಜಾಯಿಷಿಯೇನು?
ಈ ಬ್ರಹ್ಮಾಂಡದಲ್ಲಿ ಇದ್ದಾವೆಂದು ಹೇಳಲಾದ 80 ಕೋಟಿ ಜೀವ ಪ್ರಭೇದಗಳಲ್ಲಿ ಗಂಡು, ಮತ್ತು ಹೆಣ್ಣನ್ನು ವಿಭಾಗಿಸಿದವರಾರು? ಗಂಡು ಮತ್ತು ಹೆಣ್ಣುಗಳಲ್ಲಿ ದೇಹರಚನೆಗಳಲ್ಲಿ ವ್ಯತ್ಯಾಸ ಇರುವುದೇಕೆ? ಹೆಣ್ಣು-ಗಂಡುಗಳ ಸಮ್ಮಿಲನದಿಂದ ಮಾತ್ರ ಸಂತಾನೋತ್ಪತ್ತಿ ನಡೆಯಬೇಕೆಂದು ನಿರ್ಣಯಿಸಿದ ಮಹನೀಯ ರಸಾಯನ ಶಾಸ್ತ್ರಜ್ಞನಾರು? ಹೆಣ್ಣು-ಗಂಡುಗಳ ಮಧ್ಯೆ ಆಕರ್ಷಣೆಯನ್ನು ಇಟ್ಟು ಅಟ್ಟದಮೇಲೆಲ್ಲೋ ಅವಿತು ಕುಳಿತು ನೋಡುತ್ತ ಮಜಾ ತೆಗೆದುಕೊಳ್ಳುವವನಾರು?
ಪ್ರತಿ ಹೆಣ್ಣಿಗೂ ಇರುವ ಅದೇ ಅಂಗಗಳನ್ನು ಪುರುಷನು ಎಷ್ಟು ಬಾರಿ ನೋಡಿದರೂ ಮತ್ತೆ ಪದೇ ಪದೇ ಅದನ್ನೇ ನೋಡುವದೇಕೆ? ಅದನ್ನೇ ಅಥವಾ ಅಂಥದನೇ ನೋಡಲು ಬಯಸುವುದೇಕೆ? ಅಯಸ್ಕಾಂತೀಯ ಆಕರ್ಷಣ ಶಕ್ತಿ ಆ ಅಂಗಗಳಿಗೆ ಎಲ್ಲಿಂದ ಬಂತು? ಇದರಿಂದ ಬಿಡುಗಡೆ ಹೊಂದುವದು ಸಾಧ್ಯವಿಲ್ಲವೇ? ಇದು ಪ್ರಕೃತಿಯ ಧರ್ಮವೇ? ಅಥವಾ ನಮ್ಮ ನ್ಯೂನತೆಯೇ? ಹೀಗೇ ಆಗಬೇಕೆಂದು ನಿರ್ಣಯಿಸಿದವರಾರು? ಮನೆಯಲ್ಲಿ ತಮಗಿಂತ ಕೇವಲ ಎರಡು ವರ್ಷ ಸಣ್ಣ ವಯಸ್ಸಿನ ತಂಗಿಯಿದ್ದರೂ ಸಹ ಅವಳನ್ನು ತಂಗಿಯನ್ನಾಗಿಯೇ ನೋಡುವ ಹುಡುಗರು ಕಾಲೇಜಿನಲ್ಲಿ ಅಷ್ಟೇ ವಯಸ್ಸಿನ, ಅಷ್ಟೆ ಎತ್ತರದ, ಅಷ್ಟೇ ದಪ್ಪದ ಹುಡುಗಿಯನ್ನು ನೋಡಿದಾಗ ಜೂನಿಯರ್ ಎನ್ನುವುದೇಕೆ? ಆಕೆಯಲ್ಲೇಕೆ ತಂಗಿಯ ಭಾವನೆ ಸಹಜವಾಗಿ ಬರುವುದಿಲ್ಲ?
ಈ ಬ್ರಹ್ಮಾಂಡದ ಉಗಮವಾಗಿ 460 ಕೋಟಿ ವರ್ಷಗಳು ಕಳೆದುಹೋದವೆಂದು ಹೇಳುತ್ತಾರೆ, 400 ಕೋಟಿ ಹಾಗಿರಲಿ, ಕಳೆದ 400 ವರ್ಷಗಳಲ್ಲಿ ಎಷ್ಟೊಂದು ಬದಲಾವಣೆಯನ್ನು ಸಾಧಿಸಿತಲ್ಲ ಇದು ಯಾವುದರ ಸೂಚನೆ? ಕಳೆದರ್ಧ ಶತಕದಲ್ಲಿ ಜಗತ್ತು ಬಹಳಷ್ಟು ವೇಗವಾಗಿ ದಾಪುಗಾಲು ಹಾಕುತ್ತಿರುವುದು ಯಾವ ಗುರಿಯತ್ತ? ಇವೆಲ್ಲವುಗಳ ಕುರಿತು ಧರ್ಮಗಳು ಹೇಳುವುದು ಒಂದು ರೀತಿ, ವಿಜ್ಞಾನ ಹೇಳುವುದು ಇನ್ನೊಂದು ರೀತಿ, ಯಾವುದು ಪರಮೋಚ್ಚ ಸತ್ಯ? ಯಾವುದನ್ನು ನಂಬಬೇಕು ಮತ್ತು ಯಾವುದನ್ನು ಬಿಡಬೇಕು? ನಂಬ ಬೇಕಾದುದಕ್ಕೆ ಕಾರಣವೇನು? ಬಿಡಬೇಕೆಂಬುದಾದರೆ ಅದಕ್ಕೆ ಕಾರಣವೇನು?
ಅಸಾಧ್ಯ ಪರಿಶ್ರಮಕ್ಕೆ ಪ್ರತಿಫಲವನ್ನು ನೋಡಲಸಧ್ಯವಾದರೆ ಅದಕ್ಕೇನೆನ್ನಬೇಕು? ಐಸಾಕ್ ನ್ಯೂಟನ್,ಐನ್ ಸ್ಟೈನ್ ಮುಂತಾದ ಮಹಾನ್ ವ್ಯಕ್ತಿಗಳು ಶ್ರಮಪಟ್ಟು ಹೊಸ ಹೊಸ ಸಂಗತಿಗಳನ್ನು ಬಯಲುಪಡಿಸಿzರಂತೆ. [ಅದಕ್ಕೂ ಮೊದಲು ಭಾರತೀಯ ಋಷಿಗಳು, ತತ್ವಜ್ಞಾನಿಗಳು ಅವರು ಹೇಳಿದ್ದನ್ನೇ ಇನ್ನೂ ಚೆನ್ನಾಗಿ ಹೇಳಿದ್ದರು-ನಮಗೆ ಅರ್ಥವಾಗಿಲ್ಲ ಎಂಬುದು ಬೇರೆ ಪ್ರಶ್ನೆ. ಅಂತಹ ಸಾಧಕರನ್ನು ನಾವಿಂದು ಹೊಗಳುವುದನ್ನು ಕೇಳಲಾಗಲೀ ಅವರಿಗಾಗುತ್ತಿರುವ ಸನ್ಮಾನವನ್ನು ನೋಡಲಾಗಲೀ ಅವರೇ ಇಲ್ಲವೆಂಬುದು ವಿಚಿತ್ರವಲ್ಲವೇ?
ಈ ಲೋಕದಲ್ಲಿ ಕೆಟ್ಟ ಕೆಲಸ ಮಾಡಿದವನು ಸ್ವಲ್ಪ ದಿನಗಳ ನಂತರ ಮರೆತು ಹೋಗುತ್ತಾನೆ, ಅವನ ಕೆಟ್ಟತನಕ್ಕೆ ನಾವೆಲ್ಲು ಅವನನ್ನು ಬೈದರೂ ಅವನಲ್ಲಿ ಬದಲಾವಣೆಗಳಿಲ್ಲ್ಲ, ಉಗುಳಿದರೂ ಅವನಿಗೆ ತಾಗುವುದಿಲ್ಲ. ಒಳ್ಳೆಯ ಕೆಲಸ ಮಾಡಿದ ಸಜ್ಜನನೂ ಕಾಲಾನಂತರದಲ್ಲಿ ಮರೆತುಹೋಗುತ್ತಾನೆ. ಸಜ್ಜನನೂ ಸಾಯುತ್ತಾನೆ, ದುರ್ಜನನೂ ಸಾಯುತ್ತಾನೆ, ಹಾಗಾದರೆ ಹುಟ್ಟಿದವರೆಲ್ಲ ಯಾತಕ್ಕಿಷ್ಟು ಪ್ರಯಾಸಪಡಬೇಕು?
ಆತ್ಮ ವೆಂದರೇನು? ಅದೆಲ್ಲಿರುತ್ತದೆ? ಅದಕ್ಕಿರುವ ಬಣ್ಣ, ರೂಪ, ಆಕಾರಗಳೇನು? ಅದರ ಕಾರ್ಯವಿಧಾನವೇನು? ಅದು ಒಳಗಿನಿಂದಲೇ ಬರುತ್ತದೆಯೇ? ಅಥವಾ ಹೊರಗಿನಿಂದ ಮತ್ತೊಬ್ಬರು ಅದನ್ನು ಶರೀರದೊಳಕ್ಕೆ ಕಳುಹಿಸುವರೋ? ಅವರವರ ಕೃತ್ಯಗಳ ಫಲವನ್ನು ಅವರವರು ಅನುಭವಿಸುತ್ತಾರೆ ಎಂಬುದು ಅನೇಕ ಬಾರಿ ಹಲವರಿಗೆ [ಅವರು ಹೇಳಿಕೊಳ್ಳದಿದ್ದರೂ]ಹಾಗೂ ನನಗೂ ಅನುಭವವಾಗಿದೆ; ಆದರೆ ಕೃತ್ಯಕ್ಕೆ ತಕ್ಕ ಫಲವನ್ನು ಅನುಭವಿಸುವಂತೆ ಮಾಡುವ ಚಿತ್ರಗುಪ್ತನಾರು? ಪ್ರತಿಯೊಂದು ಜೀವಿಯ ಸಕಲ ಕೃತ್ಯಗಳನ್ನೂ ನಮೂದಿಸಿಕೊಳ್ಳುವ ಅವನ ಗಣಕಯಂತ್ರ ಯಾವುದು? ಎಲ್ಲಕ್ಕೂ ಉತ್ತರ ದೇವರು ಎಂದಾದರೆ, ದೇವನಾರು?
ಒಂದು ಜೀವಿಯ ಪುನರುತ್ಪತ್ತಿಗೆ ಅಥವಾ ಒಬ್ಬ ಮನುಷ್ಯ ಹುಟ್ಟಬೇಕಾದರೆ ಕೇವಲ ಒಬ್ಬ ತಂದೆಯ ಶಕ್ತಿ ಸಾಕು, ಇಬ್ಬರು ತಂದೆಗಳ ಅಗತ್ಯ ಬೀಳುವುದಿಲ್ಲ್ಲ ಸರಿಯಷ್ಟೇ? ಹಾಗಾದರೆ ಈ ಬ್ರಹ್ಮಾಂಡದ ಉಗಮಕ್ಕೂ ಒಬ್ಬನಿರಲೇಬೇಕಲ್ಲವೇ? ಇದ್ದರೆ ಅವನಾರು? ಇಲ್ಲದಿದ್ದರೆ ಇದಕ್ಕೆ ಕಾರಣೀಭೂತವಾದ ಶಕ್ತಿ ಯಾವುದು? ಪ್ರಪಂಚದ ವಿವಿಧ ಮತಧರ್ಮಗಳು ನಾನಾ ರೀತಿಯಲ್ಲಿ ಹೇಳುವ ಪರಮಾತ್ಮನಾದರೂ ಯಾರು? ಆದಿ-ಅಂತ್ಯಗಳ ಕುರಿತಾದ ಪ್ರಶ್ನೆಗಳಿಗೆ ಇದಮಿತ್ಥಂ ಎಂಬ ಕರಾರುವಾಕ್ಕಾದ ಉತ್ತರ ನೀಡುವರಾರು?
