Tuesday, July 14, 2015

July 2015

July 2
https://www.facebook.com/groups/1499395003680065/permalink/1635431756743055/

ಮೊಟ್ಟೆಯ ಆಮ್ಲೆಟ್ ಕಟ್ಟಿಸಿಕೊಂಡು ಬರುವ ಭಕ್ತರಿಗೆ ಕಟ್ಟ ಕಡೆಯವರೆಗೂ ಆಶೀರ್ವಾದ
"ನೀವು ಐದಾರು ದಿನಗಳಿಂದ ತುಮರಿಯ ಮೂಲಕ ನಮ್ಮ ಮಾತನ್ನು ಕೇಳಲಿಲ್ಲ. ತುಮರಿ ರಜಾ ಬರಹಕ್ಕೆ ಹೊಡೆದಿದ್ದನಲ್ಲ? ಇಂದು ಮತ್ತೆ ಬೊಗಳಲು ಆರಂಭಿಸಿದ್ದಾನೆ, ಕೇಳಿ.
ಬೊಗಳಲು ಎನ್ನುವುದಕ್ಕೆ ಕಾರಣವಿದೆ. ನಮ್ಮ ವಿರೋಧಿಗಳು ನಿನ್ನೆ, ಇಂದು ಎಲ್ಲ ದಕ್ಷಿಣ ಕನ್ನಡದ ಕಡೆಗೆ ತನಿಖೆ ನಡೆಸುವುದಕ್ಕೆ ಮಾಹಿತಿ ನೀಡುತ್ತಿದ್ದಾರಲ್ಲ. ಅವರು ಇಂದು ದಡಕ್ಕಲ್ ಕಡೆಗೆ ಹೋಗಿದ್ದರು. ಅಲ್ಲಿನ ನಮ್ಮ ಶಿಷ್ಯ ಇದ್ದಾನಲ್ಲ. ಅವ ಅವರನ್ನು ಆರಕ್ಷಕರೆದುರೇ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. "ಸಾಕಿಕೊಂಡ ನಾಯಿಗಳೂ ಕಚ್ಚುತ್ತವೆ" ಎಂದು ಹೇಳಿದ್ದಾನಂತೆ. ಪರವಾಗಿಲ್ಲ, ನಮ್ಮ ತರಬೇತಿ ಅಷ್ಟರಮಟ್ಟಿಗಿನ ’ಸಂಸ್ಕಾರ’ವನ್ನು ಕೊಟ್ಟಿದೆ ಅಂತಾಯ್ತು.
ಇನ್ನೊಂದೇನೆಂದರೆ ಆ ನಮ್ಮ ಶಿಷ್ಯನಿಗೂ ತಲೆಯೊಳಗೆ ಇರೋದು ಕೊಳೆತ ಆಲೂಗಡ್ಡೆ ಅಂತ ನಮಗೆ ಗೊತ್ತಿಲ್ಲವೆ? ನಾವು ನಮ್ಮ ಹಳದೀ ತಾಲಿಬಾನ್ ಬಳಗದಲ್ಲಿ ಯಾವ ಶಿಷ್ಯ ಹೇಗೆ ಎಂದು ನೋಡಿಕೊಂಡೇ ವ್ಯವಹರಿಸುತ್ತೇವೆ. ಟ್ಯಾಂಕಿನಲ್ಲಿ ಪೆಟ್ರೋಲ್ ಎಷ್ಟಿದೆಯೆಂದು ಕಡ್ಡಿ ಹಾಕಿ ನೋಡಿಯೇ ಮುಂದೆ ಗಾಡಿ ಓಡಿಸುವುದು ನಾವು. ಹಾಗಾಗಿಯೇ ಅಲ್ಲವೇ ಇಲ್ಲಿಯವರೆಗೆ ನಮ್ಮನ್ನು ಏನೂ ಮಾಡದೆ ಬಿಟ್ಟಿದ್ದು? ನಮ್ಮ ಜಾಗದಲ್ಲಿ ಯಾರೋ ಬಡಪಾಯಿ ಇದ್ದಿದ್ದದ್ರೆ ಇಷ್ಟೊತ್ತಿಗೆ ಚಡ್ಡಿ ಅಲ್ಲಲ್ಲ ಬುಲ್-ಪೀನ ಹರಿದು ಶ್ಮಶಾನಕ್ಕೆ ತೋರಣ ಕಟ್ಟುತ್ತಿದ್ದರು. ನಮಗೇನೋ ಕೈಯಿದೆ, ಕೈಯಲ್ಲೂ ಮೊದಲು ಕಾಣಿಕೆ ದೇಣಿಗೆ ಅಂತ ಹೊಡ್ಕಂಡಿರುದು ಸಾಕಷ್ಟಿದೆ, ತಳ್ತೇವೆ ನಡೆಯುತ್ತದೆ.
ಆ ನಮ್ಮ ಶಿಷ್ಯ ಎಲ್ಲಾದರೂ ಚೂರುಪಾರು ತಲೆ ಉಪಯೋಗಿಸಿ, "ಹೌದಾ? ನಮ್ಮ ಮನೆಯಲ್ಲಿ ಎಷ್ಟು ಹೊತ್ತಿಗೆ ಎಲ್ಲಿ ಏನು ನಡೆಯಿತು? ಆಗ ನಾವೆಲ್ಲ ಎಲ್ಲಿ ಇದ್ದೆವು? ಎನ್ನುವಂತಹ ಪ್ರಶ್ನೆಗಳನ್ನು ಅವರಲ್ಲೇ ಕೇಳಿ ತನ್ನ ಸಂಶಯವನ್ನು ಪರಿಹರಿಸಿಕೊಳ್ಳುತ್ತಾನೇನೋ ಎಂಬ ಅನುಮಾನ ನಮ್ಮನ್ನು ಕಾಡುತ್ತಿತ್ತು ಮಾರಾಯರೆ. ಸದ್ಯಕ್ಕೆ ಅವ ಅಷ್ಟು ತಲೆ ಓಡಿಸಲಿಲ್ಲ. ನಮ್ಮಲ್ಲಿ ಮೆದುಳನ್ನು ಅಡವು ಇಟ್ಟವರ ಕತೆಗಳೆಲ್ಲ ಇಷ್ಟೇ. ಅಲ್ಲಿ ನಮಗೆ ಬೇಕಾದಂತೆ ಕೆಲಸ ನಡೆಯುತ್ತದೆ.
ಜನಸಾಗರದಲ್ಲಿ ನಮ್ಮ ಪ್ರಬಲ ವಿರೋಧಿಗಳಲ್ಲಿ ಗೋಳಿ ವೀರಪ್ಪ ಅಂತ ಒಬ್ಬ ಇರೋದು ಗೊತ್ತಾಗಿದೆ. ಎಲ್ಲೋ ಹೆಸರು ಕೇಳಿದ ಹಾಗಿದೆಯಲ್ಲಾ ಎಂದುಕೊಂಡೆವು...ಆಗ ನೆನಪಾಯ್ತು. 1993-94ರಲ್ಲಿ ಈ ಸೀಟಿಗೆ ಬರುವಾಗ ಅವರ ಕಾಲಿಗೆ ಬಿದ್ದಿದ್ದು. ನಮ್ಮ ಆಯ್ಕೆಯ ಸಮಿತಿಯ ಅಧ್ಯಕ್ಷನಾಗಿ ಆತ ಕಾರ್ಯನಿರ್ವಹಿಸಿದ್ದು ನೆನಪಾಗುತ್ತಿದೆ. "ಊರಮನೆ ಮನುಷ್ಯ, ಒಳ್ಳೆ ಹುಡುಗ, ಇವನನ್ನೇ ಆಯ್ಕೆ ಮಾಡೋಣ" ಎಂದು ಸಿಕ್ಕಾಪಟ್ಟೆ ಒತ್ತಡ ಹಾಕಿದ ಅದೇ ಮನುಷ್ಯ ಇಂದು ನಮ್ಮ ವಿರೋಧಿ ಅಂದರೆ ಎಂತಹ ವಿಪರ್ಯಾಸವಲ್ಲವೇ?
ಮೊನ್ನೆ ನಮ್ಮ ವಿರೋಧಿಗಳು ಅಲ್ಲಿ ಸಭೆ ಸೇರಿಸಿದ್ದರಲ್ಲ, ಅಲ್ಲಿಗೆ ಅವನೂ ಹೋಗಿದ್ದನಂತೆ. ನಾವು ತಡಮಾಡಲಿಲ್ಲ, ನಮ್ಮ ಹಳದೀ ತಾಲಿಬಾನಿನ ಸ್ಥಳೀಯ ಘಟಕಕ್ಕೆ ತಿಳಿಸಿ, 15-20 ಜನರನ್ನು ಒಟ್ಟುಮಾಡಿಕೊಂಡು ಧಮಕಿ ಹಾಕಲು ಹೇಳಿದೆವು; ಯಥಾಪ್ರಕಾರ ನಾವಿ ನಿರ್ದೇಶಿಸಿದಂತೆ ನಮ್ಮ ಅಡ್ಡಗೇಟನ್ನು ಸರಿಸಿಟ್ಟುಕೊಂಡು ಅಷ್ಟೇ ಜನರ ಗುಂಪು, ವೀರಪ್ಪ ಮೀಟಿಂಗಿಗೆ ಹೋದ ಸಮಯದಲ್ಲೇ ವೀರಪ್ಪನ ಮನೆಗೆ ನುಗ್ಗಿತು.
ಅವರ ಮನೆಯಲ್ಲಿದ್ದ ಹೆಂಗಸರನ್ನೆಲ್ಲ ಬೆದರಿಸಿ, "ಯಾಕೆ ಮೀಟಿಂಗಿಗೆ ಹೋಗಬೇಕಾಗಿತ್ತು? ನಮ್ಮ ಗುರುಗಳನ್ನು ವಿರೋಧಿಸಬಾರದು ಎಂದು ತಿಳಿಯುವುದಿಲ್ಲವೇ? ಇವತ್ತೇನೋ ಬಿಟ್ಟಿದ್ದೇವೆ, ಇನ್ನು ಮುಂದೆ ಹೀಗೇ ಮಾಡಿದರೆ ಪರಿಸ್ಥಿತಿ ನೆಟ್ಟಗಿರಲಿಕ್ಕಿಲ್ಲ" ಎಂದು ಜೋರಾಗಿ ಧಮಕಿ ಹಾಕಿದ್ದಾರೆ.
ನಮ್ಮ ವಿರುದ್ಧ ಯಾರೇ, ಎಲ್ಲೇ ಒಂದು ಮಾತನಾಡಿದರೂ ನಮಗೆ ಸುದ್ದಿ ಗೊತ್ತಾಗುತ್ತದೆ. ಅದಕ್ಕೆ ತಕ್ಷಣ ನಮ್ಮ ನಿರ್ದೇಶನ ಹೋಗುತ್ತದೆ. ನಾವು ಕಾವಿ ಧರಿಸಿದ್ದೇವೆ ಅಂದರೆ ಕೈಗೆ ಬಳೆ ಹಾಕಿಕೊಂಡಿದ್ದೇವೆ ಅಂತ ಅರ್ಥವೇ? ಕೈಗೆ ಬಳೆತೊಟ್ಟವರೇ ಈ ಕಾಲದಲ್ಲಿ ಎಷ್ಟೆಲ್ಲ ಸಾಧನೆ ಮಾಡ್ತಾರೆ. ಹಾಗಾಗಿಯೇ ಕೈಗ ಬಳೆ ಹಾಕಿದವರಲ್ಲಿ ಬಹಳ ಜನರನ್ನು ನಾವು ಜಾಸ್ತಿ ಮೆಚ್ಚುತ್ತೇವೆ. ಮೆಚ್ಚುಗೆಯನ್ನು ತೋರಿಸಲು ಏಕಾಂತ ದರ್ಶನ ನೀಡುತ್ತೇವೆ.
ಎಲಾ ವೀರಪ್ಪ, ಪೊಗರು ನೋಡಿ, ಬಳೆಹಾಕಿದವರ ’ಸಬಲೀಕರಣ’ಕ್ಕೆ ಮುಂದಾದ ನಮ್ಮ ಕೈಗೇ ಬಳೆತೊಡಿಸಿ ಕರೆದೊಯ್ಯುವದಕ್ಕೆ ವ್ಯವಸ್ಥೆ ಮಾಡುತ್ತಿರುವವರನ್ನು ಬೆಂಬಲಿಸುವುದೆಂದರೇನು? ಯಾಕೆ ಹಾಗೆ ತಲೆ ಓಡಿಸಬೇಕು? ಅಧಿಕಾರ ಕೊಟ್ಟವ ಕೋಡಂಗಿ, ಇಸಗಂಡವ ವೀರ್ಯಭದ್ರ ಅಂತ ಗೊತ್ತಿಲ್ಲವೇ? ಸೀಟಿಗೆ ಬರೋದಕ್ಕಾಗಿ ನಾವು ಅವನ ಕಾಲಿಗೆ ಬಿದ್ದ ಹತ್ತು ಪಟ್ಟು ಸೀಟಿಗೆ ಬಂದ ಮೇಲೆ ಅವನೇ ನಮ್ಮ ಕಾಲಿಗೆ ಬಿದ್ದಿದ್ದಾನೆ ಬಿಡಿ; ಯಾಕೆಂದರೆ ನಾವೆಂದರೆ ಯಾರು? ಶ್ರೀಸಂಸ್ಥಾನ-ಜಗದ್ಗುರು ಶೋಭರಾಜಾಚಾರ್ಯ ಹಾವಾಡಿಗೇಶ್ವರ ಸುರತರತಿ ಮಹಾಸ್ವಾಮಿಗಳು.
ನಮ್ಮಲ್ಲಿ ಯಮ, ನಿಯಮ, ಅಸನ ಎಲ್ಲಾ ಮಾಡ್ತಾ ಕೂತ್ಕಳೋದಿಲ್ಲ, ಏನಿದ್ರೂ ಸ್ಕೂಲಿನ ಆಯಮ್ಮ, ನಿಮ್ಮಮ್ಮ, ನಿಮ್ಮಮ್ಮನ ಅಮ್ಮ ಯಾರಿದ್ದರೂ ಪರವಾಗಿಲ್ಲ, ನಡೀಲಿಕ್ಕೆ ಬರ್ತದೆ ಅಂತಾದ್ರೆ ಕರ್ಕೊಂಡು ಬನ್ನಿ, ಏಕಾಂತ ಗ್ಯಾರಂಟಿ! ಯಾಕೆಂದ್ರೆ....ಯಾಕೆಂದ್ರೆ.....ಯಾಕೆಂದ್ರೆ ನಮಗೀಗ ಹೊಸಬರು ಯಾರೂ ಸಿಗ್ತಾ ಇಲ್ಲ. ಇರುವವರ ಜೊತೆ ಮಾಡಿದ್ದೇ ಮಾಡಿ ಬೇಜಾರು.....ಅದೇ ಸೂರ್ಯ-ಅದೇ ಚಂದ್ರ. ಕೆಲಸ ನಡೀತಾ ಇರ್ಬೇಕು. ಮಂಚ ಕಾಲೀ ಬೀಳಬಾರ್ದು.
ನಮ್ಮ ಬಾವಯ್ಯಂಗೆ ಕೋಳಿಮೊಟ್ಟೆ ಆಮ್ಲೇಟ್ ಅಂದರೆ ತುಂಬ ತುಂಬ ಇಷ್ಟ. ಮಂಜ ಭಟ್ಟನ ಎದುರಿಗೆ ಒಂದ್ಸಲ ಎರಡುಮೂರು ಎಗ್ ಆಮ್ಲೆಟ್ ತಿಂದುಬಿಟ್ಟಿಡ್ನಂತೆ. ಆಮೇಲೆ ನಾವು ಹೇಳಿದೆವು,"ಯಾಕೋ ಬಾವ ಹಾಗ್ಮಾಡ್ದೆ? ನಾಳೆ ಊರಲ್ಲೆಲ್ಲ ಪ್ರಚಾರ ಮಾಡೋದಿಲ್ವೆ ಅವನು? ಇನ್ಮೇಲೆ ತಿನ್ನೋದಾದ್ರೆ ಪಾರ್ಸೆಲ್ ತರ್ಸಿಬಿಡು. ಯಾರೋ ಹೇಳ್ತಾರೆ ಅಂತ ಬಿಡಲಿಕ್ಕಾಗ್ತದ್ಯೇ? ನಮಗೆ ಬೇಕಾದದ್ದನೆಲ್ಲ ಪಡೆದುಕೊಳ್ಳಲೇಬೇಕು, ನಮಗೆ ಬೇಕಾದ ಹಾಗೆ ಬದುಕಬೇಕು. ನಾವು ಆಳಲಿಕ್ಕೆ ಇರೋರು, ಆಳಿಸಿಕೊಳ್ಳಲಿಕ್ಕೆ ಇರೋರಲ್ಲ, ಅರ್ಥವಾಯ್ತಲ್ಲ?"
ಅಲ್ಲಿಂದೀಚೆಗೆ ನಮ್ಮ ಬಾವಯ್ಯ ನಂದಿನಿ ಡೀಲಕ್ಸ್ ಗೆ ಫೋನ್ ಮಾಡಿ ಪಾರ್ಸೆಲ್ ತರಿಸೋದಕ್ಕೆ ಆರಂಭ ಮಾಡಿಕೊಂಡ. ನಮಗೂ ಎಗ್ ಆಮ್ಲೆಟ್ ಬಹಳ ಇಷ್ಟ. ಜೊತೆಗೆ ಇನ್ನೂ ಕೆಲವು ರೀತಿಯ ಮಾಂಸವೂ ಸಹ. ಚಾತುರ್ಮಾಸದಲ್ಲಿ ಮಾತ್ರ ಯತಿಗಳು ಮಾಂಸ ತಿನ್ಬಾರ್ದು ಎಂದು ಹೊರಡಿಸಿದ್ದೇವೆ ನಾವು. ಅದರರ್ಥ ಉಳಿದ ಕಾಲದಲ್ಲಿ ಸನ್ಯಾಸಿಯಾದವನೂ ಮಾಂಸ ತಿನ್ನಬಹುದು ಅಂತ. ಮಾಂಸ ತಿನ್ಬಾರ್ದು, ಮದ್ಯ ಸೇವಿಸಬಾರದು, ಮಾನಿನಿಯರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳಬಾರದು ಎಂಬ ನಿಯಮಗಳು ನಮಗಂತೂ ಚಾತುರ್ಮಾಸದಲ್ಲೂ ಸಹ ಅಪ್ಲೈ ಆಗುವುದಿಲ್ಲ.
ಹಿಂದೆ ದೇವತೆಗಳೇ ಸುರಾಪಾನ ಮಾಡಿದ್ರಂತೆ. ಇಂದು ಈ ಹುಲುಮಾನವ ಲೋಕದಲ್ಲಿ ಸುರಾಪಾನ ಮಾಡದ ಜನರಿಗೆ ಬೆಲೆಯೇ ಇಲ್ಲ. ಲೈಫ್ ಈಸ್ ಶಾರ್ಟ್-ಎಂಜಾಯ್ ಟು ದಿ ಬೆಸ್ಟ್ ಅನ್ನೋಹಾಗೆ ಜೀವನ ಚಿಕ್ಕದು; ಅದನ್ನು ಅತ್ಯಂತ ರಸಿಕರಾಗಿ ಅನುಭವಿಸಬೇಕು ಎಂಬುದೇ ನಮ್ಮ ಧ್ಯೇಯ. ಯಾರೋ ಹೇಳಿದ್ದಾರೆ ಅಂತ ಮೂಗು ಮುಚ್ಚಿಕೊಂಡು ತಪಸ್ಸು ಮಾಡೋದಕ್ಕೆ ನಮಗೆಂತ ತಲೆ ಕೆಟ್ಟಿದ್ಯೇ? ಎಲ್ಲರಂತೆ ಉಪ್ಪು-ಖಾರ ತಿನ್ನೋ ದೇಹ, ಸಪ್ಪಗಿರು ಅಂದುಬಿಟ್ರೆ ಹೇಗೆ?
ನಿಮಗೇನ್ ಬೇಕು? ಮಂತ್ರಾಕ್ಷತೆ ಬೇಕು. ಕೆಲವರಿಗೆ ಫೈನಾನ್ಸ್ ಬೇಕು, ಇನ್ನು ಕೆಲವರಿಗೆ ಹೆಣ್ಣು ಬೇಕು, ಇನ್ನೂ ಕೆಲವರಿಗೆ ರಾಜಕೀಯದ ಕೆಲಸ ಆಗಬೇಕು, ಚಿಲ್ಲರೆ ಜನರಿಗೆ ಸರಕಾರಿ ನೌಕರಿ ವರ್ಗಾವರ್ಗಿ, ವ್ಯಾಜ್ಯ ನಿವಾರಣೆ ಇಂತದ್ದೆಲ್ಲ. ಅದನ್ನೆಲ್ಲ ನಾವು ಮಾಡ್ತೇವೆ. ಹಳದೀ ತಾಲಿಬಾನಿನ ಬೇಟೆ ನಾಯಿಗಳನ್ನು ಸಾಕಿಕೊಂಡಿಲ್ಲವೇ? ಅವು ಹೆಸರಿಗೆ ನಾಯಿಗಳಷ್ಟೆ, ಶರೀರದಲ್ಲಿ ಆನೆಗಳು. ಅವುಗಳನ್ನು ನೋಡಿಕೊಳ್ಳುವುದಕ್ಕೆ "ನಾಯಿ ಮಾವುತ"ರಿದ್ದಾರೆ. ನಾಯಿ ಮಾವುತರಿಗೆ ಹೆಚ್ಚಿನ ಸಂಬಳ, ಕಾರು ಇತ್ಯಾದಿಯೆಲ್ಲ ಕೊಟ್ಟಿದ್ದೇವೆ.
ನಾವು ಎಲ್ಲದಕ್ಕೂ ಸಿದ್ಧ; ಬೆಂಗಳೂರಿನ ಆಟೋ ಬೆನ್ನಮೇಲೆ ಬರೆದಿರ್ತದಲ್ಲ-’ಸ್ನೇಹಕ್ಕೂ ಬದ್ಧ, ಸಮರಕ್ಕೂ ಸಿದ್ಧ’ ಅಂತ, ನಾವು ಹಾಗೇ. ನಮ್ಮಿಂದ ಏನಾದರೂ ಬೇಕಾದರೆ ಬನ್ನಿ, ನಾಲ್ಕು ಗೋಡೆ ಮಧ್ಯೆ ಕುಳಿತು ಮಾತಾಡೋಣ., ಅದು ಬಿಟ್ಟು ನಿಮಗೆ ಬೇಕಾದಲ್ಲೆಲ್ಲ ಮೀಟಿಂಗು ಪಾಟಿಂಗು ಅಂದ್ರೆ ಅಷ್ಟೆ, ನಮ್ಮ ಹಳದೀ ತಾಲಿಬಾನ್ ಕಳಿಸಿ ನಿಮ್ಮನ್ನೆಲ್ಲ ಉಡಾಯಿಸಿಬಿಡ್ತೇವೆ ನಾವು. ಯಾಕೆಂದ್ರೆ...ಯಾಕೆಂದ್ರೆ....ಯಾಕೆಂದ್ರೆ ನಮ್ಮದು ವೀರ್ಯಸನ್ಯಾಸ.
ಸಮಾಜದಲ್ಲಿ ಎಂಬತ್ತು ಪರ್ಸೆಂಟ್ ಜನರಿಗೆ ಈಗ ನಮ್ಮ ಅಸಲೀಯತ್ತು ಗೊತ್ತಾಗಿಬಿಟ್ಟಿದೆ. ಅವರೆಲ್ಲ ಗುಪ್ತ ಮತದಾನದ ಮೂಲಕ ನಾವು ಸೀಟಿನಲ್ಲಿ ಇರಬೇಕೋ ಬೇಡವೋ ಎಂಬುದನ್ನು ತೀರ್ಮಾನಿಸಲು ಪ್ರಯತ್ನ ಮಾಡುತ್ತಿದ್ದಾರೆಂಬ ವದಂತಿ ಇದೆ. ರಕ್ತಬೀಜಾಸುರರು, ಎಲ್ಲೆಲ್ಲಿ ಹುಟ್ಟುತ್ತಾರೋ ಅವರಿಗೇ ಗೊತ್ತಾಗೋದಿಲ್ಲ.
ಈಗ ನಾವು ಕೊಡು-ತೆಕ್ಕೊಳ್ಳುವ ವ್ಯವಹಾರ ಮಾತಾಡೋಣ. ನಮ್ಮ ಪ್ರೀತ್ಯರ್ಥವಾಗಿ ನೀವು ಪಾದಪೂಜೆ, ಭಿಕ್ಷಾಸೇವೆ ಮಾಡೋದು ಮಾಡಿ; ಆದರೆ ಅದೆಲ್ಲದಕ್ಕಿಂತ ಹೆಚ್ಚಾಗಿ ನಮಗೆ ಹೊಸ ’ಪೀಸು’, ಹೊಸ ಬಾಟಲಿ, ಹೊಸ ಕಬಾಬ್ ಇಂತದ್ದನ್ನು ಗುಪ್ತವಾಗಿ ಸಪ್ಲೈ ಮಾಡಿದರೆ ಕಟ್ಟಕಡೆಯ ವರೆಗೂ ನಿಮಗೆ ನಮ್ಮ ಆಶೀರ್ವಾದವಿರುತ್ತದೆ. ನಮ್ಮ ’ತಪಸ್ಸಿ’ನ ಫಲ ಅಂದ್ರೆ ಅಷ್ಟಿಷ್ಟಲ್ಲ; ಇನ್ನೇನು ಕೆಲವೇ ದಿನಗಳಲ್ಲಿ ನಮ್ಮ ಪವಾಡಗಳ ಬಗ್ಗೆ ಹಳದೀ ತಾಲೀಬಾನ್ ಭಕ್ತರು ಪುಂಖಾನುಪುಂಖವಾಗಿ ಬರೆದದ್ದನ್ನು ನೀವು ಓದಬಹುದು.
ನಮ್ಮ ಪವಾಡಗಳ ಮಹಿಮೆ ತಾಳಲಾರದೆ ಎಲ್ಲೆಡೆ ಹನುಮಾನ್ ಚಾಲೀಸ್ ಪಠಿಸುತ್ತಿದ್ದಾರೆ, ಇನ್ನೂ ಕೆಲವರು ಪುಸ್ತಕ ಪರಿಕರ ನಮ್ಮ ಬಳಗದಿಂದಲೇ ಪಡೆದುಕೊಂಡು ಆದಿತ್ಯ ಹೃದಯ ಪಾರಾಯಣ ಹೋಮ ಎಲ್ಲ ಮಾಡ್ತಿದ್ದಾರೆ. ಯಾಕೆಂದರೆ ಬರೆದವರಿಗೇ ನಮ್ಮ ಪವಾಡಗಳು ಅಷ್ಟೆಲ್ಲ ’ಮಹಿಮಾನ್ವಿತ’ ಎಂಬುದು ಗೊತ್ತಿದೆ; ನಾಳೆ ಚಾತುರ್ಮಾಸದೊಳಗೇ ಎತ್ತಾಕ್ಕೊಂಡೋದ್ರೆ ಕಷ್ಟ ಅಂತ, ನಿರ್ವಿಘ್ನವಾಗಿ ಚಾತುರ್ಮಾಸ ಸಾಗಲಿ ಅಂತ ಹಾಗೆ ಮಾಡ್ತಿದ್ದಾರಂತೆ. ಈ ಸಲ ಚಾತುರ್ಮಾಸ ಬರೀ ಬೇಜಾರು-ಬೋರು. ಚಿಕ್ಕವರನ್ನು ಕರೆದರೆ ಅವರ ಅಮ್ಮಂದಿರೂ ಬರುತ್ತಾರಲ್ಲ? ಆಗಲೇ ನಾವು ಕಣ್ತುಂಬಾ ಬೇಕಾದ್ದನ್ನು ಸವಿಯಬಹುದು ಎಂಬ ಲೆಕ್ಕಾಚಾರದಲ್ಲಿ ಹಾಗೆ ಮಾಡಿದ್ದೇವೆ.
ನಮ್ಮ ಕುಲಪತಿ ಬಾವಯ್ಯನ ತಲೆ ಅಂದರೆ ತಲೆ; ಅವನಿರೋದಕ್ಕಾಗಿ ಇವತ್ತಿಗೂ ನಾವು ಇಲ್ಲಿದ್ದೇವೆ. ನಮ್ಮ ಪೂರ್ವಾಶ್ರಮದ ಮೂಲ ಹೆಸರಿನಲ್ಲಿ ಇರುವ ಪಾಸ್ ಪೋರ್ಟ್ ನಾವಿನ್ನೂ ಗುಪ್ತವಾಗಿ ಇರಿಸಿಕೊಂಡಿದ್ದೇವೆ; ತೋರಿಕೆಗೆ ಒಂದನ್ನು ಕೊಟ್ಟಿದ್ದೇವೆ. ನಮ್ಮ ಬಾವಯ್ಯನದು ಅಂತಾ ಪ್ರಶ್ನೆ ಬರಲಿಲ್ಲ, ಅವನಲ್ಲೇ ಇದೆ. ಸಮಯ ಬಂದರೆ ಒಟ್ಟಿಗೇ ಹಾರಬಹುದು ಎಂದುಕೊಂಡಿದ್ದೇವೆ-ಚಂದ್ರಶೇಖರ ಇಟ್ಲಂಗೆ ಕಾಣದ ಹಾಗೆ.
ಪ್ರವಚನ ಬಾಳ ಉದ್ದ ಆಯ್ತಲ್ವೇ? ನಾಳೆ ನಾಡಿದ್ದು ಮುಂದುವರಿಸೋಣ. ಬಾವಯ್ಯಂಗೆ ನಿನ್ನೆ ಇಂದು ಎಗ್ ಆಮ್ಲೇಟ್ ಸಿಗಲಿಲ್ಲ. ಯಾರಾದರೂ ನಮ್ಮಲ್ಲಿಗೆ ಬರುವವರು ಸಾಧ್ಯವಾದರೆ ತಂದುಕೊಟ್ಟು ಸೇವೆ ಮಾಡಿ, ಮಂತ್ರಾಕ್ಷತೆ ತೆಗೆದುಕೊಂಡು ಹೋಗಬಹುದು. [ಮಂತ್ರಾಕ್ಷತೆಗೇನು ಕೊರತೆಯಿಲ್ಲ, ಕ್ವಿಂಟಾಲ್ ಲೆಕ್ಕದಲ್ಲಿ ಅಕ್ಕಿ-ಅರಿಷಿಣ ಪುಡಿ ಹಾಕೋದು ಕಲ್ಸೋದೇ. ನಮ್ಮ ನಮೇಸ ಅದನ್ನೆಲ್ಲ ಮಾಡ್ತಾ ಇರ್ತಾನೆ]"