ಹೆಚ್ಚುಕಡಿಮೆ 36,500 ದಿನಗಳು ಅಥವಾ 8,76,000 ಗಂಟೆಗಳು ತುಂಬಾ ಚಲನಶೀಲವಾಗಿರುವ ದೇಹ, ಅದರ ಅಂಗಗಳು ಸತ್ತಮೇಲೆ ಒಮ್ಮೆಲೇ ಸುಮ್ಮನಾಗಿ ಬಿಡುವುದರ ರಹಸ್ಯವೇನು? ನಮ್ಮ ಕಣ್ಣಿಗೆ ಕಾಣುವದು ಮಾತ್ರ ಪ್ರಪಂಚವೇ? ಕಣ್ಣಿಗೂ ಕಾಣದ ನಿಗೂಢ ಶಕ್ತಿಗಳು ಇವೆಯೇ? ಮನುಷ್ಯನಿಗೆ ಶಿಶುವಾಗಿರುವಾಗ ಮೊದಲು ಕೇಳುವ ಗುಡುಗಿನ ಸದ್ದಿನಿಂದ ಭಯ ಎಂಬ ಅನುಭೂತಿ ಆಗುತ್ತದೆ ಎಂದಾಯ್ತು. ಹಾಗಾದರೆ, ದೆವ್ವ-ಭೂತಗಳ ಪರಿಕಲ್ಪನೆಗಳು ಬಂದಿದ್ದಾದರೂ ಎಲ್ಲಿಂದ? ಅದೇ ಭಯದಿಂದಲೇ? ಅಥವಾ ಅವುಗಳ ಇರುವಿಕೆ ನಿಜವೇ?
ಹುಟ್ಟುವಾಗ ಆಗುವ ಅನುಭವವನ್ನು ತಿಳಿದುಕೊಳ್ಳಲು ನನಗಾಗಲೀ ನಿಮಗಾಗಲೀ ಆ ಪರಿಜ್ಞಾನ ಇರಲಿಲ್ಲ. ಸಾಯುವಾಗ ಏನಾಗುವದೆಂದು ತಿಳಿದುಕೊಳ್ಳುವಷ್ಟರಲ್ಲಿ ಪ್ರಾಯಶಃ ಈ ದೇಹ ಒಗೆದು ಹೋಗಿರುತ್ತೇವೆ. ಹಾಗಾದರೆ ನಾವೇನಾಗುತ್ತೇವೆ? ಪಂZಭೂತಗಳಲ್ಲಿ ವಿಲೀನವೇ? ಪರಕಾಯ ಪ್ರವೇಶವೇ? ಸ್ವರ್ಗವಾಸವೇ? ನರಕಯಾತನೆಯೇ? ಅಥವಾ ದೇವ್ವವೇ? ಭೂತವೇ? ಗಾಳಿಯಲ್ಲಿ ಸಂಚರಿಸುವ ಇನ್ನವುದೋ ಪಾರದರ್ಶಕ ರೂಪವೇ? ಅಥವಾ ಬ್ರಹ್ಮರಾಕ್ಷಸವೇ? ಈ ಪ್ರಶ್ನೆಗಳಿಂದ ಮನಸ್ಸು ದಣಿದಿದೆ,ತಲೆ ಗುಂಯ್ ಎನ್ನುತ್ತಿದೆ.ನಿಮ್ಮಲ್ಲಿ ಉತ್ತರವಿದ್ದರೆ ನನಗೆ ತಿಳಿಸಿ.
ಇಂತಹ ಅಸಂಖ್ಯ ಮೂಲಭೂತ ಪ್ರಶ್ನೆಗಳಿಗೆ ಸಮರ್ಪಕ ಮತ್ತು ನಿರ್ಣಾಯಕ ಉತ್ತರಗಳನ್ನು ಕಂಡುಕೊಳ್ಳಬಲ್ಲ ಚೇತನವೇ ಸನ್ಯಾಸಿಯೆನಿಸುತ್ತಾನೆ. ಇದನ್ನೆಲ್ಲ ಒಟ್ಟಾರೆ ಗಂಟು ಹಾಕಿ ’ಬ್ರಹ್ಮರಹಸ್ಯ’ ಎನ್ನಬಹುದು. ಬ್ರಹ್ಮರಸ್ಯವನ್ನು ಅರಿತಿದ್ದೇನೆಂದು ಭೋಂಗು ಬಿಡುವ ಸನ್ಯಾಸಿಗಳು ಇಂದು ಎಲ್ಲೆಲ್ಲೂ ಸಿಗುತ್ತಾರೆ.
ಇಂದಿನ ಹಲವು ಕಾವಿ ವೇಷಗಳಿಗೆ ಇಂತಹ ಪ್ರಶ್ನೆಗಳಿರಲಿ, ಆಧ್ಯಾತ್ಮದ ಗಂಧಗಾಳಿಯೇ ಇಲ್ಲ. ಹಿಂದೆ ಯಾರೋ ಹೇಳಿದ್ದನ್ನು ಇವರೂ ಬಡಬಡಿಸುತ್ತಿರುತ್ತಾರೆ; ಆಳವಾಗಿ ಪ್ರಶ್ನಿಸಲು ತೊಡಗಿದರೆ ಇಪ್ಪತ್ನಾಲ್ಕು ಗಂಟೆಯೊಳಗೆ ಉತ್ತರಿಸುತ್ತೇವೆ ಎನ್ನುತ್ತಾರೆ. ಇಪ್ಪತ್ನಾಲ್ಕು ಗಂಟೆಗಳಲ್ಲಿ ಸಖಿಯರೊಟ್ಟಿಗೆ ಇರಲು ಹದಿನೆಂಟು ಗಂಟೆಗಳಾದರೂ ಬೇಡವೇ? ಹಾಗಾದರೆ ಇಪ್ಪತ್ನಾಲ್ಕು ಗಂಟೆಗಳಲ್ಲಿ ಹೇಳುತ್ತೇವೆ ಎನ್ನುವುದು ’ಬೀಸುವ ದೊಣ್ಣೆಯನ್ನು ತಪ್ಪಿಸಿಕೊಂಡರೆ ನೂರು ವರ್ಷ ಆಯುಷ್ಯ’ ಅಂತಾರಲ್ಲ? ಹಾಗೆಯೇ.
https://www.facebook.com/groups/1499395003680065/permalink/1631166770502887/
ಶೃಂಗೇರಿ ಎಂಬ ಹೆಸರೇ ನಮಗೆ ಅಲರ್ಜಿ-’ಹಾವಾಡಿಗ’ ಮಹಾಸಂಸ್ಥಾನಾಧೀಶ್ವರರು
"ನಿನ್ನೆ ಮೊನ್ನೆಯತನಕ ನಮ್ಮ ವಿರುದ್ಧವೇ ಉಳಿದಿದ್ದ ’ಹರಿ’,’ಹರ’, ’ರಾಘವಾಂಕ’ರಂತ ಅಂಡೆಪಿರ್ಕಿಗಳನ್ನೆಲ್ಲ ಇಂದು ನಾವು ನಮ್ಮ ತೆಕ್ಕೆಗೆ ಎಳೆದುಕೊಂಡಿದ್ದೇವೆ. ಅಗ್ನಿ ಮಂಜುವಿನ ಭಾಷಣವನ್ನು ಅವರೆಲ್ಲ ಕೇಳಿದ್ದರೂ "ಅದರಲ್ಲಿ ಹೇಳಿದ್ದೆಲ್ಲ ಸುಳ್ಳು" ಎಂದು ನಾವು ಹೇಳಿದ್ದೇವೆ. ತನ್ಮೂಲಕ "ನಮ್ಮ ಸ್ವಾಮೀಜಿ ಬಹಳ ಸಾಚಾ, ಬಹಳ ಘನತೆವೆತ್ತವರು, ಸಮಾಜಕ್ಕೆ ಬಹಳಷ್ಟು ಕೊಡುಗೆಗಳನ್ನು ಕೊಟ್ಟಿದ್ದಾರೆ" ಎಂದು ಹೇಳಿಸಲು ಆರಂಭಿಸಿದ್ದೇವೆ. ಆದರೂ ಇಮ್ಮಡಿ ವಿಶ್ವೇಶ್ವರಯ್ಯನ ಜಾಗ ತುಂಬುವುದು ಅವರಿಂದ ಸಾಧ್ಯವಿಲ್ಲ ಬಿಡಿ.
ತುಮರಿ ರಾಮಚಂದ್ರ ಅನ್ನೋನು ನಿನ್ನೆ ನಮ್ಮ ವಿರೋಧಿಗಳಾದ ಶೃಂಗೇರಿಯವರ ಗುರುವಂದನಾ ಕಾರ್ಯಕ್ರಮ ನೋಡುತ್ತಿದ್ದನಂತೆ. ನಾವೂ ಅಲ್ಪಸ್ವಲ್ಪ ಕದ್ದು ನೋಡಿದ್ದೇವೆ; ಅ ಪ್ರಶ್ನೆ ಬೇರೆ. ಮುಂದಿನಸಲ ನಮ್ಮ ಕಾರ್ಯಕ್ರಮ ಇದಕ್ಕೂ ಗ್ರಾಂಡ್ ಆಗಿರಬೇಕು, ನಮಗೆ ಸಿಂಗಲ್ ವೇದಿಕೆಯಲ್ಲ, ಅಂತಸ್ತುಳ್ಳ ಡಬ್ಬಲ್ ವೇದಿಕೆಯಲ್ಲಿ ಅಷ್ಟಕೋನದ ದೊಡ್ಡ ಮಂಟಪಮಾಡಿ ಅದರಲ್ಲಿ ಬಹಳ ಎತ್ತರದ ಸಿಂಹಾಸನ ಹೂಡಿ, ಪ್ರವೇಶಿಸುತಿರುವಂತೆಯೇ ನೂರಾರು ಮಹಿಳೆಯರು ಆರತಿ ಎತ್ತುವಂತೆ ಮಾಡಬೇಕೆಂದು ಸಂಕಲ್ಪಿಸಿದ್ದೇವೆ. ಇದೊಂದರಲ್ಲಿ ಸಿಕ್ಕಿಹಾಕಿಕೊಳ್ಳದಿದ್ದರೆ ನಾವಿಷ್ಟೊತ್ತಿಗೆ ಇನ್ನಷ್ಟ್ ಸಾವಿರ ಬೋಳುಗಳಿಗೆ ಎಣ್ಣೆ ಹಚ್ಚುತ್ತಿದ್ದೆವು; ಆದರೇನು ಮಾಡೋಣ? ನಮ್ಮ ಸ್ಥಿತಿ ಇಂದು ಹೀಗಾಗಿದೆ.
ಅದಿರಲಿ, ಸಜ್ಜನರಾಗಬಯಸುವವರು ಸಜ್ಜನರ ಸಂಗವನ್ನೇ ಮಾಡಬೇಕು ಮತ್ತು ಸಜ್ಜನರ ಲಕ್ಷಣಗಳೇನು ಎಂಬುದನ್ನು ತಿಳಿಸಿದ ಶೃಂಗೇರಿಯವರು, ಪರಸ್ತ್ರೀಯರನ್ನು ಅಮ್ಮನಂತೆ ಕಾಣಬೇಕು ಎಂದು ಹೇಳಿದರು. ಹಾಗಾದರೆ ಎಲ್ಲರೂ ಹಾಗೇ ಮಾಡುತ್ತಾರೇನು? ರಾವಣ ಬಹಳ ನಿಷ್ಠಾವಂತನಾಗಿದ್ದ ಎಂದು ಹೇಳಿದಾಗ ನಮಗೆ ಬಹಳ ಸಮಾಧಾನವಾಯಿತು; ಯಾಕೆಂದರೆ ರಾವಣನಂತೆಯೇ ನಾವೂ ಹೊರಗೆ ಬಹಳ ನಿಷ್ಠಾವಂತರು.
ಆದರೆ, ರಾವಣ ಪರಸ್ತ್ರೀ ವ್ಯಾಮೋಹದಿಂದಲೇ ಪತನಗೊಂಡ ಎಂದಾಗ, ವೇಗದಲ್ಲಿ ಓಡುತ್ತಿರುವ ಕಾರಿನ ನಾಲ್ಕೂ ಟೈರ್ ಟ್ಯೂಬ್ಗಳು ಒಮ್ಮೆಲೇ ಠುಸ್ ಎಂದು ಬರ್ಸ್ಟ್ ಆದಂತೆನಿಸಿ ಎಲ್ಲಿಲ್ಲದ ಕೋಪ ಬಂತು ನಮಗೆ. ಸೀತೆಯ ಗಂಡ ಎಂದು ಹೇಳಿಕೊಂಡು ಅಲೆಯುತ್ತಿರುವ ನಮ್ಮನ್ನು ಮಂಡೋದರಿಯ ಪತಿಗೆ ಹೋಲಿಸುತ್ತಾರಲ್ಲ ಎಂಬುದು ಅರ್ಥವಾಯಿತು.