July 7 
https://www.facebook.com/groups/1499395003680065/permalink/1637348226551408/

ಅರೆ ಅರೆ ಸಾಗುತಿದೆ..ಕಾಮದ ಗಾಳಿಗೆ ಕಾಮಿಯ ದೋಣಿಯು ಎಲ್ಲಿಗೆ ಹೋಗುತಿದೆ?
ಯಕ್ಷಗಾನದಲ್ಲಿ ಸಭಾಲಕ್ಷಣ ಅಂತ ಪೂರ್ವರಂಗವೊಂದಿತ್ತು; ಅದರ ಅಗತ್ಯತೆ ನಮಗೀಗ ಕಾಣುತ್ತಿದೆ ಯಾಕೆಂದರೆ ಯಕ್ಷಗಾನವೆಂಬುದು ಕೇವಲ ನಾಟ್ಯವಲ್ಲ, ಕೇವಲ ಮಾತುಗಾರಿಜೆಯೂ ಅಲ್ಲ; ನರ್ತನ, ಗಾಯನ, ವಾದನ, ವಚನ-ವಾಚನ, ಆಂಗಿಕ, ಆಹಾರ್ಯ, ಸಾತ್ವಿಕ [ಸತ್ವವುಳ್ಳದ್ದು ಎಂದರ್ಥ] ಎಲ್ಲವನ್ನೂ ಒಳಗೊಂಡ ಅದೊಂದು ಸಮಗ್ರ ಕಲೆ. ಆ ಕಲೆಯ ರಸದೌತಣವನ್ನು ಅನುಭವಿಸಬೇಕಾದರೆ ಅದಕ್ಕೊಂದು ಮನೋಭೂಮಿಕೆ [ಮೂಡ್] ಸಿದ್ಧವಾಗಬೇಕು. ಆ ತಯಾರಿಗಾಗಿ ಪೂರ್ವರಂಗ ನಿರ್ವಹಿಸಲ್ಪಡುತ್ತಿತ್ತು.
ಯಕ್ಷಗಾನದಲ್ಲಿ ಪೂರ್ವರಂಗ ಇಲ್ಲದಿದ್ದರೂ ಒಂದೊಮ್ಮೆ ನಡೆದುಬಿಡಬಹುದು. ಆದರೆ ಯೋಗದಲ್ಲಿ ಹಾಗಲ್ಲ. ಯೋಗದ ಬಗ್ಗೆ ಇತ್ತೀಚೆಗೆ ಬಹಳ ತಲೆಕೆಡಿಸಿಕೊಂಡಿದ್ದೆ. ಯೋಗಿಗಳಿಗೂ ಹಾದರದ ಮನೋಭಾವ ಹೋಗುವುದಿಲ್ಲವೇ? ಎಂಬುದು ನನ್ನಲ್ಲಿದ್ದ ಪ್ರಶ್ನೆ. ಅದಕ್ಕೆ ಸಿಕ್ಕ ಉತ್ತರ ಮಾತ್ರ ಸುದೀರ್ಘ ಮತ್ತು ಸವಿಸ್ತಾರ. ಅದನ್ನು ಅರಗಿಸಿಕೊಂಡು ಕನ್ನಡದಲ್ಲಿ ಬರೆಯಲಿಕ್ಕೆ ಬಹಳ ಸಮಯ ಹಿಡಿಯಿತು.
ಯೋಗಕ್ಕೆ ಅಧಿಕಾರಿ ಯಾರು ಅಥವಾ ಯೋಗವನ್ನು ನಡೆಸುವ ಅರ್ಹತೆ ಯಾರಿಗಿದೆ ಎಂಬುದು ಬಹುದೊಡ್ಡ ಪ್ರಶ್ನೆ. ಮೇಲ್ನೋಟಕ್ಕೆ ಎಲ್ಲರೂ ಒಳ್ಳೆಯವರೇ ಮತ್ತು ಆಸ್ತಿಕರೇ ಆಗಿ ಕಾಣಿಸಬಹುದು. ಅನೇಕರು ವೇಷ-ಭೂಷಣಗಳಿಂದ ಸಾಧು, ಸಂತ, ಸನ್ಯಾಸಿಗಳೇ ಆಗಿರಬಹುದು. ಇಂತಹ ಅನೇಕರಲ್ಲಿ ಢಾಂಬಿಕತೆ ಮನೆಮಾಡಿರುತ್ತದೆ.
ಯಾರು ಪ್ರಾಪಂಚಿಕ ವಸ್ತು-ವಿಷಯ-ವೈಭೋಗದಲ್ಲಿ ಆಸಕ್ತನಾಗಿರುತ್ತಾನೋ, ಯಾವನು ಜನಮೆಚ್ಚುಗೆಗಾಗಿ ಇಲ್ಲಸಲ್ಲದ್ದನ್ನು ಶಾಸ್ತ್ರವೆಂಬ ಹೆಸರಿನಲ್ಲಿ ಆಚರಿಸಲು ಅನುಮೋದಿಸುತ್ತಾನೋ, ಯಾರು ಜನರ ಓಲೈಕೆಗಾಗಿ ತೀರಾ ಹೆಚ್ಚು ಮಾತನಾಡುತ್ತಾನೋ[ವಾಚಾಳಿಯೋ], ಪ್ರಾಪಂಚಿಕ ವಿಷಯಗಳಲ್ಲಿ ಅತ್ಯಾಸಕ್ತರಾದ ಜನರೊಡನೆ ಅತಿಯಾಗಿ ಯಾವನು ಬೆರೆಯುತ್ತಾನೋ, ಯಾವನು [ಅಂತರಂಗ ಅಥವಾ ಬಹಿರಂಗ] ಕ್ರೂರಿಯೋ, ಅತ್ಯಾಚಾರಿಯೋ, ಲೌಕಿಕ ವ್ಯವಹಾರ-ವ್ಯಾಜ್ಯಗಳಲ್ಲಿ ಸಿಲುಕಿಕೊಂಡಿರುವನೋ, ಯಾವನು ಜಗಳಗಂಟನೋ, ಪರೋಪದ್ರವಿಯೋ, ಯೋಗದಲ್ಲಿ ನಂಬಿಕೆಯಿಲ್ಲದವನೋ, ಅಂಥವನಿಗೆ ಯೋಗಾಚರಣೆಗೆ ಅಧಿಕಾರವಿಲ್ಲ; ಒಂದೊಮ್ಮೆ ಅವನು ಯೋಗವನ್ನು ಆಚರಿಸಿದರೂ ಯಾವ ರೀತಿಯ ಪ್ರಯೋಜನವನ್ನಾಗಲೀ ಸಿದ್ಧಿಗಳನ್ನಾಗಲೀ ಪಡೆಯಲಾರ. ಇಂಥವನನ್ನು ಗುರುವೆಂದು ಅವನಲ್ಲಿ ಯೋಗ ಕಲಿಯುವುದೂ ಸಹ ಕಲಿಕೆಯಲ್ಲಿ ಆಸಕ್ತಿಯುಳ್ಳವನ ಅಧಿಕಾರವನ್ನು ಮೊಟಕುಗೊಳಿಸುತ್ತದೆ.
ಯೋಗಕ್ಕೆ ಅಧಿಕಾರ ಯಾರಿಗಿದೆ ಎಂದು ಹುಡುಕಿದಾಗ ಉತ್ತಮ, ಮಧ್ಯಮ ಮತ್ತು ಅಧಮ ಎಂಬ ಮೂರು ವರ್ಗದ ಜನರನ್ನು ಕಾಣಬಹುದು. ಇಲ್ಲಿನ ವರ್ಗೀಕರಣ ನಡೆಯುವುದು ವ್ಯಕ್ತಿ ಪಡೆದುಕೊಂಡ ಸಂಸ್ಕಾರ, ಬುದ್ಧಿಮತ್ತೆ, ಮುಮುಕ್ಷುತ್ವ ಮತ್ತು ವೈರಾಗ್ಯದ ಹಂತಗಳಿಂದ.
ಗುರುವಿನ ಆಯ್ಕೆಯಲ್ಲಿ ನಿಮಗೆ ಇದೆಲ್ಲ ತಿಳಿದಿರಬೇಕು. ಗುರುವೆಂಬಾತ ಪ್ರಾಪಂಚಿಕ ಮತ್ತು ವ್ಯಾವಹಾರಿಕ ವಿಷಯಗಳಿಂದ ಸಾಧ್ಯವಾದಷ್ಟೂ ದೂರವಿರುತ್ತಾನೆ. ಅತ್ಯಾಚಾರ, ಅನಾಚಾರ, ಮೋಸ, ವಂಚನೆ, ಲೂಟಿ, ಪರಸ್ತ್ರೀಗಮನ, ಸ್ವೇಚ್ಛಾಚಾರ, ರಾಜಸ/ತಾಮಸ ಆಹಾರಗಳ ಸೇವನೆ ಇವುಗಳನ್ನು ನಡೆಸುವುದಿಲ್ಲ. ಬಾಹ್ಯಾಂತರಂಗದಲ್ಲಿ ಏಕನಿಷ್ಠೆಯುಳ್ಳವನಾಗಿದ್ದು ಆಡಂಬರ ರಹಿತ ಬದುಕನ್ನು ನಡೆಸುತ್ತಾನೆ. ಸರಳ-ಸಾತ್ವಿಕ ನಡೆ-ನುಡಿಗಳಿಂದ ಕೂಡಿದ್ದು ಪರರನ್ನು ನೋಯಿಸುವ ಮಾತುಗಳನ್ನು ಆಡುವುದಿಲ್ಲ; ಕೆಟ್ಟ ಬೈಗುಳ ಪದಗಳನ್ನು ಉಪಯೋಗಿಸುವುದಿಲ್ಲ. ಯೋಗದಲ್ಲಿ ಶ್ರದ್ಧಾ-ಭಕ್ತಿ ಉಳ್ಳವನಾಗಿದ್ದು ಗುರುಪರಂಪರೆಗೆ ದ್ರೋಹವಾಗದಂತೆ ನಡೆದುಕೊಳ್ಳುವವನಾಗಿರುತ್ತಾನೆ. ಪ್ರಾಮಾಣಿಕನಾಗಿದ್ದು ಸದಾ ಸರ್ವದಾ ಸತ್ಯವನ್ನೇ ಪಾಲಿಸುತ್ತಾನೆ. ಎಲ್ಲರಲ್ಲಿಯೂ ದಯೆ, ಕರುಣೆ ಉಳ್ಳವನಾಗಿರುತ್ತಾನೆ.
ಉತ್ತಮ ಯೋಗಗುರುವನ್ನು ಆಯ್ದುಕೊಂಡು, ಅವನ ಚರಣಗಳಲ್ಲಿ ನಮಸ್ಕರಿಸಿಕೊಂಡು, ಮಾರ್ಗದರ್ಶನ ಪಡೆದುಕೊಳ್ಳಬೇಕು. ಯೋಗವನ್ನು ಆಚರಿಸಲು ಉದ್ಯುಕ್ತನಾಗುವ ವ್ಯಕ್ತಿ ಮೇಲೆ ಹೇಳಿದ ಉತ್ತಮ ಗುಣಗಳಿಂದ ಕೂಡಿ ಸಂಸ್ಕಾರಭರಿತನಾಗಿರಬೇಕು. ಸಂಸಾರಿಯಾಗಿದ್ದರೂ ಸಹ ಪರಸ್ತ್ರೀಯರ ವಿಷಯದಲ್ಲಿ ಮಾತೃತ್ವವನ್ನು ಕಾಣುವಂತಹ ಸ್ವಭಾವದವನಿರಬೇಕು. ಅದಿಲ್ಲದಿದ್ದರೆ ಯೋಗವನ್ನು ಆಚರಿಸುವ ಅಧಿಕಾರವೇ ಅವನಿಗೆ ಇರುವುದಿಲ್ಲ.
ನುರಿತ ಯೋಗಿಯು ಯೋಗಕ್ಕೆ ನಿರೋಧವನ್ನು ತಂದೊಡ್ಡುವ ಆಹಾರವನ್ನು ವರ್ಜಿಸಬೇಕು. ಉಪ್ಪು, ಹುಳಿ, ಖಾರ, ಕಹಿ, ಸಾಸಿವೆ, ಇಂಗು, ಬಿಸಿ ಪದಾರ್ಥಗಳು, ಈರುಳ್ಳಿ, ಬೆಳ್ಳುಳ್ಳಿ, ಬೆಂಕಿಯ ಆರಾಧನೆ, ಹೆಣ್ಣು, ಅತಿಯಾದ ನಡಿಗೆ, ಸೂರ್ಯೋದಯದಲ್ಲಿ ಸ್ನಾನ, ಉಪವಾಸ ವ್ರತಗಳಿಂದ ದೇಹವನ್ನು ಜರ್ಜರಿತಗೊಳಿಸುವುದು ಮೊದಲಾದವುಗಳನ್ನು ಬಹಳ ದೂರ ಇಡುತ್ತಾನೆ.
ಆರಂಭಿಕ ಹಂತದಲ್ಲಿ ಹಾಲು ಮತ್ತು ತುಪ್ಪವನ್ನು ಬಳಸಬಹುದು. ಅದೇರೀತಿ ಗೋಧಿ, ಹಸಿರು ಧಾನ್ಯಗಳು ಮತ್ತು ಕೆಂಪು ಅಕ್ಕಿಯನ್ನು ಬಳಸಬಹುದು. ಹೀಗೆ ಮಾಡಿದಲ್ಲಿ ಯೋಗಿಯು ಉಸಿರಾಟವನ್ನು ತಾನಿಷ್ಟಪಟ್ಟಂತೆ ದೀರ್ಘಕಾಲದವರೆಗೆ ನಿಯಂತ್ರಿಸಲು ಸಾಧ್ಯವಾಗುವುದು. ಹೀಗೆ ಹೊರಗಿನಿಂದ ಯಾವುದೇ ಶ್ವಾಸೋಛ್ವಾಸ ನಡೆಸದೇ, ತನ್ನೊಳಗೇ ತಡೆಹಿಡಿದ ವಾಯುವಿನಿಂದ ’ಕೇವಲ ಕುಂಭಕ’ವನ್ನು ಆಚರಿಸಬಲ್ಲವನಾಗುತ್ತಾನೆ. ಹೀಗೆ ಕೇವಲ ಕುಂಭಕವನ್ನು ಆಚರಿಸಲು ಮೊದಲುಮಾಡಿದವನಿಗೆ ಮೂರು ಜಗದಲ್ಲಿ ಪಡೆದುಕೊಳ್ಳಲಾಗದ್ದು ಯಾವುದೂ ಇರುವುದಿಲ್ಲ!
ಯೋಗದ ಆರಂಭದಲ್ಲೇ ಅವನಿಂದ ಬೆವರು ಹೊರಬರುತ್ತದೆ. ಕಪ್ಪೆಯು ಜಿಗಿಯುವ ಹಾಗೆ, ಪದ್ಮಾಸನದಲ್ಲಿ ಕುಳಿತ ಯೋಗಿಯು ಹಾಗೆಯೇ ಭೂಮಿಯಮೇಲೆ ಚಲಿಸುತ್ತಾನೆ. ಇದು ಇನ್ನೂ ಮುಂದಿನ ಹಂತಕ್ಕೇರಿದಾಗ ನೆಲದಿಂದ ತಂತಾನೇ ಮೇಲಕ್ಕೇರುವ ಮಟ್ಟಕ್ಕೆ ಬೆಳೆಯುತ್ತಾನೆ. ಆಗ ಅವನಿಗೆ ಹಲವು ಸಿದ್ಧಿಗಳು ಮೈಗೂಡುತ್ತವೆ. ಚಿಕ್ಕ ಅಥವಾ ದೊಡ್ಡ ಯಾವುದೇ ನೋವಿನ ಅನುಭವ ಅವನಿಗೆ ಇರುವುದಿಲ್ಲ. ಶಿಶ್ನದ ನಿಮಿರುವಿಕೆ ಮತ್ತು ನಿದ್ರೆ ಎರಡನ್ನೂ ಸಂಪೂರ್ಣ ತೆಗೆದು ಹಾಕುತ್ತಾನೆ. ಕಣ್ಣೀರು ಹರಿಯುವುದು, ಜೊಲ್ಲು ಸುರಿಯುವುದು, ಬೆವರು ಅಸರುವುದು, ಬಾಯಿಯ ದುರ್ನಾತ ಹೊರಹೊಮ್ಮುವುದು ಇವೆಲ್ಲವೂ ಅವನಲ್ಲಿ ಉದಯವಾಗುವುದೇ ಇಲ್ಲ!
ಇನ್ನೂ ಮುಂದಿನ ಹಂತದಲ್ಲಿ ಅವನು ಇನ್ನಷ್ಟು ಸಿದ್ಧಿಗಳನ್ನು ಪಡೆದುಕೊಳ್ಳುತ್ತಾನೆ; ಅವುಗಳಲ್ಲಿ ‘ಭೂಚರ ಸಿದ್ಧಿ’ ಎಂಬ ವಿಶಿಷ್ಟ ಸಿದ್ಧಿಯು ಈ ಪ್ರಪಂಚದ ಎಲ್ಲ ಸಜೀವ-ನಿರ್ಜೀವ ವಸ್ತುಗಳನ್ನು ತನ್ನ ನಿಯಂತ್ರಣದಲ್ಲಿಡಲು ಅವಕಾಶ ಕಲ್ಪಿಸುತ್ತದೆ. ಅವನ ಒಂದೇ ಉಸಿರಿನಿಂದ ಕಾಡಿನ ಕ್ರೂರ-ಹಿಂಸ್ರ ಪಶುಗಳು ಸತ್ತುಹೋಗಬಹುದು! ಆದರೆ ಯೋಗಿ ಹಾಗಾಗುವುದನ್ನು ಬಯಸಲಾರ. ಸಾಕ್ಷಾತ್ ಪ್ರೇಮಮಯೀ ಜಗನ್ನಿಯಾಮಕನಂತೆ ಸುಂದರವಾಗಿ ಕಂಗೊಳಿಸುತ್ತಾನೆ. ವೀರ್ಯ ತಡೆಹಿಡಿಯಲ್ಪಟ್ಟಿರುವುದರಿಂದ ಆತನ ಶರೀರದಿಂದ ಸುಗಂಧವು ಹೊರಸೂಸುತ್ತದೆ.
ಅಂತರಂಗದ ದನಿಯೇ ಯೋಗಿಗೆ ಸಿಂಧುವಾದ ಆಹಾರವನ್ನು ಆಯ್ದುಕೊಳ್ಳಲು ಪ್ರೇರೇಪಿಸುತ್ತದೆ. ನೀವು ನೀವಾಗಿಯೇ ಯೋಗಿಗೆ ಯೋಗ್ಯವಾದ ಆಹಾರ ಕ್ರಮಗಳಲ್ಲಿ ಆಯ್ದುಕೊಂಡು, ಯೋಗಿಯ ಆಹಾರ ಸಂಹಿತೆಗೆ ಧಕ್ಕೆಬಾರದಂತೆ ಒಂದು ಯಾದಿಯನ್ನು ತಯಾರಿಸಿಕೊಳ್ಳಬಹುದು. ಸಂಪೂರ್ಣ ಸಾತ್ವಿಕ ಆಹಾರವನ್ನು ಅರ್ಧಹೊಟ್ಟೆಯಷ್ಟು ಮಾತ್ರ ತೆಗೆದುಕೊಳ್ಳಬೇಕು. ಉಳಿದರ್ಧ ಹೊಟ್ಟೆಯಲ್ಲಿ ಕಾಲು ಭಾಗವನ್ನು ಶುದ್ಧ ನೀರಿನಿಂದ ಭರ್ತಿಮಾಡಬೇಕು. ಉಳಿದ ಕಾಲುಭಾಗವನ್ನು ವಾಯು ವೃದ್ಧಿಯಾಗುವುದಕ್ಕೆ ಅವಕಾಶ ನೀಡುವ ಸಲುವಾಗಿ ಹಾಗೇ ಬಿಡಬೇಕು.
ಯೋಗವನ್ನು ಆಚರಿಸಬಯಸುವ ಒಬ್ಬ ಸಾಮಾನ್ಯ ವ್ಯಕ್ತಿಗೇ ಯೋಗದ ನಿಯಮಗಳು ಹೀಗಿವೆ ಎನ್ನುವಾಗ ನಿಜವಾದ ಸನ್ಯಾಸಿಗೆ ಹೇಗಿರಬೇಡ? ಅಂದಹಾಗೆ ಮೇಲಿನ ಎಲ್ಲ ಷರತ್ತುಗಳಲ್ಲೂ ಹಾವಾಡಿಗ ಮಹಸಂಸ್ಥಾನದವರು ವಿಫಲರಾಗಿದ್ದಾರೆ ಎಂಬುದು ಸ್ಪಷ್ಟವಾಗಿ ಕಂಡುಬರುತ್ತದೆ; ಹಾಗಾಗಿಯೇ ಯೋಗ ಫಲಿಸಲಿಲ್ಲ, ಫಲಿಸುವುದೂ ಇಲ್ಲ.
ಇನ್ನು ಹಾವಾಡಿಗ ಸಂಸ್ಥಾನದವರ ಹಗರಣಗಳಿಗಂತೂ ಲೆಕ್ಕವೇ ಇಲ್ಲ. ಅವುಗಳನ್ನೆಲ್ಲ ಪರಿಶೀಲಿಸುವ ಹಡಗು ಆಕಡೆ ಹೋಗಿದೆ. ಇಂಚಿಂಚೂ ಬಿಡದೇ ಮಾಹಿತಿ ಕಲೆಹಾಕುವ ಪ್ರಯತ್ನ ನಡೆದಿದೆ. ಆದರೆ ಕಾಮಿಯ ದೋಣಿ ಮಾತ್ರ ಎತ್ತಹೊರಟಿದೆ ಮತ್ತು ಎಲ್ಲಿಗೆ ಸೇರಲಿದೆ ಎಂಬುದು ಯಾರಿಗೂ ಗೊತ್ತಿಲ್ಲ. ದೈಹಿಕವಾಗಿ ಇಲ್ಲಿದ್ದರೂ ಮಾನಸಿಕವಾಗಿ ಇಲ್ಲಿಲ್ಲ; ಪೂಜೆ-ಪುನಸ್ಕಾರಗಳೆಲ್ಲ ನೆಗೆದುಬಿದ್ದು ಕೇವಲ ಢಾಂಬಿಕತೆಯಿಂದ ನಡೆಯುತ್ತಿವೆ.
ಅನ್ನ ಬೆಂದಿದೆಯೋ ಇಲ್ಲವೋ ಎಂದು ನೋಡಲು ಒಂದು ಅಗುಳನ್ನು ಎತ್ತಿ ಹಿಸುಕಿ ನೋಡಿದರೆ ಸಾಕು, ಬದಲಿಗೆ ಪಾತ್ರೆಯಲ್ಲಿರುವ ಅನ್ನವನ್ನೆಲ್ಲ ರಾಶಿ ಹಾಕಿ ಹಿಸುಕಿ ನೋಡುವರೇ? ಇಲ್ಲ. ಹಾವಾಡಿಗ ಸಂಸ್ಥಾನದ ಒಂದೆರಡು ಹಗರಣಗಳೇ ಅಲ್ಲೇನು ನಡೆಯುತ್ತಿದೆ ಎಂದು ಅರಿಯುವುದಕ್ಕೆ ಸಾಕು; ಅಲ್ಲಿನ ಹಗರಣಗಳನ್ನು ಕೆದಕಿದರೆ ಆಸ್ತಿಕ ಮಹಾಶಯರು ದೇವರಲ್ಲೇ ನಂಬಿಕೆ ಕಳೆದುಕೊಂಡಾರು.
ಸಮಾಜದ ಮರ್ಯಾದೆ ಹೋಗುತ್ತದೆ, ಸೀಟಿನಲ್ಲೇ ಉಳಿಸಿಕೊಳ್ಳೋಣ ಎಂಬ ಪ್ರಚಾರ ನಡೆಯುತ್ತಿದೆಯಂತೆ; ಸಮಾಜಕ್ಕೆ ಇನ್ನೂ ಮರ್ಯಾದೆ ಇದೆಯೇ ಹಾಗಾದರೆ? ಮರ್ಯಾದೆ ಇದ್ದರೆ ಇಷ್ಟೆಲ್ಲ ಆಗಲು ಬಿಡುತ್ತಿದ್ದರೇ? ಅಷ್ಟಕ್ಕೂ ಈ ಸರ್ವತಂತ್ರ ಸ್ವತಂತ್ರ ಎಂಬ ಸರ್ವಾಧಿಕಾರೀ ಧೋರಣೆಯೇ ಸಮಾಜ ಘಾತುಕವಾದದ್ದು. ಹಿಂದೊಂದು ಕಾಲಕ್ಕೆ ಅದಕ್ಕೆ ಯೋಗ್ಯವಾದ ಯೋಗಿಗಳು ಇದ್ದರು, ಈಗಲೂ ಅಪರೂಪಕ್ಕೆ ಕೆಲವರು ಸಿಗಬಹುದು. ಆದರೆ ಯೋಗಿಗಳು ಎಂದು ಹೇಳಿಕೊಂಡು ತಿರುಗುವವರೆಲ್ಲ ಯೋಗಿಗಳೆನ್ನಲು ಸಾಧ್ಯವಿಲ್ಲ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧ್ಯಾಷ್ಟಾಂಗಯೋಗ ...ಎಂದೆಲ್ಲ ಪದವಾಕ್ಯಗಳಲ್ಲಿ ಪ್ರಾವೀಣ್ಯವನ್ನು ತೋರಿಸುವ ’ಮಹಾನುಭಾವರೆಲ್ಲರೂ’ ಹಾಗೇ ಇದ್ದಾರೆಂದರ್ಥವಲ್ಲ. ಬಣ್ಣ ಮಾಸುವ ವರೆಗೆ ಗ್ಯಾರಂಟೀ ಗೋಲ್ದು ಅಪ್ಪಟ ಚಿನ್ನಕ್ಕಿಂತ ಚೆನ್ನಾಗಿ ಕಾಣುತ್ತದೆ.
ಇಷ್ಟೆಲ್ಲ ನಡೆದರೂ ಇನ್ನೂ ಕೆಲವರು ಜೈಕಾರ ಹಾಕುವುದಕ್ಕೆ ಅವರ ಸ್ವಾರ್ಥಪರ ಪ್ರಾಯೋಜಿತ ವ್ಯವಹಾರಗಳೇ ಕಾರಣ ಎನ್ನುವುದನ್ನು ಬೇರೆ ಯಾರೋ ಹಳದೀ ಶಾಲಿನ ಬಾವಯ್ಯಂದಿರು ವೇದಿಕೆಯೇರಿ ಅಧಿಕೃತವಾಗಿ ಘೋಷಿಸಬೇಕಾದ ಅಗತ್ಯವೇನಿಲ್ಲ ಬಿಡಿ.