"ವ್ಯಕ್ತಿ ಜೀವನದಲ್ಲಿ ಅನ್ಯರಿಗೆ ಉಪಕಾರ ಮಾಡುವ ಸ್ಥಿತಿಯಲ್ಲಿಲ್ಲದಾಗ ಉಪಕಾರ ಮಾಡಬೇಕಾದ ಅಗತ್ಯವಿಲ್ಲ; ಆದರೆ ಅಪಕಾರ ಮಾಡಬಾರದು. ವಿನಾಕಾರಣ ಇನ್ನೊಬ್ಬನನ್ನು ಹಿಂಸಿಸಬಾರದು; ಹಾಗೆ ಹಿಂಸಿಸಿದರೆ, ತೊಂದರೆಕೊಟ್ಟರೆ ಅದರಿಂದಾಗುವ ದುಷ್ಪರಿಣಾಮ ವಿಪರೀತವಾಗಿರುತ್ತದೆ" ಎಂದು ಹೇಳಿದ್ದು ನಮ್ಮ ಕೀಳು ವ್ಯವಹಾರದ ಮಧ್ಯೆ ನಾವು ಅವರನ್ನು ಎಳೆಯಲು ಪ್ರಯತ್ನಿಸಿದ್ದಕ್ಕೆ ಎಂದರೆ ತಪ್ಪಾಗಲಾರದಷ್ಟೇ?
ಅಂದಹಾಗೆ ಐದು ತಿಂಗಳ ಹಿಂದೆ ಶಿಷ್ಯ ಸ್ವೀಕಾರದ ಸಮಯದಲ್ಲೂ ಅವರು "ಕೇವಲ ಜಾತಕ ನೋಡಿ ಆಯ್ಕೆ ಮಾಡಿದ್ದಲ್ಲ" ಎಂದಾಗ ನಮಗೆ ದಂಗಾಗಿತ್ತು; ಯಾಕೆಂದರೆ ನಾವು ಅಲ್ಲಿಂದಿಲ್ಲಿಗೂ ಮಾಡಿದ ಅಷ್ಟೂ ಲಫಡಾಗಳನ್ನೂ ಪರೋಕ್ಷವಾಗಿ ಅವರು ಬಲ್ಲರು. ಕಾನೂನಿನ ಕುಣಿಕೆಯಿಂದ ನಾವು ತಪ್ಪಿಸಿಕೊಂಡರೂ ಇನ್ನೆಂದೂ ನಮ್ಮನ್ನವರು ಕ್ಷಮಿಸಲಾರರು. ಮನಸ್ಸು ಮಾಡಿದರೆ ನಮ್ಮನ್ನು ಶಿಕ್ಷಿಸಬಲ್ಲವರು ಸದ್ಯಕ್ಕೆ ಅವರೊಬ್ಬರೇ ಎಂಬುದು ನಮಗೆ ಗೊತ್ತಿದೆ.
ನಮ್ಮ ವಿರೋಧಿ ಬಣದ ಮುಖಂಡನನ್ನು ಸನ್ಮಾನ ಮಾಡಿದಾಗಲಂತೂ ನಮ್ಮ ಎದೆಗೆ ಚಾಕು ಹಾಕಿದಷ್ಟು ನೋವಾಯ್ತು. ಶೃಂಗೇರಿಗಿಂತ ನಮ್ಮ ಸಂಸ್ಥಾನವೇ ದೊಡ್ಡದು ಎಂದು ಬಿಂಬಿಸಲು ಹೊರಟಿದ್ದ ನಾವು ಇದನ್ನೆಲ್ಲ ಕಣ್ಣಾರೆ ಕಂಡು ಸಹಿಸುವುದಾದರೂ ಹೇಗೆ?
ಅಂದಹಾಗೆ ಅವರ ಶಿಷ್ಯರಲ್ಲಿ ಅವರಿಗೆ ವಿರೋಧಿಗಳೇ ಇಲ್ಲವಲ್ಲ ಎಂಬುದು ನಮಗೆ ಆಶ್ಚರ್ಯ ತಂದಿದೆ. ನಾವು ನಮ್ಮ ಮಟ್ಟಕ್ಕೆ, "ಅವರದ್ದೂ ನಮ್ಮಂತೆಯೇ, ಇನ್ನೇನು ಮಹಾ" ಅಂದುಕೊಂಡಿದ್ದೆವು, ಆದರೆ ಅಲ್ಲಿನ ಶಿಸ್ತು, ಸ್ವಚ್ಛತೆ, ತ್ಯಾಗ, ತಪಸ್ಸು, ಆಡ್ಯತೆ, ಪಾಂಡಿತ್ಯ, ಧರ್ಮಾಚರಣೆ, ನೀತಿ-ನಿಯತ್ತು, ಅನುಷ್ಠಾನ, ಸಮಾಜ ಸೇವೆ, ಮಾರ್ಗದರ್ಶನ ಎಲ್ಲವನ್ನೂ ಕಂಡು ನಾವು, ಜ್ವರ ತಲೆಗೆ ಹತ್ತಿದವರು ಹಲುಬುವಂತೆ ಹಲುಬುತ್ತಿರುವುದು ನಿಜ.
ಕೆಲವೊಮ್ಮೆ, ನಮ್ಮ ಎಡವಟ್ಟಿಗೆಲ್ಲ ನಮ್ಮ ಕುಲಪತಿ ಬಾವಯ್ಯನೇ ಮೂಲ ಕಾರಣ ಅಂತ ನಾವೂ ಅಂದುಕೊಳ್ಳುತ್ತೇವೆ. ಅವನು ಹೇಳಿದಂತೆ ಡಾನ್ಸ್ ಮಾಡದಿದ್ದರೆ ನಮಗೆ ಇಷ್ಟೊಂದು ಅನಾಹುತ ಆಗುತ್ತಿರಲಿಲ್ಲ. ಈಗ ಒಳಹರಿವೇ ನಿಂತುಹೋಗಿ, ಹೊರಹರಿವು ಅಸಾಧ್ಯವಾಗಿ, ಕೈಕಾಲು ನಿತ್ರಾಣವಾಗಿ, ಇರುವಲ್ಲೇ ತರಗುಟ್ಟಲು ಸುರುವಾಗಿದೆ.
ಇನ್ನೊಂದು ಕಡೆ ಬೇರೆ ಮುಖದಲ್ಲಿ ಸಭೆ ಕರೆಯುವ ನಮ್ಮ ಸಮಾಜದ[ತಾವು ತಟಸ್ಥ ಎಂದು ಭೋಂಗು ಬಿಡುವ] ಪಟಾಲಂ ಬಳಗ ಅಲ್ಲಿಗೆ ಬಂದವರಿಗೆಲ್ಲ ಮತ್ತೆ ನಮ್ಮ ಸಂಸ್ಥಾನದ ಪರವಾಗಿ ವಕಾಲತ್ತು ಹಾಕುವಂತೆ ಎಣ್ಣೆ ಸವರಿ ಕಳಿಸುತ್ತದೆ. ಮತ್ತು ಮುಖವಾಣಿ ಎಂದು ಅವರೇ ಹೇಳಿಕೊಳ್ಳುವ ಪತ್ರಿಕೆಯಲ್ಲಿ ನಮ್ಮನ್ನೇ ಹೊಗಳಿ ಬರೆಯಿಸುತ್ತದೆ. ಹಾಗಾಗಿಯೇ ಇದ್ದಕ್ಕಿದ್ದಂತೆ ನಿನ್ನೆಯಿಂದ ಕೆಲವರು ಬದಲಾಗಿ ನಮ್ಮನ್ನು ಬೆಂಬಲಿಸತೊಡಗಿದ್ದು.
ಆದರೂ, ಈ ನಡುವೆ ನಮ್ಮಲ್ಲಿಂದ್ದ ಅನೇಕ ಜನ ನಮ್ಮನ್ನು ಬಿಟ್ಟುಹೋದದ್ದು ನಿಜ. ಏನೋ ಒತ್ತಾಯಕ್ಕೆ, ಮುಖ ಭಿಡೆಯಕ್ಕೆ ಇಲ್ಲೀವರೆಗೆ ಅವರು ಎಳೆದಿದ್ದಾರೆ; ಇನ್ನು ತಮ್ಮಿಂದಾಗದು ಎಂದು ಕೈಚೆಲ್ಲಿದ್ದಾರೆ. ಅಷ್ಟೇ ಅಲ್ಲ; ನಾವು ಸರಿಯಿಲ್ಲ ಎಂಬುದು ಅವರೆಲ್ಲರ ಮನಸ್ಸಿಗೆ ಸಾಬೀತಾಗಿದೆ. ಹೀಗಾದ್ದರಿಂದ ಪಟಾಲಮ್ಮಿಂದ ಬೇರ್ಪಟ್ಟವರು ಸೀದಾ ಹೋಗಿ ನಮ್ಮ ವಿರೋಧಿಗಳನ್ನು ಸೇರಿಕೊಂಡಿದ್ದಾರೆ.
ವರ್ಷಗಳ ಹಿಂದೆ ನಾವೂ ಒಂದು ಚಾನೆಲ್ ಮಾಡಬೇಕೆಂದುಕೊಂಡಿದ್ದೆವು; ಹಾಗೇನಾದರೂ ಮಾಡಿಕೊಂಡಿದ್ದರೆ, ಚುನಾವಣೆಗಳ ಸಮಯದಲ್ಲಿ, ರಾಜಕಾರಣಿಗಳ ಒಡೆತನದ ಚಾನೆಲ್ಗಳಲ್ಲಿ ಅವರಿಗೆ ಬೇಕಾದ್ದನ್ನಷ್ಟೇ ಇಡೀದಿನ ಹೇಗೆ ತುರುಕುತ್ತಿರುತ್ತಾರೋ ಹಾಗೆ ನಾವೂ ಕೂಡ ಸದಾ ನಮಗೆ ಬೇಕಾದ್ದನ್ನೇ ಹಾಕಿಸಬಹುದಿತ್ತು. ಎಲ್ಲವೂ ರೆಡಿಯಾಗಿ ಒಂದಷ್ಟು ಲಕ್ಷ ಹಣವನ್ನೂ ಹೂಡಿದ್ದಾಗಿತ್ತು; ಆದರೆ, ಇಮ್ಮಡಿಯ ಸ್ಕೆಚ್ ವರ್ಕ್ ಔಟ್ ಆಗದೆ, ನಮ್ಮ ಪವಾಡವೂ ನಡೆಯದೆ, ಆ ಪ್ರಾಜೆಕ್ಟು ಗೋತಾ ಹೊಡೆಯಿತು. ಎಷ್ಟೆಂದರೂ ಭಕ್ತಕುರಿಗಳು ಕೊಟ್ಟ ಹಣವಷ್ಟೇ? ಹೋದರೆ ಹೋಗಲಿ ಅಂತಹ ಹತ್ತುಪಟ್ಟು ತರಿಸಿಕೊಳ್ಳುವ ತಾಕತ್ತಿದೆ ಎಂದುಕೊಂಡು ಸುಮ್ಮನಾದೆವು.
ವರ್ಷಗಳ ಹಿಂದೆ, ಇಮ್ಮಡಿ ವಿಶ್ವೇಶ್ವರಯ್ಯನ ಸುಪರ್ದಿಯಲ್ಲಿ ನಾವು ಬೆಳಿಗ್ಗೆ ಲೋಕ ಸಂದೇಶ ಕೊಡುತ್ತಿದ್ದೆವು; ಹಾಗೆ ಮಾತನಾಡುವಾಗ ನಮ್ಮ ಹಾವ, ಭಾವ, ಭಂಗಿಗಳನ್ನು ಮತ್ತು ಕಣ್ಣುಗಳನ್ನು ಕಂಡ ಜನ "ಓಹೊಹೋ ಮಹಾಸ್ವಾಮಿಗಳಪ್ಪಾ" ಎಂದುಕೊಂಡಿರಬೇಕು. ಆದರೆ ವಾಹಿನಿಯಲ್ಲಿ ಕೆಲಸಮಾಡುವ ಹೆಣ್ಣುಬೆಕ್ಕುಗಳಿಗೆ ನಮ್ಮ ಅಡ್ಡಕಸುಬಿ ಅನಾಚಾರದ ಸುಳಿವು ಸಿಕ್ಕಿಬಿಟ್ಟಿತ್ತು; ನಮ್ಮ ಸಂದೇಶದ ನಂತರ ಅವು ಪರಸ್ಪರ ಮುಖ ಮುಖ ನೋಡಿಕೊಂಡು ಮುಸಿಮುಸಿ ನಗುತ್ತಿದ್ದವು.
ಶೃಂಗೇರಿ ಇಲ್ಲಿಯವರೆಗೆ ಯಾವುದೇ ವಿವಾದದಲ್ಲಿ ಸಿಲುಕಿಕೊಂಡಿಲ್ಲ, ಸಕ್ರಿಯ ರಾಜಕೀಯದಲ್ಲಿ ಭಾಗವಹಿಸುವುದಿಲ್ಲ, ರಾಜಕಾರಣಿಗಳಿಗೆ ಮಣೆಹಾಕುವುದೂ ಇಲ್ಲ, ಆಸೇತು ಹಿಮಾಚಲ ಹಬ್ಬಿರುವ ಹಿಂದೂ ಸಮಾಜಕ್ಕೆ ಅದು ನಿಜಕ್ಕೂ ಶೃಂಗಪ್ರಾಯವಾಗಿದೆ, ಕಿರೀಟಪ್ರಾಯವಾಗಿದೆ. ದಗಾಕೋರರು, ವಂಚಕರು, ಲಂಪಟರು, ಮತಿಹೀನ ’ಪಂಡಿತರು’, ಸಮಾಜ ಘಾತುಕರು ಆ ಸ್ವಾಮಿಗಳ ಎದುರು ನಿಂತು ಮಾತನಾಡಲು ಹೆದರುತ್ತಾರೆ. ಅಷ್ಟೇ ಅಲ್ಲ ಈಗ ನಮಗೂ ಸಹ ಅವರೆದುರು ನಿಲ್ಲುವ ಎದೆಗಾರಿಕೆ ಇಲ್ಲ.
"ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ ಪದವಾಕ್ಯ ಪ್ರಮಾಣ ಪಾರವಾರಾಪಾರೀಣ ಯಮನಿಯಮಾಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನಧಾರಣ ಸಮಾಧ್ಯಷ್ಟಾಂಗಯೋಗಾನುಷ್ಠಾನನಿಷ್ಠ ಷಡ್ದರ್ಶನಸ್ಥಾಪನಾಚಾರ್ಯ ತಪಶ್ಚಕ್ರವರ್ತ್ಯಾದ್ಯನೇಕ ವಿಶೇಷಣವಿಶಿಷ್ಟ" ಎಂಬುದು ಸಾಮಾನ್ಯವಾಗಿ ಶಂಕರ ಪರಂಪರೆಯ ಯತಿಗಳು ಬಳಸುವ ಬಿರುದುಗಳು. ಇವುಗಳಲ್ಲಿ ಷಡ್ದರ್ಶನಗಳೆಂದರೆ ನ್ಯಾಯ ದರ್ಶನ, ವೈಶೇಷಿಕ ದರ್ಶನ, ಸಾಂಖ್ಯ ದರ್ಶನ, ಯೋಗ ದರ್ಶನ, ಮೀಮಾಂಸ ದರ್ಶನ ಮತ್ತು ವೇದಾಂತ ದರ್ಶನ, ಇವುಗಳೆಲ್ಲವನ್ನೂ ಅರಿತಿರುವ ಕೆಲವೇ ವಿದ್ವಾಂಸರುಗಳಲ್ಲಿ ಶೃಂಗೇರಿಯವರೂ ಒಬ್ಬರು; ನಮಗೆ ಮಾತ್ರ ಇದೆಲ್ಲದರ ಗಂಧಗಾಳಿಯೂ ಇಲ್ಲ.
ವಿಶೇಷವೆಂದರೆ ಈ ಷದ್ದರ್ಶನಗಳ ಸಂಪೂರ್ಣ ದರ್ಶನ ಪಡೆದ ವ್ಯಕ್ತಿಯನ್ನು ದಾರ್ಶನಿಕ ಎಂಬುದು ಸರಿ. ಯಾಕೆಂದರೆ ಇವೆಲ್ಲ ಅನುಭೂತಿಗೆ ನಿಲುಕುವ ವಿಷಯಗಳೇ ಹೊರತು ಕೇವಲ ಪಠ್ಯಗಳನ್ನು ಓದಿದ ಮಾತ್ರಕ್ಕೆ ಅರಿವಿಗೆ ಬರುವ ವಿಷಯಗಳಲ್ಲ.
ಇದಲ್ಲದೆ,
ಧೃತಿಃ ಕ್ಷಮಾ ದಮೋಸ್ತೇಯಂ ಶೌಚಮಿಂದ್ರಿಯನಿಗ್ರಹಃ |
ಧೀರ್ವಿದ್ಯಾ ಸತ್ಯಮಕ್ರೋಧಃ ದಶಕಂ ಧರ್ಮ ಲಕ್ಷಣಮ್||
[ಇದನ್ನೇ, ಸಂಸಾರಿಯಾದವನಿಗೆ ಅನ್ವಯಿಸುವ ರೀತಿಯಲ್ಲಿ, ನಾರಾಯಣ ಪಂಡಿತನ ಹಿತೋಪದೇಶದ ಮಿತ್ರಲಾಭದ ಏಳನೇ ಶ್ಲೋಕ ಹೀಗೆ ಹೇಳುತ್ತದೆ-
ಇಜ್ಯಾಧ್ಯಯನದಾನಾನಿ ತಪಃ ಸತ್ಯಂ ಧೃತಿ ಕ್ಷಮಾ |
ಅಲೋಭ ಇತಿ ಮಾರ್ಗೋsಯಂ ಧರ್ಮಸ್ಯಾಷ್ಟವಿಧಃ ಸ್ಮೃತಃ ||
ಯಾಗ ಮಾಡುವುದು, ಅಧ್ಯಯಯನ ನಿರತರಾಗಿರುವುದು, ದಾನ, ತಪಸ್ಸು, ಸತ್ಯವನ್ನೇ ನುಡಿಯುವುದು, ಧೈರ್ಯವನ್ನು ಹೊಂದಿರುವುದು, ಕ್ಷಮಾಗುಣ, ಲೋಭವಿಲ್ಲದಿರುವುದು ಇವು ಎಂಟು ಧರ್ಮಕ್ಕೆ ಇರುವಂತಹ ಮಾರ್ಗಗಳು.]
ಮಹರ್ಷಿ ಪತಂಜಲಿಯ ಯೋಗಸೂತ್ರದಲ್ಲಿ ಅರ್ಹತೆಯನ್ನು ಹೇಳುವಾಗಲೇ ಇವೆಲ್ಲವೂ ಹೇಳಲ್ಪಟ್ಟಿವೆ. ನಿಜವಾದ ಸನ್ಯಾಸಿಗಳಲ್ಲಿ ಮಾತ್ರ ಕಾಣುವ ಧರ್ಮದ ಈ ಹತ್ತು ಲಕ್ಷಣಗಳನ್ನು ಶೃಂಗೇರಿಯವರಲ್ಲಿ ಕಾಣಬಹುದು. ಆದರೆ, ನಮಗೂ ಈ ಶ್ಲೋಕದಲ್ಲಿ ಹೇಳಿದ ಹತ್ತು ನಿಯಮಗಳಿಗೂ ಯಾವುದೇ ಸಂಬಂಧವೂ ಇಲ್ಲ.
ಮೂಕನನ್ನು ಮಾತನಾಡಿಸಬಲ್ಲ, ಹೆಳವನಿಗೆ ಹಿಮಾಲಯವೇರುವ ತಾಕತ್ತನ್ನು ಕೊಡಬಲ್ಲ ತಪೋನಿರತ ಸಿದ್ಧ ಸಾಧ್ಯರ, ವಿಭಾಂಡಕ-ಋಷ್ಯಶೃಂಗರ ನೆಲೆವೀಡು ಶೃಂಗೇರಿ ಎಂಬುದು ಸುಳ್ಳಲ್ಲ. ಬ್ರಹ್ಮಾಂಡವನ್ನು ರಚಿಸಿದ ಶಕ್ತಿ ಶಾರದೆಯಾಗಿ ನೆಲೆಸಿದ ದಿವ್ಯ ಕ್ಷೇತ್ರ ಅದೆಂಬುದರಲ್ಲಿ ನಮಗೆ ಅನುಮಾನವೇನೂ ಇಲ್ಲ. ಒಟ್ಟಂದದಲ್ಲಿ ಹೇಳಬೇಕಾದರೆ ಶೃಂಗೇರಿಯವರ ನೂರರ ಒಂದಂಶವೂ ನಾವಾಗಲು ಸಾಧ್ಯವಿಲ್ಲ; ಆದರೂ ನಾವು ಅವರನ್ನು ಮೀರಿಸುವ ಅರ್ಹತೆಯುಳ್ಳವರೆಂದು ಭೋಂಗು ಬಿಟ್ಟಿದ್ದೇವೆ.
ಹೋಗಲಿ ಬಿಡಿ, ಅದೆಲ್ಲ ಈಗ ಬೇಡ, ಈಗ ನಮಗೆ ಬೇಕಾದುದೇನು ಗೊತ್ತೇ? ಹೇಗಾದರೂ ಮಾಡಿ, ನಮ್ಮ ಸಮಾಜ ನಮ್ಮ ವಿರುದ್ಧ ತಿರುಗಿಬಿದ್ದಿದ್ದಕ್ಕೆ ಶೃಂಗೇರಿಯವರ ಮಸಲತ್ತೇ ಕಾರಣ ಎಂದು ರೂಪಿಸುವುದು. ಈಗೀಗ ಶೃಂಗೇರಿ ಎಂಬ ಹೆಸರೇ ನಮಗೆ ಅಲರ್ಜಿ ಮಾರಾಯ್ರೆ."
https://www.facebook.com/groups/1499395003680065/permalink/1631641603788737/
ಯೋಗದ ಸಾಧ್ಯತೆಗಳ ಬಗ್ಗೆ ನಾವು ಅನ್ಯರಿಗೆ ಮಾತ್ರ ಉಪದೇಶ ಕೊಡುತ್ತೇವೆ.
"ಯೋಗದ ಬಗೆಗೆ ತಿಳಿಯದಿರುವವರು ಬಹಳ ಕಡಿಮೆ ಎಂದುಕೊಡಿದ್ದೇವೆ. ಹೀಗಾಗಿ ಅದರ ಬಗ್ಗೆ ಜಾಸ್ತಿ ಕೊರೆಯದೆ ನೇರವಾಗಿ ಷಡ್ದರ್ಶನಗಳನ್ನು ಎತ್ತಿಕೊಂಡು, ಅಲ್ಲಿಂದ ಯೋಗಸಿದ್ಧಿಯ ಕಡೆಗೆ ಹೋಗುತ್ತೇವೆ.
ಭಾರತೀಯ ತತ್ವಶಾಸ್ತ್ರ ಪದ್ಧತಿ ಬಹಳ ಪುರಾತನವಾದದ್ದು; ಕನಿಷ್ಠ ಐದುಸಾವಿರ ವರ್ಷಗಳ ಇತಿಹಾಸವುಳ್ಳದ್ದು ಎನ್ನಬಹುದು. ಇಲ್ಲಿನ ತತ್ವಶಾಸ್ತ್ರಗಳನ್ನು ದರ್ಶನಗಳೆಂದು ಕರೆದಿದ್ದಾರೆ. ಪಾಶ್ಚಿಮಾತ್ಯರಲ್ಲಿ ತತ್ವ ಸಿದ್ಧಾಂತಗಳೆಂದರೆ ಸಂಪೂರ್ಣವಾಗಿ ತರ್ಕ ಮತ್ತು ಕಾರಣಗಳ ಮೇಲೆ ಅವಲಂಬಿಸಿರುವ ವಿಷಯವಾಗಿರುತ್ತದೆ.
ಭಾರತೀಯ ತತ್ವಶಾಸ್ತ್ರವು ಅಥವಾ ಸಿದ್ಧಾಂತವು ಸತ್ಯದ ’ದರ್ಶನ’ ಅಥವಾ ’ನೋಟ’ ಅಥವಾ ’ಅನುಭವ’ವನ್ನು ಅತೀಂದ್ರಿಯ ಸ್ಥಿತಿಯಲ್ಲಿ ಕಂಡುಕೊಳ್ಳುವುದರ ಮೇಲೆ ನಿಂತಿದೆ. ಆದ್ದರಿಂದಲೇ ಇಲ್ಲಿನ ಪ್ರಾಚೀನ ತತ್ವಶಾಸ್ತ್ರಗಳಿಗೆ ’ದರ್ಶನ’ ಎಂಬ ಪದವು ಹೆಚ್ಚು ಸೂಕ್ತವೆನಿಸುತ್ತದೆ.