July 8 
https://www.facebook.com/groups/1499395003680065/permalink/1637761423176755/


ಯೋಗ ಡೀಕೋಡೆಡ್-ಕಾಮಿ ಈಸ್ ಅನ್ ಫಿಟ್ ಫಾರ್ ಯೋಗ ಆಲ್ ದಿ ವೇ
ಇವತ್ತಿನ ಚಿತ್ರಕ್ಕೂ ಕತೆಗೂ ಯಾವ ಸಂಬಂಧವೂ ಇಲ್ಲ. ಯಾರೋ ಪುಣ್ಯಾತ್ಮನಿಗೆ ತುಮರಿಯ ಕಾದಂಬರಿ ಓದುವ ಬಯಕೆ. ಕತೆ, ಕವನ, ಕಾದಂಬರಿಗಳನ್ನು ಯಾರಾದರೂ ಬರೆಯಬಹುದು. ಶಾಸ್ತ್ರಗಳನ್ನು ಅವುಗಳ ಮೂಲ ಭಾಷೆಯಿಂದ ಹೀರಿಕೊಂಡು, ಋಷಿವಾಕ್ಯ-ಭಾವನೆಗಳಿಗೆ ಪ್ರಮಾದವೆಸಗದಂತೆ ಬರೆಯುವುದು ಹಿಮಾಲಯದ ತುದಿಗೆ ಹೋಗಿಬರುವಷ್ಟೇ ಕಷ್ಟ. ಕಾದಂಬರಿ ಬಯಸಿದವರು ಚಿತ್ರ ನೋಡಿಕೊಂಡು ತೃಪ್ತರಾಗಿ, ಉಳಿದವರು ಇಂದಿನ ಕತೆಯನ್ನು ಓದಿಕೊಂಡು ಹಸನ್ಮುಖಿಗಳಾಗಿ.
ಕುಡಿದು ವಾಹನ ಓಡಿಸಬೇಡಿ ಎಂದು ಹೇಳುತ್ತಾರಲ್ಲವೇ? ಒಂದೊಮ್ಮೆ ಪೈಲಟ್ ಎಣ್ಣೆ ಹೊಡೆದುಬಿಟ್ಟರೆ ಹೇಗಿರಬಹುದು? ಕೆಲವು ವರ್ಷಗಳ ಹಿಂದೆ ಕಟೌಟ್ ಒಂದರಲ್ಲಿ ಹೀಗೆ ಓದಿದ ನೆನಪು- ಮೇಲೆ ’ಕರ್ನಾಟಕ ಸರ್ಕಾರ’ ಎಂಬ ಬರಹ ಮತ್ತು ಲೋಗೊ. ಒಂದು ಚಿತ್ರ, ಅದರ ಕೆಳಗೆ ದೊಡ್ಡದಾಗಿ ’ಕುಡಿತದಿಂದ ಸರ್ವನಾಶ.’ ಪ್ರಾಯಶಃ ಹಾಗೆ ಬರೆದವ ಎಣ್ಣೆಹಾಕಿದ್ದನೇ? ಸರ್ಕರದ ಪರವಾಗಿ ಬರೆಸಿದವ ಹಾಕಿದ್ದನೇ? ಗೊತ್ತಿಲ್ಲ. ಅದನ್ನು ಓದಿದ ಇಂದಿನ ಸಾರ್ವಜನಿಕರಿಗೂ ಕನ್ನಡ ವ್ಯಾಕರಣ ಗೊತ್ತಿರಲಿಲ್ಲ ಎನ್ನಬಹುದೇ? ಅಥವಾ ಹಾಗೆ ಬರೆದಿದ್ದೇ ಸರಿಯೇ?
ಟೀಕೆಗಿಂತ ಹೆಚ್ಚಾಗಿ, ಕಾಮಿಯ ಆಯ್ಕೆಯಲ್ಲಿ ನಾವೆಲ್ಲಿ ಎಡವಿದ್ದೇವೆ ಎಂಬುದು ಇವುಗಳನ್ನೆಲ್ಲ ನೋಡಿದರೆ ನಮಗೆ ತಿಳಿಯುತ್ತದೆ. ಇಂದಿನ ದಿನಮಾನಗಳಲ್ಲಿ ಬೂದುಗುಂಬಳ ಬುದ್ಧಿಗೆ ಉಪಯುಕ್ತವೆಂದೂ, ಈರುಳ್ಳಿ-ಬೆಳ್ಳುಳ್ಳಿಗಳಲ್ಲಿ ಔಷಧೀಯ ಗುಣವಿದೆಯೆಂದೂ ಆಹಾರವಿಜ್ಞಾನಿಗಳು ಹೇಳುತ್ತಿದ್ದಾರೆ. ಹಾಗಾದರೆ ಅಂತವುಗಳನ್ನೇ ಯೋಗಿ ತಿನ್ನಬಾರದೆನ್ನಲಿಕ್ಕೂ ಕಾರಣಗಳಿರಬೇಕಲ್ಲ? ಅವುಗಳಿಂದ ಶಾರೀರಿಕ ಸೈಡ್ ಇಫೆಕ್ಟ್ ಇಲ್ಲದಿರಬಹುದು, ಮನಸ್ಸಿನಮೇಲೆ ಅವುಗಳ ಪರಿಣಾಮ?
ಮಹಾನ್ ಯೋಗಿಯೊಬ್ಬರ ಸ್ವಾನುಭವದ ಪ್ರಕಾರ ಈರುಳ್ಳಿ ಮತ್ತು ಬೆಳ್ಳುಳ್ಳಿಗಳು ಮಾಂಸಕ್ಕಿಂತಲೂ ಕಡೆಯಂತೆ. ಚಿತ್ತವೃತ್ತಿಯನ್ನು ನಿಯಂತ್ರಿಸುವಲ್ಲಿ ಅವುಗಳು ಉಂಟುಮಾಡುವ ಅಡೆತಡೆಗಳು ಬಹಳವಂತೆ. ತಿಳಿದವರು ಅವುಗಳನ್ನು ಕಾಮೋತ್ತೇಜಕಗಳೆಂದೂ ಕರೆದಿದ್ದಾರೆ. ತಾಲೂಕು ಪ್ರದೇಶಗಳ ಹೋಟೆಲ್ ಗಳಲ್ಲಿ ಮುಂಗಾರು ಮಾರುತ ಬೀಸುವಾಗ, ಈರುಳ್ಳಿ ಬಜೆ ಮತ್ತು ಬೆಳ್ಳುಳ್ಳಿ ಚಟ್ನಿ ಹಚ್ಚಿದ ಮಸಾಲೆ ದೋಸೆಯ ಪರಿಮಳ ಅರ್ಧ ಕಿ.ಮೀ ದೂರದಿಂದಲೇ ದಾರಿಹೋಕರನ್ನು ಕರೆಯುತ್ತದೆ. ಎಂದಾಗ ಬಾಗಿಲಲ್ಲಿ ನಿಂತು ಕರೆಯುವ ಸ್ವಭಾವಕ್ಕೆ ಅವು ಪುಷ್ಟಿ ನೀಡುತ್ತವೆ ಎನ್ನುವುದಕ್ಕೆ ಇದೊಂದೇ ಸಂಗತಿ ಪುಷ್ಟಿಕರವಾಗುತ್ತದೆ.
ಹೋಗಲಿ, ಶರೀರ ಮತ್ತು ಮನಸ್ಸುಗಳ ಬಗೆಗೆ ವಿಜ್ಞಾನಿಗಳು ಏನಾದರೂ ಹೇಳಬಹುದು, ನಾಡಿಗಳ ಬಗ್ಗೆ ಅವರಲ್ಲಿ ಯಾವ ವಿವರಣೆಯೂ ಸಿಗುವುದಿಲ್ಲ. ರಕ್ತನಾಳಗಳಲ್ಲಿ ಹರಿಯುವ ರಕ್ತವೇ ಕೆಲವೊಮ್ಮೆ ಹೆಪ್ಪುಗಟ್ಟುವುದಂತೆ, ಮೂತ್ರನಾಳದಲ್ಲಿ ಹರಿಯುವ ಮೂತ್ರವೇ ಹರಳುಗಟ್ಟುವುದಂತೆ, ನಾಡಿಗಳಲ್ಲಿ ಹರಿದಾಡುವ ವಾಯು ವಿದ್ಯುತ್ತಿನ ಕತೆ ಏನು? ಅದಕ್ಕೆ ಅವರಲ್ಲಿ ಉತ್ತರವಿಲ್ಲ.
ಯೋಗಿಗಳು ಪ್ರಾಣಾಯಾಮದಲ್ಲಿ ನಾಲ್ಕು ಹಂತಗಳನ್ನು ಹೇಳಿದ್ದಾರೆ-
ಮೊದಲನೆಯ ಹಂತ-ಆರಂಭ ಅವಸ್ಥೆ
ಆರಂಭಿಕ ಹಂತದಲ್ಲಿ ಮೂರು ಮಾತ್ರೆಗಳ ಕಾಲ ಓಂಕಾರವನ್ನು ಪಠಿಸಬೇಕು. ಹಿಂದೆ ನಡೆದ ಪಾಪಗಳಿಂದ ಮುಕ್ತಿಪಡೆಯುವ ಸಲುವಾಗಿ ಹೀಗೆ ಮಾಡಲಾಗುತ್ತದೆ. ಪ್ರಣವ ಮಂತ್ರವೆನಿಸಿದ ಓಂ, ಹಿಂದಿನ ಪಾಪಗಳನ್ನು ಪರಿಹರಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಯೋಗಿಯು ಈ ಸಮಯದಲ್ಲಿ ಬೆವರುತ್ತಾನೆ. ಬೆವರನ್ನು ಕೈಗಳಿಂದ ಒರೆಸಿ ಸ್ವಚ್ಛಗೊಳಿಸಿಕೊಳ್ಳಬೇಕು. ಶರೀರವು ಅದುರಲು ಅರಂಭಗೊಳ್ಳುತ್ತದೆ. ಕೆಲವೊಮ್ಮೆ ಯೋಗಿ ಕಪ್ಪೆಯಂತೆ ಜಿಗಿಯುವ ಸಾಧ್ಯತೆಯೂ ಇದೆ.
ಎರಡನೆಯ ಹಂತ-ಘಟ ಅವಸ್ಥೆ
ಇದು ಯೋಗಿಯ ಪ್ರಾಣಾಯಾಮದ ಎರಡನೇ ಹಂತ. ಸತತವಾದ ಅಭ್ಯಾಸದಿಂದ ಶ್ವಾಸದ ನಿಯಂತ್ರಣವನ್ನು ಕಲಿತುಕೊಂಡ ನಂತರ ಈ ಹಂತವನ್ನು ತಲುಪಬಹುದು. ಈ ಹಂತಕ್ಕೆ ಬರುವಾಗ ಪ್ರಾಣ ಮತ್ತು ಅಪಾನಗಳ ನಡುವೆ, ಮನಸ್ಸು ಮತ್ತು ಬುದ್ಧಿಗಳ ನಡುವೆ, ಜೀವಾತ್ಮ ಮತ್ತು ಪರಮಾತ್ಮರ ನಡುವೆ ಒಮ್ಮತವು ಒಡಮೂಡಿ ವೈರುಧ್ಯವು ಅಳಿಯುತ್ತದೆ. ಇದೇ “ಘಟ ಅವಸ್ಥೆ.” ಇದನ್ನು ಯೋಗಿಯು ಬೆಳಿಗ್ಗೆ ಮತ್ತು ಸಾಯಂಕಾಲ ದಿನದಲ್ಲಿ ಒಂದು ಯಾಮದವರೆಗೆ ಅಂದರೆ ಮೊರು ಗಂಟೆಗಳ ಕಾಲ ನಡೆಸಬಹುದು. ಒಮ್ಮೆ ಮಾತ್ರ ಕೇವಲ ಕುಂಭಕವನ್ನು ಆಚರಿಸಬೇಕು.
ವಿಷಯವಸ್ತುಗಳ ಮೇಲೆ ಕೇಂದ್ರಿತವಾದ ಇಂದ್ರಿಯಗಳನ್ನು ಪ್ರಾಣಾಯಾಮದ ಸಮಯದಲ್ಲಿ ವಿಷಯವಸ್ತುಗಳಿಂದ ಅಥವಾ ವಿಷಯವಾಸನೆಯಿಂದ ವಿಮುಕ್ತಗೊಳಿಸುವುದೇ ಪ್ರತ್ಯಾಹಾರವಾಗಿದೆ. ಕಣ್ಣಿಂದ ನೋದುವುದೆಲ್ಲವೂ ಅತ್ಮವನ್ನೇ ಎಂದು ತಿಳಿಯಬೇಕು. ಅದೇರೀತಿ, ಕಿವಿಯಿಂದ ಕೇಳುವುದೆಲ್ಲವನ್ನೂ, ಮೂಗಿನಿಂದ ಆಘ್ರಾಣಿಸುವುದೆಲ್ಲವನ್ನೂ, ನಾಲಿಗೆಯಿಂದ ಸ್ವಾದಗ್ರಹಿಸುವುದೆಲ್ಲವನ್ನೂ ಮತ್ತು ಚರ್ಮದಿಂದ ಸ್ಪರ್ಶಿಸುವುದೆಲ್ಲವನ್ನೂ ಆತ್ಮವೆಂಬ ಭಾವನೆ ಅವನಲ್ಲಿರಬೇಕು. ಈ ಸಮಯದಲ್ಲಿ ಅವನು ಅಪರೋಕ್ಷ ಜ್ಞಾನವನ್ನು ಪಡೆದುಕೊಳ್ಳುತ್ತಾನೆ. ಇರುವಲ್ಲಿಂದ ಇಚ್ಛಿಸಿದ ಬಹುದೂರದೆಡೆಗೆ ಅರೆನಿಮಿಷದಲ್ಲಿ ಸಾಗಿಹೋಗುವ ಶಕ್ತಿ, ಅಜ್ಞಾಪನೆಯಂತೆ ನಿಖರವಾಗಿ ಅದ್ಭುತವಾಗಿ ಮಾತನಾಡು ಶಕ್ತಿ, ಇಚ್ಛಿಸಿದ ಯಾವುದೇ ರೂಪವನ್ನೊ ಧಾರಣೆಮಾಡಿಕೊಳ್ಳುವ ಶಕ್ತಿ, ಇರುವಲ್ಲೇ ಮಾಯವಾಗುವ ಶಕ್ತಿ ಮತ್ತು ಕಬ್ಬಿಣವನ್ನು ಬಂಗಾರವನ್ನಾಗಿ ಪರಿವರ್ತಿಸುವಂತಹ ಹಲವು ಶಕ್ತಿ-ಸಿದ್ಧಿಗಳನ್ನು ಆತ ಪಡೆದುಕೊಳ್ಳುತ್ತಾನೆ.
ಜೊತೆಗೆ ಗಾಳಿಯಲ್ಲಿ ತೇಲಾಡುವ ಶಕ್ತಿಯನ್ನೂ ಸಹ ಯೋಗಿ ಪಡೆದುಕೊಳ್ಳುತ್ತಾನೆ. ಹೀಗಿದ್ದರೂ ದೊರೆತ ಈ ಸಿದ್ಧಿಗಳೆಲ್ಲ ಮುಕ್ತಿಯೋಗದ ಹಾದಿಯಲ್ಲಿ ಇರುವ ಅಡೆತಡೆಗಳೆಂದು ಯೋಗಿಯು ಭಾವಿಸುತ್ತಾನೆ. [ಭಾವಿಸಿದರೆ ಮುಂದಕ್ಕೆ ತೆರಳಲು ಸಾಧ್ಯ, ಸಿದ್ಧಿಯ ದುರುಪಯೋಗಮಾಡಿಕೊಂಡರೆ ಮತ್ತೆ ಮೂಲಸ್ಥಾನಕ್ಕೆ ಬಿದ್ದುಬಿಡುತ್ತಾನೆ.] ಯೋಗಿಯ ಸುತ್ತ ಇರುವ ಶಿಷ್ಯರು ಯೋಗಿಯಲ್ಲಿ ಸಿದ್ಧಿಯಿಂದ ಉಂಟಾಗುವ ಪವಾಡಗಳನ್ನು ತೋರಿಸಲು ವಿನಂತಿಸುತ್ತಾರೆ. ಹಾಗೊಮ್ಮೆ ಪವಾಡಗಳಲ್ಲಿ ನಿರತನಾದರೆ ಯೋಗಿಯ ಯೋಗದ ಬದುಕು ಅಲ್ಲಿಗೆ ಮೊಟಕುಗೊಳ್ಳುತ್ತದೆ. ಸಿಷ್ಯರಿಗೆ ತಿಳುವಳಿಕೆ ನೀಡಿ, ಗುರುವಿನ ಹೇಳಿಕೆಗಳತ್ತ ಗಮನವಿಟ್ಟು ಯೋಗದಲ್ಲಿ ಮುನ್ನಡೆದರೆ ಪ್ರಾಪಂಚಿಕ ವಿಷಯಗಳಿಂದ ಮುಕ್ತನಾಗಿ, ಮೋಕ್ಷವು ದೊರೆಯುತ್ತದೆ.
ಮೂರನೆಯ ಹಂತ-ಪರಿಚಯ ಅವಸ್ಥೆ
ಯೋಗಿಯ ನಿರಂತರ ಯೋಗೋಪಾಸನೆಯು ಅವನನ್ನು “ಪರಿಚಯ ಅವಸ್ಥೆ” ಎಂಬ ಮೂರನೇ ಹಂತಕ್ಕೆ ಕೊಂಡೋಯ್ಯುತ್ತದೆ. ವಾಯುವು ಅಗ್ನಿಯ ಜೊತೆಗೂಡಿ ಕುಂಡಲಿನಿಯನ್ನು ಜಾಗೃತಗೊಳಿಸುವುದರಿಂದ ಕುಂಡಲಿನೀ ಶಕ್ತಿಯು ಮೂಲಾಧಾರದಿಂದ ಸಹಸ್ರಾರದೆಡೆಗೆ ನಿರಂತರವಾಗಿ ಪ್ರವಹಿಸತೊಡಗುತ್ತದೆ. ಚಿತ್ತದ ಜೊತೆಗೆ ಪ್ರಾಣವೂ ಸೇರಿಕೊಂಡು ಸುಷುಮ್ನಾ ನಾಡಿಯ ಮುಖಾಂತರ ಸಹಸ್ರಾರ ಉನ್ನತ ಕೇಂದ್ರದೆಡೆಗೆ ಕರೆದೊಯ್ಯುತ್ತದೆ. ಯಾವಾಗ ಯೋಗಿಯು ಕ್ರಿಯಾಶಕ್ತಿಯನ್ನು ಪಡೆದುಕೊಳ್ಳುತ್ತಾನೋ, ಆರು ಚಕ್ರಗಳನ್ನು ದಾಟಿದ ಯೋಗಿಗೆ ಆಗ ಏಳನೇ ಚಕ್ರದ ಪರಿಚಯ ನಿಚ್ಚಳವಾಗುತ್ತದೆ. ಆಗ ಯೋಗಿಯು ಮೂರು ಮಜಲುಗಳ ಕರ್ಮವನ್ನು ಅರಿಯಲು ಸಾಧ್ಯವಾಗುತ್ತದೆ. ಮೂರು ಮಜಲುಗಳ ಕರ್ಮಗಳನ್ನು ಯೋಗಿಯು ಪ್ರಣವದಿಂದ ನಾಶಪಡಿಸುತ್ತಾನೆ.
ಆಗ ಅವನು “ಕಾಯವ್ಯೂಹ”ವನ್ನು ರಚಿಸುತ್ತಾನೆ. ಕಾಯವ್ಯೂಹ ಎಂಬುದು, ಹಲವು ವಿಧ ಸ್ಕಂದಗಳನ್ನು ದೇಹದಲ್ಲೆಲ್ಲ ವ್ಯವಸ್ಥಾಪನೆಗೊಳಿಸಿ, ಜನ್ಮಾಂತರ ಪಾಪಗಳಿಂದ ಮುಕ್ತಿಯನ್ನು ಪಡೆದುಕೊಂಡು, ಮತ್ತೆ ಮರುಹುಟ್ಟು ಪಡೆಯದಂತೆ ಜೀವನ್ಮುಕ್ತನಾಗುವ ಒಂದು ರಹಸ್ಯ ವಿದ್ಯೆ. ಈ ಮಹಾನ್ ಯೋಗಿಯು ಮುಂದೆ ಪಂಚಧರ್ಮ ಅಂದರೆ ಪಂಚಭೂತಗಳ ಮೇಲೆ ನಿಗಾ ಇರಿಸಿ ಅವುಗಳನ್ನು ನಿಯಂತ್ರಿಸಬಲ್ಲ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತಾನೆ. ಪಂಚಭೂತಗಳಿಂದ[ಪೃಥ್ವಿ, ಆಕಾಶ, ವಾಯು, ಜಲ ಮತ್ತು ಅಗ್ನಿ]ಅವನಿಗೆ ಯಾವ ಹಾನಿಯೂ ತಟ್ಟದು.
ನಾಲ್ಕನೇ ಹಂತ-ನಿಷ್ಪತ್ತಿ ಅವಸ್ಥೆ
ಪ್ರಾಣಾಯಾಮದ ನಾಲ್ಕನೇ ಅವಸ್ಥೆ ಇದಾಗಿದೆ. ಹಂತಹಂತವಾಗಿ ಯೋಗಿಯು ಮೂರು ಹಂತಗಳನ್ನು ಮುಗಿಸಿ “ನಿಷ್ಪತ್ತಿ ಅವಸ್ಥೆ”ಗೆ ಏರುತ್ತಾನೆ. ಎಲ್ಲಾ ಕರ್ಮಬೀಜಗಳನ್ನು ನಾಶಪಡಿಸಿದ ಯೋಗಿಯು ಈ ಹಂತದಲ್ಲಿ ಅಮೃತಪಾನಮಾಡಿ ಅಮರತ್ವವನ್ನು ಪಡೆದುಕೊಳ್ಳುತ್ತಾನೆ. ಅಲ್ಲಿಂದಾಚೆಗೆ ಅವನಿಗೆ ಹಸಿವಿಲ್ಲ, ನೀರಡಿಕೆಯಿಲ್ಲ, ನಿದ್ದೆ-ಉದ್ವೇಗಗಳು ಇರುವುದಿಲ್ಲ. ಅವನು ಅವುಗಳೆಲ್ಲದರಿಂದ ಸ್ವತಂತ್ರನಾಗಿರುತ್ತಾನೆ.
ಈ ಜಗದಲ್ಲಿ ಇಚ್ಛಿಸದಲ್ಲಿಗೆ ಅವನು ಹೋಗಬಹುದು. ಅವನಿಗೆ ಯಾವುದೇ ಕಾಯಿಲೆಗಳು, ಶಾರೀರಿಕ ನ್ಯೂನತೆಗಳು [ಕಣ್ಣು ಕಾಣಿಸದಿರುವುದು, ಕಿವಿ ಕೇಳಿಸದಂತಾಗುವುದು ಇತ್ಯಾದಿ ವಯಸ್ಸಿಗನುಗುಣವಾಗಿ ಕಾಣಿಸಿಕೊಳ್ಳುವ ತೊಂದರೆಗಳು]ಮತ್ತು ಮುಪ್ಪು ಬಾಧಿಸುವುದಿಲ್ಲ. ಸಮಾಧಿ ಸ್ಥಿತಿಯ ಪರಮಾನಂದವನ್ನು ಹೊಂದುತ್ತಾನೆ. ಆಗ ಅವನಿಗೆ ಮತ್ತೆ ಯೋಗದ ಆಚರಣೆಗಳು ಬೇಕಾಗಿಲ್ಲ. ಗಂಟಲು ಮೂಲದಲ್ಲಿ ನಾಲಿಗೆಯಿಟ್ಟು ಪ್ರಾಣವಾಯುವನ್ನು ಕುಡಿಯುವ ಕುಶಲ ತಂತ್ರವನ್ನು ಪಡೆದುಕೊಂಡ ಈ ಯೋಗಿಗೆ ಪ್ರಾಣ ಮತ್ತು ಅಪಾನಗಳ ನಿಯಮಗಳು ಅರ್ಥವಾಗಿ ಮೋಕ್ಷವನ್ನು ಪಡೆದುಕೊಳ್ಳಲು ಅರ್ಹನಾಗುತ್ತಾನೆ.
ಯೋಗವನ್ನು ನಿರಂತರವಾಗಿ, ಸಾಂಪ್ರದಾಯಿಕ ಶೈಲಿಯಲ್ಲಿ, ಶ್ರದ್ಧಾ-ಭಕ್ತಿ ಪುರಸ್ಸರವಾಗಿ, ಆಚರಿಸುವ ಯೋಗವಿದ್ಯಾರ್ಥಿಯು ಈ ಎಲ್ಲ ಹಂತಗಳನ್ನು ಕ್ರಮಬದ್ಧವಾಗಿ ಏರುತ್ತ ಹೋಗುತ್ತಾನೆ. ಯಾವಗಲೋ ಒಮ್ಮೆ ಕೇವಲ ಕ್ಷಣಿಕ ತೃಪ್ತಿಗಾಗಿ ಯೋಗದ ಮೊರೆಹೋಗುವ ಯಾವ ವ್ಯಕ್ತಿಗೂ ಸಹ ಈ ಅವಸ್ಥೆಗಳಾಗಲೀ ಯೋಗದ ನಿಜವಾದ ಪ್ರಯೋಜನಗಳಾಗಲೀ ಪ್ರಾಪ್ತವಾಗುವುದಿಲ್ಲ. ಇದೆಲ್ಲದಕ್ಕೂ ಪ್ರಮುಖ ಅಧಾರಗಳೆಂದರೆ ಮಿತಾಹಾರ ಮತ್ತು ಬ್ರಹ್ಮಚರ್ಯ.
ದೀಕ್ಷೆಯಾದ ಒಂದೇ ತಿಂಗಳಿನಲ್ಲಿ ಈರುಳ್ಳಿ ಹಾಕಿದ ಉಫ್ಫಿಟ್ಟು ತಿಂದವರಿದ್ದಾರೆ. ಕದ್ದುಮುಚ್ಚಿ ಮಸಾಲೆ ಪದಾರ್ಥಗಳನ್ನೂ ಯೋಗಿಗೆ ನಿಷಿದ್ಧವಾದ ತಿಂಡಿ-ತಿನಿಸುಗಳನ್ನೂ ತಿಂದವರಿದ್ದಾರೆ. ಅಂತವರಲ್ಲಿ ಯೋಗ ಸಕ್ರಿಯವಾಗಿದೆ ಎಂಬುದನ್ನು ಒಪ್ಪುವುದೇ ಯೋಗಿ ಪತಂಜಲಿಗೆ ಅಪಚಾರ ಎಸಗುವುದಾಗುತ್ತದೆ. ಯೋಗವನ್ನೇ ಅರಿಯದ ಕೆಲವರು ಯೋಗ ದಿನಾಚರಣೆಯ ಬಗ್ಗೆ ಪತ್ರಿಕೆಗಳಲ್ಲಿ ಹೇಳಿಕೆ ಕೊಡುತ್ತಾರೆ.
ಯಾವ ನೀತಿ, ನಿಯಮಗಳನ್ನೂ ಅರಿಯದೆ ಜೇಬು ಭರ್ತಿಗೆ ಜೈಕಾರ ಕೂಗುವ ಮಂದಿ ಮೂಲ ಸನಾತನ ವೈದಿಕ ಸಲ್ಲಕ್ಷಣಗಳಿಗೆ ಅಪಚಾರ ಮಾಡುತ್ತಿದ್ದಾರೆ. ಒಂದಷ್ಟು ದೀಪ ಹಚ್ಚಿ, ಹೂವು ಜೋಡಿಸಿ ಅಲಂಕಾರ ಮಾಡಿಬಿಟ್ಟ ಮಾತ್ರಕ್ಕೆ ದೈವೀ ಶಕ್ತಿಯ ಆವಾಸ ಅಲ್ಲಿದೆಯೆಂದು ನಂಬಬಾರದು. ದೈವೀ ಶಕ್ತಿಯ ಆವಾಸಕ್ಕೆ ಹಲವು ಕಟ್ಟುಪಾಡುಗಳಿವೆ. ಸೆಕ್ಯೂರಿಟಿಗಳಿಗೆ ಮುಖ ತೋರಿಸಿ ವಿಮಾನವೇರುವ ವಿಗ್ರಹಗಳಲ್ಲಿ ಸಾನ್ನಿಧ್ಯ ಇರಲು ಸಾಧ್ಯವಿಲ್ಲ, ನಮಾಮಿ ಸಾಬೂನಿನ ನೊರೆ ತಾಗಿದ ಕೈಯಿಂದ ಅಭಿಷೇಕ ಪಡೆದ ವಿಗ್ರಹಗಳಲ್ಲಿ ಭೂತಾವಾಸವಾದರೂ ತಪ್ಪಿಲ್ಲ.
ಇನ್ನು, ಇಪ್ಪತ್ತೈದು ಲಕ್ಷಕೊಟ್ಟು ಮಲ್ಲಿಕಾ ಮಾವಿನ ಹಣ್ಣನ್ನು ಮುಟ್ಟಲು ಹವಣಿಸಿ, ಕೈಗೂಡದ್ದಕ್ಕೆ ಕೋಪಾವಿಷ್ಟನಾದ ಕಾಮಿಯನ್ನು ಆರಾಧಿಸುವ ಭಕ್ತರಲ್ಲಿ ಕಾಮವಾಸನೆ ಆವಾಸವಾಗುವುದೇ ಹೊರತು ಮೋಕ್ಷಮಾರ್ಗದ ಗಾಳಿ ಎಂದೆಂದಿಗೂ ಬೀಸುವುದಿಲ್ಲ. ಕುಳಿತವ ಕಚ್ಚೆಹರುಕನಾದರೆ ಸೀಟು, ದೇವರು, ಮಂತ್ರಾಕ್ಷತೆ, ಆಶೀರ್ವಾದ ಯಾವುದರಿಂದಲೂ ಉತ್ತಮ ಪರಿಣಾಮಗಳಿಲ್ಲ;ಎಲ್ಲವೂ ಅಡ್ಡ ಪರಿಣಾಮಗಳೇ. ಇದನ್ನೆಲ್ಲ ನೋಡಿಯೇ ಹಿಂದಿನವರು ಹೇಳಿದ್ದಾರೆ-ಚೋರ ಗುರುವಿಗೆ ಚಾಂಡಾಲ ಶಿಷ್ಯರು.