ನಮ್ಮಲ್ಲಿನ ದರ್ಶನಗಳನ್ನು ಆಸ್ತಿಕ ಮತ್ತು ನಾಸ್ತಿಕ ಎಂದು ಎರಡು ಗುಂಪುಗಳಾಗಿ ವಿಂಗಡಿಸುತ್ತಾರೆ. ವೇದಗಳ ಪ್ರಮಾಣಗಳ ಮೇಲೆ ಆಧಾರಿತವಾಗಿರುವ ದರ್ಶನಗಳೆಲ್ಲ ಆಸ್ತಿಕ ದರ್ಶನಗಳು ಇದಕ್ಕೆ ಹೊರತಾದವುಗಳು ನಾಸ್ತಿಕ ದರ್ಶನಗಳು. ಚಾರ್ವಾಕ (ಪ್ರಾಪಂಚಿಕ ಭೋಗವನ್ನು ಪ್ರತಿಪಾದಿಸುವ ದರ್ಶನ), ಜೈನ ಮತ್ತು ಬೌದ್ಧ ಸಿದ್ಧಾಂತಗಳು ನಾಸ್ತಿಕ ದರ್ಶನಗಳ ವರ್ಗಕ್ಕೆ ಸೇರಿದರೆ; ಷಡ್ದರ್ಶನಗಳು ಅಥವಾ ಆರು ಹಿಂದೂ ಸಾಂಪ್ರದಾಯಿಕ ಸಿದ್ಧಾಂತಗಳು ಆಸ್ತಿಕ ದರ್ಶನಗಳ ವರ್ಗಕ್ಕೆ ಸೇರುತ್ತವೆ.
ಈಗ ಯಾವ ಯಾವ ದರ್ಶನ ಏನೇನು ವಿಷಯಗಳನ್ನು ಒಳಗೊಂಡಿದೆ ಎಂಬುದನ್ನು ಸ್ಥೂಲವಾಗಿ ನೋಡೋಣ.
ನ್ಯಾಯದರ್ಶನ: ವಿಷಯವು ಎದುರು ಬಂದಾಗ, ಹಲವು ವಿಧದ ಪ್ರಮಾಣಗಳಿಂದ ವಸ್ತುವನ್ನು ಪರೀಕ್ಷಿಸಿ, ಬುದ್ಧಿಪೂರ್ವಕವಾಗಿ, ವಿವೇಕಯುತವಾಗಿ, ಕಾರಣ ಸಹಿತವಾಗಿ, ವ್ಯವಸ್ಥಿತವಾಗಿ ಅದನ್ನು ಮಂಡಿಸುವ ವಿಧಾನವೇ ನ್ಯಾಯ ಮತ್ತು ಇದನ್ನು ತರ್ಕ ಎಂದೂ ಕರೆದಿದ್ದಾರೆ. ಸತ್ಯವನ್ನು ಕಂಡುಕೊಳ್ಳುವುದು ಈ ದರ್ಶನದ ಪ್ರಧಾನ ನಿಲುವು. ಗೌತಮಮುನಿ ಈ ದರ್ಶನದ ಮೂಲಪುರುಷ ಎಂದು ತಿಳಿಯಲಾಗಿದೆ.
ವೈಶೇಷಿಕದರ್ಶನ: ಎಷ್ಟೋ ಸಲ ನ್ಯಾಯದರ್ಶನ ಮತ್ತು ವೈಶೇಷಿಕದರ್ಶನಗಳನ್ನು ಒಟ್ಟಾಗಿಯೇ ಪರಿಗಣಿಸುವ ವಿಧಾನವೂ ಉಂಟು; ಆದರೆ ಅಸ್ಥಿತ್ವದಲ್ಲಿ ಅವೆರಡೂ ಬೇರೆ ಬೇರೆ. ಋಷಿ ಕಣಾದ ಈ ದರ್ಶನದ ಪ್ರವರ್ತಕ. ನ್ಯಾಯದರ್ಶನವು ಪ್ರಧಾನವಾಗಿ ಪ್ರಮಾಣಗಳನ್ನು ಕುರಿತು ವಿಶ್ಲೇಷಿಸಿದರೆ, ವೈಶೇಷಿಕದರ್ಶನವು ಪ್ರಮೇಯಗಳನ್ನು ಕುರಿತು ಮೀಮಾಂಸೆ ನಡೆಸುತ್ತದೆ. ಉದಾಹರಣೆಗೆ-ಜಗತ್ತಿನ ವಸ್ತುಗಳಿಗೆ ಕಾರಣವಾದುದು ಪರಮಾಣುಗಳು, ಅವುಗಳ ವೈಶಿಷ್ಟ್ಯ. ವಿಶೇಷತೆಗಳನ್ನು ವಿವರಿಸುವುದೇ ಈ ದರ್ಶನದ ಗುರಿ.
ಸಾಂಖ್ಯದರ್ಶನ: ಭಾರತೀಯ ದರ್ಶನಗಳಲ್ಲಿ ಸಾಂಖ್ಯದರ್ಶನವೇ ಅತ್ಯಂತ ಪ್ರಾಚೀನವಾದುದು ಎಂಬ ಎಣಿಕೆಯಿದೆ. ಕಪಿಲಮುನಿ ಈ ದರ್ಶನದ ಪ್ರವರ್ತಕ. ‘ಸಾಂಖ್ಯ’ ಎಂದರೆ ಜ್ಞಾನ ಮತ್ತು ಪರಿಗಣನೆ ಎಂಬ ಎರಡು ಪ್ರಧಾನ ಅರ್ಥಗಳನ್ನು ವಿದ್ವಾಂಸರು ಮಾಡಿದ್ದಾರೆ. ಸೃಷ್ಟಿಗೆ ಮೂಲವಾಗಿರುವ ವಿವರಗಳನ್ನು ಎಣಿಸುವುದು ಮತ್ತು ಅರಿವನ್ನು ಕುರಿತ ಮೀಮಾಂಸೆ ಈ ದರ್ಶನದ ಮೂಲ ನೆಲೆ. ಸಾಂಖ್ಯ ದರ್ಶನ ಬಹಳ ಜನಪ್ರಿಯತೆಯನ್ನು ಪಡೆದಿದೆಯಾದರೂ ಮೂಲದಲ್ಲಿ ಇದರಲ್ಲಿ ಒಂದು ಲೋಪವಿದೆ; ಈಶ್ವರನನ್ನು[ಹರಿ ಅಥವಾ ಹರ-ಪರಮಾತ್ಮ ಎಂದರ್ಥ] ಕುರಿತು ಸಾಂಖ್ಯ ಏನನ್ನೂ ಹೇಳದ್ದರಿಂದ ಇದನ್ನು ನಿರೀಶ್ವರ ಸಾಂಖ್ಯ ಎನ್ನಲಾಯ್ತು. ನೋಡಿ ಹೀಗಿದೆ-
ಜಡ ಮತ್ತು ಚೇತನದ ವಿಶ್ಲೇಷಣೆ
ಸಾಂಖ್ಯ ಎಂದರೆ ಚೈತನ್ಯ ಮತ್ತು ಜಡವನ್ನು ಅರ್ಥಮಾಡಿಕೊಳ್ಳುವುದು. ಈ ಲೌಕಿಕ ಪ್ರಪಂಚವು ಇಪ್ಪತ್ತನಾಲ್ಕು ಅಂಶಗಳಿಂದ ಆದದ್ದೆಂದು ಸಾಂಖ್ಯ ತತ್ತ್ವಶಾಸ್ತ್ರಜ್ಞನು ವಿಶ್ಲೇಷಣೆ ಮಾಡುತ್ತಾನೆ : ಪಂಚಭೂತಗಳು, ಮೂರು ಸೂಕ್ಷ್ಮ ಧಾತುಗಳು, ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು, ಐದು ಪ್ರಜ್ಞಾ ವಸ್ತುಗಳು ಮತ್ತು ಪ್ರಧಾನ -ಅಪ್ರಕಟಿತ ಪ್ರಕೃತಿ ಗುಣಗಳು ಎಂಬುದು ಸಾಂಖ್ಯಯೋಗದ ಹೇಳಿಕೆ.
· ಭೂಮಿ, ಆಕಾಶ, ವಾಯು, ಬೆಂಕಿ ಮತ್ತು ನೀರು ಇವೇ ಪಂಚಭೂತಗಳು.
· ಮೂರು ಸೂಕ್ಷ್ಮಧಾತುಗಳು: ಆಕಾಶಕ್ಕಿಂತ ಸೂಕ್ಷ್ಮವಾದದ್ದು ಮನಸ್ಸು, ಮನಸ್ಸಿಗಿಂತಲೂ ಸೂಕ್ಷ್ಮವಾದದ್ದು ಬುದ್ಧಿ, ಬುದ್ಧಿಗಿಂತಲೂ ಸೂಕ್ಷ್ಮವಾದದ್ದು ಮಿಥ್ಯಾ ಅಹಂಕಾರ. [ನಾನೇ ಜಡವಸ್ತುವೆಂಬ ಮಿಥ್ಯಾಗ್ರಹಿಕೆ]
· ಐದು ಜ್ಞಾನೇಂದ್ರಿಯಗಳೆಂದರೆ-ಕಣ್ಣು, ಮೂಗು, ಕಿವಿ, ನಾಲಗೆ ಮತ್ತು ಚರ್ಮ.
· ಐದು ಕರ್ಮೇಂದ್ರಿಯಗಳೆಂದರೆ ಧ್ವನಿ, ಕಾಲುಗಳು, ಕೈಗಳು, ಗುದ ಮತ್ತು ಜನನೇಂದ್ರಿಯ. ಇವುಗಳ ಮೂಲಕ ನಾವು ಸುಖ ದುಃಖಗಳನ್ನು ಪರಿಭಾವಿಸುತ್ತೇವೆ.
· ಐದು ಪ್ರಜ್ಞಾವಸ್ತುಗಳೆಂದರೆ-ವಾಸನೆ, ರುಚಿ, ಆಕಾರ, ಸ್ಪರ್ಶ ಮತ್ತು ಶಬ್ದ. [ಶಬ್ಧ-ರೂಪ-ರಸ-ಗಂಧ-ಸ್ಪರ್ಶ]
ಇಪ್ಪತ್ತನಾಲ್ಕು ಅಂಶಗಳಲ್ಲಿ ಲೌಕಿಕ ಪ್ರಪಂಚವನ್ನು ವಿಶ್ಲೇಷಿಸುವುದಕ್ಕೆ ಸಾಂಖ್ಯ ಎನ್ನುತ್ತಾರೆ. ಇದು ನಮ್ಮ ಅನುಭವದ ಅಳವಿಗೆ ಬರುವ ಪ್ರತಿಯೊಂದರ ಸಂಪೂರ್ಣ ವಿಶ್ಲೇಷಣೆ. ಈ ಇಪ್ಪತ್ತನಾಲ್ಕು ಅಂಶಗಳ ಮೇಲೆ ಚೇತನಾತ್ಮನು ಇದ್ದಾನೆ. ಈ ಚೇತನಾತ್ಮಕ್ಕೆ ಮೇಲಿರುವವನೇ ದೇವರು.
ಸಾಂಖ್ಯರು ಆತ್ಮವನ್ನು ಅವಲೋಕಿಸುವುದಿಲ್ಲ. ಈ ಭೂಭೌತಶಾಸ್ತ್ರದ ಜಡವಸ್ತುಗಳ ವಿಜ್ಞಾನಿಗಳ ಹಾಗಿದ್ದರು ಅವರು. ಜಡವಸ್ತುಗಳನ್ನು ಕುರಿತು ಕೇವಲ ಅಧ್ಯಯನ ಮಾಡುತ್ತಾರಷ್ಟೆ. ಅದಕ್ಕೆ ಮೇಲ್ಪಟ್ಟ ಮಾಹಿತಿ ಅವರ ಬಳಿ ಇಲ್ಲ. ವ್ಯಕ್ತಿ-ವ್ಯಕ್ತಿಗಳ ನಡುವೆ ನಡೆಯುವ ಸಂಭಾಷಣೆಗೆ ಯಾವುದು ಕಾರಣ ಎಂಬುದಕ್ಕೆ ಸಾಂಖ್ಯ ತತ್ತ್ವಶಾಸ್ತ್ರಜ್ಞ ಉತ್ತರಿಸಲಾರ.
ಅದೇ ರೀತಿಯಲ್ಲಿ, ಆಧುನಿಕ ವೈದ್ಯರು ದೇಹವನ್ನು ವಿಚ್ಛೇದಿಸಿದ ಮೇಲೆ ಅಲ್ಲಿ ಕೆಲಸ ಮಾಡುತ್ತಿರುವ ಆಧ್ಯಾತ್ಮಿಕ ಶಕ್ತಿ ಯಾವುದು ಎಂದು ಕಂಡುಹಿಡಿಯಲಾರರು; ಅವರಿಗೂ ಆತ್ಮವೆಂಬ ಚೇತನದ ಕಲ್ಪನೆ ಮೂಡಲಾರದು. “ಇಷ್ಟು ಹೊತ್ತು ಜೀವ ಇತ್ತು, ಈಗ ಹೋಯ್ತು” ಎಂದಷ್ಟೇ ಹೇಳುತ್ತಾರೆಯೇ ವಿನಃ ಜೀವ ಎಂದರೇನು ಎಂಬುದಕ್ಕೆ ಅರ್ಥವನ್ನು ಅವರು ನೀಡಲಾರರು. ಹೀಗೆ ಲೌಕಿಕವಾದಿಗಳು, ಭಗವಂತನ ಕಣರೂಪದ ಜೀವಿಗಳಾದ ನಮ್ಮನ್ನು ಕೂಡ ಕಂಡುಹಿಡಿಯಲು ಸಾಧ್ಯವಿಲ್ಲ ಎಂದ ಮೇಲೆ, ಕೇವಲ ಯೋಗಿಗಳಾಗಲಿ, ಸಾಂಖ್ಯರಾಗಲಿ ದೇವರನ್ನು ನೇರವಾಗಿ ಕಂಡು ಹಿಡಿಯಲಾರರು. ಹಾಗಾದರೆ ಯೋಗದಿಂದ ಎಲ್ಲವೂ ಸಾಧ್ಯವೆಂದು ಹೇಳಿದಿರಲ್ಲ ಎಂದು ನೀವು ಪ್ರಶ್ನಿಸಿದರೆ, ಯೋಗವೆಂಬುದು ಭಗವಂತನ ಅರಮನೆಗೆ ಇರುವ ಒಂದು ಸೋಪಾನವಷ್ಟೆ; ಅದನ್ನೇರಿ ಮುಂದಕ್ಕೆ ಸಾಗುತ್ತ ಅವರು ಅರಮನೆಯನ್ನು ಪ್ರವೇಶಿಸಬೇಕಾಗುತ್ತದೆ.
ಮುಂದೆ ಇಂದಿನ ರಾಜಯೋಗದಲ್ಲಿ ಈಶ್ವರ ಸಹಿತ ಸಾಂಖ್ಯವನ್ನು ಬಳಸಿದ್ದರಿಂದ ಅದು ಪರ್ಫೆಕ್ಟ್ ಆಯ್ತು; ಅದನ್ನೇ ಸೇಶ್ವರ [ಸ+ಈಶ್ವರ] ಸಾಂಖ್ಯ ಎನ್ನಲಾಗಿದೆ.
ಯೋಗದರ್ಶನ: ಯೋಗದರ್ಶನ ಪ್ರಾಚೀನ ಸಾಧನಪದ್ಧತಿ. ಪತಂಜಲಿ ಮಹರ್ಷಿ ಇದರ ಮೂಲಪುರುಷ. ‘ಯೋಗ’ ಎಂಬ ಪದವು ‘ಯುಜ್’ ಧಾತುವಿನಿಂದ ನಿಷ್ಪನ್ನವಾಗಿದ್ದು, ‘ಸೇರಿಸು’, ‘ಹೊಂದಿಸು’ ಎಂಬ ಅರ್ಥಗಳಿವೆ. ಇದಕ್ಕೆ ಹಲವು ಸ್ತರದ ಅರ್ಥಗಳನ್ನು ಮಾಡಿದ್ದಾರೆ. ಶರೀರ ಮತ್ತು ಮನಸ್ಸುಗಳನ್ನು ಸೇರಿಸುವುದು, ಕರ್ಮ-ಜ್ಞಾನಗಳನ್ನು ಒಂದಾಗಿಸಿ ಬದುಕನ್ನು ರೂಪಿಸಿಕೊಳ್ಳುವುದು, ಅಂತರಂಗ-ಬಹಿರಂಗಗಳ ಸಾಮರಸ್ಯವನ್ನು ಸಾಧಿಸುವುದು - ಹೀಗೆಲ್ಲ ತಾತ್ಪರ್ಯವನ್ನು ಕಲ್ಪಿಸಲು ಸಾಧ್ಯ.
[ಪೂರ್ವ]ಮೀಮಾಂಸಾ ದರ್ಶನ: ‘ಮೀಮಾಂಸಾ’ ಎಂದರೆ ಆಳವಾದ ವಿಶ್ಲೇಷಣೆ, ವಿಮರ್ಶೆ. ಮೀಮಾಂಸಾದರ್ಶನದಲ್ಲಿ ಎರಡು ಕವಲುಗಳು. ವೇದಗಳ ಸಂಹಿತಾ-ಬ್ರಾಹ್ಮಣಭಾಗವನ್ನು ಆಧರಿಸಿ ಯಜ್ಞಯಾಗಾದಿಗಳ ವ್ಯಾಖ್ಯಾನಕ್ಕೆ ನಿಷ್ಠವಾದುದು ‘ಪೂರ್ವಮೀಮಾಂಸಾ’; ಉಪನಿಷತ್ತುಗಳ ಸಂದೇಶವನ್ನು ಸ್ವೀಕರಿಸಿ ಸತ್ಯಸಾಕ್ಷಾತ್ಕಾರವನ್ನು ಕಂಡುಕೊಳ್ಳುವುದು ‘ಉತ್ತರಮೀಮಾಂಸಾ’.ಜೈಮಿನಿಮಹರ್ಷಿಯನ್ನು ಪೂರ್ವ ಮೀಮಾಂಸಾದರ್ಶನದ ಮೂಲ ಪ್ರವರ್ತಕನನ್ನಾಗಿ ಗುರುತಿಸುವುದುಂಟು.
ನಮ್ಮ ಪ್ರಾಚೀನರು ತರ್ಕಿಸದೆ, ವಿಶ್ಲೇಷಿಸದೆ ಯಾವುದನ್ನೂ ಕುರುಡು ನಂಬಿಕೆಯಿಂದ ಒಪ್ಪುತ್ತಿರಲಿಲ್ಲ. ತರ್ಕ-ವಿತರ್ಕಗಳು ಸದಾ ಇರುತ್ತಿದ್ದವು; ಕುತರ್ಕ ಅಥವಾ ದುಸ್ತರ್ಕಗಳು ಇರಲಿಲ್ಲ. ಜಿಜ್ಞಾಸೆಗೊಳಗಾದ ಪೂರ್ವ ಮೀಮಾಂಸಾ ದರ್ಶನವು ಮುಂದೆ ಭಾಟ್ಟಮತ, ಪ್ರಾಭಾಕರಮತ ಮತ್ತು ಮುರಾರಿಮತ ಎಂದು ಮೂರು ಕವಲಾಗಿ ಬೆಳೆಯಿತು. ವೇದವಾಕ್ಯಗಳಿಗೆ ಅರ್ಥವನ್ನು ಕಂಡುಕೊಂಡು ಅವು ಪ್ರತಿಪಾದಿಸುವ ಕರ್ಮಗಳನ್ನು ಶ್ರದ್ಧೆಯಿಂದ ಆಚರಿಸುವಂತೆ ಪ್ರತಿಪಾದಿಸುವುದೇ ಈ ದರ್ಶನದ ನಿಲುವು.
[ಉತ್ತರ]ಮೀಮಾಂಸಾ ಅಥವಾ ವೇದಾಂತ ದರ್ಶನ: ದರ್ಶನ ಎಂದರೆ ವೇದಾಂತದರ್ಶನವೇ ಹೌದು ಎನ್ನುವಷ್ಟರ ಮಟ್ಟಿಗೆ ಈ ದರ್ಶನದ ಹಿರಿಮೆಯಿದೆ. ಉಪನಿಷತ್ತುಗಳು ಪ್ರತಿಪಾದಿಸುವ ಜೀವನರಹಸ್ಯವನ್ನು ವಿಶ್ಲೇಷಿಸಿ, ಅದನ್ನು ಪುನಃ ಅನುಭವದಲ್ಲಿ ಕಂಡುಕೊಳ್ಳುವಂಥ ಅರಿವನ್ನೂ, ಸಾಧನವನ್ನೂ ಒದಗಿಸುವುದು ಈ ದರ್ಶನದ ಪ್ರಧಾನ ನೆಲೆ. ಬಾದರಾಯಣರ‘ಬ್ರಹ್ಮಸೂತ್ರ’ವೇ ಇದಕ್ಕೆ ಆಕರ ಎಂದು ತಿಳಿಯಲ್ಪಟ್ಟಿದೆ. ಮಹಾಭಾರತವನ್ನು ಬರೆದ ವೇದವ್ಯಾಸರೇ ಈ ಬಾದರಾಯಣರು ಎಂಬ ಭಾವನೆಯೂ ಉಂಟು. ಉಪನಿಷತ್ತುಗಳು, ಬ್ರಹ್ಮಸೂತ್ರ ಮತ್ತು ಭಗವದ್ಗೀತೆ - ಈ ದರ್ಶನದ ಪ್ರಮಾಣಗ್ರಂಥಗಳು.
ತಪಸ್ಸು ಅಥವಾ ಭಗವದನುಗ್ರಹದಿಂದ ಅತೀಂದ್ರಿಯ ಶಕ್ತಿಗಳನ್ನು ಪಡೆಯಬಹುದೆನ್ನುವ ನಂಬಿಕೆಯು ಬಹು ಪುರಾತನವಾದದ್ದು. ಪತಂಜಲಿಯು ಸತ್ಯಾನ್ವೇಷಣ ಪಥಿಕರ ಮನದಲ್ಲಿ ಸ್ಥಿರ ನಂಬಿಕೆಯನ್ನುಂಟು ಮಾಡಲು ತನ್ನ ಎರಡನೆಯ ಮತ್ತು ಮೂರನೆಯ ಅಧ್ಯಾಯದಲ್ಲಿ ಇಂತಹ ಹಲವಾರು ವಿಶೇಷ ಶಕ್ತಿಗಳ ಬಗ್ಗೆ ಉಲ್ಲೇಖಿಸಿದ್ದಾನೆ.
ಉದಾಹರಣೆಗೆ-ಯೋಗಸಿದ್ಧಿಯನ್ನು ಪಡೆದು ಸಂಪೂರ್ಣವಾಗಿ ಅಹಿಂಸಾ ಗುಣಗಳನ್ನು ಒಂದಾ ಮಹಾಪುರುಷನ ಸನ್ನಿಧಿಯಲ್ಲಿ ಪರಸ್ಪರ ವೈರತ್ವವಿರುವ (ಹುಲಿ ಮತ್ತು ಹಸು) ಪ್ರಾಣಿಗಳೂ ಕೂಡ ಶಾಂತಿ ಮತ್ತು ಸೌಹಾರ್ದತೆಗಳಿಂದ ಜೀವಿಸುತ್ತವೆ. ಸತ್ಯವನ್ನೇ ಆಚರಿಸುವ ವ್ಯಕ್ತಿಯ ಮಾತು ಸುಳ್ಳಾಗುವುದಿಲ್ಲ. ಯಾವ ವ್ಯಕ್ತಿಯು ಕಠಿಣವಾಗಿ ಅಪರಿಗ್ರಹವನ್ನು(ದಾನವನ್ನು ಸ್ವೀಕರಿಸುವುದಿಲ್ಲವೋ) ಪರಿಪಾಲಿಸುತ್ತಾನೆಯೋ ಅವನಿಗೆ ತನ್ನ ಪೂರ್ವ ಜನ್ಮದ ಜ್ಞಾನವುಂಟಾಗುತ್ತದೆ ಮತ್ತು ಅವನು ತನ್ನ ಮುಂದಿನ ಜನ್ಮಗಳ ಬಗ್ಗೆಯೂ ತಿಳಿದುಕೊಳ್ಳಬಲ್ಲ (ನೋಡಿ ಯೋಗಸೂತ್ರ ೨.೩೫,೩೬ ಮತ್ತು ೩೯).
’ಸಂಯಮ’ದಿಂದ ಯೋಗಿಗೆ ಹಲವಾರು ಅತೀಂದ್ರಿಯ ಶಕ್ತಿಗಳು ಪ್ರಾಪ್ತವಾಗುತ್ತವೆ. ಉದಾಹರಣೆಗೆ, ಪಂಚಭೂತಗಳಾದ ಪೃಥ್ವಿ(ಭೂಮಿ) ಮತ್ತು ಅಪ(ನೀರು) ಇವುಗಳ ಮೇಲಿನ ’ಸಂಯಮ’ದಿಂದ ಯೋಗಿಯು ಅಣಿಮಾ-ಗರಿಮಾದಿ ಅಷ್ಟಸಿದ್ಧಿ ಅಥವಾ ಎಂಟು ವಿಧದ ಶಕ್ತಿಯನ್ನು ಪಡೆಯುತ್ತಾನೆ.