July 9 
https://www.facebook.com/groups/1499395003680065/permalink/1638151403137757/

ಆಂತರಿಕ ಕೈಗಾರಿಕಾ ತಾಣ ಕಳ್ಳರ ಅಡಗುದಾಣವಾಗಬಾರದಲ್ಲವೇ?
"ಕುರುಡನಿನಚಂದ್ರರನು ಕಣ್ಣಿಂದ ಕಾಣುವನೆ?
ಅರಿಯುವಂ ಸೋಂಕಿಂದೆ ಬಿಸಿಲುತನಿವುಗಳ
ನರನುಮಂತೆಯೇ ಮನಸಿನನುಭವದಿ ಕಾಣುವನು
ಪರಸತ್ವಮಹಿಮೆಯನು - ಮಂಕುತಿಮ್ಮ.
ಸೂರ್ಯ ಚಂದ್ರರು ಎದುರೇ ಇದ್ದರೂ ಕುರುಡನಿಗೆ ಕಾಣಲಾಗುವುದೆ? ಬಿಸಿಲಿನ ಬಿಸಿ ಮತ್ತು ಬೆಳದಿಂಗಳ ತಂಪನ್ನು ಸ್ಪರ್ಶಮಾತ್ರದಿಂದಲೇ ಅವನು ಅರಿಯುವುದಾಗುತ್ತದೆ. ಅದರಂತೆ, ಮನಸ್ಸಿಗೆ ನಿಲುಕುವ ಅನುಭವದಿಂದ ಮನುಷ್ಯನೂ ಸಹ ಪರಮಾತ್ವ ತತ್ವವನ್ನು ಕಾಣುತ್ತಾನೆ ಎಂಬುದು ಡಿವಿಜಿಯವರ ಹೇಳಿಕೆ.
ಅವರವರ ಭಾವಕ್ಕೆ ಅವರವರ ಬಕುತಿಗೆ
ಅವರವರ ತೆರನಾಗಿ ಇರುತಿಹನು ಶಿವಯೋಗಿ
ಹರನ ಭಕ್ತರಿಗೆ ಹರ, ಹರಿಯ ಭಕ್ತರಿಗೆ ಹರಿ
ನರರೇನು ಭಾವಿಸುವರದರಂತೆ ಕಾಣುವನು
-ಎಂದು ನಿಜಗುಣ ಶಿವಯೋಗಿಳು ಹೇಳಿದ್ದಾರೆ.
ಪರಮಾತ್ಮನೆಂದರೆ ಕಣ್ಣಿಗೆ ಕಾಣುವ ಆಕಾರವೆಂದಲ್ಲ. ಭಗವಂತ ಎಂಬುದೊಂದು ಭಾವನಾತ್ಮಕ ವಿಚಾರ. ಭಗವಂತನನ್ನು ಹರಿಯೆನ್ನುವವರೂ ಇದ್ದಾರೆ, ಹರನೆನ್ನುವವರೂ ಇದ್ದಾರೆ, ಇನ್ನೂ ಹಲವು ನಾಮ-ರೂಪಗಳಿಂದ ಧೇನಿಸುವವರಿದ್ದಾರೆ. ಎಲ್ಲ ನಾಮ-ರೂಪ-ಉಪಾಧಿಗಳಿಂದ ಆರಾಧಿಸಲ್ಪಡುವ ಶಕ್ತಿಯi ಮೂಲ ಒಂದೇ; ನಮ್ಮ ನಮ್ಮ ಭಾವನೆಯಲ್ಲಿ, ಮನೋಭೂಮಿಕೆಯಲ್ಲಿ ಪಡಿಮೂಡಿದ ನಾಮ-ರೂಪಗಳಿಂದ ನಾವು ಭಗವಂತ ಹೀಗೆಯೇ ಎನ್ನುತ್ತೇವಷ್ಟೆ.
ಮನುಷ್ಯನಿಗೆ ಹೊರಗಿನಿಂದ ಏನನ್ನಾದರೂ ಹೇಳಿಕೊಡಬಹುದು. ಹೀಗೆ ಮಾಡು-ಹೀಗೆ ಮಾಡಬೇಡ ಎಂದೆಲ್ಲ ತಿಳಿಸಿ ಹಾಗೆ ನಡೆದುಕೊಳ್ಳುವಂತೆ ಮಾಡಬಹುದು. ಅವನ ಅಂತರ್ಯದಲ್ಲಿ ನಡೆಯುವ ಮನೋವ್ಯಾಪಾರವನ್ನು ಮತ್ತು ಕ್ರಿಯೆಯನ್ನೂ ಹೇಳಿಕೊಡಲು ಅಥವಾ ನಿಯಂತ್ರಿಸಲು ನಮಗೆ ಸಾಧ್ಯವೇ? ಪ್ರತಿಯೊಬ್ಬರಿಗೂ ಅವರವರದ್ದೇ ಆದ ಅನುಭವವಿರುತ್ತದೆ. ಪ್ರತಿಯೊಬ್ಬರಿಗೂ ಅವರವರ ಅನುಭವದ ಪ್ರಕಾರ ಆ ಪರತತ್ವದ ದರ್ಶನವಾಗುತ್ತದೆ.
ಯಾರೊಬ್ಬರ ಅಂತರಂಗವನ್ನು ಹೊಕ್ಕು ನೋಡಲೂ ನಮ್ಮಿಂದ ಸಾಧ್ಯವಿಲ್ಲ. ಅವರವರೇ ಅವರ ಅಂತರಂಗವನ್ನು ಹೊಕ್ಕು ನೋಡಿದರೆ, ಅವರವರ ಭಾವನೆಗೆ ತಕ್ಕಂತೆ ಪರಮಾತ್ಮ ಅಷ್ಟು ದೊಡ್ಡದಾಗಿಯೋ ಸಣ್ಣದಾಗಿಯೋ ಕಾಣಿಸುತ್ತಾನೆ. ಮಿಥ್ಯಾ ಪ್ರಪಂಚದ ಬ್ರಹ್ಮಾಂಡ ಬಹಳ ದೊಡ್ಡದು; ಯೋಗಿಗೆ ಈ ಪ್ರಪಂಚ ಅಥವಾ ಬ್ರಹ್ಮಾಂಡ ಬಹಳ ಚಿಕ್ಕದು. ಜನಸಾಮಾನ್ಯ ಈ ಪ್ರಪಂಚವನ್ನು ಭೋಗಾಸಕ್ತಿಯಿಂದ ನೋಡುತ್ತಾನೆ; ಪರಮಯೋಗಿ ಅದನ್ನು ಯೋಗಾಸಕ್ತಿಯಿಂದ ನೋಡುತ್ತಾನೆ. ಅಂದರೆ ವ್ಯಕ್ತಿಯ ಮನಸ್ಸಿನಲ್ಲಿರುವ ಭಾವನೆಗೆ ತಕ್ಕಂತೆ ಎಲ್ಲವೂ ಕಾಣುತ್ತದೆ ಯಾಕೆಂದರೆ ಇಹದ ರಹಸ್ಯ ಎಲ್ಲರ ಅರಿವಿಗೆ ನಿಲುಕುವುದಿಲ್ಲ. ದೇವರು ನಿರಾಕಾರ, ನಿರಾಮಯ ಎಂದು ವೇದಗಳು ಸಾರುತ್ತವೆ. ಹೀಗಿದ್ದೂ ಕೆಲವರಿಗೆ ಮನೆಯಲ್ಲಿರುವ ಸಣ್ಣ ಮೂರ್ತಿಯೇ ದೇವರು ಮತ್ತು ಉಳಿದೆಡೆ ದೇವರಿಲ್ಲ.
ಕನಕದಾಸರಿಗೂ ಸೇರಿದಂತೆ ಹಲವು ಶಿಷ್ಯರಿಗೆ ಯಾರೂ ಇಲ್ಲದ ಜಾಗದಲ್ಲಿ ಅಡಗಿ ತಿಂದುಬರುವಂತೆ ತಿಳಿಸಿ ಬಾಳೆಯ ಹಣ್ಣನ್ನು ಅವರ ಗುರುಗಳು ಕೊಟ್ಟರು. ಎಲ್ಲರೂ ಅಲ್ಲಲ್ಲಿ ಬಾಗಿಲ ಮರೆಯಲ್ಲಿ, ಗೋಡೆಯೆ ಇರುಕಿನಲ್ಲಿ, ಯಾವ್ಯಾವುದೋ ಸಂದು-ಮೂಲೆಗಳಲ್ಲಿ ನಿಂತು ತಿಂದುಬಂದರೆ ಕನಕ ಅದನ್ನು ಹಾಗೆಯೇ ಹಿಡಿದು ಮರಳಿ ಬಂದ!
“ಏನಯ್ಯಾ ಕನಕಾ? ಬಾಳೆಹಣ್ಣನ್ನು ತಿನ್ನಲು ನಿನಗೆ ಜಾಗ ಸಿಗಲಿಲ್ಲವೇ?” ಎಂದು ಗುರುಗಳು ಕೇಳಿದರು.
ವಿನಮ್ರನಾಗಿ ಕನಕ ಉತ್ತರಿಸಿದ, “ಸ್ವಾಮೀ, ಎಲ್ಲರಂತೆ ನಾನೂ ಸಹ ಸಂದು-ಮೂಲೆಗಳನ್ನು ಹುಡುಕಿ ಹೋದದ್ದು ನಿಜ. ಆದರೆ ಸರ್ವಾಂತರ್ಯಾಮಿಯಾದ ಭಗವಂತನ ಕಣ್ಣಿನಿಂದ ತಪ್ಪಿಸಿಕೊಂಡು ತಿನ್ನಲು ನನ್ನಿಂದ ಸಾಧ್ಯವಾಗಲಿಲ್ಲ. ಯಾರಿಗೂ ತೋರಿಸಬಾರದೆಂದು ತಾವು ಹೇಳಿದ್ದಿರಿ. ಯಾರಿಗೂ ತೋರಿಸದೇ ತಿಂದೆನೆಂದರೆ ಅಪರಾಧವಾಗುತ್ತದೆ; ಆತ್ಮವಂಚನೆಯಾಗುತ್ತದೆ. ಹೀಗಾಗಿ ತಿನ್ನಲಾರದೆ ಮರಳಿ ತಂದೆ.”
ಮನಸ್ಸಿನ ಪ್ರಬುದ್ಧ ಸ್ಥಿತಿ ಕನಕನಿಗೆ ಬಾಳೆಯ ಹಣ್ಣನ್ನು ತಿನ್ನಲು ಬಿಡಲಿಲ್ಲ, ಅದೇ ಯೋಗದಲ್ಲಿ ಹೇಳಿದ ಪ್ರತ್ಯಾಹಾರದ ಆರಂಭಿಕ ಹಂತ, ಕನಕನಿಗೆ ಫಾರ್ಮಲ್ ಎಜುಕೇಶನ್ ಇರಲಿಲ್ಲ-ಹಾಗಾಗಿ ಅದನ್ನೆಲ್ಲ ಹೇಳಲು ಬರುತ್ತಿರಲಿಲ್ಲ; ಎಲ್ಲರ ಕಣ್ತಪ್ಪಿಸಿ ಬಾಳೆಯ ಹಣ್ಣನ್ನು ತಿಂದವರು ತಾವು ಮಂಗಗಳಾದುದನ್ನು ಆಗ ಅರಿತಿರಬೇಕು; ಅಥವಾ “ಈ ಕನಕ ಹೀಗೆ, ಎಲ್ಲದರಲ್ಲೂ ಕೊಂಕು ಬುದ್ಧಿ” ಎಂದು ತಮ್ಮೊಳಗೇ ಆಡಿಕೊಂಡಿರಬಹುದು.
ಯೋಗ ಹೇಳುತ್ತದೆ-ದೇವರು ಹೃದಯದಲ್ಲೇ ಇದ್ದಾನೆ, ಕಳೆಬೆಳೆದ ಹೊಲದಲ್ಲಿ ಬೆಳೆಯಾವುದು ಕಳೆಯಾವುದು ಗೊತ್ತಾಗುವುದು ಕಷ್ಟವಾದಂತೆ ಪ್ರಾಪಂಚಿಕ ವ್ಯವಹಾರದ ಕಳೆಗಳು ಬೆಳೆದ ಮನಸ್ಸಿನಲ್ಲಿ ದೇವರು ಎಂಬ ಬೆಳೆಯನ್ನು ಹುಡುಕುವುದು ಬಹಳ ಕಷ್ಟ. ತಿಳಿನೀರ ತಳದಲ್ಲಿ ಕುಳಿತಿರುವ ಬಂಗಾರದ ನಾಣ್ಯ ಥಳುಕಿನ ಬಣ್ಣ-ಬೆಳಕು ಸೇರಿದರೆ ಕಾಣಿಸುವುದಿಲ್ಲ.
ನೋಡಿ, “ದೇವರು ಇದೇ ಮೂರ್ತಿ”ಎಂದು ಕೆವರು ವಾದಿಸಬಹುದು. ಅದೇ ದೇವರಲ್ಲ; ಅದರೊಳಗೆ ದೇವರು ಎಂದರೆ ಅವರಿಗೆ ಬೇಸರವಾಗಬಹುದು. ಆದರಿಸಬೇಕಾದ ರೀತಿಯಲ್ಲಿ ಆದರಿಸಿದರೆ ಕಲಶ, ಮಂಡಲ, ಚಿತ್ರ, ಪ್ರತಿಮೆ ಅಥವಾ ವಿಗ್ರಹದೊಳಗೆ ದೇವರು ಸನ್ನಿಹಿತನಾಗುತ್ತಾನೆ. ಅನುಸರಿಸುವ ರೀತಿಯೇ ಸರಿಯಿಲ್ಲದಿದ್ದರೆ ಯಾವುದರಲ್ಲೂ ಏನೂ ಇಲ್ಲ. ಭಕ್ತನಿಗೆ ಅಷ್ಟೊಂದು ಕಣ್ತುಂಬಿಸಿ ಕಾಣಿಕೆ ಪಡೆದುಕೊಳ್ಳುವ ದೇವರು ಕಳ್ಳನಿಗೆ ಕೈತುಂಬ ಅದನ್ನೇ ನೀಡಿ ಕಳಿಸಬಹುದು; ಅಲ್ಲಿ ಎರಡು ವಿಧದ ಕರ್ಮಗಳು ನಡೆಯುತ್ತವೆ. ಒಂದು ಉತ್ತಮ ಕರ್ಮ, ಇನ್ನೊಂದು ಅಧಮ ಕರ್ಮ. ಅವರವರ ಭಾವಕ್ಕೆ ತಕ್ಕಂತೆ ಇಬ್ಬರ ಮನದಲ್ಲೂ ತಪ್ಪುಗಳಿಲ್ಲ. ಯಾರಿಗೆ ಯಾವ ಫಲವೆಂದು ನಿರ್ಧರಿಸುವ ಶಕ್ತಿ ಮಾತ್ರ ಅವರಿಗಿಲ್ಲ.
ಕೆಲವೊಮ್ಮೆ ಸಂದಿಗ್ಧ ಹೀಗಿರುತ್ತದೆ: ಹಸಿದ ಹದ್ದೊಂದು ಹಾವನ್ನು ಹಿಡಿದು ಹಾರುತ್ತಿತ್ತು. ಹದ್ದಿನ ಹಿಡಿತಕ್ಕೊಳಗಾಗಿ ಸಾಯುತ್ತಿರುವ ಹಾವು ಹದ್ದನ್ನು ಕಚ್ಚಲೆತ್ನಿಸುತ್ತ ವಿಷವನ್ನು ಉಗುಳಿತ್ತು. ಅತಿಥಿಸತ್ಕಾರ ನಿಷ್ಠನಾದ ಬ್ರಾಹ್ಮಣನೋರ್ವ ಮಧ್ಯಾಹ್ನ ಯಾರೂ ಸಿಗಲಿಲ್ಲವೆಂಬ ಕಾರಣಕ್ಕೆ ಪಾತ್ರೆಗಳಲ್ಲಿ ಆಹಾರವನ್ನು ತೆಗೆದುಕೊಂಡು ಹೊರಗೆ ಯಾರಾದರೂ ಹಸಿದವರು ಸಿಕ್ಕಾರೆಂದು ಹೊರಟಿದ್ದ. ಮೇಲಿನಿಂದ ಉದುರಿದ ಹಾವಿನ ವಿಷದ ಹನಿಗಳು ಆಹಾರದ ಪಾತ್ರೆಯಲ್ಲಿ ಬಿದ್ದವು. ಬ್ರಾಹ್ಮಣ ಭಕ್ತಿಯಿಂದ ಅನ್ನದಾನ ಮಾಡಿದ. ಉಂಡವರು ಕೈಲಾಸ ಕಂಡರು! ಪಾಪ ಯಾರಿಗೆ? ಹದ್ದಿಗೋ? ಹಾವಿಗೋ? ಬ್ರಾಹ್ಮಣನಿಗೋ? ಇಂತಹ ಕ್ಲೇಶಗಳು ಜನಜೀವನದಲ್ಲಿ ಒಂದೆರಡಲ್ಲ. ಇವುಗಳನ್ನು ನಿರ್ಧರಿಸುವುದೂ ನಮ್ಮಿಂದ ಸಾಧ್ಯವಾಗುವುದಿಲ್ಲ.
ನಮ್ಮ ಭಾವನೆಗಳಲ್ಲಿ ಪರತತ್ವ ಬೃಹತ್ತಾಗಬೇಕು ಮತ್ತು ಆ ಭಾವ ಗಟ್ಟಿಯಾಗಿ, ಸ್ಥಿರವಾಗಿ, ದೀರ್ಘಕಾಲ ಇರಬೇಕೆಂಬ ಪ್ರಯತ್ನ ನಮ್ಮದಾಗಬೇಕು. ಸಾಮಾನ್ಯ ಮನುಷ್ಯನ ಮನಸ್ಸೆಂಬುದು ಕಳೆಬೆಳೆದ ಹೊಲ. ಆಧುನಿಕ ವಿದ್ಯೆಯನ್ನು ಅವನೆಷ್ಟೇ ಕಲಿತಿದ್ದರೂ ಮನೋನಿಗ್ರಹ ವಿದ್ಯೆಯನ್ನು ಕಲಿಯದಿದ್ದರೆ ಯಾವ ಪ್ರಯೋಜನವೂ ಇಲ್ಲ. ಕೇವಲ ಆಧ್ಯಾತ್ಮಿಕ ಪುಸ್ತಕಗಳನ್ನು ಓದುವುದರಿಂದ, ಯಾರದೋ ಪ್ರವಚನ ಕೇಳುವುದರಿಂದ ಮನೋನಿಗ್ರಹವಿದ್ಯೆಯನ್ನು ಕಲಿಯುವುದು ಸಾಧ್ಯವಿಲ್ಲ. ಅದಕ್ಕಿರುವ ಏಕೈಕ ಮಾರ್ಗವೆಂದರೆ ಯೋಗವೊಂದೇ.
ಯೋಗದ ಹಂಗಿಲ್ಲದ ಹಾವಾಡಿಗ ಸಂಸ್ಥಾನದವರಾದ ನಾವು ಇಂತಹ ಹಲವು ಕತೆಗಳನ್ನು ಶಿಷ್ಯಗಣಗಳಿಗೆ ಇನ್ನಷ್ಟು ಬಣ್ಣ ಹಚ್ಚಿ ಬಡಿಸುತ್ತೇವೆ; ಆದರೆ ನಮಗೆ ಮಾತ್ರ ಅವು ಬೇಕಾಗಿಲ್ಲ. ಬುಸ್ಸಪ್ಪನ ಕತೆಗಳಿಗಂತೂ ನಮ್ಮಲ್ಲಿ ಕೊರತೆಯೇ ಇಲ್ಲ.
ಕಾನ್ಕುಳಿಯಲ್ಲಿ ಬುಸ್ಸಪ್ಪನನ್ನು ಹೊರಗೆ ಬಿಟ್ಟು ಆಡಿಸಿದ ಕೋಣೆಯನ್ನೇ ವಾಸ್ತುದೋಷವೆಂದು ಕೆಡವಿಸಿಬಿಟ್ಟಿದ್ದೇವೆ ನಾವು. ಅದರಂತೆ ಇನ್ನಷ್ಟು ಕಡೆಗೆ ಹಾಗೆ ಮಾಡಿದ್ದೇವೆ, ಎಲ್ಲವನ್ನೂ ಇಲ್ಲಿ ಹೇಳಲಾಗುವುದಿಲ್ಲ. ಹಾದರದ ಕತೆಗಳಿಗೆ ಆಧಾರವೇ ಸಿಗಬಾರದು ಎಂಬುದು ನಮ್ಮ ಉದ್ದೇಶ; ಹಾಗಾಗಿ ವಾಸ್ತು, ಅಷ್ಟಮಂಗಲ, ದೃಷ್ಟಿ, ಮಾಟ, ಮಂತ್ರ, ಯಂತ್ರ, ತಂತ್ರ ಎಲ್ಲವನ್ನೂ ಬಳಸಿಕೊಳ್ಳುತ್ತಿದ್ದೇವೆ.
ಅಷ್ಟಮಂಗಲದವನಿಗೆ ಮ್ಯಾಚ್ ಫಿಕ್ಸ್ ಮಾಡಿಕೊಂಡರೆ ಇಷ್ಟವಾಗುವ ಹೇಳಿಕೆಯನ್ನೇ ನೀಡುತ್ತಾನೆ; ಉಳಿದ ಎಲ್ಲಾ ಕಲಾವಿದರೂ ಅಷ್ಟೆ-ಅವರನ್ನೆಲ್ಲ ಮೊದಲೇ ಮಾತನಾಡಿಸಿಬಿಟ್ಟರೆ ಎಲ್ಲವೂ ನಮ್ಮ ನೇರಕ್ಕೇ ನಡೆಯುತ್ತದೆ. ನಮ್ಮ ಆಂತರಿಕ ಕೈಗಾರಿಕಾ ತಾಣ ಎಂಬುದು ಕಳ್ಳರ ಅಂದರೆ ಕಳ್ಳ ಭಾವನೆಗಳು ಮತ್ತು ದುಷ್ಟ ಯೋಚನೆಗಳ ಅಡಗುದಾಣವಾಗಿದೆ.
ಮಂಜು ಗಾವಿಗೆ ಕೊಂಕಣಿ ಭಕ್ತನೊಬ್ಬ ದಾನವಾಗಿ ಕೊಟ್ಟ ಅರವತ್ತು ಸೆಂಟ್ಸ್ ಜಾಗವನ್ನು ಸೈಟುಗಳನ್ನಾಗಿ ಪರಿವರ್ತಿಸಿ ಮಾರಿದ್ದೇವೆ ನಾವು. ಮೊದಲು ಅಲ್ಲಿ ಶಾಲೆ ನಿರ್ಮಿಸುತ್ತೇವೆ ಅಂತ ಅವರಿಂದ ಪಡೆದುಕೊಂಡಿದ್ದು. ಅಲ್ಲಿಗೆ ಹೋಗಲು ಸರಿಯಾದ ದಾರಿಯಿಲ್ಲ, ದಾರಿಗಾಗಿ ಜಾಗ ಬಿಡಬೇಕು ಅಂತ ಪಕ್ಕದಲ್ಲಿರುವ ಪ್ರೊಫೆಸರ್ ಮನೆಯ ಕಾಂಪೌಂಡನ್ನು ತುರ್ತಾಗಿ ರಾತ್ರೋರಾತ್ರಿ, ಪ್ರೊಫೆಸರ್ ಅವರ ಮುದಿ ತಾಯಿ ಮಾತ್ರ ಮನೆಯಲ್ಲಿರುವಾಗ, ಒಡೆದು ದಾರಿ ಮಾಡಿಸಿದೆವು.
ಇಂತಹ ನೂರಾರು ಶಿಷ್ಯೋದ್ಧಾರಕ ಸುಧಾರಣೆಗಳನ್ನು ಮಾಡಿದ್ದೇವೆ ನಾವು. ಬಿಡುವಾದಾಗ ಒಂದೊಂದಾಗಿ ಪ್ರವಚನದಲ್ಲಿ ನಿಮಗೆ ಹೇಳುತ್ತ ಹೋಗುತ್ತೇವೆ. ಪರಮ ಮಂಗಲವೂ ಪರಮ ಪವಿತ್ರವೂ ಆದ ಅಂತಹ ಕತೆಗಳನ್ನು ಕೇಳುವಾಗ ನೀವು, ಆದಿ ಮಂಗಲ ಅಂತ್ಯಮಂಗಲ ಮತ್ತು ಮಧ್ಯಮಂಗಲದ ಜೊತೆಗೆ ಅಷ್ಟಮಂಗಲದ ಕತೆಗಳನ್ನೂ ಸೇರಿಸಿಕೊಂಡು ಕೇಳಬೇಕಾಗುತ್ತದಷ್ಟೆ.
ಒಂದೆರಡು ದಿನಗಳಲ್ಲಿ ಸುಂದರ ರಾವಣನ ಕತೆಯನ್ನು ಕೇಳಲಿದ್ದೀರಿ. ಈಗ ವಿಶೇಷತಃ ಮಹಿಳಾ ಶಿಷ್ಯರು ಎಲ್ಲವನ್ನೂ ಅರ್ಪಣೆ ಮಾಡಿದ ಭಾವನೆಯಲ್ಲಿ ಎಲ್ಲವನ್ನೂ ಬಿಚ್ಚಾಕಿ ಎರಡೂ ಕೈ ಮೇಲೆತ್ತಿ ಚಪ್ಪಾಳೆ ತಟ್ಟುತ್ತ ನರ್ತನ ಮಾಡಿ.
ಬರೇ ಕಾಮ
ಬರೇ ಕಾಮ"

July 12

https://www.facebook.com/groups/1499395003680065/permalink/1639067779712786/

ಸುಂದರ ರಾವಣೋಪಾಖ್ಯಾನ ಮತ್ತು ಸುಂದರಿಯರ ಪರಿಣಯ
________________________________________
"ಸುರಾಪಾನ ಪ್ರಿಯಂ ದೇವಂ ಮಂತ್ರಿರೂಪಂ ಮಹೋದಯಂ|
ಲಂಚದೇವಿ ನಮಸ್ತುಭ್ಯಂ ಮಾನಭಂಗ ನಮೋಸ್ತುತೇ ||
ಮಂತ್ರ ಮೂಲೇ ಮಾವಿನಕಾಯಿ ತಂತ್ರಮೂಲೇ ಅಥರ್ವಣಃ |
ಧ್ಯಾನಮೂಲೇ ಪಾನಮೂಲಂ ಸರ್ವಮೂಲೇ ಮಣ್ಣಂಗಟ್ಟಿಃ ||
ಬರೇ ಕಾಮ ...
ನಾವಿವತ್ತು ಪ್ರಾಣ, ಮನಸ್ಸು ಮತ್ತು ವೀರ್ಯದ ಬಗ್ಗೆ ಹೇಳ್ತೇವೆ.
ನಿತ್ಯ ಜೀವನದಲ್ಲಿ ನಮಗೆ ಅರಿತೋ ಅರಿವಿಲ್ಲದೆಯೋ ನಾವು ಕೆಲಮಟ್ಟಿಗಿನ ಪ್ರಾಣಾಯಾಮವನ್ನು ನಡೆಸುತ್ತಿರುತ್ತೇವೆ. ನೀವು ಧ್ಯಾನದಲ್ಲಿ ಆಸಕ್ತರಾದರೆ ಅಲ್ಲಿ ತಂತಾನೇ ಒಂದು ವಿಧದ ಪ್ರಾಣಾಯಾಮ ಜರುಗುತ್ತದೆ. ಉತ್ತಮವಾದೊಂದು ಕಥೆಯ ಹೊತ್ತಗೆಯನ್ನು ನೀವು‌ಓದುತ್ತಿರುವಾಗ ಅಥವಾ ಗಣಿತದ ಸಮಸ್ಯೆಯೊಂದಕ್ಕೆ ಪರಿಹಾರವನ್ನು ಹುಡುಕುತ್ತಿರುವಾಗ ನಿಮ್ಮ ಮನಸ್ಸು ಆಯಾಯ ವಿಷಯದಲ್ಲಿ ಕೇಂದ್ರಿತವಾಗಿರುತ್ತದೆ.
ಆಗ ನಿಮ್ಮ ಶ್ವಾಸದ ಕಡೆಗೆ ಗಮನ ಹರಿಸಿದರೆ ಉಸಿರಾಟವು ತುಂಬಾ ನಿಧಾನವಾಗಿರುವುದು ಗೊತ್ತಾಗುತ್ತದೆ. ದುರಂತ ನಾಟಕವೊಂದನ್ನು ವೇದಿಕೆಯಲ್ಲಿ ನೋಡುವಾಗ ಅಥವಾ ಸಿನಿಮಾವನ್ನು ನೋಡುವಾಗ, ಸಂತೋಷ ಅಥವಾ ದುಃಖದ ಸನ್ನಿವೇಶವನ್ನು ನೀವು ಅನುಭವಿಸುತ್ತೀರಷ್ಟೇ? ಆಗೆಲ್ಲ ಕಣ್ಣೀರೋ ಅಥವಾ ಅನಂದಬಾಷ್ಪವೋ ಸುರಿಯುತ್ತದೆ. ಅಲ್ಲೆಲ್ಲ ದೀರ್ಘ ಉಸಿರಾಟದ ಪ್ರಕ್ರಿಯೆ ಕಾಣುತ್ತದೆ. ಯೋಗಾಸನದ ವಿದ್ಯಾರ್ಥಿಗಳು ಶೀರ್ಷಾಸನ ನಡೆಸುವಾಗ ಪ್ರಾಣಾಯಾಮವು ತಂತಾನೇ ನಡೆಯುತ್ತದೆ.
ಮನಸ್ಸು ಯಾವುದಾದರೊಂದು ವಿಷಯದಲ್ಲಿ ಆಳವಾಗಿ ಕೇಂದ್ರಿತವಾಗಿದ್ದಾಗ ಪ್ರಾಣಾಯಾಮ ನಡೆಯುತ್ತದೆ ಎಂಬುದು ಇದರಿಂದ ಗೊತ್ತಾಗುತ್ತದೆ. ಪ್ರಾಣ ಮತ್ತು ಮನಸ್ಸು ಅನನ್ಯ ಸಂಬಂಧವನ್ನು ಹೊಂದಿವೆ. ಅಂತಹ ವೇಳೆಗಳಲ್ಲಿ ನೀವು ಉಸಿರಾಟದತ್ತ ಗಮನಹರಿಸಿದರೆ ತಕ್ಷಣವೇ ಅದು ಮರಳಿ ಸಹಜ ಸ್ಥಿತಿಗೆ ಬಂದುಬಿಡುತ್ತದೆ. ಹೀಗಾಗಿ ಆಳವಾದ ಜಪ, ತಪ, ಬ್ರಹ್ಮ ಧ್ಯಾನಗಳಲ್ಲಿ ನಿರತರಾದವರಲ್ಲಿ ಪ್ರಾಣಾಯಾಮವು ಸಹಜವಾಗಿ ನಡೆಯುತ್ತಿರುತ್ತದೆ.
ಪ್ರಾಣ,ಮನಸ್ಸು ಮತ್ತು ವೀರ್ಯ[ವೀರ್ಯಶಕ್ತಿ]ಗಳಲ್ಲಿ ಒಂದಕ್ಕೊಂದು ಸಂಬಂಧವಿದೆ. ನೀವು ಮನಸ್ಸನ್ನು ನಿಗ್ರಹಿಸಿದರೆ ಪ್ರಾಣ ಮತ್ತು ವೀರ್ಯಗಳು ತಂತಾನೇ ನಿಗ್ರಹಗೊಳ್ಳುತ್ತವೆ. ನೀವು ಪ್ರಾಣವನ್ನು ನಿಯಂತ್ರಿಸಿದರೆ ಮನಸ್ಸು ಮತ್ತು ವೀರ್ಯಗಳು ತಂತಾನೇ ನಿಯಂತ್ರಣಕ್ಕೊಳಪಡುತ್ತವೆ. ಸತತ ಹನ್ನೆರಡು ವರ್ಷಗಳ ಕಾಲ ಒಂದೇ ಒಂದು ವೀರ್ಯದ ಹನಿಯೂ ಹೊರಚೆಲ್ಲದಂತಹ ಬ್ರಹ್ಮಚರ್ಯವನ್ನು ನೀವು ಆಚರಿಸಿದರೆ ಮನಸ್ಸು ಮತ್ತು ಪ್ರಾಣಗಳು ತಂತಾನೇ ನಿಗ್ರಹಗೊಳ್ಳುತ್ತವೆ.
ಇಲ್ಲಿ ವಾಯು ಮತ್ತು ಅಗ್ನಿಯ ನಡುವೆ ಒಂದು ಸಂಬಂಧವಿದೆ; ಪ್ರಾಣ ಮತ್ತು ಮನಸ್ಸಿನ ನಡುವೆಯೂ ಅದೇರೀತಿಯ ಸಂಬಂಧವಿದೆ. ಗಾಳಿಯು ದೀಪ[ಎಣ್ಣೆಯ ದೀಪ]ವನ್ನು ಆಲ್ಲಾಡಿಸುತ್ತದೆ. ಪ್ರಾಣವು ಮನಸ್ಸನ್ನು ಉತ್ತೇಜಿಸುತ್ತದೆ. ಗಾಳಿ ರಭಸವಾಗಿ ಬೀಸದಿದ್ದರೆ ದೀಪವು ಸ್ಥಿರವಾಗಿ ಉರಿಯುತ್ತದೆ. ಹಠಯೋಗಿಗಳು ಪ್ರಾಣವನ್ನು ನಿಗ್ರಹಿಸಿ ಭಗವಂತನನ್ನು ಸಂಧಿಸುತ್ತಾರೆ; ರಾಜಯೋಗಿಗಳು ಮನಸ್ಸನ್ನು ನಿಗ್ರಹಿಸಿ ಭಗವಂತನನ್ನು ಸಂಧಿಸುತ್ತಾರೆ. ಇದು ಯೋಗ ಸಾರುವ ವಿಷಯವಾಯ್ತು.
ಈಗ ನಮ್ಮನ್ನೇ ತೆಗೆದುಕೊಳ್ಳಿ, ನಮ್ಮ ಮನಸ್ಸು ಸದಾ ಸುಂದರಿಯರನ್ನು ಧ್ಯಾನಿಸುತ್ತಿರುವುದರಿಂದ ನಮ್ಮಲ್ಲಿ ಪ್ರಾಣಾಯಾಮ ತಂತಾನೇ ನಡೆಯುತ್ತದೆ ಎಂಬುದು ನಮಗೆ ಗೊತ್ತಿದೆ; ತಂತಾನೇ ನಡೆಯುವ ಪ್ರಾಣಾಯಾಮಕ್ಕೆ ಅನುಕೂಲ ಕಲ್ಪಿಸುವ ಸಲುವಾಗಿ ದಶಕದ ಹಿಂದಿನಿಂದಲೇ ನಾವು ’ಸುಂದರೀ ಧ್ಯಾನ’ವನ್ನು ಆರಂಭಿಸಿದೆವು. ಸುಂದರಿಯರ ಧ್ಯಾನದಲ್ಲೇ ಮನಸ್ಸನ್ನು ಕೇಂದ್ರೀಕರಿಸಿ ಪ್ರಾಣಾಯಾಮ ತಂತಾನೇ ನಡೆಸುವುದು ಯೋಗಕ್ಕೆ ನಾವು ನೀಡಿದ ಹೊಷ ಆವಿಷ್ಕಾರ.
ಸನ್ಯಾಸಿ ಗುಂಡು ಹೊಡೆಸಿಕೊಳ್ಳುವುದು, ಬ್ರಾಹ್ಮಣ ಗುಂಡುಹೊಡೆಸಿಕೊಂಡು ಗೋವಿನ ಹೆಜ್ಜೆ ಗಾತ್ರದ ಜುಟ್ಟು ಬಿಟ್ಟುಕೊಳ್ಳುವುದು ಇದರಲ್ಲೆಲ್ಲ ಕೆಲವು ಅರ್ಥಗಳಿವೆ; ಪ್ರಮುಖವಾಗಿ ಸೌಂದರ್ಯ ವರ್ಧನೆ ಆಗುವುದು ಬೇಡ ಎಂಬುದು ಪ್ರಧಾನ ಕಾರಣ. ನೆತ್ತಿಯಮೇಲಿನ ಕೂದಲು ಬೇಕಾಬಿಟ್ಟಿ ಹಾರಾಡುತ್ತಿದ್ದರೆ ಚಿತ್ತವೃತ್ತಿಯನ್ನು ನಿಗ್ರಹಿಸುವುದು ಕಷ್ಟವಂತೆ. ನಾವು ಗುಂಡು ಹೊಡೆಸಿಕೊಳ್ತಿರಲಿಲ್ಲ; ಹಾಗೊಮ್ಮೆ ಹಿಪ್ಪಿ ಬಿಟ್ಟರೆ ಭಕ್ತರನ್ನು ನಂಬಿಸಲಾಗದು ಮತ್ತು ಅವರು ದೊಣ್ಣೆ ಹಿಡಿಯಬಹುದು ಎಂಬ ಮುಂಧೋರಣೆಯಿಂದಲೇ ನಾವು ಗುಂಡು ಹೊಡೆಸಿಕೊಳ್ತೇವೆ.
ನಮ್ಮ ಮುಖಕ್ಕೆ ಕೆಲವು ವಿಧದ ಲೇಪದ ಲೆಪ್ಪಗಳನ್ನೂ ಬಳಸುತ್ತೇವೆ. ಹೀಗಾಗಿ ಗುಂಡು ಹೊಡೆಸಿಕೊಂಡರೂ ’ಮಹಿಳಾ ಸಬಲೀಕರಣ’ದ ಫಲಾನುಭವಿಗಳಿಗೆ ನಾವು ಸುಂದರವಾಗೇ ಕಾಣುತ್ತೇವೆ. ತಲೆ ಇಲ್ಲದ ಸನ್ಯಾಸಿಗಳು ರುದ್ರಾಕ್ಷಿ ಸರ ಹಾಕ್ಕೋತಾರೆ. ನಮ್ಮಂತಹ ಸ್ಟಾರ್ ವೀರ್ಯಸನ್ಯಾಸಿಗಳಿಗೆ ಅವೆಲ್ಲ ಬೇಕಿಲ್ಲ; ಧರಿಸಿದರೆ ಅವುಗಳನ್ನೆಲ್ಲ ಏಕಾಂತದಲ್ಲಿ ಬೇಕಾದವರ ಕೊರಳಿಗೆ ಹಾಕಿ ಆಟವಾಡಲು ಸಾಧ್ಯವಾಗುವುದಿಲ್ಲ. ರುದ್ರಾಕ್ಷಿ ಧಾರಣೆಯಿಂದ ಬಂಗಾರವನ್ನು ಧರಿಸಿದರೆ ಸಿಗುವ ಧನಾತ್ಮಕ ಪರಿಣಾಮಗಳೇ ಸಿಗುತ್ತವಂತೆ; ಸನ್ಯಾಸಿಗಳು ಸದಾ ಬಂಗಾರವನ್ನು ಧರಿಸುವುದು ವಿಹಿತವಲ್ಲ ಎಂಬ ಕಾರಣದಿಂದ ರುದ್ರಾಕ್ಷಿ ಧಾರಣೆಯನ್ನು ಹೇಳಿದ್ದಾರೆ. ಮೇಲಾಗಿ ರುದ್ರಾಕ್ಷಿ ರಕ್ತದೊತ್ತಡವನ್ನು ಸಮಸ್ಥಿತಿಯಲ್ಲಿ ಇಡುತ್ತದೆ ಎಂಬ ಇನ್ನೊಂದು ಕಾರಣವೂ ಇದೆ. ಇನ್ನೂ ಕೆಲವು ಕಾರಣಗಳಿವೆ, ಎಲ್ಲವನ್ನೂ ನಾವಿಲ್ಲಿ ಹೇಳುವುದಿಲ್ಲ.
ಕಾವಿಯಲ್ಲಿ ನಮ್ಮಷ್ಟು ಸುಂದರರು ಯಾರಿದ್ದಾರೆ ಹೇಳಿ? ನಾವು ವಿಶ್ವವಿಖ್ಯಾತಿಯನ್ನು ಇನ್ನೇನು ಪಡೆಯಲಿದ್ದೆವು. ನಮ್ಮ ಲೈನಿನಲ್ಲಿ ಸ್ನೇಹಿತ ಮಿತ್ಯಾನಂದ ಮೊದಲೇ ’ಕ್ಯಾತ’ನಾಗಿದ್ದಾನಲ್ಲಾ? ನಮ್ಮ ಇನ್ನೊಬ್ಬ ಸ್ನೇಹಿತ ಅಸರಾಂ ಬಾಪುವನ್ನು ಅನಗತ್ಯವಾಗಿ ಒಳಗಿಟ್ಟಿದ್ದಾರೆ; ಸಾಕ್ಷಿಗಳಾಗಿರುವ ಎಂಟು ಜನರನ್ನು ಮುಗಿಸಲು ಹೋಗಿ ಇಬ್ಬರು ಮೂವರು ಸತ್ತೇಹೋದರು ಮತ್ತು ಉಳಿದವರು ಮಾರಣಂತಿಕ ಹಲ್ಲೆಯನ್ನು ಅನುಭವಿಸಿದರು ಎಂದು ಸುಖಾಸುಮ್ಮನೆ ಆರೋಪಿಸುತ್ತಾರೆ. ಅವರೂ ನಮ್ಮಂತೆಯೇ ಹಿಂದೂ ಸಂಘಟನೆಗಳ ಸಹಾಯ ಕೇಳಿದ್ದಾರೆ. ಅವು ಕೈಬಿಟ್ಟ ನಂತರ ಈಗ ಮರದ ಕೆಳಗೆ ಬಿದ್ದ ಮಂಗನಂತಾಗಿದ್ದಾರೆ ಎಂದು ಯಾರೋ ಹಲುಬುತ್ತಿದ್ದರು. ಸಾಕ್ಷಿ ಹೇಳಲಿರುವ ಇನ್ನೊಬ್ಬನನ್ನು ನಿನ್ನೆ ಕೊಂದುಹಾಕಲು ಯತ್ನಿಸಿದ್ದಾರೆ ಅಂತ ವಿನಾಕಾರಣ ಆರೋಪ ಮಾಡುತ್ತಾರೆ. ಇದೆಲ್ಲ ಸರಿಯೇ? ಅವರೂ ನಮ್ಮಂತೆಯೇ ’ಸಮರ್ಥ ಪುರುಷರು’; ನಮ್ಮ ’ಅಖಿಲ ಭಾರತ ಪ್ರಸಾದ ತಯಾರಕ ಹಾವಾಡಿಗ ಮಹಾ ಒಕ್ಕೂಟ ಮಹಾಮಂಡಲ[ಅ]’ದ ಬೋರ್ಡ್ ಕಮಿಟಿಯಲ್ಲಿ ಒಬ್ಬರು.
ಏಕಾಂತ ನಡೆಸುತ್ತಲೇ ಅತ್ಯಂತ ಜನಪ್ರಿಯ ಎನಿಸಿ, ಅಮೇರಿಕಕ್ಕೆ ಹಾರಿ, ಅಲ್ಲಿ ಇಂಟರ್ ನ್ಯಾಷನಲ್ ಕ್ಯಾಟ್ ವಾಕ್ ಗಳನ್ನು ಉದ್ಘಾಟಿಸಲಿದ್ದೆವು ನಾವು. ಕ್ಯಾಟ್ ವಾಕ್ ನಲ್ಲಿ ಬಳುಕುತ್ತ ಬರುವ ಸುಂದರಿಯರನ್ನು ನೋಡಬೇಕು-ಒಬ್ಬರಿಗಿಂತ ಒಬ್ಬರು ಬಲ. ಒಬ್ಬಳ ಮೂಗು ಚಂದ, ಇನ್ನೊಬ್ಬಳ ಕಣ್ಣು ಚಂದ, ಮತ್ತೊಬ್ಬಳ ನಡು ಚಂದ, ಇನ್ನೊಬ್ಬಳ ಪೃಷ್ಟ ಚಂದ, ಒಬ್ಬಳ ಉದ್ದದ ಕಾಲು ಚಂದ, ಮತ್ತೊಬ್ಬಳ ನೀಳ ತೋಳು ಚಂದ, ಇನ್ನೊಬ್ಬಳ ಹಲ್ಲು ಚಂದ, ಎಲ್ಲರ ಸೂರ್ಯ-ಚಂದ್ರರನ್ನು ನೋಡುವುದೇ ನಮ್ಮ ಕಣ್ಣಿಗೆ ಪರಮಾನಂದ.
ಗುರುಗಳು ಬರುತ್ತಾರೆಂದರೆ ಅಮೆರಿಕದಲ್ಲಿರುವ ನಮ್ಮ ಹಳದೀ ಕುರಿಗಳಿಗೆ ಎಲ್ಲಿಲ್ಲದ ಸಂತೋಷವಾಗುತ್ತಿತ್ತು. "ಅಭೂತಪೂರ್ವ ಪುರಪ್ರವೇಶವನ್ನು ಆಯೋಜಿಸುತ್ತೇವೆ" ಅಂತ ಹೇಳಿದ್ದರು ಕೆಲವರು. ಸನ್ಯಾಸಿ ಸಾಗರೋಲ್ಲಂಘನ ಮಾಡಬಾರದು ಎಂಬುದು ಹಿಂದಿನ ಕಾಲಕ್ಕಾಯ್ತು, ಅದು ಈ ಕಾಲಕ್ಕೆ ನಮಗೆ ಬೇಕಾಗಿಲ್ಲ ಎಂದಿದ್ದೆವು ನಾವು; ನಮ್ಮಷ್ಟು ಶಾಸ್ತ್ರ ಬಲ್ಲವರು ಈ ಲೋಕದಲ್ಲಿ ಯಾರಿದ್ದಾರೆ ಹೇಳಿ? ಸಕಲ ಶಾಸ್ತ್ರಗಳನ್ನೆಲ್ಲ ಎತ್ತಿ ಪಕ್ಕಕ್ಕೆಸೆದು ಕಾಮಶಾಸ್ತ್ರವೇ ಮಾನವ ಜೀವನವನ್ನು ಪಾವನಗೊಳಿಸುತ್ತದೆ ಎಂದು ಹೇಳಿದ್ದೇವೆ ನಾವು; ’ಹೇಳೋದು ಶಾಸ್ತ್ರ, ತಿನ್ನೋದು ಬದನೇಕಾಯಿ’ ಅಂತ ಜನ ಆಡಿಕೊಳ್ಳಬಾರದಲ್ಲ? ಅದಕ್ಕಾಗಿ ಕಾಮಶಾಸ್ತ್ರವನ್ನು ಆಚರಣೆಗಳ ಮೂಲಕ ಜಗತ್ತಿಗೆ ತೋರಿಸಿದ್ದೇವೆ ನಾವು. ನಮ್ಮ ಕಚ್ಚೆಹರುಕ ಶಿಷ್ಯರಿಗೂ ಅದನ್ನೇ ಬೋಧಿಸಿದ್ದೇವೆ. ಸುಂದರಿಯರನ್ನು ಕಂಡು ಒಳಗೊಳಗೇ ಜೊಲ್ಲು ಸುರಿಸುತ್ತಿದ್ದ ಅವರು ನಾವೇ ಖುದ್ದಾಗಿ ಅಚರಿಸಿದ್ದನ್ನು ಕಂಡು ತಾವೂ ಶಕ್ತ್ಯಾನುಸಾರ ಯೋಗದಾನ ಮಾಡಲು ಮುಂದೆಬಂದಿದ್ದಾರೆ.
ಲೋಕಾಂತ[ಏಕಾಂತದಿಂದ ಆಚೆ ಬಂದಾಗ ಅಂತ]ದಲ್ಲಿ ನಮ್ಮ ಪ್ರಸನ್ನ ವದನವನ್ನು ನೋಡಿ ಮರುಳಾಗದ ಮಹಿಳೆಯಿದ್ದರೆ ಅವಳ ಶೀಲ ಮತ್ತು ಮನಸ್ಸು ಗಟ್ಟಿಯಾಗಿದೆ ಎಂದೇ ಅರ್ಥ. ನಮ್ಮ ಕತೆಗಳಿಗೆ ಬರುವ ಹಲವು ಮಹಿಳೆಯರು ನಾವು ಹಲ್ಲು ಕಿಸಿದಾಗ ತಾವೂ ಕಿವಿಯವರೆಗೆ ಹಲ್ಲು ಕಿಸಿಯುತ್ತ ಪಕ್ಕಕ್ಕೇ ಬಂದು ನಿಲ್ಲುತ್ತಿದ್ದರು. ಯಾರ್ಯಾರ ಕಣ್ಣುಗಳಲ್ಲಿ ಯಾವ ಯಾವ ಭಾವನೆಗಳಿವೆ ಎಂಬುದನ್ನು ನಾವು ಗಮನಕ್ಕೆ ತೆಗೆದುಕೊಳ್ಳುತ್ತಿದ್ದೆವು. ಧ್ಯಾನಕ್ಕೆ ತೊಡಗಿದಾಗ ಅದನ್ನೆಲ್ಲ ನೆನಪಿಸಿಕೊಂಡು ಯಾವುದು ಆಗಬಹುದು? ’ಯಾವುದು ಹಣ್ಣು’-’ಯಾವುದು ಕಾಯಿ’? ಎಂಬುದನ್ನೆಲ್ಲ ಗುಣಾಕಾರ, ಭಾಗಾಕಾರ, ಸಂಕಲನ, ವ್ಯವಕಲನ ಮಾಡಿ, ಇದಿಷ್ಟನ್ನು ಒಂದೊಂದಾಗಿ ಕರೆಸಬೇಕು ಎಂದು ಸಂಕಲ್ಪ ಮಾಡುತ್ತಿದ್ದೆವು.