ಸಿದ್ಧಿಯೆಂದರೆ ಕೆಲಸ ಕೈಗೂಡುವುದು (ಕ್ರಿಯಾಸಿದ್ಧಿ). ಸಾಮಾನ್ಯವಾಗಿ ಈ ಮಾತನ್ನು ಅಲೌಕಿಕವಾಗಿರುವ ಕೌಶಲಗಳನ್ನು ಪಡೆಯುವುದಕ್ಕೆ ಬಳಸುತ್ತಾರೆ. ಸಿದ್ಧಿಯೆಂದರೆ ತುಂಬ ಚಮತ್ಕಾರದ ಅದ್ಭುತಶಕ್ತಿ. ತಪಶ್ಚರ್ಯೆಯಿಂದಲೋ ಮಂತ್ರತಂತ್ರಗಳ ಅನುಸಂಧಾನದಿಂದಲೋ ದೈವಿಕ ಅನುಗ್ರಹದಿಂದಲೋ ಮನುಷ್ಯರು ಪಡೆಯುವ ವಿಶೇಷಸಾಮರ್ಥ್ಯ.
ಅಣಿಮಾ - ದೇಹವನ್ನು ಅತಿ ಚಿಕ್ಕ (ಪರಮಾಣುವಿನ) ಗಾತ್ರಕ್ಕೆ ಇಳಿಸುವದು
ಲಘಿಮಾ - ಅತಿ ಕಡಿಮೆ (ಭಾರರಹಿತ) ಹಗುರಾಗುವದು
ಮಹಿಮಾ - ದೇಹವನ್ನು ಅತಿ ದೊಡ್ಡ (ಅನಂತವಾದ) ಗಾತ್ರಕ್ಕೆ ಹೆಚ್ಚಿಸುವದು
ಗರಿಮಾ - ಅತಿ (ಅನಂತದಷ್ಟು) ಭಾರವಾಗಿರುವದು
ಪ್ರಾಪ್ತಿ - ಎಲ್ಲ ಸ್ಥಳಗಳಿಗೂ ಅನಿರ್ಬಂಧಿತವಾದ ಪ್ರವೇಶ ದೊರಕಿಸಿಕೊಳ್ಳುವದು
ಪ್ರಾಕಾಮ್ಯ - ಇಷ್ಟಪಟ್ಟಿದ್ದನ್ನು ದೊರಕಿಸಿಕೊಳ್ಳುವದು
ಈಶಿತ್ವ - ಎಲ್ಲದರ ಮೇಲೆ ಸಂಪೂರ್ಣವಾದ ಒಡೆತನ ಹೊಂದುವದು
ವಶಿತ್ವ - ಎಲ್ಲವನ್ನು ಜಯಿಸುವ ಶಕ್ತಿ ಹೊಂದುವದು
ಯೋಗಮಾರ್ಗದಲ್ಲಿ ಹಠಯೋಗವನ್ನು ಹಿಡಿದವರು ಈ ಸಿದ್ಧಿಗಳನ್ನು ಪಡೆಯುತ್ತಾರೆಂದು ನಂಬಿಕೆ. [ಹನುಮಾನ್ ಚಾಲೀಸ ಪಠಿಸುವವರು ಈ ಅಷ್ಟಸಿದ್ಧಿಗಳನ್ನು ಹನುಮಂತ ನೀಡುವನೆಂದು ನಂಬುತ್ತಾರೆ. ಹಾಗಾಗಿಯೇ ನಾವು ಹನುಮಾನ್ ಚಾಲೀಸ್ ಪಠಿಸುವುದಕ್ಕೆ ಹೇಳಿದ್ದೇವೆ.]
’ಅಣಿಮಾ’, ’ಮಹಿಮಾ’ ಮೊದಲಾದವು(ಯೋಗಸೂತ್ರ 3.44,45)ಗಳ ಜೊತೆಗೆ. ಆ ಕೃತಿಯಲ್ಲಿ ಹೆಸರಿಸಿರುವ ಇನ್ನೂ ಕೆಲವು ಸಿದ್ಧಿಗಳೆಂದರೆ: ಆಲೋಚನೆಯನ್ನು ಗ್ರಹಿಸುವುದು, ನೋಟದಿಂದ ಕಣ್ಮರೆಯಾಗುವುದು, ಅಸದಳ ಶಕ್ತಿಯನ್ನು ಹೊಂದುವುದು, ಪಶು-ಪಕ್ಷಾದಿಗಳ ಭಾಷೆಯನ್ನು ಅರಿತುಕೊಳ್ಳುವುದು, ಮೊದಲಾದವು.
ಪ್ರಕಾಂಡ ಮನೋವಿಜ್ಞಾನಿಯಾಗಿದ್ದ ಪತಂಜಲಿಯು ಇವುಗಳನ್ನೆಲ್ಲ ವಿವರಿಸಿದರೂ ಅವುಗಳನ್ನು ಹೊಂದುವುದರಲ್ಲಿ ಆಸಕ್ತಿಯನ್ನು ತಳೆಯಬಾರದೆಂದು ಯೋಗಾಸಕ್ತರಿಗೆ ಎಚ್ಚರಿಸುತ್ತಾನೆ. ಯಾಕೆಂದರೆ ಅವುಗಳ ಪ್ರಲೋಭನೆ ಅಥವಾ ಸೆಳೆತಕ್ಕೆ ಸಿಕ್ಕ ಯೋಗಾಭ್ಯಾಸಿಯು ಅವನ ಗುರಿಯಾದ ’ಕೈವಲ್ಯ’ ಅಥವಾ ’ಮುಕ್ತಿ’ಯನ್ನು ಪಡೆಯುವ ಮಾರ್ಗದಿಂದ ವಿಮುಖನಾಗಿಬಿಡುತ್ತಾನೆ. ಆದರೆ ಒಮ್ಮೆ ’ಕೈವಲ್ಯ’ ಸ್ಥಿತಿಯನ್ನು ಪಡೆದ ವ್ಯಕ್ತಿಯು ತನ್ನ ’ಪ್ರಾರಬ್ಧ ಕರ್ಮ’(ಈ ಜನ್ಮಕ್ಕೆ ಕಾರಣವಾದ ಕರ್ಮ)ಕ್ಕೆ ಅನುಸಾರವಾಗಿ ಇನ್ನೂ ಸ್ವಲ್ಪ ಕಾಲ ಜೀವಿಸಬಹುದು. ಈ ಸ್ಥಿತಿಯಲ್ಲಿ ಅವನು ಯಾವುದೇ ಪ್ರಮಾದವಿಲ್ಲದೆ ಈ ಶಕ್ತಿಗಳನ್ನು ಮಾನವಸಂತತಿಯ ಒಳಿತಿಗಾಗಿ ಬಳಸಬಹುದು.
ಇತ್ತೀಚೆಗಿನ ಸಾಧು-ಸಂತರಲ್ಲಿ ಭಗವಾನ್ ಶ್ರೀಧರ ಸ್ವಾಮಿಗಳು ಯೋಗ ಸಾಧನೆಯಿಂದ ಮೇಲೆ ಹೇಳಿದ ಅಷ್ಟಸಿದ್ಧಿಗಳನ್ನು ಪಡೆದುಕೊಂಡಿದ್ದರು ಎಂಬುದು ಹಲವರ ಅನುಭವಕ್ಕೆ ನಿಲುಕಿದ ವಿಷಯ. ಮಕ್ಕಳ ಸಮುದಾಯ ಅವರನ್ನು ಮುತ್ತಿಕೊಂಡು ಬಹಳ ಹೊತ್ತಾದರೆ ಮಕ್ಕಳ ಕುತೂಹಲವನ್ನು ನಿವಾರಿಸಿ ಮೈದಡವಿ, ಅವರೆಲ್ಲ ಅರೆಕ್ಷಣ ಆಚೀಚೆ ನೋಡುವುದರಲ್ಲಿದ್ದಾಗ ಶ್ರೀಧರರು ಅಲ್ಲಿಂದ ಬಹುದೂರ ಸಾಗುತ್ತಿದ್ದರಂತೆ.
ಕರಿಕಾನ್ ಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರದ ನಂತರ, ಶಿಥಿಲಗೊಂಡ ಮುರುಡೇಶ್ವರ ದೇವಸ್ಥಾನವನ್ನೂ ಜೀರ್ಣೋದ್ಧಾರ ಮಾಡಬೇಕೆಂದು ಅಂದಿನ ಭಕ್ತರು ಭಿನ್ನವಿಸಿದಾಗ, "ಮೂವತ್ತು ವರ್ಷಗಳ ತರುವಾಯ ಮುರುಡೇಶ್ವರ ಅತ್ಯಂತ ವೈಭಯುತ ಕಟ್ಟಡವನ್ನು ಪಡೆಯುತ್ತದೆ" ಎಂದು ಅಂದೇ ಅವರು ಹೇಳಿದ್ದರಂತೆ. ಅವರ ಚರಿತ್ರೆಯಲ್ಲಿ ಹೇಳಿರುವ ಸಾವಿರಾರು ಘಟನೆಗಳು ಅವರೊಬ್ಬ ಸಿದ್ಧ ಪುರುಷರು ಎಂಬುದನ್ನು ಸಾಬೀತುಪಡಿಸುತ್ತವೆ.
ನಾಲ್ಕೈದು ವರ್ಷಗಳ ಹಿಂದೆ ಬ್ರಹ್ಮೈಕ್ಯರಾದ ಸಖರಾಯಪಟ್ಟಣದ ಅವಧೂತರು ವ್ಯಕ್ತಿಯನ್ನು ನೋಡಿದಾಗ ಪೂರ್ವಾಪರಗಳನ್ನು ಹೇಳುತ್ತಿದ್ದರಂತೆ. ಹೀಗೆಯೇ, ಸಿದ್ಧ ಪುರುಷರ ಉದಾಹರಣೆಗಳು ಅನೇಕ. ಆದರೆ ಶಕ್ತಿಯನ್ನು ಸ್ವಾರ್ಥಕ್ಕಾಗಿ ಅವರು ಬಳಸಿಕೊಳ್ಳಲಿಲ್ಲ.
ಯೋಗದ ನಾಲ್ಕನೇ ಹಂತದಿಂದಲೇ ಬಹಳ ಬದಲಾವಣೆಗಳು ಗೋಚರಿಸುತ್ತವೆ. ಸಿದ್ಧಿಯನ್ನು ಕೈವಲ್ಯಕ್ಕಾಗಿ ಬಳಸುವ ಜನ ಅದನ್ನು ನಷ್ಟಮಾಡಿಕೊಳ್ಳುವುದಿಲ್ಲ, ಸಿದ್ಧಿಯನ್ನು ದುರುಪಯೋಗ ಮಾಡಿದ ಜನ ಕೈವಲ್ಯವನ್ನು ಹೊಂದಲು ಸಾಧ್ಯವಿಲ್ಲ.
ಈ ವಿಷಯಗಳು ನಮಗೆ ಗೊತ್ತಿಲ್ಲ. ನಮಗೆ ಈಗ ಅರ್ಹೆಂಟಾಗಿ ಅಣಿಮಾದಿ ಶಕ್ತಿಗಳನ್ನು ಪಡೆದುಕೊಳ್ಳುವ ತಹತಹ ಹುಟ್ಟಿದೆ. ನಾಳೆ ಪರಪ್ಪ ವನಕ್ಕೆ ಹೋದರೂ ಸೂಕ್ಷ್ಮ ಶರೀರಿಯಾಗಿ ಹೊರಗಡೆಗೆ ಬಂದು ಮತ್ತೆ ಮೂಲ ಶರೀರವನ್ನು ಪಡೆದು, ಸಾವಿರಾರು ಸಖಿಯರೊಡನೆ ’ಸುಖ’ವನ್ನು ಪಡೆಯಬಹುದು ಎಂಬುದು ನಮ್ಮ ಇರಾದೆ."
https://www.facebook.com/groups/1499395003680065/permalink/1633547803598117/
ಕದ್ದು ನೋಡುವ ಹಳದೀ ತಾಲಿಬಾನ್ ಬಳಗದ ಮಾಹಿತಿಗಾಗಿ-
’ಹಮರಿ ಹಕೀಮ್ ಚಂದ್’ ಎಂಬ ಬಿರುದನ್ನು ದಯಪಾಲಿಸಿ, ಅದರಿಂದಲೇ ತೃಪ್ತಿ ಪಟ್ಟುಕೊಂಡ ನಿಮಗೆಲ್ಲ ಬಹಳ ಕೃತಜ್ಞ. ಯಾವುದನ್ನು ಎಲ್ಲರೂ ಹೇಳಲಾಗದೋ, ಯಾವುದನ್ನು ಎಲ್ಲರಿಗೂ ಹೇಳುವುದು ಕಷ್ಟವಾಗುವುದೋ ಅದನ್ನು ಹೇಳಲು, ಆತ್ಮವಂಚನೆಯಿಲ್ಲದ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇನೆ.