ಮುಂದಿನ ಕತೆಯ ದಿನಗಳಲ್ಲಿ ಸಂಕಲ್ಪವನ್ನು ಕಾರ್ಯಗತಗೊಳಿಸುವುದಕ್ಕೆ ಬೇಕಾದ ತಯಾರಿಯನ್ನೆಲ್ಲ ನಡೆಸಿಕೊಳ್ಳುತ್ತಿದ್ದೆವು. "ನಿಮಗೆ ಈ ಜನ್ಮದಲ್ಲಿ ಏಕಾಂತ ಸಿಗುವುದಕ್ಕೆ ಜನ್ಮಾಂತರಗಳಲ್ಲಿ ನೀವು ಪುಣ್ಯ ಮಾಡಿರಬೇಕು. ಇಲ್ಲಾಂದ್ರೆ ಎಷ್ಟೊಂದು ಜನ ಎಷ್ಟೇ ಬಯಸಿದರೂ ಏಕಾಂತ ಸಿಗೋದೇ ಇಲ್ಲ"ಎಂದು ನಮ್ಮ ಗಿಂಡಿಗಳು ಅಂತವರಲ್ಲಿ ರಹಸ್ಯವಾಗಿ ಹೇಳುತ್ತಿದ್ದರು. ಒಮ್ಮೆ ಏಕಾಂತಕ್ಕೆ ಬಂದು ತೇಲ್ ಮಾಲಿಶ್‍ಗೆ ಸಿಕ್ಕರೆ, ’ಸೂರ್ಯ-ಚಂದ್ರ’ರನ್ನೆಲ್ಲ ಕೈವಶ ಮಾಡಿಕೊಂಡು, ಬಂದವಳಿಗೆ ’ಜರ್ಮನಿ’ ತೋರಿಸಿಯೇ ಕಳಿಸುತ್ತಿದ್ದೆವು.
ಶೀಲ ಕಳೆದುಕೊಂಡ ಮಹಿಳೆಯರಲ್ಲಿ ಒಬ್ಬೊಬ್ಬರೂ ಪರಿತಪಿಸುತ್ತ "ನಾನೊಬ್ಬಳೇ ಶೀಲ ಕಳೆದುಕೊಂಡರೆ ಸಾಲದು, ಅವಳೂ ಕಳೆದುಕೊಳ್ಳಲಿ, ಇವಳೂ ಕಳೆದುಕೊಳ್ಳಲಿ, ಕೇಳಿದರೆ ಆಹಾ ಸ್ವರ್ಗ ಸುಖ, ಗುರುಗಳೆಂದರೆ ಸಾಕ್ಷಾತ್ ದೇವರು ಎಂದು ಹೇಳಿಬಿಡ್ತೇನೆ. ಹೋಗ್ಲಿ ಬಿಡಿ" ಎಂದು ಸ್ವಗತದಲ್ಲಿ ಹೇಳಿಕೊಳ್ಳುತ್ತಿದ್ದರು. ಹೀಗಾಗಿ ಶೀಲ ಕಳೆದುಕೊಂಡ ಯಾವ ಹೆಂಗಸೂ ’ದೇವರಿಗೆ ಒಪ್ಪಿಸಿಕೊಂಡಿದ್ದ’ನ್ನು ಹೇಳಲೇ ಇಲ್ಲ. ಇನ್ನು ಕೆಲವರು ಎಲ್ಲಿ ಗಂಡ, ಮನೆ, ಮಕ್ಕಳನ್ನು ಕಳೆದುಕೊಂಡು ಬೀದಿ ಪಾಲಾಗುತ್ತೇನೋ ಎಂಬ ಭಯದಿಂದಲೇ ಹೇಳಲಿಲ್ಲ. ಕೆಲವರಿಗೆ ನಾವು ಹಿಂದೆ ಹೇಳಿದಂತೆ ನಮ್ಮ ಬುಸ್ಸಪ್ಪನೇ ಬಹಳ ಇಷ್ಟ.
ಏಕಾಂತಕ್ಕೆ ದೊರೆತ ಸುಂದರಿಯರಲ್ಲಿದ್ದ ಹುಡುಗಿಯರು ಮತ್ತೆ ಮತ್ತೆ ಬೇಕೆಂದರೆ ಏನು ಮಾಡೋದು? ಹೇಗೂ ನಮ್ಮ ಸಮಾಜದಲ್ಲಿ ಅನೇಕ ಹುಡುಗರಿಗೆ ಅರ್ಧಾಯುಷ್ಯ ಕಳೆದರೂ ಇನ್ನೂ ಮದುವೆಯಿಲ್ಲ. ಎಷ್ಟೇ ಪ್ರಯತ್ನಿಸಿದ್ರೂ ಕಲಿತು ನಗರ ಸೇರಿದ ಹುಡುಗೀರು ಕಡಿಮೆ ಕಲಿತ ಅಥವಾ ಕಡಿಮೆ ಗಳಿಸುವ ಗಂಡುಮಕ್ಕಳನ್ನು ಒಪ್ತಿರಲಿಲ್ಲ. ನಮ್ಮ ಪರಿವಾರದಲ್ಲೇ ಇರುವ ಗಿಂಡಿಗಳಾದಿಯಾಗಿ ಹಲವರಿಗೆ ಮದುವೆ ಆಗಿರಲಿಲ್ಲ. ಮಠಕ್ಕೆ ಬರುವ ಸುಂದರಿಯರನ್ನು ನೋಡಿದ್ದರಲ್ಲಿಯೇ ತೃಪ್ತಿಪಟ್ಟುಕೊಳ್ತಿದ್ದರು ಪಾಪ. ಅವರಿಗೂ ಹೆಣ್ಣು ಸಿಕ್ಕಿದಹಾಗಾಯ್ತು; ಕರೆದಾಗ ನಮ್ಮ ಸೇವೆಗೂ ಬರುವುದಕ್ಕೆ ವ್ಯವಸ್ಥೆಯಾಯ್ತು ಅಂತ ಅಂತಹ ಹುಡುಗಿಯರನ್ನೆಲ್ಲ ಪ್ರಸಾದ ರೂಪವಾಗಿ ನಮ್ಮ ಪರಿವಾರ ಗಣಗಳಿಗೇ ಕಟ್ಟಿದ್ದೇವೆ ನಾವು.
ಹಾಂ...ಎಲ್ಲದಕ್ಕೂ ನಾವು ಬಾವಯ್ಯ ಸೇರಿ ಸ್ಕೆಚ್ ಹಾಕಿಯೇ ಮಾಡಿರ್ತೇವೆ. ಎಲ್ಲವೂ ಕಾಯ್ದೆಬದ್ದ, ರಜಿಸ್ಟ್ರೇಷನ್ ಮದುವೆಗಳು; ಆ ಹುಡುಗೀರ ಪಾಲಕರು ಮಾತನಾಡೋ ಹಾಗಿಲ್ಲ. ಅದಕ್ಕೆ ನಮ್ಮ ಅಡ್ಡಗೇಟುಗಳ ಸಹಕಾರದಿಂದ ಎಲ್ಲಾವಿಧದ ಬಂದೋಬಸ್ತು. ಗಿಂಡಿಗಳು ಜಾಸ್ತಿ ಕೆಮ್ಮಿದರೆ ಡೈವೋರ್ಸು ಮತ್ತು ನಮ್ಮ ಹಾವಾಡಿಗ ಮಹಾಸಂಸ್ಥಾನದಿಂದ ಗೇಟ್ ಪಾಸು. ಬಡತನ, ಅಲ್ಪವಿದ್ಯೆ, ನಿರುದ್ಯೋಗ, ಬುದ್ಧಿಗೇಡಿತನ, ಬೆಳೆದ ವಯಸ್ಸು ಇದೇ ಹಿನ್ನೆಲೆಯ ನಮ್ಮ ಪರಿವಾರದವರು ಏನು ಮಾಡಲೂ ಅಸಹಾಯಕರೆಂಬುದು ನಮಗೆ ಗೊತ್ತು. ಬಳಸಿದ ಪ್ರತಿಯೊಬ್ಬ ಹುಡುಗಿಗೂ,"ನೀನು ಅವನೊಟ್ಟಿಗೆ ಇರು, ಮಿಕ್ಕಿದ್ದಕ್ಕೆ ನಾವಿದ್ದೇವೆ" ಎಂದು ಅಭಯ ನೀಡಿ, ಕೆಲವರಿಗೆ ಸಂತಾನಾನುಗ್ರಹವನ್ನೂ ಕರುಣಿಸಿದ್ದೇವೆ ನಾವು. "ನಾವಿದ್ದೇವೆ" ಎಂಬ ಪದ ಪ್ರಗತಿಗೆ ಬಂದಿದ್ದು ಅಲ್ಲಿಯೇ ಎಂದರೂ ತಪ್ಪಿಲ್ಲ.
ಸ್ವಂತಿಕೆಯನ್ನು ಪ್ರದರ್ಶಿಸಲು ನಗರಪ್ರದೇಶದಲ್ಲಿ ನೌಕರಿ ಹಿಡಿದು ಇಪ್ಪತ್ತೈದು ಕಳೆದಿದ್ದ ಹಲವು ಹುಡುಗೀರಿಗೂ ಮತ್ತು ಹಳ್ಳಿಗಳಲ್ಲಿ ಕಲಿತು ಅಲ್ಲಲ್ಲೇ ಇದ್ದು ಪರಮ ಭಕ್ತಿಯಿಂದ ಮಠಕ್ಕೆ ಬರುತ್ತಿದ್ದ ಕೆಲವು ಹುಡುಗೀರಿಗೂ ಆರಂಭದಲ್ಲಿ ಏಕಾಂತ ಬಹಳ ರಸವತ್ತಾಗಿ ಕಂಡಿತು. ಎಲ್ಲವೂ ಏನೋ ಹೊಸದು. ಇನ್ನೂವರೆಗೆ ಸಿಗದಿದ್ದಂತದ್ದು. ಕಚಗುಳಿ, ಮುದ್ದಾಡುವಿಕೆ, ಬಿಸಿಯಪ್ಪುಗೆ, ಕೋಲಾಟ ಎಲ್ಲವೂ ’ಜೀವಂತ ದೇವರಿಂದ.’ ಎರಡು ಗಂಟೆಯ ಮೊದಲ ದರ್ಶನದಲ್ಲೇ ಎಲ್ಲವನ್ನೂ ಕಳೆದುಕೊಳ್ಳುವ ಅವರೂ ಸಹ ಏನೂ ಮಾಡುವ ಹಾಗಿರಲಿಲ್ಲ. ಪಾಲಕರಿಗೆ ಹೇಳಿದರೆ "ಗುರುಗಳ ಮೇಲೆ ಇಲ್ಲಸಲ್ಲದ್ದನ್ನೆಲ್ಲ ಹೇಳಲಿಕ್ಕೆ ನಿನಗೆಲ್ಲೋ ತಲೆಕೆಟ್ಟಿರಬೇಕು" ಎಂದು ಅವರನ್ನೇ ತದುಕುತ್ತಾರೆ. ಆ ಕಡೆ ಪರಿವಾರದವರು ಈ ಕಡೆ ಹುಡುಗೀರು ಯಾರೂ ಏನೂ ಮಾಡಲಾಗದಂತೆ ’ಕರು ಹಾರಿದರೂ ಗೂಟದ ಕೆಳಗೇ’ ಎಂಬಂತೆ ಎಲ್ಲವನ್ನೂ ನಮ್ಮ ಅಂಕಿತದಲ್ಲೇ ಇಟ್ಟುಕೊಂಡಿದ್ದೇವೆ ನಾವು.
ಆದರೂ ವರ್ಷಗಳ ಹಿಂದೊಬ್ಬ ಹುಡುಗಿಯನ್ನು ಅವರ ಮನೆಗೆ ಹೋದಾಗಲೇ ಏಕಾಂತಕ್ಕೆ ಕರೆದು ಸುರುವಿಟ್ಟುಕೊಂಡಾಗ ಕೆನ್ನೆಗೆ ಎರಡು ಬಿಟ್ಟು ಜಗಳವಾಡಿ ಹೊರಗೆ ಓಡಿದ್ದಳು. ನಾವು ಅಂದರೆ ಹಾವಾಡಿಗ ಮಹಾಸಂಸ್ಥಾನ ಕೋಣೆಯಿಂದ ಲಗುಬಗೆಯಿಂದ ಹೊರಗೆ ಬಂದು "ನಿಮ್ಮ ಮಗಳಿಗೆ ಯಾವುದೋ ಗಾಳಿ ಮೆಟ್ಟಿಕೊಂಡಿದೆ, ಹೀಘ್ರವೇ ಚಿಕಿತ್ಸೆ ಮಾಡಿಸಿ"ಎಂದು ಸಲಹೆ ಕೊಟ್ಟಿದ್ದೆವು. ಪಾಲಕರೇನಾದರೂ ಯಾವುದೋ ಕಿಟಕಿ ತೂತಿನಿಂದ ಕದ್ದು ನೋಡಿದ್ದರೆ ಅಥಬಾ ಮಗಳ ಮಾತನ್ನು ನಂಬಿದ್ದರೆ. ಅಲ್ಲಿಯೆ ನಮ್ಮ ಕಾಲು ಮುರಿದು ಕೈಲಿಕೊಟ್ಟು, ಕೆಲವು ಹಲ್ಲುಗಳನ್ನೂ ಕಿತ್ತು ಕಳಿಸುತ್ತಿದ್ದರು. ಆ ಹುಡುಗಿಯ ಧೈರ್ಯಕ್ಕೆ ನಾವು ಬೆರಗಾಗಿದ್ದೇವೆ. ಬಹಳ ಎಳಸಾಗಿತ್ತು, ಹಾಗಾಗಿ ಕೊಸರಿಕೊಂಡು ಹೋಯಿತು. ಹೋಗಲಿ ಬಿಡಿ, ನಮಗೇನು ಕೊರತೆಯೇ? ಬೆರಳು ಮಾಡಿದರೆ ದಿನಕ್ಕೈದು ಮಂದಿ ಏಕಾಂತಕ್ಕೆ ಬರುತ್ತಾರೆ. ಬಂದವರನ್ನೆಲ್ಲ ಸಮರ್ಥವಾಗಿ ನಿಭಾಯಿಸಿಯೇ ಕಳಿಸುವ ಸಮರ್ಥ ಪುರುಷರು ನಾವು.
ಏಕಾಂತ ಮುಗಿಸಿ ಹೊರಬರುವ ಹೆಂಗಸರು ಮತ್ತು ಹೆಣ್ಣುಮಕ್ಕಳೆಲ್ಲ ವಿಪರೀತ ಬೆವರುತ್ತಿರುತ್ತಾರೆ, ಕೆಲವರು ಅಪ್ಪಿತಪ್ಪಿ ಯಾರಿಗಾದರೂ ಗೊತ್ತಾಗಿಬಿಡಬಹುದೇ ಎಂಬ ಅಪರಾಧೀ ಪ್ರಜ್ಞೆಯಿಂದ ಬಟ್ಟೆ ಎಲ್ಲಾ ಕಡೆ ಸರಿಯಾಗಿದೆಯೋ ಎಂದು ನೋಡಿ ಸರಿಪಡಿಸಿಕೊಳ್ಳುತ್ತ ಬರುತ್ತಾರೆ ಏಕೆ? ಹೊರಗೆ ದೂರದಲ್ಲಿ ಕಾಯುತ್ತ ಕುಳಿತ ಯಾವ ಮಹಾಜನಗಳಿಗೂ ಈ ವಿಷಯದ ಅರಿವಿರದೇ? ಸನ್ಯಾಸಿಯೊಬ್ಬ ಕೋಣೆಯಲ್ಲಿ ಕೇವಲ ಹೆಂಗಸು ಅಥವಾ ಹುಡುಗಿಯೊಡನೆ ಅಷ್ಟುಹೊತ್ತು ಏನು ಮಾಡುತ್ತಾನೆ ಎಂಬ ಸಂದೇಹವೇ ಬರಲಿಲ್ಲವೇ ಅವರಿಗೆ? ಬರಲಿಲ್ಲ, ಯಾಕೆ ಗೊತ್ತೇ? ನಾವು ಸಾಕ್ಷಾತ್ ದೇವರೆಂದು ಭಾವಿಸಿದ್ದಾರೆ, ನಿತ್ಯವೂ ಮೂರು ಕಡೆ ನಾಮ ತೀಡಿಸಿಕೊಳ್ಳುತ್ತಲೇ ಇರುತ್ತಾರಲ್ಲ?
ಒಂದೇ ಒಂದು ಕೇಸ್ ದಾಖಲಾದ ನಂತರ ಇನ್ನಿತರ ಹಲವು ಸಂಭಾವ್ಯ ದೂರುದಾರದನ್ನು ನಮ್ಮ ಪರಿವಾರಗಣಗಳು ಮತ್ತು ಹಳದೀ ತಾಲಿಬಾನಿನವರು ದೂರವಾಣಿಗಳ ಮೂಲಕ ಮತ್ತೆ ಮತ್ತೆ ಸಂಪರ್ಕಿಸಿ, "ಹಾಗೇನಾದರೂ ಮಾಡಿದರೆ, ನಿಮ್ಮ ಸರ್ವಸ್ವವನ್ನೂ ಕಳೆದು ಕೊಂಡು ಬೀದಿಗೆ ಬರುವಂತೆ ಮಾಡ್ತೇವೆ" ಎಂದು ಬೆದರಿಕೆ ಹಾಕುವಂತೆ ಮಾಡಿದ್ದೇವೆ ನಾವು. ನಮ್ಮ ಹಳದೀ ತಾಲಿಬಾನಿನ ಶಕ್ತಿ ಪ್ರದರ್ಶನವನ್ನು ಕಂಡ ಪಾಲಕರಲ್ಲಿ ಒಬ್ಬೊಬ್ಬರೂ, "ಹೇಗೂ ಹುಡುಗಿಯನ್ನು ಕಳೆದುಕೊಂಡಿದ್ದೇವೆ. ನಮ್ಮ ಪಾಲಿಗೆ ಅವಳಿಲ್ಲವೆಂದುಕೊಂಡು ಸುಮ್ಮನಾಗೋಣ. ನಮಗ್ಯಾಕೆ ಆ ರೌಡಿಗಳ ಸಹವಾಸ. ನಮ್ಮ ಪ್ರಾಣಕ್ಕೇ ಸಂಚಕಾರ ತರಬಹುದು" ಎಂದು ಗಂಡ-ಹೆಂಡಿರಲ್ಲಿ ಪರಸ್ಪರ ಹೇಳಿಕೊಳ್ಳುತ್ತ ಸುಮ್ಮನಿದ್ದಾರೆ; ಮಠಕ್ಕೆ ಬರುವುದನ್ನು ನಿಲ್ಲಿಸಿಬಿಟ್ಟಿದ್ದಾರೆ.
ಕಾಲಿಗೆ ಸರಪಳಿ ಕಟ್ಟಿದ ಆನೆಯ ನೆನಪಾಗುತ್ತದೆ ನಮಗೆ. ತರಬೇತಿ ನಡೆಸುವಾಗ ಕಾಲಿನ ಸರಪಳಿ ಎಳೆದುಕೊಂಡು ಓಡಲು ಯತ್ನಿಸಿ ಮಾವುತನ ಕೈಲಿ ಹೊಡೆತ ತಿಂದ ನೋವು,ಅಂಕುಶದ ತಿವಿತ ಆನೆಗೆ ನೆನಪಿರುತ್ತದೆ. ದಶಕಗಳೇ ಕಳೆದರೂ ಬಲಾಢ್ಯ ಆನೆಗೆ ಕಾಲಿಗೆ ಕಟ್ಟಿದ ಸರಪಳಿ ತನ್ನ ಸಾಮರ್ಥ್ಯಕ್ಕೆಲ್ಲ ಯಾವ ಲೆಕ್ಕ ಎಂಬ ಯೋಚನೆಯೇ ಬರುವುದಿಲ್ಲ. ಯೋಚಿಸಲೂ ಆಗದಷ್ಟು ಹೆದರಿಕೆ. ಅಂತದ್ದೇ ಹೆದರಿಕೆಯನ್ನು ನಮ್ಮ ಭಕ್ತ ಕುರಿಗಳಿಗೆಲ್ಲ ಕಲಿಸಿದ್ದೇವೆ ನಾವು. ಎದುರಾ ಎದುರೇ "ಕುರಿಗಳು" ಎಂದರೂ, ಏನೂಮಾಡಲಾಗದ ಬಕರಾಗಳು ಅವರು. ಹಾಗಾಗಿಯೇ ನಮ್ಮಿಂದ ಪ್ರಾಯೋಜಿಸಲ್ಪಟ್ಟ ಒಂದೇ ತಂಡ ಇಡೀ ಸಮಾಜವನ್ನು ನಿಯಂತ್ರಿಸುತ್ತಿದೆ. ನಾಲ್ಕಾರು ಜನ ಒಟ್ಟಿಗೆ ಸೇರಿ ದೂರುಗಳನ್ನು ಕೊಟ್ಟಿದ್ದರೆ ಇಷ್ಟೊತ್ತಿಗೆ ಯಾವಾಗಲೇ ನಾವು "ಆ ಒಂದು.... ಆ ಎರಡು.......ಆ ಮೂರು " ಎಣಿಸಬೇಕಾಗಿತ್ತು. ಸದ್ಯ! ಹಾಗಾಗಲಿಲ್ಲ ಎಂಬುದು ನಮ್ಮ ಅದೃಷ್ಟ.
ಉಷ್ಣಃಕಾಲೇ ಶೀತಃಸ್ಪರ್ಶಂ
ಶೀತಃಕಾಲೇ ಉಷ್ಣಸ್ಪರ್ಶಂ
ಕೂಪೋದಕಂ ವಟಚ್ಛಾಯಾ
ತಾಂಬೂಲಂ ತರುಣೀ ಸ್ತನಂ
ಎಂದು ನಾವು ಚಿಲ್ಲರೆ ಓದು ನಡೆಸಿದ್ದ ಕಾಲದಲ್ಲಿ ಸಮುದ್ರದಡದಲ್ಲಿ ವಿದೇಶೀ ಬೆಡಗಿಯರನ್ನು ನೋಡಲು ಹೋದಾಗ ಯಾರೋ ಹೇಳಿಕೊಟ್ಟಿದ್ದರು. ಬಾವಿಯ ನೀರು, ಮರದ ನೆರಳು, ತಾಂಬೂಲ ಮತ್ತು ತರುಣಿಯ ಸ್ತನ ಇವಿಷ್ಟು ಉಷ್ಣವಾದಾಗ ತಂಪನ್ನೂ, ಶೀತವಾದಾಗ ಉಷ್ಣವನ್ನೂ ನೀಡುವವಂತೆ. ಇಂತಹ ಅದ್ಭುತ ಲೌಕಿಕ ಶಾಸ್ತ್ರಗಳನ್ನು ಬಿಟ್ಟು ಕಾಣದ ಲೋಕದ ಅಲೌಕಿಕ ವಿಷಯಗಳನ್ನು ಹೇಳುವ ಶಾಸ್ತ್ರಗಳು ನಮಗೆ ಬೇಕೇ? ಕೇದಾರದೆಡೆಗೆ ಎಲ್ಲವೂ ತೊಳೆದುಹೋಗುತ್ತಿದ್ದರೆ ಅಲ್ಲೇ ಸ್ವಲ್ಪ ದೂರದಲ್ಲಿದ್ದ ನಾವು, ಅಲ್ಲಿನ ಚಳಿಯ ವಾತಾವರಣದಲ್ಲಿ ಏಕಾಂತವನ್ನು ನಡೆಸಿ ಬೆಚ್ಚಗೆ ಮಾಡಿಕೊಳ್ಳುತ್ತಿದ್ದೆವು.
ಸುಂದರವೂ ರಸಭರಿತವೂ ಆದ ನಮ್ಮ ಪುಣ್ಯ ಕತೆಯನ್ನು ಕೇಳಿದ್ದೀರಿ. ಆದಿ ಮಂಗಲ, ಮಧ್ಯ ಮಂಗಲ ಮತ್ತು ಅಂತ್ಯ ಮಂಗಲ ಎಂದರೆ ಮೂರು ಕಡೆ ಮಂಗಲದ ಮೂರುನಾಮ ತೀಡುವುದು ಎಂದರ್ಥ. ಆದಿಯಿಂದಲೇ ನಾವು ಮೂರು ನಾಮ ತೀಡುತ್ತಲೇ ಬಂದಿದ್ದೇವೆ. ಹಳ್ಳಿ ಮನೆಯ ಅಂಗಳದಲ್ಲಿ ತುಳಸಿ ಕಟ್ಟೆಯ ಮುಂದೆ ಭಕ್ತಿಯಿಂದ ಬಾಯ್ದೆರೆದು ಭಜನೆ ಮಾಡುತ್ತ ನಿದ್ದೆ ಹೋಗಿದ್ದ ಮುದುಕಿಗೆ, ಹಾದಿಹೋಕ ಬೀದಿನಾಯಿ ಸೂ ಸೂ ಮಾಡಿದಾಗ ಅರೆಮಂಪರಿನಲ್ಲಿ ತೀರ್ಥವೆಂದು ಕುಡಿದಳಂತೆ ಎಂಬ ಕತೆಯ ಹಾಗೆ, ನೀವೆಲ್ಲ ಭಕ್ತಿಯಿಂದ ನಮ್ಮ ಕತೆಗಳನ್ನು ಕೇಳುತ್ತ ಪುನೀತರಾಗಿ.
ಬರೇ ಕಾಮ
.
.
ಬರೇ ಕಾಮ.."

July 14
https://www.facebook.com/groups/1499395003680065/permalink/1639831192969778/

ಕಚೆಹರುಕನ ಚಾತುರ್ಮಾಸ್ಯ
__________________
"ಹ ಕಾರೋ ಹಳ್ಳಿ ವಾಸಂ ಚ
ವಿ ಕಾರೋ ವೀಳ್ಯ ಭಕ್ಷಣಂ
ಕ ಕಾರೋ ಕತ್ತಿ-ಕಂಬ್ಳಿಶ್ಚ
ಇತ್ಯೇತಿ ...........ಲಕ್ಷಣಂ
ಮಂತ್ರಮೂಲೇ ಮಾವಿನಕಾಯಿ
ತಂತ್ರಮೂಲೇ ಅಥರ್ವಣಃ|
ಧ್ಯಾನಮೂಲೇ ಪಾನಮೂಲಂ
ಸರ್ವಮೂಲೇ ಮಣ್ಣಂಗಟ್ಟಿಃ||
.
.
ಬರೇ ಕಾಮ
.
.
ನಮ್ಮ ಕಥೆಯನ್ನು ನಾವೇ ಹೇಳಿಕೊಳ್ಳುವಷ್ಟು ಪುಣ್ಯದ ಕೆಲಸ ಇನ್ನೊಂದಿಲ್ಲ. ಯಾಕೆಂದ್ರೆ.....ಯಾಕೆಂದ್ರೆ.....ಯಾಕೆಂದ್ರೆ ನಮ್ಮ ’ಸನ್ಯಾಸ’ ಜೀವನದ ನಿಜವಾದ ಹಕೀಕತ್ತು ನಮಗೆ ಬಿಟ್ಟರೆ ನಮ್ಮ ಬಾವಯ್ಯನಿಗೆ ಮಾತ್ರ ಗೊತ್ತು. ಬಾವಯ್ಯ ಹೇಳುವುದಿಲ್ಲ ಹೀಗಾಗಿ ನಾವಾದರೂ ಅಲ್ಪ ಸ್ವಲ್ಪವನ್ನು ಹೇಳಬೇಕಲ್ಲ?
ಮೇಲಿನ ಮೊದಲ ’ಶ್ಲೋಕ’ವನ್ನು ಕೆಲವರು ಹೇಳಿಕೊಳ್ಳುವಾಗ ಯಾಕೆ ಹಾಗೆ ಹೇಳುತ್ತಿದ್ದರು ಎಂದು ಯೋಚಿಸುತ್ತಿದ್ದೆವು ನಾವು....ಹೌದು ಯೋಚಿಸುತ್ತಿದ್ದೆವು ನಾವು. ನಮ್ಮ ಸಮಾಜಕ್ಕೆ ಯಾಕೆ ಅವರೆಲ್ಲ ಹೀಗೆ ಹೇಳಬೇಕು ಎಂದು ನಮಗೆ ಪ್ರಶ್ನೆ ಉದ್ಭವವಾಗಿತ್ತು. ಆಗಲೇ ನಾವು ನಿರ್ಧರಿಸಿದ್ದು-ಶ್ರಾದ್ಧದ ಭಟ್ಟನಾಗಿ ಊರೂರು ಅಲೆದರೆ ಎಲ್ಲೋ ಅಪರೂಪಕ್ಕೆ ನಮ್ಮ ಚಿಕ್ಕಪ್ಪ ಉರುಳು ಭಟ್ಟ ಬಾಚಿದಂತೆ ಯಾರಾದರೂ ಎಡ ಮುದುಕೀರು ಸಿಕ್ಕಾರು, ಮೇಲಾಗಿ ದುಡ್ಡು-ಕಾಸು ಅಷ್ಟಕ್ಕಷ್ಟೆ. ಹೀಗಾಗಿ ಅಂದು ನಾವು ಮೇಲಿನ ’ಶ್ಲೋಕದಲ್ಲೇ ಅದಕ್ಕೆ ಪರಿಹಾರ ಕಂಡುಕೊಂಡೆವು.
ದಶಕಗಳ ಹಿಂದೆ ಸಮಾಜ ದೀನಾವಸ್ಥೆಯಲ್ಲಿತ್ತು. ಕುಗ್ರಾಮಗಳಲ್ಲಿ ವಾಸಿಸುತ್ತಿದ್ದ ನಮ್ಮ ಜನ ಜೀವನದಲ್ಲಿ ಬಹಳ ಕಷ್ಟನಷ್ಟಗಳನ್ನು ಎದುರಿಸುತ್ತಿದ್ದರು. ಸ್ವಾತಂತ್ರ್ಯ ಬಂದ ಮರುದಿನದಿಂದಲೇ ರಾಜಾಶ್ರಯ ಎಂಬುದೂ ತಪ್ಪಿಹೋಗಿತ್ತು. [ಅದು ಕೆಲವರಿಗೇ ಇತ್ತು ಅನ್ನಿ] ಸಂಸ್ಕೃತ ಪಾಠಶಾಲೆ ಓದಿಕೊಂಡರೆ ಇಡೀ ಕುಟುಂಬದ ನಿರ್ವಹಣೆ ಕಷ್ಟವೆಂದರಿತ ನಮ್ಮ ಜನ ಕೃಷಿಗೂ ಇಳಿದರು.
ಖುದ್ದಾಗಿ ಕೃಷಿಗಿಳಿದ ಬ್ರಾಹ್ಮಣ ಪಂಗಡಗಳು ದೇಶದಲ್ಲೇ ಎರಡು ಮಾತ್ರ! ಅವುಗಳಲ್ಲಿ ನಮ್ಮದೂ ಒಂದು. ಇದಕ್ಕೆ ಕಾರಣವೂ ಇತ್ತು. ಕೃಷಿ ಕೆಲಸಗಳಿಗೆ ಆಳು-ಕಾಳುಗಳನ್ನು ಕರೆಸಿದರೆ ಕೂಲಿ ಕೊಡುವ ತಾಕತ್ತೂ ಸಹ ಇರಲಿಲ್ಲ. ಬೆರ್ಳೆಣಿಕೆಯ ಜನರಿಗಿದ್ದ ಉಂಬಳಿಯ ಜಮೀನುಗಳು ಎಲ್ಲರಿಗೂ ಸಾಲುತ್ತಿರಲಿಲ್ಲ, ಹೊಸದಾಗಿ ಜಮೀನು ಮಾಡಬೇಕಿತ್ತು. ಜನ ದೇವರ ಪೂಜೆ ಮತ್ತು ನಿತ್ಯಾನುಷ್ಠಾನಗಳ ಜೊತೆಗೆ ಜಮೀನು ಮಾಡುವುದಕ್ಕೂ ಮುಂದಾದರು.
ಕಾಡುಗಳಂಚಿಗೆ ಹೋದರು, ಗುಡ್ಡಗಳನ್ನು ಕಡಿದರು, ನೆಲ ಸಮತಟ್ಟು ಮಾಡಿ ಉತ್ತು ಬಿತ್ತು ಕಷ್ಟದಲ್ಲೇ ಬೆಳೆತೆಗೆದರು. ನಂತರ ತೋಟ ಬೆಳೆಸಿದರು. ಜೀವನಾರಂಭ ಪುರಗಳಲ್ಲಿ ವಸತಿಗೆ ಆಶ್ರಮಗಳಂತಹ ಗುಡಿಸಲುಗಳು ಅಥವಾ ಸೋಗೆಯ ಮನೆಗಳನ್ನು ನಿರ್ಮಿಸಿಕೊಂಡರು. ಮಣ್ಣಿನ ನೆಲ ಮತ್ತು ಮಣ್ಣಿನದೇ ಗೋಡೆ, ಅದಕ್ಕೆ ಸಗಣಿ ಸಾರಿಸಿ ಒಪ್ಪ ಮಾಡುತ್ತಿದ್ದರು.
ಕೃಷಿ ಕೆಲಸದಲ್ಲಿ ಬೇಸತ್ತ ದಿನಗಳಲ್ಲಿ ದೇವರಿಗೆ ನೈವೇದ್ಯ ಅರ್ಪಿಸಿದ ತಾಂಬೂಲವನ್ನು ಮೆಲ್ಲುವ ಅಭ್ಯಾಸವಾಯ್ತು; ಈ ಆಭ್ಯಾಸದ ವಿಷಯ ತಲೆಯಿಂದ ತಲೆಗೆ, ಕಿವಿಯಿಂದ ಕಿವಿಗೆ ಹೊಸತನವೆಂಬಂತೆ ಪ್ರಸಾರಗೊಂಡು, ಅಭ್ಯಾಸವಿದ್ದಿದ್ದು ಚಟವಾಯಿತು. ಕಾನನದ ಕತ್ತಲ ವಾತಾವರಣದಲ್ಲಿ ರಾತ್ರಿ ಹೊತ್ತಿನಲ್ಲಿ ಜೀರುಂಡೆಗಳ ಜೀಗುಟ್ಟುವಿಕೆ, ಕಾಡುಮೃಗಗಳ ಕೂಗು, ಮಳೆಗಾಲದಲ್ಲಿ ಆರು ತಿಂಗಳು ಬಿಟ್ಟೂ ಬಿಡದೆ ಸುರಿವ ಮಳೆ, ಮನೆಯೊಳಗೂ ಹೊರಗೂ ಹಾವು,ಹರಣೆ, ಹಲ್ಲಿಗಳು ಇವೆಲ್ಲದರ ನಡುವೆಯೇ ಜೀವನ ಸಾಗುತ್ತಿತ್ತು.
ಆಯುರ್ವೇದೀಯ ಔಷಧಗಳ ಮಾಹಿತಿ ಪಾರಂಪರಿಕವಾಗಿ ಕೆಲವು ಕುಟುಂಬಗಳ ಸ್ವತ್ತಿನಂತಾಗಿ ಔಷಧದ ಮಾಹಿತಿ ಇಲ್ಲದೆಯೇ ಅದೆಷ್ಟೋ ರೋಗಿಗಳು ಅಸುನೀಗಿದರು. ನೈಸರ್ಗಿಕ ವಿಕೋಪ, ಅಪಘಾತ, ಹಾವು ಕಡಿತ, ಮೈಲಿ, ಗಾಂಡಗುದಗೆ ಜ್ವರ[ಟೈಫಾಯ್ಡ್]ಮೊದಲಾದ ತೊಂದರೆಗಳಿಂದ ಮನೆಗಳ ಜನಸಂಖ್ಯೆ ಕೆಲವೊಮ್ಮೆ ಎಷ್ಟಿದ್ದರೂ ಕ್ಷೀಣಿಸಿಬಿಡುತ್ತಿತ್ತು. ಹಾಗಾಗಿಯೇ ಯಾರೋ ಎಂದೋ ಸುಮಂಗಲಿಯರಿಗೆ ಆಶೀರ್ವದಿಸುವಾಗ "ಅಷ್ಟಪುತ್ರವತೀ ಭವ, ಐಶ್ವರ್ಯವತೀ ಭವ" ಎಂದು ಹರಸುತ್ತಿದ್ದರು; ಅದರರ್ಥ ಎಂಟು ಗಂಡುಮಕ್ಕಳೇ ಇರಬೇಕೆಂಬ ಉದ್ದೇಶವಲ್ಲ, ಗಂಡುಮಕ್ಕಳು ತಮ್ಮ ಸಹಜ ದೇಹದಾರ್ಢ್ಯತೆಯಿಂದ ಸಮಸ್ಯೆಗಳನ್ನು ಎದುರಿಸಿ ಗೆಲ್ಲಬಲ್ಲರು ಎಂಬರ್ಥದಲ್ಲಿ ಮತ್ತು ಎಂಟುಜನರಲ್ಲಿ ಕೆಲವರಾದರೂ ಬದುಕಿ, ಸಂಸಾರದ ನೊಗವನ್ನು ಎಳೆಯಲು ಸಿದ್ಧವಾಗಬಹುದು ಎಂಬ ನಿರೀಕ್ಷೆಯಿರುತ್ತಿತ್ತು.
ಅಂತಹ ಕಾಲದಲ್ಲೇ ನಮ್ಮಂತಹ ಕಚ್ಚೆಹರುಕರು ಅಲ್ಲಲ್ಲಿ ತಯಾರಾಗುತ್ತಿದ್ದರಾದರೂ ಹೆಂಗಸರು ತೀರಾ ಹೊರಬರದ ಕಾರಣ ಏಕಾಂತಕ್ಕೆಲ್ಲ ಆಸ್ಪದ ದೊರೆಯುತ್ತಿರಲಿಲ್ಲ. ಮಹಿಳೆಯರನ್ನು ಮನೆಗಳಲ್ಲಿ ಒಂಟಿಯಾಗಿ ಬಿಟ್ಟುಹೋಗುವ ಪರಿಪಾಟ ಇದ್ದಿರಲಿಲ್ಲವಾದ್ದರಿಂದ ನಮ್ಮಂತವರು ಮನೆಗಳಿಗೆ ನುಗ್ಗುವುದೂ ಸಹ ಕಷ್ಟವಾಗುತ್ತಿತ್ತು. ಹೀಗಾಗಿ ಜೊಲ್ಲು ಸುರಿಸಿಕೊಂಡೇ ಬದುಕು ಕಳೆದ ಕಚ್ಚೆಹರುಕರು ಕೆಲವರಿದ್ದರು. ಸಮಾಜದಲ್ಲಿ ಅಪವಾದವೋ ಎಂಬಂತೆ ಅಪರೂಪಕ್ಕೆ ಅಲ್ಲಲ್ಲಿ ಗಂಡನಿಂದ ಸಿಗದ ಏನನ್ನೋ ಹುಡುಕಲು ಜಾರುವ ಹೆಂಗಸರೂ ಇದ್ದರು. ನಮ್ಮ ಪೊರ್ವಜರಿಗೆ ಅಂತವರೆಲ್ಲ ಪ್ರಿಯವಾಗಿದ್ದರು.
ಬೆಳಗಾದರೆ ತಿಂಡಿ ತಿಂದು [ಕುಟ್ಟಿ ತಯಾರಿಸಿದ ಅವಲಕ್ಕಿ, ಬಾಳೆಕಾಯಿ ಪಲ್ಯ ಇಂಥದ್ದು ತಿಂಡಿ. ದೋಸೆ ಎಂಬುದು ಹಬ್ಬದ ವಿಶೇಷ ತಿನಿಸು!]ಕೃಷಿ ಕೆಲಸಕ್ಕೆ ಹೋದರೆ, ಸೂರ್ಯ ಪಶ್ಚಿಮಕ್ಕೆ ವಾಲಿದ ನಂತರ ಅಪರಾಹ್ನವಾಯ್ತೆಂದು ಮನೆ ಸೇರಿ ಆಹಾರ ಸ್ವೀಕರಿಸಿ, ಸ್ವಲ್ಪ ಹೊತ್ತಿದ್ದು ಮತ್ತೆ ಕೆಲಸಕ್ಕೆ ತೊಡಗುತ್ತಿದ್ದರು. ಮಳೆಯಿಂದ ರಕ್ಷಣೆಗೆ ಕಂಬಳಿ ಕೊಪ್ಪೆ, ಕೃಷಿ ಕೆಲಸಕ್ಕೆ ಕೈಯಲ್ಲಿ ಕತ್ತಿ, ಗೆಲುವಿಗಾಗಿ ಬಾಯ್ತುಂಬ ತಾಂಬೂಲ, ಉದ್ದನೆಯ ಲಂಗೋಟಿ ಇವಿಷ್ಟೇ ಸರ್ವಾಭರಣಗಳು.
ಅಪರೂಪಕ್ಕೊಮ್ಮೆ ತಮ್ಮಲ್ಲಿ ಬೆಳೆಯದ, ಜೀವನಾವಶ್ಯಕಗಳನ್ನು ತರಲು ಕಸೆ ಅಂಗಿ, ಪಾಣಿ ಪಂಚೆ ತೊಟ್ಟು ಪಟ್ಟಣಗಳಿಗೆ ಹೋಗುತ್ತಿದ್ದರು. ಚಟವಾದ ತಾಂಬೂಲಕ್ಕೆ ವಿರಾಮವಿರಲಿಲ್ಲ; ಹಲ್ಲುನೋವನ್ನೂ ಹಿಡಿತದಲ್ಲಿಡುತ್ತದೆ ಎಂದು ನಂಬಿದ್ದರು. ಪಟ್ಟಣಗಳಲ್ಲಿ ಯಾವ್ಯಾವುದೋ ಜನಾಂಗಗಳವರು ತಮ್ಮ ವಸಾಹತುಗಳನ್ನು ಹೂಡಿಕೊಂಡು ವ್ಯಾಪಾರ-ಸಾಪಾರ ನಡೆಸುತ್ತಿದ್ದರು. ಬ್ರಾಹ್ಮಣರು ವ್ಯಾಪಾರಿಗಳಾಗುವಂತಿರಲಿಲ್ಲ ಮತ್ತು ಯಾರ ಬಗೆಗೂ ಯಾವ ವಿಧದಲ್ಲೂ ಕೆಟ್ಟದ್ದನ್ನು ಯೋಚಿಸುವಂತಿರಲಿಲ್ಲ; ವಂಚನೆ,ಮೋಸ,ಧೂರ್ತತನ, ಲೋಭ ಇವೆಲ್ಲ ನಮ್ಮವರಲ್ಲಿ ಇರಲಿಲ್ಲ.
ತಿನ್ನೋದು ಅಪ್ಪಟ ಸಾತ್ವಿಕ ಆಹಾರ; ನಮ್ಮ ಹಾಗೆ ಈರುಳ್ಳಿ ಉಪ್ಪಿಟ್ಟನ್ನು ತಿನ್ನೋದಿರಲಿ, ಈರುಳ್ಳಿ ಹೇಗಿರುತ್ತದೆಂದು ನೋಡಿದವರೂ ಅಲ್ಲ! ವ್ಯಾಪಾರಿಗಳು ಹೇಳಿದ್ದನ್ನು ಇವರು ಏಕಾಏಕಿ ನಂಬುತ್ತಿದ್ದರು; ಇಂದು ನಮ್ಮನ್ನು ನಮ್ಮ ಭಕ್ತಕುರಿಗಳು ನಂಬಿಕೊಂಡಂತೆ. ವ್ಯಾಪಾರಿಗಳಿಗೆ ನಮ್ಮವರು ಬಂದರೆಂದರೆ ಸುಗ್ಗಿ. ಬಡ ಭಟ್ಟ, ಹೆಗಡೆ ಎಷ್ಟನ್ನು ದುಡಿದಾರು? ಎಷ್ಟನ್ನು ವ್ಯಯಿಸಿಯಾರು?
ಸಾಮಾಜಿಕ ನಡವಳಿಕೆಗಳು ಅಭಿವೃದ್ಧಿಪಥದಲ್ಲಿ ನಡೆಯಲಾರಂಭಿಸಿದಾಗ ಮದುವೆ, ಮುಂಜಿ ಕಾರ್ಯಗಳ ಸಂದರ್ಭದಲ್ಲಿ ಜವುಳಿ ತೆಗೆಯುವುದು, ಕಂಚು-ತಾಮ್ರ ಖರೀದಿ ಇತ್ಯಾದಿಗಳು ನಡೆಯುತ್ತಿದ್ದವು. ಅವುಗಳಿಗೆ ವ್ಯಾಪಾರಿಗಳು ಹಾಕಿದ್ದೇ ದರ, ಬರೆದದ್ದೇ ಪಟ್ಟಿ. ಉದ್ರಿ ಪಟ್ಟಿ ಬರೆಯುತ್ತಿದ್ದರು-ಯಾಕೆಂದರೆ ಭಟ್ಟ, ಹೆಗಡೇರ ಹತ್ತಿರ ಒಂದೇ ಸಲ ಕೊಡಲಿಕ್ಕೆ ಸಾಲುತ್ತಿರಲಿಲ್ಲ. ಉದ್ರಿ ಪಟ್ಟಿಯಲ್ಲಿ ಎರಡಿದ್ದಿದ್ದು ಮೂರಾದರೂ ನಾಲ್ಕಾದರೂ ಮರುಮಾತನಾಡದೇ ಪಾವತಿಸುವ ಮುಗ್ಧರು. ಹೀಗಾಗಿಯೇ ವ್ಯಾಪಾರಿಗಳು ಬೆಳೆದರು, ನಮ್ಮವರು ಉದ್ರಿ ಪಟ್ಟಿಯಲ್ಲಿ ಬೆಳೆದರು!