ಸುರರು ಅಂದರೆ ದೇವತೆಗಳು ಮತ್ತು ಅಸುರರು ಅಂದರೆ ರಕ್ಕಸರು ಹಿಂದೆ ಒಂದೇ ಕುಟುಂಬದವರಂತೆ. ಅಸುರರನ್ನು "ಪೂರ್ವದೇವತಾ" ಎಂದೂ ಕರೆಯುವರಂತೆ. ದೈವ ಸೃಷ್ಟಿಯಲ್ಲಿ ಸೃಷ್ಟಿಕರ್ತನ ಇಚ್ಛೆಯಂತೆ ಪಾಶವೀ ಅಥವಾ ಅದಕ್ಕಿಂತ ಹೀನ ಕೃತ್ಯಕ್ಕಿಳಿದು ಅವರು ಅಸುರರಾದರು. ಪೂರ್ವದಲ್ಲಿ ದೇವತೆಗಳಾಗಿದ್ದುದರಿಂದ ಅವರಲ್ಲಿಯೂ ಕೆಲವು ಮಂತ್ರ ತಂತ್ರಗಳು, ಮಾಯಾವಿದ್ಯೆಗಳು ಉಳಿದುಕೊಂಡವು. ಯಾಕೆ ಅವರು ಅಸುರರಾದರು ಎಂಬುದಕ್ಕೆ ಉತ್ತರವನ್ನುನೀವೇ ಹುಡುಕಿಕೊಳ್ಳಿ.
ಅದೇರೀತಿಯಲ್ಲಿ ಇಂದು ಹಳದೀ ತಾಲಿಬಾನ್ ಎಂಬ ಪಡೆ ತಯಾರಾಗಿದೆ ಎಂದರೆ ತಪ್ಪಾಗಲಾರದೇನೋ. ಪೂರ್ವದಲ್ಲಿ ಒಂದೇ ಸಮಾಜವಾಗಿದ್ದ ತಾವು ಇಂದು ಸಮಾಜದ ಪ್ರತ್ಯೇಕ ಭಾಗವಾಗಿ ಗುರುತಿಸಿಕೊಳ್ಳಲು ಇಷ್ಟಪಟ್ಟು, ಹಾರುವ ಮೊಲದ ಮೂರೇ ಕಾಲುಗಳನ್ನು ಕಂಡು, ಅದನ್ನೇ ಸತ್ಯ ಎಂದಿರಿ. ಮೊಲ ಕುಳಿತಾಗಲೋ ನಿಂತಾಗಲೋ ಉಪಾಯವಾಗಿ ಎಣಿಸಿನೋಡುವ ವಿವೇಚನೆ ನಿಮ್ಮಲಿರಲಿಲ್ಲ; ಹೀಗಾಗಿ ನಾಲ್ಕನೇ ಕಾಲು ಕಾಣಲಿಲ್ಲ.ನಾಲ್ಕನೇ ಕಾಲು ಕಂಡವರು ಹೇಳಿದ್ದನ್ನು ನಂಬುವುದಕ್ಕೂ ನೀವು ಸಿದ್ಧರಿಲ್ಲ ಯಾಕೆಂದರೆ, ನೀವದನ್ನು ಪ್ರತ್ಯಕ್ಷ ಕಾಣಲಿಲ್ಲ.
ಯಾವುದು ಧರ್ಮದ ಹೆಗ್ಗುರುತಾಗಿರಬೇಕಾಗಿತ್ತೋ ಅದು ಕಾಮದ ಕೂಪವಾದಾಗ ಅದನ್ನು ನಿಗ್ರಹಿಸುವ ಯೋಚನೆ ನಿಮಗೆ ಬರಲೇ ಇಲ್ಲ. ಇಂದು ನೀವೆಲ್ಲಿದ್ದೀರಿ ಎಂದು ನಿಮ್ಮ ಎದೆ ತಟ್ಟಿ ಕೇಳಿಕೊಳ್ಳಿ; ಯಾಕೆಂದರೆ ಆ ದಿನ ಸನಿಹ ಬಂದಿದೆ. ಸಮಾಜವನ್ನೇ ಒಂದು ಶಕ್ತಿ ಒಡೆಯುತ್ತದೆ ಎಂದಾದರೆ ಅದನ್ನು ಅಸುರೀಶಕ್ತಿ ಎನ್ನದಿರಲಾದೀತೇ? ನಿಮ್ಮೆಲ್ಲರ ಇಚ್ಛೆಯಂತೆ ನಮ್ಮ ಸಮಾಜ ಮಾನಸಿಕವಾಗಿ ಹೋಳಾಗಿದೆ; ಅಧಿಕೃತವಾಗಿ ಪ್ರತ್ಯೇಕವಾಗುವುದೊಂದು ಬಾಕಿ ಇದೆ.
ಅನ್ಯ ಸಮುದಾಯದ ಜನರಿಗೆ ಈ ವಿಷಯ ನಗೆಪಾಟಲಿಗೆ ಕಾರಣವಾದೀತು; ಆದರೂ ಮಡಿಅಲ್ಲಿಬಿದ್ದ ಬೆಂಕಿಯ ಉಂಡೆಯನ್ನು ಹಾಗೇ ಇರಿಸಿಕೊಳ್ಳಲು ಸಾಧ್ಯವಾಗುವುದೇ? ಅದು ಹೊರಬರಲೇಬೇಕು. ಒತ್ತಾಯಕ್ಕೆ ಬಸಿರಾದ ಹೆಣ್ಣು ಮತ್ತೆಲ್ಲೋ ಹಡೆಯಲೇಬೇಕು; ಹಡೆಯುವ ಮುನ್ನವೇ ಅಬಾರ್ಶನ್ ನಡೆಯಬಹುದು ಆ ಪ್ರಶ್ನೆ ಬೇರೆ. ಚಪ್ಪಲಿಯನ್ನು ಅದರ ಜಾಗದಲ್ಲೇ ಇರಿಸುವ ಬದಲು ’ವಾಸ್ತು ತಜ್ಞ’ರೆನಿಸಿಕೊಂಡ ಕೆಲವರ ಸಲಹೆಯ ಮೇರೆಗೆ ದೇವರ ಪೀಠದಲ್ಲಿಡುವವರೂ ಈ ಕಾಲದಲ್ಲಿದ್ದಾರೆ; ಯಾಕೆಂದರೆ ಕಂಡ ಕಂಡವರ ಸಲಹೆ ಕೇಳುವ ಆ ಜನ ವಿವೇಚನಾ ಶೂನ್ಯರಾಗಿರುತ್ತಾರೆ.
’ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು’ ಎಂಬ ಗಾದೆ ಹಿಂದೆಂದಿಗಿಂತ ಇಂದು ನನಗೆ ಮತ್ತು ನಮ್ಮಂತಹ ಜನರಿಗೆ ಸಮಾಜದ ವಿಷಯದಲ್ಲಿ ಸ್ಪಷ್ಟವಾಗಿ ಅರ್ಥವಾಗಿದೆ. ಹೆಚ್ಚಿಗೆ ಮಾತಮಾಡಿ ಮನಸ್ಸು ಹಾಳುಮಾಡಿಕೊಳ್ಳುವುದಕ್ಕಿಂತ, ವಿವೇಚನೆ ಇರಿಸಿಕೊಂಡು ವ್ಯವಹರಿಸಿ ಎಂದು ನಿಮ್ಮನ್ನು ಎಚ್ಚರಿಸುತ್ತಿದ್ದೇನೆ. ಮುಂದೆಂದೋ ಪಾಶ್ಚಾತ್ತಾಪ ಪಡುವ ಬದಲು ಇಂದೇ ಆ ಕೆಲಸ ಮಾಡಿ ಚಪ್ಪಲಿಯನ್ನು ಚಪ್ಪಲಿಯ ಗೂಡಿನಲ್ಲೇ ಇರಿಸಿ ಎಂಬುದು ನಮ್ಮ ಹೇಳಿಕೆ.
ಮುಂದಿನ ಕೆಲವು ದಿನಗಳ ಕಾಲ, ’ಹಮರಿ ಹಕೀಮ್ ಚಂದ್’ ಬರೆಯುವುದಿಲ್ಲ. ಆತ ಓಡಿಹೋದನೆಂದೋ, ಅವನಿಗೆ ಹಣ ಸಂದಾಯವಾಗಲಿಲ್ಲವೆಂದೋ ನೀವು ಭೇರಿ ಬಾರಿಸಿಕೊಂಡು ತಿರುಗಲಿಕ್ಕೆ ನಮ್ಮ ಅಭ್ಯಂತರವೇನೂ ಇರುವುದಿಲ್ಲ. ಮರಳಿ ಬಂದು ಮತ್ತೆ ವಿಷಯಗಳು ಮುನ್ನಡೆದಾಗ "ಹಣ ಕೊಟ್ಟರು ಮತ್ತೆ ಬಂದ" ಎನ್ನಲು ನೀವು ಮರೆಯುವುದಿಲ್ಲ. ಹಣತೆಗೆದುಕೊಂಡು ಶಂಖ ಹೊಡೆಯಲು ಮಂಚನಬೆಲೆ, ಅತ್ತಿಬೆಲೆ, ಸೂಲಿಬೆಲೆಗಳಿಂದ ಬಂದ ಜನ ನಾವಲ್ಲ.
ಸಮಾಜದ ಕಷ್ಟವನ್ನು ಕಂಡು, ನೊಂದ ಮನಸ್ಸಿನ ಜನಸಂದೋಹದ ದನಿಗಷ್ಟು ದನಿಗೂಡೊಸುವ ಸಲುವಾಗಿ ಜೊತೆಯಾದ ಜನ ನಾವೇ ಹೊರತು ಯಾರೋ ಸರ ಅಡವಿಟ್ಟು ನೀಡಿದ ಹಣಕ್ಕಾಗಿ ಬಾಯ್ದೆರೆದು ಕುಳಿತುಕೊಂಡವರಲ್ಲ. ಸೂಟ್ ಕೇಸ್ ಸಲ್ಲಿಸುವ ಪ್ರಮೇಯವೇ ಇಲ್ಲದ ಕಾರಣ, ಕೆಲವರು ಅಂತಹ ಪಾಪದ ಹಣದ ಅಗತ್ಯವನ್ನು ಅಂಟಿಸಿಕೊಂಡ ಹಾಗೆ ಬೇಡುವ ಬಡತನವೂ ನಮಗಿಲ್ಲ. ನಮ್ಮ ಪಾಡಿಗೆ ಉಂಡುಟ್ಟು ಸುಖವಾಗಿರುವ ನಮಗೆ ಸಮಾಜಕ್ಕಂಟಿದ ಶನಿ ತೊಲಗಿದರೆ ಸಾಕು ಎಂಬುದಷ್ಟೆ ಉದ್ದೇಶ. ’ಕುರಿಗಳನ್ನು ಕೇಳಿ ಮಸಾಲೆ ಅರೆಯುತ್ತಾರೆಯೇ?’ ಎಂಬ ಮಾತಿನಂತೆ ನಿಮ್ಮನ್ನು ಕೇಳಿ ನಡೆಯಬೇಕಾದ ಅನಿವಾರ್ಯತೆ ನಮಗಿಲ್ಲ.
ನಿಮ್ಮ ಹಮ್ಮು ಅಹಂಕಾರಕ್ಕೆ ನಮ್ಮ ಬಳಗದ ಉದಾಸೀನತೆಯೇ ಮದ್ದು ಎಂಬುದನ್ನು ಸ್ಪಷ್ಟವಾಗಿ ನಿವೇದಿಸುತ್ತ, ಕೆಲವು ದಿನ ಮಜಾ ತೆಗೆದುಕೊಳ್ಳಿ ಎಂದು ಹೇಳುತ್ತಿದ್ದೇನೆ, ನಾನು ಬರೆಯದಿದ್ದರೂ ಓದುತ್ತಿರುವುದಿಲ್ಲ ಎಂದುಕೊಳ್ಳುವುದೇನೂ ಬೇಡ ಎಂಬ ಸಂದೇಶವನ್ನೂ ನೀಡಲು ಮರೆಯುವುದಿಲ್ಲ. ನಡುನಡುವೆ ಸಮಯವಾದರೆ ಬರೆಯಬಾರದು ಎಂದೇನೂ ಇಲ್ಲ.