ಪಟ್ಟಣದ ಸಾಹುಕಾರನಲ್ಲಿ ಸಾಲ ಮಾಡಿದ್ದರೂ ಊರಲ್ಲಿ ಎಲ್ಲರೆದುದು ಹಾಗೆ ತೋರಿಸಿಕೊಳ್ಳದ ನಡಾವಳಿಗೆ ಕೆಲವರು ಮೊದಲಿಟ್ಟರು. ಹೀಗಾಗಿ ತಲೆಗಿಂತ ಮುಂಡಾಸು ದೊಡ್ಡದಾಗತೊಡಗಿತು. ಮುಂಡಾಸು ದೊಡ್ಡ ಇದ್ದಷ್ಟೂ ಅವರು ದೊಡ್ಡವರೆನಿಸಿದರು, ’ಶೆಟ್ಟಿ ಸಾಲ ಸತ್ತಮೇಲಷ್ಟೆ ಗೊತ್ತು’ ಅನ್ನೋ ಹಾಗೆ ಅವರ ಮುಂಡಾಸಿನ ಒಳಗಿನ ತಲೆನೋವನ್ನು ಯಾರೂ ಅರಿಯಲಿಲ್ಲ.
ಕಾಲ ಬದಲಾಯಿತು. ಕುಗ್ರಾಮಗಳು ಅಭಿವೃದ್ಧಿಗೆ ಬಂದವು. ಆಧುನೀಕರಣ ಕಾಲಿಟ್ಟಿತು. ನಮ್ಮವರಲ್ಲೂ ಬಹುತೇಕರು ಸಾಲ-ಸೋಲವನ್ನು ಕಡಿಮೆ ಮಾಡಿಕೊಂಡರು, ಕೆಲವರು ಹೆಚ್ಚಿನ ಮಟ್ಟದಲ್ಲಿ ಜಮೀನನ್ನು ಮಾಡಿ ಶ್ರೀಮಂತರೆನಿಸಿದರು. ಮಠಗಳಲ್ಲಿ ಅಂದು ಈಗ ನಾವು ನಡೆಸುತ್ತಿರುವ ರೀತಿಯ ಯಾವುದೇ ವ್ಯವಹಾರಗಳೂ ಇರಲಿಲ್ಲ. ಮಠ ಮತ್ತು ಭಕ್ತರಲ್ಲಿ ಅಂತರವಿರುತ್ತಿತ್ತು. ಸಮಾಜದಲ್ಲಿ ಶ್ರೀಮಂತಿಕೆಯಿಂದ ಮುಖ್ಯಸ್ಥರು ಎನಿಸಿದವರು ಉಪಾಧಿವಂತರಾಗಿ, ಮಠದ ನಿರ್ಧಾರಗಳು ತಮಗೆ ಬೇಕಾದಂತೆ ಇರುವಂತೆ ನೋಡಿಕೊಳ್ಳುತ್ತಿದ್ದರು.
ನಾಯಕತ್ವದ ಗುಣ ನಮ್ಮವರಲ್ಲಿ ಅನಿವಾರ್ಯವಾಗಿ ಇದ್ದಂತೆ ತೋರಿಸಿಕೊಳ್ಳುವ ಗುಣವೂ ಬೆಳೆಯುತ್ತಲೇ ಬಂದಿತು; ತಮ್ಮ ಮಾತೇ ನಡೆಯಿತು, ತಮಗೆ ಮಾತ್ರ ಅಂಥಾದ್ದೊಂದು ಅರ್ಹತೆಯಿದೆ ಎಂಬಂತಹ ವಾತಾವರಣವೂ ಇತ್ತು. ಅಂತಹ ಕಾಲದಲ್ಲೇ ನಮ್ಮ ಹಾವಾಡಿಗ ಸಂಸ್ಥಾನಕ್ಕೆ ಉತ್ತರಾಧಿಕಾರಿಯ ಆಯ್ಕೆ ನಡೆದಿತ್ತು.ನೀವೇ ಇಂದ್ರ ನೀವೇ ಚಂದ್ರ ನಿಮ್ಮಿಂದ ಇದೊಂದು ಕೆಲಸ ಆಗಬೇಕೆಂದು ನಾವು ಕೆಲವರ ಕೈಕಾಲು ಹಿಡಿದೆವು. ನಮ್ಮ ಜನ್ಮಜಾತ ಸ್ವಭಾವ, ಜಾತಕ ತಿದ್ದಿದ್ದು, ಹುಡುಗೀರ ಹಿಂದೆ ಬೀಳುತ್ತಿದ್ದದ್ದು ಯಾವುದೂ ಸಹ ಅವರಿಗೆ ಗೊತ್ತಿರಲಿಲ್ಲ. ನಮ್ಮಜನ ಎಷ್ಟು ಬುದ್ಧಿವಂತರೋ ಅಷ್ಟೇ ಬೋಳೆ ಸ್ವಭಾವದವರು ಅನ್ನೋದೇ ಇದಕ್ಕೆ. "ನೀವೊಂದಿದ್ರೆ ಎನ್ ಕೆಲಸ ಆದಂಗೇಯ ನೋಡಿ" ಎಂಬ ವರ್ಡ್ ಆಫ್ ಮೌತ್ ಸರ್ಟಿಫಿಕೇಟ್ ಗಾಗಿ ತಾವು ಹಿಡಿದ ಕೆಲಸವನ್ನು ಸಾಧಿಸಲು ಪ್ರಯತ್ನಿಸುತ್ತಿದ್ದರು.
ಯಕ್ಷಗಾನವೊಂದೇ ದೊಡ್ಡಮಟ್ಟದ ಮನರಂಜನೆಯ ಕಾರ್ಯಕ್ರಮವಾದದ್ದಕ್ಕಿರಬಹುದು, ಅದರಲ್ಲಿನ ಕತೆಗಳಲ್ಲಿ ಬರುವ ಚಕ್ರವರ್ತಿಗಳಿಗೆ ತಮ್ಮನ್ನು ಹೋಲಿಸಿಕೊಂಡು ಸಾಮ್ರಾಜ್ಯ ವಿಸ್ತರಣೆಯಲ್ಲಿ ತೊಡಗುವಂತೆ ತಮ್ಮ ಕೀರ್ತಿ ವಿಸ್ತರಣೆಯಲ್ಲಿ ನಮ್ಮವರಲ್ಲಿನ ಶ್ರೀಮಂತರು ಬಹಳ ಆಸಕ್ತರು. "ಓ ಹೆಗಡೇರ ಮನೆ, ಅವರ ಮನೆಯಲ್ಲಿ ಕೊಪ್ಪರಿಗೆಯಲ್ಲೇ ಚಿನ್ನ ಇಟ್ಟಿದ್ದಾರಂತೆ, ಕಳ್ಳರು ಬಂದರೆ ಸಿಗಬಾರದೆಂದು ನೆಲಮಾಳಿಗೆಯಲ್ಲಿ ಹೂತಿಟ್ಟಿದ್ದಾರಂತೆ. ಓಹೋ ಇವರ ಮನೆ ಅಯ್ಯೋ ಅವರೂ ಅಷ್ಟೆ ಲಕ್ಷ್ಮಿ ಕಾಲುಮುರ್ಕಂಡು ಬಿದ್ದಿದಾಳ ಮಾರಾಯ ಅವರ ಮನೇಲಿ" ಎಂಬೆಲ್ಲ ಮಾತುಗಳು ಆಗ ಕೇಳಿಬರುತ್ತಿದ್ದವು.
ಅಂತಹ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವಂತಹ ಕಂತ್ರಿ ಬುದ್ಧಿ ನಮಗಿದ್ದುದರಿಂದ ಯಾರನ್ನೆಲ್ಲ ಹಿಡಿದರೆ ಕೆಲಸವಾಗುವುದೋ ಅವರೆಲ್ಲರ ಬೆನ್ನುಹತ್ತಿದೆವು. ಒತ್ತಾಯಕ್ಕೆ ಹಿಂದಿನವರು ಅಸ್ತು ಎಂದರು, ಮೊಹರು ಬಿದ್ದ ಮರುದಿನವೇ ನಾವು ಸೂತ್ರದಲ್ಲಿರುವ ಎಳೆಗಳನ್ನು ಲೆಕ್ಕಹಾಕಲಿಕ್ಕೆ ಸುರುಮಾಡಿದೆವು. ಯಾವುದನ್ನು ಬಿಗಿಯಬೇಕು, ಯಾವುದನ್ನು ಸಡಿಲಿಸಬೇಕು ಎಂಬುದನ್ನು ಪ್ರಯೋಗಕ್ಕೆ ಹಚ್ಚಿದೆವು. ಅಷ್ಟರಲ್ಲಿ ಸೀಟಿಗಾಗಿ ನಮ್ಮ ಜೊತೆ ಪೈಪೋಟಿ ನಡೆಸುತ್ತಿದ್ದ ಮನುಷ್ಯನನ್ನು ವಿಶ್ವಾಸಕ್ಕೆ ತೆಗೆದುಕೊಂಡೆವು, ಅವನಿಗೆ ತಂಗಿಯನ್ನು ಕೊಟ್ಟು ಬಾವಯ್ಯನನ್ನಾಗಿ ಮಾಡಿಕೊಂಡು, ವಾಮಮಾರ್ಗದಿಂದ ಅವನನ್ನು ಮಠದೊಳಕ್ಕೆ ಬಿಟ್ಟುಕೊಂಡವರು ಇಲ್ಲಿಯವರೆಗೂ ಹಾಗೆಯೇ ಇರಿಸಿಕೊಂಡಿದ್ದೇವೆ.
ಮುಂಡಾಸು ಸುತ್ತಿಕೊಂಡು ನಮ್ಮನ್ನು ಆಯ್ಕೆಮಾಡಿದವರನ್ನೆಲ್ಲ ಮಠದ ಅಡಳಿತಾತ್ಮಕ ವ್ಯವಹಾರದಿಂದ ಹೊರಗಿಟ್ಟೆವು ಮತ್ತು ಅಂತವರೆಂದೂ ಬಾರದಂತೆ ನೋಡಿಕೊಂಡೆವು. ಯಾರಿಗೆ ಮೂರು ನಾಮ ತೀಡಿದರೆ ಅಳಿಸಿಕೊಳ್ಳುವುದಿಲ್ಲವೋ, ಯಾರು ಎರಡೂ ಕಿವಿಗಳ ಮೇಲೆ ಹೂವಿಟ್ಟುಕೊಳ್ಳಲು ಸಿದ್ಧವೋ ಅಂತವರನ್ನೇ ಮಠದ ಆಡಳಿತಾತ್ಮಕ ವ್ಯವಹಾರಕ್ಕೆ ಹಚ್ಚಿದೆವು; ಹೆಸರು ಅವರದ್ದು ಬಸಿದು ನಮ್ಮದು ಮಾಡುವ ಪರಿಪಾಟ ಆರಂಭವಾಗಿದ್ದೇ ಆಲ್ಲಿಂದ. ನಂತರ ಅಕ್ಷರಶಃ ಬಸಿರುಮಾಡುವ ವ್ಯವಹಾರವನ್ನೇ ಆರಂಭಿಸಿದೆವು; ಹೆಸರಿಗೆ ಬೇರೆಯವರು ಇರುವಂತೆ ನೋಡಿಕೊಂಡೆವು.
ನಮ್ಮ ಜನರ ಮಕ್ಕಳು ಬೆಳೆದು, ಲೌಕಿಕ ವಿದ್ಯೆಯನ್ನು ಪಡೆದು, ದೇಶವಿದೇಶಗಳ ಮಹಾನಗರಗಳನ್ನು ಸೇರಿದಮೇಲೆ ಕಾಂಚಾಣವು ಕುಣಿಯತೊಡಗಿತು. ಅನುವಂಶೀಯವಾಗಿ ಮುಂಡಾಸನ್ನು ದೊಡ್ಡಮಾಡಿಕೊಳ್ಳುವ ಸ್ವಭಾವ ನಮ್ಮವರಲ್ಲಿ ಇದ್ದುದನ್ನು ಗಮನಿಸಿದ್ದೆವಲ್ಲ? ಅದನ್ನೇ ದಾಳವಾಗಿಸಿಕೊಂಡು ಹಲವು ಯೋಜನೆಗಳನ್ನು ರೂಪಿಸಿದೆವು. ಒಬ್ಬ ಲಕ್ಷ ಕೊಟ್ಟರೆ ಇನೊಬ್ಬನಿಗೆ ಅದನ್ನು ಹೇಳಿದಾಗ ಎರಡುಲಕ್ಷ ಕೊಟ್ಟ, ಮೂರನೆಯವ ಮೂರು, ನಾಲ್ಕನೆಯ ತಾನೇನು ಕಮ್ಮಿಯೇ ಎನ್ನುತ್ತ ನಾಲ್ಕು ಲಕ್ಷ ...ಹೀಗೇ ದೇಣಿಗೆಯ ವಹಿವಾಟು ಹೆಚ್ಚಿತು. ಯಾವುದಕ್ಕೂ ಲೆಕ್ಕಪತ್ರವಿಲ್ಲ.
ದೇವತೆಗಳಿಗೆ ಅರ್ಪಿಸುವ ಹವಿಸ್ಸನ್ನು ಅಗ್ನಿಗೇ ಹಾಕಬೇಕು ಎನ್ನುವಂತೆ ಕೊಡುವವರನ್ನು ಹಿಡಿದು ಕಾಡಿ,ಬೇಡಿ ಪಡೆದು ಬರಲು ಕೆಲವರನ್ನು ಬೆಳೆಸಿದೆವು. ಬರಿಗೈಲಿ ಹಾಗೆ ಬಂದು ಇಲ್ಲಿ ಬೆಳೆದವರು ಇಂದು ಬಂಗಲೆಗಳನ್ನು ಕಟ್ಟಿಕೊಂಡು, ಸೈಟುಗಳನ್ನು ಮಾಡಿಕೊಂಡು, ಕಾರಿನಲ್ಲಿ ಓಡಾಡುತ್ತ ಹಾಯಾಗಿದ್ದಾರೆ. ನಮ್ಮ ಸುತ್ತ ಕುಣಿಯುತ್ತಿರುವ ಜೈಕಾರದ ಬಳಗದಲ್ಲಿ ಇರುವವರೆಲ್ಲ ಹೀಗೇ ನಮ್ಮಿಂದ ಬೆಳೆದವರೇ ಆಗಿದ್ದಾರೆ; ಯಾರದೋ ದುಡ್ಡು ಸ್ವಾಮೀ ಜಾತ್ರೆ!
ಯಾವ ಅರ್ಹತೆಯೂ ಇಲ್ಲದ ನಮಗೆ ಇರುವ ಅರ್ಹತೆಯೆಂದರೆ ನಾವೊಬ್ಬ ಸಮರ್ಥ ರೌಡಿಯಾಗಲು ತಕ್ಕುದಾದ ಅರ್ಹತೆಗಳೆಲ್ಲ ಇರುವುದು ಧುತ್ತೆಂದು ಕಾಣುತ್ತಿದ್ದರೂ ಇಂದಿಗೂ ಸಹ ನಮ್ಮ ಸಮಾಜ ಏನೂ ಹೇಳುತ್ತಿಲ್ಲ ಏಕೆಂದರೆ ಮತ್ತದೇ ’ಮುಂಡಾಸಿನ ಸಮಸ್ಯೆ’, ನಾವು ಹೇಗಾದರೂ ಇರಲಿ, ಸಾರ್ವಜನಿಕವಾಗಿ ನಮ್ಮ ಸೀಟಿನ ಘನತೆಗೆ ತೊಂದರೆಯಾಗಬಾರದು ಎಂಬುದು ಅವರ ಅಪೇಕ್ಷೆ. ಮದುವೆಯಾದ ಹೊರತೂ ಹುಚ್ಚುಬಿಡೋದಿಲ್ಲ-ಹುಚ್ಚು ಬಿಟ್ಟ ಹೊರತೂ ಮದುವೆಯಾಗೋದಿಲ್ಲ ಅಂತಾರಲ್ಲ? ಹಾಗೆ, ಸೀಟಿನಿಂದ ನಮನ್ನು ಇಳಿಸಿದ ಹೊರತು ಸೀಟಿಗೆ ಪರಿಶುದ್ಧತೆ ಬರುವುದಿಲ್ಲ; ಸೀಟಿಗೆ ಪರಿಶುದ್ಧತೆ ಬೇಕೆಂದರೆ ನಮ್ಮನ್ನು ಸೀಟಿನಲ್ಲಿಡಲು ಸಾಧ್ಯವಿಲ್ಲ. ಈ ಸಮಸ್ಯೆ ಮುಂಡಾಸಿಗೆ ಅಂಟಿಕೊಂಡು ಇಲ್ಲಿಯವರೆಗೆ ಹೊರಗಿನಿಂದ ನಮಗೆ ಅನುಕೂಲವಾಗಿದೆ; ಒಳಗಿನಿಂದ ಬಹಳ ದೊಡ್ಡಮಟ್ಟದಲ್ಲಿ ಹೊಗೆಯಾಡುತ್ತಿದೆ ಎಂಬುದು ಬೇರೆ ಪ್ರಶ್ನೆ.
ಅಂದು ನಮ್ಮನ್ನು ಈ ಹುದ್ದೆಗೆ ಏರಿಸಿದವರಿಗೆ ಆಡಳಿತಾತ್ಮಕ ವ್ಯವಹಾರಗಳಲ್ಲಿ ಯಾವ ಹಕ್ಕೂ ಇಲ್ಲದ ಕಾರಣ ಅವರ ಮಾತುಗಳಿಂದ ನಮಗೇನೂ ಕಾನೂನುಬದ್ಧವಾಗಿ ತೊಂದರೆಯಾಗೋದಿಲ್ಲ. ಹಿಂದೆ ಭಕ್ತರು ಹಾಕಿದ ಭಿಕ್ಷೆಯನ್ನೆಲ್ಲ ಒಟ್ಟುಮಾಡಿ ಇಂದು ನಮ್ಮ ವಿರುದ್ಧ ಬೀಳುವ ಭಕ್ತರನ್ನು ನಿಗ್ರಹಿಸಲು ಅದನ್ನು ಬಳಸುತ್ತಿರುವುದರಿಂದ ಅನೌಪಚಾರಿಕವಾಗಿ ಅವರ ಹಂಗಿನಲ್ಲೇ ನಾವಿದ್ದರೂ ಕಾನೂನು ಹಾಗೆ ಹೇಳುವುದಿಲ್ಲ. ಈಗ ನಿಜವಾಗಿಯೂ ಹಾದಿಯಲ್ಲಿ ಬಿದ್ದವರೆಂದರೆ ಭಕ್ತಕುರಿಗಳು ಮತ್ತು ನಮ್ಮನ್ನು ಈ ಸ್ಥಾನಕ್ಕೆ ತಂದವರು.
ಈಗ ನಾವು ಆರಂಭದಲ್ಲಿ ಹೇಳಿದ ಮೊದಲ ’ಶ್ಲೋಕ’ವನ್ನು ಅರ್ಥೈಸಿ ನೋಡಿ, ಅರ್ಥವಾದರೆ ನಿಮಗೆ ಮುಂಡಾಸಿನ ಅನುವಂಶೀಯತೆಯಿಲ್ಲ; ಅರ್ಥವಾಗದಿದ್ದರೆ ಮುಂಡಾಸಿನ ಗಾಳಿ ನಿಮಗೂ ಬೀಸಿದೆ ಎಂದರ್ಥ. ಕಚ್ಚೆಹರುಕನ ತಾಉರ್ಮಾಸ್ಯವೆಂದರೆ ಇಂತಹ ದಿವ್ಯ ಚಿಂತನೆಗಳನ್ನು ನಡೆಸುವುದು ಮತ್ತು ಯಾರದರೂ ದಿವ್ಯಳು, ಭವ್ಯಳು ಎನಿಸಿಕೊಳ್ಳಲು ಸಿದ್ಧರಾಗುತ್ತರೋ ಎಂದು ಹುಡುಕುವುದು.
ಬರೇ ಕಾಮ
.
.
ಬರೇ ಕಾಮ"

No comments:

Post a Comment